ಮೈಸೂರು-ವಿರಾಜಪೇಟೆ ಮಾರ್ಗದಲ್ಲಿ ರಾತ್ರಿ ಸಂಚಾರ ನಿಷೇಧ ಪ್ರಕರಣ ಪಿಐಎಲ್ ಹಿಂದೆ ಕೊಡಗಿನ ಪರಿಸರವಾದಿಗಳ ಕೈವಾಡ
ಕೊಡಗು

ಮೈಸೂರು-ವಿರಾಜಪೇಟೆ ಮಾರ್ಗದಲ್ಲಿ ರಾತ್ರಿ ಸಂಚಾರ ನಿಷೇಧ ಪ್ರಕರಣ ಪಿಐಎಲ್ ಹಿಂದೆ ಕೊಡಗಿನ ಪರಿಸರವಾದಿಗಳ ಕೈವಾಡ

January 26, 2019

ಇದೊಂದು ಹೊಣೆಗೇಡಿಗಳ ಜನವಿರೋಧಿ ಕೆಲಸ: ಎ.ಕೆ. ಸುಬ್ಬಯ್ಯ ಗಂಭೀರ ಆರೋಪ

ಪೊನ್ನಂಪೇಟೆ: ಹುಣಸೂರು- ಗೋಣಿಕೊಪ್ಪ ರಾಜ್ಯ ಹೆದ್ದಾರಿ ಯಲ್ಲಿ ರಾತ್ರಿ ವೇಳೆ ವಾಹನ ಸಂಚಾರ ನಿಷೇಧಿಸುವಂತೆ ಕೋರಿ ರಾಜ್ಯ ಹೈಕೋರ್ಟ್ ನಲ್ಲಿ ಸಲ್ಲಿಸಲಾಗಿರುವ ಸಾರ್ವ ಜನಿಕ ಹಿತಾಶಕ್ತಿ ಅರ್ಜಿಯ ಹಿಂದೆ ಕೊಡಗಿನ ಕೆಲ ಜನ ವಿರೋಧಿ ಡೋಂಗಿ ಪರಿಸರ ವಾದಿಗಳ ಕೈವಾಡವಿದೆ ಎಂದು ಹಿರಿಯ ನ್ಯಾಯ ವಾದಿ ಮತ್ತು ಮಾಜಿ ಶಾಸಕ ಎ.ಕೆ.ಸುಬ್ಬಯ್ಯ ಗಂಭೀರ ಆರೋಪ ಮಾಡಿದ್ದಾರೆ.

ಶುಕ್ರವಾರದಂದು ವಿಶೇಷ ಪತ್ರಿಕಾ ಹೇಳಿಕೆ ಬಿಡುಗಡೆಗೊಳಿಸಿರುವ ಅವರು, ಹುಣ ಸೂರಿನಿಂದ ಆನೆಚೌಕೂರು-ಮತ್ತಿಗೋಡು ಮಾರ್ಗವಾಗಿ ಕೊಡಗಿನ ತಿತಿ ಮತಿ-ಗೋಣಿಕೊಪ್ಪಲು ಕಡೆಗೆ ಹೋಗುವ ರಾಜ್ಯ ಹೆದ್ದಾರಿ ಯಲ್ಲಿ ರಾತ್ರಿ ವೇಳೆ ವಾಹನ ಸಂಚಾರ ನಿಷೇಧಿಸುವಂತೆ ಕೋರಿ ಪರಿಸರವಾದಿಗಳೆಂದು ಹಣೆಪಟ್ಟಿ ಕಟ್ಟಿಕೊಂಡಿರುವ ಬೆಂಗಳೂರು ಮೂಲದ ವ್ಯಕ್ತಿಗಳಿ ಬ್ಬರು ರಾಜ್ಯ ಹೈಕೋರ್ಟ್‍ನಲ್ಲಿ ಸಾರ್ವ ಜನಿಕ ಹಿತಾಶಕ್ತಿ ಅರ್ಜಿ (ಪಿಐಎಲ್) ದಾಖ ಲಿಸಿರುವುದು ಮತ್ತು ಈ ಅರ್ಜಿಯನ್ನು ವಿಚಾ ರಣೆ ನಡೆಸಿದ ಹೈಕೋರ್ಟ್ ನ್ಯಾಯಪೀಠ ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಿದ ವಿಷಯ ಪತ್ರಿಕೆಗಳಲ್ಲಿ ಪ್ರಕಟವಾದದ್ದು, ಕೆಲ ಉನ್ನತ ಅರಣ್ಯಧಿಕಾರಿಗಳ ಪಾತ್ರವಿರು ವುದನ್ನು ತಳ್ಳಿ ಹಾಕುವಂತಿಲ್ಲ. ಆದ್ದರಿಂದ ಕೊಡಗಿನ ಜನತೆ ಇದನ್ನು ಗಂಭೀರವಾಗಿ ಪರಿಗಣಿಸುವಂತೆ ಆಗ್ರಹಿಸಿದ್ದಾರೆ. ಕಳೆದ 3 ತಿಂಗಳ ಹಿಂದೆ ಮತ್ತಿಗೋಡು ಹೆದ್ದಾರಿ ಬಳಿ ಅಲ್ಲಿನ ಶಿಬಿರದ ಆನೆಯೊಂದು ವಾಹನ ಅಪಘಾತದಲ್ಲಿ ಮೃತಪಟ್ಟ ಸಂದರ್ಭ ದಲ್ಲೇ ಇದನ್ನು ನಿರೀಕ್ಷಿಸಿದ್ದೆ. ಕಾರಣ ಇಂತಹ ಸಂದರ್ಭಗಳನ್ನು ದುರುಪಯೋಗ ಪಡಿಸಿ ಕೊಳ್ಳಲೆಂದೇ ಕೆಲ ಡೋಂಗಿ ಪರಿಸರವಾ ದಿಗಳು ಕಾಯುತ್ತಿರುತ್ತಾರೆ. ನ್ಯಾಯಾಲ ಯದಲ್ಲಿ ಅರ್ಜಿಯೊಂದು ಸಲ್ಲಿಕೆಯಾದ ಕ್ಷಣದಲ್ಲೆ ಇವರ ಖಾತೆಗೆ ನೇರ ಹಣ ಸಂದಾಯ ವಾಗುತ್ತದೆ.
ವಿದೇಶಿ ದೇಣಿಗೆ ಹಣಕ್ಕೆ ಕಣ್ಣಿಟ್ಟುಕೊಂಡು ಅಗತ್ಯವಿಲ್ಲದ ವಿಚಾರ ಗಳಿಗೆ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಶಕ್ತಿ ಅರ್ಜಿ ಸಲ್ಲಿಸಲು ಹದ್ದಿನಂತೆ ಅವಕಾಶಕ್ಕಾಗಿ ಕಾಯುತ್ತಿರು ವುದು ಕೆಲ ಹೊಟ್ಟೆಪಾಡಿನ ಪರಿಸರವಾದಿ ಗಳ ಪ್ರತಿನಿತ್ಯದ ಕಸುಬಾಗಿ ಹೋಗಿದೆ ಎಂದು ಸುಬ್ಬಯ್ಯ ಅವರು ಕಿಡಿಕಾರಿದ್ದಾರೆ.

Translate »