ಅನಧಿಕೃತ ರೈಲ್ವೆ ಇ-ಟಿಕೆಟ್ ಮಾರಾಟ: ಇಬ್ಬರ ಬಂಧನ
ಮೈಸೂರು

ಅನಧಿಕೃತ ರೈಲ್ವೆ ಇ-ಟಿಕೆಟ್ ಮಾರಾಟ: ಇಬ್ಬರ ಬಂಧನ

January 26, 2019

ಮೈಸೂರು: ಅನಧಿಕೃತವಾಗಿ ರೈಲ್ವೆ ಇ-ಟಿಕೇಟ್ ಮಾರಾಟ ಮಾಡುತ್ತಿದ್ದ ಇಬ್ಬರನ್ನು ರೈಲ್ವೆ ರಕ್ಷಣಾ ದಳದ ಸಿಬ್ಬಂದಿ ಬಂಧಿಸಿದ್ದಾರೆ. ಮೈಸೂರಿನ ವಿಜಯ ನಗರದಲ್ಲಿ ಟೀ ಅಂಗಡಿ ನಡೆಸುತ್ತಿರುವ ಶರ್ವನ್ ಸಿಂಗ್ ಹಾಗೂ ಶಿವರಾಂಪೇಟೆಯಲ್ಲಿ ಮೊಬೈಲ್ ಅಂಗಡಿ ನಡೆಸುತ್ತಿರುವ ಮೂಲರಾಂ ಬಂಧಿ ತರು. ಇವರು ಐಆರ್‍ಸಿಟಿಸಿಯಲ್ಲಿ ಪ್ರತ್ಯೇಕ ಅಕೌಂಟ್ ತೆರೆದು, ಸಂಬಂಧಿಕರ ಹೆಸರಿನಲ್ಲಿ ರೈಲ್ವೆ ಟಿಕೆಟ್ ಬುಕ್ ಮಾಡಿ, ಹೆಚ್ಚು ಹಣಕ್ಕೆ ಮಾರಾಟ ಮಾಡುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ತಿಳಿದ ರೈಲ್ವೆ ರಕ್ಷಣಾ ದಳ, ಕಾರ್ಯಾಚರಣೆ ನಡೆಸಿ, ಆರೋಪಿಗಳನ್ನು ಬಂಧಿಸಿದ್ದಾರೆ. ಶರ್ವನ್ ಸಿಂಗ್‍ನಿಂದ 2,54,354 ರೂ. ಮೌಲ್ಯದ ಅನಧಿಕೃತ 93 ಇ-ಟಿಕೆಟ್, ಲ್ಯಾಪ್‍ಟಾಪ್, 2 ಮೊಬೈಲ್, 560 ರೂ. ನಗದು, ಮೂಲರಾಮ್‍ನಿಂದ 88,843 ರೂ. ಮೌಲ್ಯದ 53 ಇ-ಟಿಕೆಟ್, ಕಂಪ್ಯೂಟರ್, ಮೊಬೈಲ್, 1,260 ರೂ. ಹಣ ವಶಪಡಿಸಿಕೊಂಡಿದ್ದಾರೆ. ರೈಲ್ವೆ ರಕ್ಷಣಾ ದಳದ ಇನ್ಸ್‍ಪೆಕ್ಟರ್ ಶಿವರಾಜು ನೇತೃತ್ವದಲ್ಲಿ ನಡೆದ ದಾಳಿಯಲ್ಲಿ ಸಬ್‍ಇನ್‍ಸ್ಪೆಕ್ಟರ್ ರಾಧಾಕೃಷ್ಣ, ಸಿಬ್ಬಂದಿ ಮಂಜುನಾಥ್, ನಾಗರಾಜು, ರಮೇಶ್ ಮತ್ತಿತರರು ಭಾಗವಹಿಸಿದ್ದರು.

Translate »