ನರೇಗಾದಡಿ ಮತ್ತಷ್ಟು ಕಾಮಗಾರಿ ಕೈಗೆತ್ತಿಕೊಂಡು ಅಧಿಕ  ಉದ್ಯೋಗ ಕಲ್ಪಿಸಲು ಸಚಿವ ಕೃಷ್ಣ ಭೈರೇಗೌಡ ಸೂಚನೆ
ಮೈಸೂರು

ನರೇಗಾದಡಿ ಮತ್ತಷ್ಟು ಕಾಮಗಾರಿ ಕೈಗೆತ್ತಿಕೊಂಡು ಅಧಿಕ ಉದ್ಯೋಗ ಕಲ್ಪಿಸಲು ಸಚಿವ ಕೃಷ್ಣ ಭೈರೇಗೌಡ ಸೂಚನೆ

January 26, 2019

ಮೈಸೂರು: ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (ನರೇಗಾ) ಯಡಿ ಹೆಚ್ಚು ಕಾಮಗಾರಿಗಳನ್ನು ಕೈಗೆತ್ತಿ ಕೊಂಡು ಉದ್ಯೋಗ ನೀಡುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೃಷ್ಣ ಭೈರೇಗೌಡ ಅಧಿಕಾರಿ ಗಳಿಗೆ ಸೂಚಿಸಿದರು.

ಮೈಸೂರು ಜಿಲ್ಲಾ ಪಂಚಾಯ್ತಿ ಸಭಾಂ ಗಣದಲ್ಲಿ ಶುಕ್ರವಾರ ನಡೆದ ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಯ ಬರ ಅಧ್ಯಯನ, ನಿರ್ವಹಣೆ ಕುರಿತಾದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಈ ಎರಡು ಜಿಲ್ಲೆಗಳಲ್ಲಿ ನರೇಗಾ ಪ್ರಗತಿ ತೃಪ್ತಿಕರವಾಗಿಲ್ಲ. ಇಲ್ಲಿನ ಅಧಿಕಾರಿ ಗಳ ಮನೋಧೋರಣೆ ಬದಲಾಗಿಲ್ಲ. ಒಂದೇ ಮಟ್ಟದಲ್ಲಿ ಕಾರ್ಯ ನಿರ್ವಹಿಸು ತ್ತಿದ್ದಾರೆ. ಮಹಾರಾಜರ ನಂತರದಲ್ಲಿ ಇವರೇ ಯಜಮಾನರಾಗಿದ್ದಾರೆ. ರೈತರೇ ನಮ್ಮ ಬಳಿ ಬರಲಿ, ನಾವೇಕೆ ಅವರ ಬಳಿ ಹೋಗಬೇಕೆಂಬುದು ಅವರ ಭಾವನೆ. ನರೇಗಾ ಯೋಜನೆಯನ್ನು ಸಮರ್ಪಕ ವಾಗಿ ಬಳಸಿಕೊಳ್ಳಲು ಅಧಿಕಾರಿಗಳೂ ಗಂಭೀರ ಪ್ರಯತ್ನ ಮಾಡದಿದ್ದರೆ, ರೈತರಿಗೆ ದಕ್ಕಬೇಕಿರುವ ಹತ್ತಾರು ಕೋಟಿ ರೂ. ಹಣ ಅವರ ಕೈತಪ್ಪಿ ಹೋಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.

ಮುಂದಿನ ದಿನಗಳಲ್ಲಿ ಬೇಸಿಗೆ ತೀವ್ರ ವಾದರೆ ಗ್ರಾಮೀಣ ಜನ, ಉದ್ಯೋಗಕ್ಕಾಗಿ ಗುಳೆ ಹೋಗಬಹುದು. ಇದನ್ನು ತಪ್ಪಿಸುವ ನಿಟ್ಟಿನಲ್ಲಿ ನರೇಗಾ ಯೋಜನೆಯಡಿ ಹೆಚ್ಚು ಉದ್ಯೋಗ ಸೃಜಿಸಬೇಕು. ಹೆಚ್ಚು ಹೆಚ್ಚು ಕೆಲಸಗಳನ್ನು ಆದ್ಯತೆ ಮೇರೆಗೆ ಕೈಗೆತ್ತಿಕೊಳ್ಳಬೇಕು. ರೇಷ್ಮೆ, ತೋಟಗಾರಿಕೆ, ಕೊಟ್ಟಿಗೆ ನಿರ್ಮಾಣಕ್ಕೆ ನೆರವು ನೀಡುವ ಅವಕಾಶವೂ ಈ ಯೋಜನೆಯಲ್ಲಿದೆ. ಆದರೆ ಅಧಿಕಾರಿಗಳು ಕ್ಷೇತ್ರದಲ್ಲಿ ಕೆಲಸ ಮಾಡುತ್ತಿಲ್ಲ. ಕುಳಿತಲ್ಲೇ ಎಲ್ಲವನ್ನೂ ದಾಖಲು ಮಾಡುತ್ತಾರೆ. ಉದಾಹರಣೆಗೆ ಚಾಮರಾಜನಗರ ಜಿಲ್ಲೆಯಲ್ಲಿ 35 ಸಾವಿರ ಎಕರೆಯಲ್ಲಿ ಬಾಳೆ ಬೆಳೆಯುತ್ತಾರೆ. ಇದರಲ್ಲಿ ವರ್ಷಕ್ಕೆ ಶೇ.50ರಷ್ಟು ಅಂದರೆ 17.5 ಸಾವಿರ ಎಕರೆಯಲ್ಲಿ ಬೆಳೆ ಬದಲಿ ಸುತ್ತಾರೆ. ಇಷ್ಟು ಜಮೀನಿನಲ್ಲಿ ಹೊಸ ಬೆಳೆಗೆ ಪ್ರೋತ್ಸಾಹಿಸಲು ಅವಕಾಶವಿದೆ. ಆದರೆ ನಮ್ಮ ಅಧಿಕಾರಿಗಳು ನರೇಗಾ ಯೋಜನೆಯಡಿ ಗುರುತಿಸಿರುವುದು ಕೇವಲ 700 ಎಕರೆ ಮಾತ್ರ. ಬೆಳೆ ಹಾನಿ ಪಟ್ಟಿಯನ್ನೂ ಕಚೇರಿಯಲ್ಲೇ ಕುಳಿತು ಸಿದ್ಧಪಡಿಸುತ್ತಾರೆ. ಒಂದು ಊರಿನಲ್ಲಿ ಹುರುಳಿ ಬೆಳೆದಿರುವ ರೈತರಲ್ಲಿ ಒಬ್ಬರ ಹೆಸರು ಪಟ್ಟಿಯಲ್ಲಿದ್ದರೆ, ಮತ್ತೊಬ್ಬರ ಹೆಸರು ಇರುವುದಿಲ್ಲ. ಹೀಗೆ ಮಾಡಿದರೆ ವಂಚಿತ ರೈತರು ಉದ್ವೇಗಕ್ಕೆ ಒಳಗಾಗು ತ್ತಾರೆ. ಸರ್ಕಾರ ಸಾವಿರಾರು ಎಕರೆಗೆ ಬರ ಪರಿಹಾರ ನೀಡಿದರೂ ವ್ಯರ್ಥವಾ ದಂತಾಗುತ್ತದೆ. ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಿ ಎಂದು ಸೂಚಿಸಿದರು.

ಸದ್ಯ ಮೈಸೂರು ಹಾಗೂ ಚಾಮರಾಜ ನಗರ ಜಿಲ್ಲೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇಲ್ಲವಾದರೂ ಅಗತ್ಯವಿರುವ ಕಡೆಗಳಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳ ಬೇಕು. ನಗರ ಪ್ರದೇಶಗಳಿಗೂ ಟಾಸ್ಕ್ ಫೋರ್ಸ್‍ನಡಿ 50 ಲಕ್ಷ ರೂ. ಮಂಜೂ ರಾಗಿದ್ದು, ಇನ್ನೊಂದು ವಾರದಲ್ಲಿ ಬಿಡುಗಡೆಯಾಗಬಹುದು. ಕುಡಿಯುವ ನೀರಿನ ಸಮಸ್ಯೆ ಎದುರಾದಾಗ ಒಂದೆ ರಡು ದಿನದಲ್ಲೇ ಟ್ಯಾಂಕರ್ ಮೂಲಕ ಸರಬರಾಜು ಮಾಡಬೇಕು. ಖಾಸಗಿ ಬೋರ್‍ವೆಲ್‍ಗಳನ್ನು ಬಾಡಿಗೆ ಪಡೆಯಲು ಸಿದ್ಧತೆ ಮಾಡಿಕೊಳ್ಳಬೇಕು. ರೈತರಿಗೆ ಬೆಳೆ ಪರಿಹಾರ ತಲುಪುವಲ್ಲಿ ವಿಳಂಬವಾಗ ದಂತೆ `ಪರಿಹಾರ’ ಸಾಫ್ಟ್‍ವೇರ್‍ನಲ್ಲಿ ಎಲ್ಲಾ ಮಾಹಿತಿಯನ್ನು ದಾಖಲು ಮಾಡ ಬೇಕು. ಮೇವು ಸಂಗ್ರಹಣೆ ಮಾಡಬೇಕೆಂದು ಸೂಚಿಸಿದ ಅವರು, ಭತ್ತ ಖರೀದಿ ಕೇಂದ್ರಗಳ ಸಂಬಂಧಿತ ಸಮಸ್ಯೆಗಳ ಬಗ್ಗೆ ಆಹಾರ ಇಲಾಖೆ ಗಮನಕ್ಕೆ ತರುತ್ತೇನೆ ಎಂದರು.

ಕಡ್ಡಾಯವಾಗಿ ರಸ್ತೆ ನಿರ್ಮಿಸಿ: ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡರು ಮಾತನಾಡಿ, ಕಾಂಕ್ರೀಟ್ ರಸ್ತೆ ನಿರ್ಮಿ ಸುವ ಸಂದರ್ಭದಲ್ಲಿ ಕಡ್ಡಾಯವಾಗಿ ನೀರಿನ ಪೈಪ್‍ಲೈನ್ ಹಾಗೂ ಚರಂಡಿ ನಿರ್ಮಿಸಬೇಕು. ಇದಕ್ಕಾಗಿ ಮತ್ತೆ ರಸ್ತೆ ಅಗೆಯಬಾರದು. ಈ ನಿಟ್ಟಿನಲ್ಲಿ ಯೋಜ ನಾಬದ್ಧವಾಗಿ ಕಾಮಗಾರಿ ನಡೆಸ ಬೇಕೆಂದು ಸೂಚನೆ ನೀಡಿದರು.
ಸಂಸದ ಪ್ರತಾಪ್‍ಸಿಂಹ ಮಾತನಾಡಿ, ನರೇಗಾ ಯೋಜನೆಯಲ್ಲಿ ಪ್ರಗತಿ ಸಾಧಿ ಸುವ ನಿಟ್ಟಿನಲ್ಲಿ ಕೆಲವೊಂದು ಮಾರ್ಪಾಡು ಮಾಡಿಕೊಳ್ಳಬೇಕು. ಬೆಂಬಲ ಬೆಲೆಯಡಿ ಭತ್ತ ಖರೀದಿ ಕೇಂದ್ರಗಳನ್ನು ಸಮರ್ಪಕ ರೀತಿಯಲ್ಲಿ ಆರಂಭಿಸಬೇಕು. ವಿವಿಧ ವಸತಿ ಯೋಜನೆಯಡಿ ಮನೆ ಕಟ್ಟಿಕೊಳ್ಳಲು ಬಡವರಿಗೆ ಸೌಲಭ್ಯ ಕಲ್ಪಿಸಬೇಕೆಂದು ಹೇಳಿದರು.
ತಿ.ನರಸೀಪುರ ಶಾಸಕ ಅಶ್ವಿನ್ ಕುಮಾರ್ ಮಾತನಾಡಿ, ಭತ್ತ ಖರೀದಿ ಕೇಂದ್ರಗಳನ್ನು ಆರಂಭಿಸಿಲ್ಲ ಎಂದು ರೈತರು ಪ್ರತಿಭಟನೆ ನಡೆಸಿದ್ದಾರೆ. ಅಲ್ಲದೆ ಇದರಲ್ಲಿ ಸಾಕಷ್ಟು ಗೊಂದಲಗಳಿವೆ. ಅಕ್ಕಿ ಗಿರಣಿಗಳಲ್ಲಿ ವೇಸ್ಟೇಜ್ ನೆಪದಲ್ಲಿ ಹೆಚ್ಚು ಪ್ರಮಾಣದ ಭತ್ತವನ್ನು ಕಡಿತಗೊಳಿಸು ತ್ತಾರೆ. ಇದರಿಂದ ರೈತರಿಗೆ ನಷ್ಟವಾಗುತ್ತದೆ ಎಂದು ತಿಳಿಸಿದರು.

ಮೈಸೂರು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಹಾಗೂ ಚಾಮರಾಜ ನಗರ ಜಿಲ್ಲಾಧಿಕಾರಿ ಕಾವೇರಿ ಅವರು ಮಳೆ ಪ್ರಮಾಣ, ಬೆಳೆ ಹಾನಿ, ಬಿತ್ತನೆ ಪ್ರಮಾಣ, ನರೇಗಾ ಪ್ರಗತಿ, ಕುಡಿಯುವ ನೀರಿನ ಸ್ಥಿತಿ, ಮೇವು ಪರಿಸ್ಥಿತಿ ಇನ್ನಿತರ ಮಾಹಿತಿ ಯನ್ನು ಸಭೆಗೆ ನೀಡಿದರು.
ಸಣ್ಣ ನೀರಾವರಿ ಸಚಿವ ಸಿ.ಎಸ್.ಪುಟ್ಟ ರಾಜು, ಸಮಾಜ ಕಲ್ಯಾಣ ಇಲಾಖೆ ಸಚಿವ ಪುಟ್ಟರಂಗಶೆಟ್ಟಿ, ಶಾಸಕರಾದ ಡಾ.ಯತೀಂದ್ರ ಸಿದ್ದರಾಮಯ್ಯ, ಅನಿಲ್ ಚಿಕ್ಕಮಾದು, ಹರ್ಷವರ್ಧನ್, ಜಿಲ್ಲಾ ಪಂಚಾಯಿತಿ ಹಂಗಾಮಿ ಅಧ್ಯಕ್ಷ ಸಾ.ರಾ. ನಂದೀಶ್, ಮೇಯರ್ ಪುಷ್ಪಲತಾ ಜಗ ನ್ನಾಥ್, ಉಪಮೇಯರ್ ಷಫೀ ಅಹಮ್ಮದ್ ಮತ್ತಿತರರು ಸಭೆಯಲ್ಲಿದ್ದರು.

Translate »