ಮಹಿಳೆಯರ ಸಾಧನೆಗಳತ್ತ ಬೆಳಕು ಚೆಲ್ಲಿದ ಕನ್ನಡ ನುಡಿಹಬ್ಬ
ಮೈಸೂರು

ಮಹಿಳೆಯರ ಸಾಧನೆಗಳತ್ತ ಬೆಳಕು ಚೆಲ್ಲಿದ ಕನ್ನಡ ನುಡಿಹಬ್ಬ

January 26, 2019

ಮೈಸೂರು: ಸಾಂಸ್ಕøತಿಕ ನಗರಿ ಮೈಸೂರಿನಲ್ಲಿ ಇದೇ ಮೊದಲ ಬಾರಿಗೆ ಶುಕ್ರವಾರ ವಿಜೃಂಭಣೆ ಯಿಂದ ನಡೆದ ಮೈಸೂರು ಜಿಲ್ಲಾ ಮಹಿಳಾ ಸಾಹಿತ್ಯ ಸಮ್ಮೇಳನದಲ್ಲಿ ಸಾಹಿತ್ಯದ ನೆಲೆ ಯಲ್ಲಿ ಮಹಿಳೆಯರು, ಸಬಲೀಕರಣ-ಸವಾಲು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರು ಮಾಡಿರುವ ಸಾಧನೆಯ ಬಗ್ಗೆ ಬೆಳಕು ಚೆಲ್ಲಲಾಯಿತು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಮಹಾರಾಣಿ ಮಹಿಳಾ ಕಲಾ ಕಾಲೇಜು ಸಂಯುಕ್ತಾಶ್ರಯದಲ್ಲಿ ಕಾಲೇಜಿನ ಸಂಚಿ ಹೊನ್ನಮ್ಮ ಸಭಾಂಗಣದ ಕಾದಂಬರಿಕಾರ್ತಿ ತ್ರಿವೇಣಿ ವೇದಿಕೆಯಲ್ಲಿ ನಡೆದ ಸುಂದರ ಕಾರ್ಯಕ್ರಮದಲ್ಲಿ ಸೀರೆ ಸೇರಿದಂತೆ ಸಾಂಪ್ರ ದಾಯಿಕ ಉಡುಗೆ ತೊಟ್ಟು ಆಗಮಿಸಿದ್ದ ನೂರಾರು ವಿದ್ಯಾರ್ಥಿನಿಯರು ಪಾಲ್ಗೊಂಡು ಸ್ತ್ರೀ ಶಕ್ತಿ ಪ್ರದರ್ಶಿಸಿದರಲ್ಲದೆ, ಕನ್ನಡದ ಹಬ್ಬದಲ್ಲಿ ಮಿಂದೆದ್ದು ಸಂಭ್ರಮಿಸಿದರು.

ಸಮ್ಮೇಳನಾಧ್ಯಕ್ಷೆ ಡಾ.ವೈ.ಸಿ.ಭಾನುಮತಿ ಮಾತನಾಡಿ, ಮಹಿಳೆ ಈ ಶತಮಾನದಲ್ಲಿ ಶೈಕ್ಷಣಿಕವಾಗಿ ಆರ್ಥಿಕವಾಗಿ ಸಾಹಿತ್ಯಕ ವಾಗಿ ಮುನ್ನಡೆದಿದ್ದರೂ ಸುರಕ್ಷತೆಯ ದೃಷ್ಟಿಯಿಂದ ಒಂಟಿಯಾಗಿ ನಿರ್ಭೀತಿ ಯಿಂದ ಬದುಕಲು ಸಾಧ್ಯವಾಗಿಲ್ಲ. ಹೆಣ್ಣು ಮಕ್ಕಳು ಮನೆಯ ಒಳಗೆ, ಹೊರಗೆ ಕೆಲಸ ಮಾಡುವ ಸ್ಥಳಗಳಲ್ಲಿ ಲೈಂಗಿಕ ದೌರ್ಜನ್ಯ, ಅತ್ಯಾಚಾರ, ಆಸಿಡ್ ದಾಳಿಗಳಿಗೆ ಗುರಿ ಯಾಗುತ್ತಿರುವುದನ್ನು ಕಂಡು ಸಂಕಟ ವಾಗುತ್ತದೆ. ಹೆಣ್ಣನ್ನು ಕುರಿತಂತೆ ಪುರುಷ ಪ್ರಧಾನ ಸಮಾಜದ ದೃಷ್ಟಿಕೋನ ಬದ ಲಾಗಬೇಕಿದೆ ಎಂದು ಆಶಯ ವ್ಯಕ್ತಪಡಿ ಸಿದ ಅವರು, ಹೆಣ್ಣು ಮಕ್ಕಳನ್ನು ಮಾನಸಿಕ ವಾಗಿ ಗಟ್ಟಿಗೊಳಿಸುವ ಶಿಕ್ಷಣದ ಅಗತ್ಯ ವಿದೆ ಎಂದು ಅಭಿಪ್ರಾಯಪಟ್ಟರು.

ಪ್ರತಿವರ್ಷ 8 ಸಾವಿರ ಕನ್ನಡದ ಪುಸ್ತಕ ಪ್ರಕಟಣೆ: ಕನ್ನಡದಲ್ಲಿ ಪ್ರತಿ ವರ್ಷ ಸುಮಾರು 8 ಸಾವಿರ ಪುಸ್ತಕಗಳು ಪ್ರಕಟವಾಗುತ್ತಿವೆ. ಅದರಲ್ಲಿ ಲೇಖಕಿಯರು ಬರೆದ ಪುಸ್ತಕಗಳೇ ಹೆಚ್ಚಿನ ಸಂಖ್ಯೆಯಲ್ಲಿರುವುದು ಒಳ್ಳೆ ಬೆಳವಣಿಗೆ. ಗ್ರಾಮೀಣ ಪ್ರದೇಶದಲ್ಲಿರುವ ಉದಯೋ ನ್ಮುಖ ಬರಹಗಾರ್ತಿಯರ ಕೃತಿ ಪ್ರಕಟಣೆಗೆ ಹೆಚ್ಚು ಪ್ರೋತ್ಸಾಹ ನೀಡಬೇಕು. ಪ್ರಸ್ತುತ ಯುವ ಸಮುದಾಯ ಓದುವ ಹವ್ಯಾಸ ದಿಂದ ದೂರ ಸರಿಯುತ್ತಿದೆ. ಕೇವಲ ವಾಟ್ಸಪ್, ಫೇಸ್‍ಬುಕ್ ಸೇರಿದಂತೆ ಸಾಮಾಜಿಕ ಜಾಲ ತಾಣಗಳಲ್ಲಿಯೇ ಸಮಯ ದೂಡುತ್ತಿದೆ. ಕನ್ನಡ ಭಾಷೆಯಲ್ಲಿ ಪ್ರಾಚೀನ, ಜನಪದ ಹಾಗೂ ಆಧುನಿಕ ಸಾಹಿತ್ಯ ಸಮೃದ್ಧವಾಗಿದೆ.

ಓದಿನಿಂದ ಜ್ಞಾನ ವಿಸ್ತರಿಸಿ, ಮಾನಸಿಕ ಸಂಸ್ಕಾರ ದೊರೆತು ಮಾನವೀಯ ಮೌಲ್ಯ ಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಪ್ರೇರಣೆ ನೀಡುತ್ತದೆ ಎಂದು ಅಭಿಪ್ರಾಯ ಪಟ್ಟರು. ಜಿ.ಪಂ ಪ್ರಭಾರ ಅಧ್ಯಕ್ಷ ಸಾ.ರಾ. ನಂದೀಶ್ ಮಾತನಾಡಿ, ಪಕ್ಷದ ಕೆಲವು ಜಿಲ್ಲೆ ಹಾಗೂ ನಗರಗಳಲ್ಲಿ ಅನ್ಯಭಾಷೆಗಳ ಹಾವಳಿ ಹೆಚ್ಚಾಗಿದೆ. ಕೆಲವೆಡೆ ತೆರಳಿದರೆ ಬೇರೆ ರಾಜ್ಯಗಳಿಗೆ ಬಂದಿರುವ ಅನುಭವ ವಾಗುತ್ತದೆ. ಬೆಂಗಳೂರಿನಲ್ಲಿ ತಮಿಳು, ಬೆಳಗಾವಿಯಲ್ಲಿ ಮಠಾರಿ, ಬಳ್ಳಾರಿಯಲ್ಲಿ ತೆಲುಗು ಭಾಷೆ ಅಧಿಪತ್ಯ ಸಾಧಿಸಿವೆ. ಆದರೆ ಮೈಸೂರಿನಲ್ಲಿ ಕನ್ನಡ ಉಳಿದಿದೆ. ಭಾಷೆ ವಿಚಾರದಲ್ಲಿ ನಾವೆಲ್ಲ ಒಂದಾಗ ಬೇಕಾದ ಅಗತ್ಯವಿದೆ ಎಂದರು.

ಪ್ರಾಸ್ತಾವಿಕವಾಗಿ ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಅಧ್ಯಕ್ಷ ಡಾ.ವೈ.ಡಿ.ರಾಜಣ್ಣ ಮಾತನಾಡಿದರು. ಡಾ.ಕೆ.ಮಮತ ಅವರ `ಭಾವಾಂತರಾಳ’ ಕೃತಿಯನ್ನು ಶಾಸಕ ತನ್ವೀರ್ ಸೇಠ್ ಬಿಡುಗಡೆ ಮಾಡಿದರು. ಸಮ್ಮೇಳನವನ್ನು ಮೇಯರ್ ಪುಷ್ಪಲತಾ ಜಗನ್ನಾಥ್ ಉದ್ಘಾಟಿಸಿದರು. ಮಹಾರಾಣಿ ಕಲಾ ಕಾಲೇಜಿನ ಪ್ರಾಂಶುಪಾಲ ಪ್ರೊ. ಸಿ.ಹೆಚ್.ಪ್ರಕಾಶ್ ಅಧ್ಯಕ್ಷತೆ ವಹಿಸಿದ್ದ ಕಾರ್ಯ ಕ್ರಮದಲ್ಲಿ ಮಹಿಳಾ ಘಟಕದ ಅಧ್ಯಕ್ಷೆ ಲತಾ ಮೋಹನ್, ಕಸಾಪ ಮೈಸೂರು ಪದಾಧಿ ಕಾರಿಗಳಾದ ಮಡ್ಡಿಕೆರೆ ಗೋಪಾಲ್, ಚಂದ್ರ ಶೇಖರ್, ಸಂಸ್ಕøತ ವಿಶ್ವವಿದ್ಯಾನಿಲಯದ ಕುಲಪತಿ ಡಾ.ಪದ್ಮಾಶೇಖರ್, ಕೆ.ಎಸ್. ಶಿವರಾಮು, ಡೈರಿ ವೆಂಕಟೇಶ್, ಡಾ.ರಾಜ ಶೇಖರ್ ಕದಂಬ, ಮೂಗೂರು ನಂಜುಂಡ ಸ್ವಾಮಿ, ಡಾ.ಸುಜಾತ ಅಕ್ಕಿ, ಎನ್.ಎಸ್.ಗೋಪಿ ನಾಥ್, ಚಾಮರಾಜು, ಡಾ.ಮನೋನ್ಮಣಿ, ಕಾಲೇಜಿನ ಅಧ್ಯಾಪಕ ಕಾರ್ಯದರ್ಶಿ ಪ್ರೊ.ಹೆಚ್.ಎಂ.ಬಸವರಾಜು, ಅಧ್ಯಾಪಕ ಖಜಾಂಚಿ ಡಾ.ವಿಜಯಲಕ್ಷ್ಮೀ, ಕವಯತ್ರಿ ಚ.ಸರ್ವಮಂಗಳ, ಮಾನಸ, ಮಡ್ಡಿಕೆರೆ ಗೋಪಾಲ್, ಡಾ. ಪುಷ್ಪಾ ಅಯ್ಯಂಗಾರ್, ಪ್ರೊ.ಕೆ.ಆರ್.ಪ್ರೇಮಲೀಲಾ, ಇಂದಿರಾ, ವಾಣಿ ಸುಬ್ಬಯ್ಯ, ಡಾ.ಜಯಲಕ್ಷ್ಮೀ ಸೀತಾ ಪುರ, ಎಂ.ಜಗದೀಶ್, ಡಾ.ಬಿ.ವಿ.ವಸಂತ ಕುಮಾರ್ ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಕೆ.ಎನ್. ರೇವತಿ, ಉಪಾಧ್ಯಕ್ಷೆ ಪಲ್ಲವಿ, ಕೆ.ಸಿ.ಶ್ವೇತ, ಪದಾಧಿಕಾರಿಗಳಾದ ಎನ್.ಮೋನಿಷ, ಎಸ್.ಕಲ್ಪನಾ, ಎಸ್.ಎಂ.ಭವ್ಯ, ಬಿ.ಕೆ.ಅನ್ನ ಪೂರ್ಣ, ಪರಿಸರ ಹೋರಾಟಗಾರ್ತಿ ಭಾನು ಮೋಹನ್ ಇನ್ನಿತರರು ಉಪಸ್ಥಿತರಿದ್ದರು.

ಕನ್ನಡ ಶಾಲೆಗಳಲ್ಲಿ ಇಂಗ್ಲಿಷ್ ಬೋಧನೆ ಅನಿವಾರ್ಯ: ತನ್ವೀರ್ ಸೇಠ್

ಮೈಸೂರು: ಮಕ್ಕಳ ಬದುಕು ಉತ್ತಮವಾಗಿ ರೂಪಿಸುವ ನಿಟ್ಟಿನಲ್ಲಿ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಇಂಗ್ಲಿಷ್ ಶಿಕ್ಷಣ ನೀಡುವ ಅನಿವಾರ್ಯತೆ ಇದೆ ಎಂದು ಶಾಸಕ ತನ್ವೀರ್ ಸೇಠ್ ಅಭಿಪ್ರಾಯಪಟ್ಟಿದ್ದಾರೆ. ಮಹಾರಾಣಿ ಕಲಾ ಕಾಲೇಜಿನ ಸಭಾಂಗಣದಲ್ಲಿ ಶುಕ್ರವಾರ ಮೈಸೂರು ಜಿಲ್ಲಾ ಮಹಿಳಾ ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ರಾಜ್ಯ ಸರ್ಕಾರ ಒಂದು ಸಾವಿರ ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಶಿಕ್ಷಣ ಆರಂಭಿಸುವ ಇಂಗಿತ ವ್ಯಕ್ತಪಡಿಸಿದಾಗ, ಕನ್ನಡ ಮಾಧ್ಯಮದ ಸರ್ಕಾರಿ ಶಾಲೆಗಳನ್ನು ಮುಚ್ಚಲಾಗುತ್ತಿದೆ ಎಂದು ಟೀಕೆಗಳು ಕೇಳಿ ಬಂದವು. ಕನ್ನಡ ಶಾಲೆ ಮುಚ್ಚುವುದಕ್ಕೆ ನಮ್ಮ ಪ್ರಬಲವಾದ ವಿರೋಧವಿದೆ. ಆದರೆ ಕನ್ನಡ ಮಾಧ್ಯಮದ ಶಾಲೆಗಳಲ್ಲಿಯೇ ಇಂಗ್ಲಿಷ್ ಕಲಿಸುವುದಕ್ಕೆ ನಮ್ಮ ಸಹಮತವಿದೆ. ಮಕ್ಕಳ ಭವಿಷ್ಯದ ಹಿತದೃಷ್ಟಿಯಿಂದ ಇಂಗ್ಲಿಷ್ ಭಾಷೆಯಾಗಿ ಕಲಿಸಬೇಕು. ಇದರಿಂದ ಮಾತೃಭಾಷೆಗೆ ಧÀಕ್ಕೆಯಾಗುವುದಿಲ್ಲ. ಮಕ್ಕಳಲ್ಲಿ ಇಂಗ್ಲಿಷ್ ಜ್ಞಾನವಿದ್ದರೆ ಮುಂದಿನ ದಿನಗಳಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿಯೂ ಹೆಸರು ಗಳಿಸಬಹುದು ಎಂದರು.

ಮೈಸೂರಿನಲ್ಲಿ ಮಹಿಳಾ ಸಾಹಿತ್ಯ ಸಮ್ಮೇಳನ ಆಯೋಜಿಸಿರುವುದು ಶ್ಲಾಘನೀಯ. ಒಂದು ಹೆಣ್ಣು ಕಲಿತರೆ ಇಡೀ ವಂಶಕ್ಕೆ ಕಲಿಸುತ್ತಾರೆ. ಸಂಸ್ಕøತಿ, ಆಚಾರ, ವಿಚಾರ ರಕ್ಷಣೆ ಮಾಡುವುದರಲ್ಲಿಯೂ ಮಹಿಳೆಯರ ಪಾತ್ರ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಮಹಿಳಾ ಸಾಹಿತ್ಯ ಸಮ್ಮೇಳನ ಆಯೋಜಿಸುವ ಮೂಲಕ ಸಾಹಿತ್ಯ ಕ್ಷೇತ್ರಕ್ಕೆ ಇನ್ನಷ್ಟು ಹೊಸ ಯುವ ಮಹಿಳಾ ಸಾಹಿತಿಗಳು ಪ್ರವೇಶಿಸುವುದಕ್ಕೆ ನಾಂದಿಯಾಗುತ್ತದೆ ಎಂದು ಅಭಿಪ್ರಾಯಪಟ್ಟರು. ಸಮ್ಮೇಳನ ಉದ್ಘಾಟಿಸಿದ ಮೇಯರ್ ಪುಷ್ಪಲತಾ ಜಗನ್ನಾಥ್ ಈ ಹಿಂದೆ ಗ್ರಾಮೀಣ ಪ್ರದೇಶಗಳಲ್ಲಿ ಮದುವೆ ಹಾಗೂ ಇನ್ನಿತರ ಶುಭ ಸಮಾರಂಭಗಳಲ್ಲಿ ಕೆಲ ಪದಗಳನ್ನು ಹಾಡುವ ಮೂಲಕ ಮಹಿಳೆಯರು ಸಾಹಿತ್ಯ ಕ್ಷೇತ್ರವನ್ನು ಗಟ್ಟಿಗೊಳಿಸುತ್ತಾ ಬಂದಿದ್ದಾರೆ. ಈ ಸಾಹಿತ್ಯ ಸಮ್ಮೇಳನದಿಂದ ಕಥೆ, ಕವಿತೆ, ಕಾದಂಬರಿ ಬರೆಯುವ ಯುವ ಮನಸ್ಸುಗಳಿಗೆ ಪ್ರೇರಣೆ ದೊರೆಯುತ್ತದೆ ಎಂದರು.

ಮತದಾನ ಜಾಗೃತಿ: ಇಂದು ಮತದಾರರ ದಿನವನ್ನಾಗಿ ಆಚರಿಸುತ್ತಿದ್ದೇವೆ. 18 ವರ್ಷ ತುಂಬಿದ ವಿದ್ಯಾರ್ಥಿನಿಯರು ಕಡ್ಡಾಯವಾಗಿ ಮತದಾನ ಮಾಡುವುದಕ್ಕೆ ಪಣತೊಡಬೇಕು. ಇದುವರೆಗೆ ನಡೆದ ಚುನಾವಣೆಗಳಲ್ಲಿ ಶೇ.55ರಿಂದ 60 ರಷ್ಟು ಮಾತ್ರ ಮತದಾನ ನಡೆದಿದೆ. ಮುಂದಿನ ದಿನಗಳಲ್ಲಿ ಮತದಾನ ಮಾಡುವವರ ಸಂಖ್ಯೆ ಹೆಚ್ಚಾಗಬೇಕು ಎಂದು ಮನವಿ ಮಾಡಿದರು. ಮೈಸೂರು ನಗರವನ್ನು ನಂ.1 ಸ್ವಚ್ಛ ನಗರವನ್ನಾಗಿ ಮಾಡಬೇಕೆಂಬ ಪಣ ತೊಟ್ಟಿದ್ದೇವೆ. ಪಾಲಿಕೆ ಶ್ರಮಕ್ಕೆ ಎಲ್ಲರೂ ಕೈಜೋಡಿಸಬೇಕು. ಈ ಹಿಂದೆ ನಗರಕ್ಕೆ ದೊರೆತಿದ್ದ ನಂ.1 ಸ್ವಚ್ಛ ನಗರ ಬಿರುದು ಮರಳಿ ಪಡೆಯಬೇಕು. ಇದಕ್ಕಾಗಿ ಒಂದು ಲಕ್ಷ ಜನರು ಸ್ವಚ್ಛ ಸರ್ವೇಕ್ಷಣೆಯಲ್ಲಿ ಪಾಲ್ಗೊಂಡು ಅಭಿಪ್ರಾಯ ತಿಳಿಸಬೇಕು. ಇದರಿಂದ ಹೆಚ್ಚು ಅಂಕ ಲಭಿಸುತ್ತದೆ ಎಂದು ತಿಳಿಸಿದರು.

Translate »