ಲೋಕಸಭಾ ಚುನಾವಣೆಗೆ ನಾನೂ ಆಕಾಂಕ್ಷಿ
ಕೊಡಗು

ಲೋಕಸಭಾ ಚುನಾವಣೆಗೆ ನಾನೂ ಆಕಾಂಕ್ಷಿ

January 26, 2019

ಮಡಿಕೇರಿ: ಮುಂದಿನ ಲೋಕಸಭಾ ಚುನಾವಣೆ ಸಂದರ್ಭ ಕೊಡಗು-ಮೈಸೂರು ಕ್ಷೇತ್ರದಿಂದ ತಾನು ಕೂಡ ಬಿಜೆಪಿಯಿಂದ ಅಭ್ಯರ್ಥಿ ಆಕಾಂಕ್ಷಿ ಯಾಗಿರುವೆ ಎಂದು ಮಡಿಕೇರಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ತಿಳಿಸಿದ್ದಾರೆ.

ಮಡಿಕೇರಿಯಲ್ಲಿ ಸುದ್ದಿಗಾರ ರೊಂದಿಗೆ ಮಾತನಾಡಿದ ಶಾಸಕ ರಂಜನ್, ಈವರೆಗೂ ಅನೇಕ ಬಾರಿ ಮೈಸೂರಿನವರಿಗೆ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಲಾಗಿದೆ. ಹೀಗಿರುವಾಗ ಈ ಬಾರಿ ಕೊಡಗಿ ನವರಿಗೆ ಸ್ಪರ್ಧೆಗೆ ಅವಕಾಶ ನೀಡುವಂತೆ ಬಿಜೆಪಿ ವರಿಷ್ಠರಿಗೆ ಮನವಿ ಮಾಡಿರುವೆ. ಸ್ಪರ್ಧೆಗೆ ನಾನೂ ಕೂಡ ಆಕಾಂಕ್ಷಿಯಾ ಗಿರುವೆ ಎಂದು ಹೇಳಿದರು.

ಹರ್ಯಾಣ ರೆಸಾರ್ಟ್ ರಾಜಕೀಯ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ರಂಜನ್, ಮುಂದಿನ ಲೋಕಸಭಾ ಚುನಾವಣೆ ಸಂಬಂಧ ಚರ್ಚಿಸಲು ಬಿಜೆಪಿ ಶಾಸಕರು ಹರ್ಯಾ ಣದ ರೆಸಾರ್ಟ್‍ಗೆ ತೆರಳಿದ್ದರು. ಕರ್ನಾಟಕದಿಂದ 20 ಸಂಸದ ರನ್ನು ಗೆಲ್ಲಿಸುವ ಗುರಿಯನ್ನು ಈ ಸಂದರ್ಭ ಕೈಗೊಳ್ಳಲಾಗಿದೆ ಎಂದು ಹೇಳಿದರು.

ಕರ್ನಾಟಕದ ಇತಿಹಾಸದಲ್ಲಿಯೇ ಶಾಸಕರು ಹೊಡೆದಾಡಿಕೊಂಡ ಉದಾಹರಣೆಯಿರಲಿಲ್ಲ. ಈಗ ಕಾಂಗ್ರೆಸ್ ಶಾಸಕರು ರೆಸಾರ್ಟ್‍ನಲ್ಲಿ ಮಾರಣಾಂತಿಕವಾಗಿ ಬಡಿದಾ ಡಿಕೊಂಡು ರಾಜಕೀಯಕ್ಕೇ ಮಸಿ ಬಳಿದಿರುವುದು ನಾಚಿಕೆಗೇಡು ಎಂದೂ ರಂಜನ್ ಟೀಕಿಸಿದರು.

Translate »