ಖಾಸಗಿ ಬಸ್-ಇನ್ನೊವಾ ಕಾರ್ ಡಿಕ್ಕಿ: ಐವರಿಗೆ ಗಾಯ
ಕೊಡಗು

ಖಾಸಗಿ ಬಸ್-ಇನ್ನೊವಾ ಕಾರ್ ಡಿಕ್ಕಿ: ಐವರಿಗೆ ಗಾಯ

January 26, 2019

ಸೋಮವಾರಪೇಟೆ: ಖಾಸಗಿ ಬಸ್ ಹಾಗು ಇನ್ನೋವಾ ಕಾರಿನ ನಡುವೆ ಮುಖಾಮುಖಿ ಡಿಕ್ಕಿಯಾಗಿ ಐವರು ಗಾಯಗೊಂಡಿರುವ ಘಟನೆ ಐಗೂರು ಸಮೀಪದ ಸಂಪಿಗೆಕೊಲ್ಲಿ ತಿರುವಿ ನಲ್ಲಿ ಶುಕ್ರವಾರ ಸಂಜೆ ನಡೆದಿದೆ.

ಗರ್ವಾಲೆ ಗ್ರಾಮದ ಐಮುಡಿ ಯಂಡ ಭೀಮಯ್ಯ ಹಾಗು ಅವರ ಸಂಬಂಧಿಕರು ಗಾಯಗೊಂಡ ವರು. ಗಾಯಾಳುಗಳಿಗೆ ಮಡಿ ಕೇರಿ ಆಸ್ಪತ್ರೆಯಲ್ಲಿ ದಾಖಲಿಸಲಾ ಗಿದೆ. ಗಾಯಗೊಂಡವರಲ್ಲಿ ಮೂವರು ಪುರುಷರು ಹಾಗು ಇಬ್ಬರು ಮಹಿಳೆಯರು ಸೇರಿದ್ದು, ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಗರ್ವಾಲೆ ಗ್ರಾಮದಲ್ಲಿ ನಡೆಯುವ ಸಮಾರಂಭವೊಂದರಲ್ಲಿ ಭಾಗವಹಿಸಲು ಬೆಂಗಳೂರಿನಿಂದ ಕಾರಿನಲ್ಲಿ ಬರುತ್ತಿದ್ದ ಸಂದರ್ಭ ಮಡಿಕೇರಿಯಿಂದ ಸೋಮವಾರ ಪೇಟೆಗೆ ತೆರಳುತ್ತಿದ್ದ ಖಾಸಗಿ ಬಸ್ ನಡುವೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಾರು ಹಾಗು ಬಸ್‍ನ ಮುಂಭಾಗ ಜಖಂಗೊಂಡಿದೆ. ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮಕೈಗೊಂಡಿದ್ದಾರೆ.

Translate »