ಅವಾಚ್ಯ ಶಬ್ಧಗಳಿಂದ ನಿಂದಿಸಿ, ಅವಮಾನ
ಮೈಸೂರು

ಅವಾಚ್ಯ ಶಬ್ಧಗಳಿಂದ ನಿಂದಿಸಿ, ಅವಮಾನ

January 26, 2019

ಮೈಸೂರು: ವರ್ಗಾವಣೆಗೊಂಡ ತಾವು ಕರ್ತವ್ಯಕ್ಕೆ ವರದಿ ಮಾಡಿ ಕೊಳ್ಳುವ ಸಂಬಂಧ ದೂರವಾಣಿ ಮೂಲಕ ಸಂಪರ್ಕಿಸಿದಾಗ ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮಿತ್ ಸಿಂಗ್, ತಮಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿ ಅವಮಾನಿಸಿದ್ದಾರೆ ಎಂದು ಪೊಲೀಸ್ ಇನ್ಸ್‍ಪೆಕ್ಟರ್ ಸಿ.ವಿ.ರವಿ ಅವರು ಗುರುವಾರ ದಕ್ಷಿಣ ವಲಯ ಐಜಿಪಿ ಕೆ.ವಿ. ಶರತ್‍ಚಂದ್ರ ಅವರಿಗೆ ಲಿಖಿತ ದೂರು ಸಲ್ಲಿಸಿದ್ದಾರೆ.

ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೂ ದೂರಿನ ಪ್ರತಿ ರವಾನಿ ಸಿರುವ ರವಿ ಅವರು, ಜನವರಿ 14ರಂದು ಮೈಸೂರು ದಕ್ಷಿಣ ಗ್ರಾಮಾಂತರ ಪೊಲೀಸ್ ಠಾಣೆಗೆ ವರ್ಗಾವಣೆಯಾಗಿದ್ದು, ಆದೇಶದಂತೆ ಕರ್ತವ್ಯಕ್ಕೆ ವರದಿ ಮಾಡಿ ಕೊಳ್ಳಲು ಜನವರಿ 15ರಂದು ಮಧ್ಯಾಹ್ನ ಎಸ್ಪಿ ಕಛೇರಿಗೆ ತೆರಳಿದಾಗ ಅವರು ಲಭ್ಯ ವಿರದ ಕಾರಣ, ದೂರವಾಣಿ ಮೂಲಕ ಸಂಪರ್ಕಿಸಿದಾಗ ವೆಯಿಟ್ ಮಾಡಿ ಎಂದರು.

ನಂತರ ಎಸ್ಪಿ ಅವರ ಮಿಸ್ಡ್ ಕಾಲ್ ಇದ್ದ ಕಾರಣ ನಾನೇ ಅವರಿಗೆ ಫೋನ್ ಮಾಡಿದೆ. ತಕ್ಷಣ ಅವರು `ನಾನು ಮೈಸೂರು ಜಿಲ್ಲೆಗೆ ಬಾಸ್ ಇದ್ದೀನಿ ಆಯ್ತಾ, ನೀನು ನನ್ನ ಹತ್ತಿರ ಹೇಗೆ ಕೆಲಸ ಮಾಡ್ತಿಯಾ ನೋಡ್ತೇನೆ’ ಎಂಬರ್ಥದಲ್ಲಿ ಬೆದರಿಕೆ ಹಾಕಿ ಮನಸ್ಸೋ ಇಚ್ಛೆ ವಾಚಾಮಗೋಚರವಾಗಿ ಬಾಯಿಗೆ ಬಂದಂತೆ, ಬಹಳ ಕೀಳು ಮಟ್ಟದ ಭಾಷೆ ಪ್ರಯೋಗಿಸಿ ನಿಂದಿಸಿದರು ಎಂದು ಇನ್ಸ್‍ಪೆಕ್ಟರ್ ದೂರಿನಲ್ಲಿ ಹೇಳಿದ್ದಾರೆ.

‘ಬೋಸುಡಿಕೆ, ಬೋಸುಡಿ ಮಗನೆ, ಬಾಸ್ಟರ್ಡ್, ರಾಸ್ಕಲ್ ಹಾಗೂ ಸಾಲೆ’ ಎಂಬಿತ್ಯಾದಿ ಅವಾಚ್ಯ ಪದಗಳನ್ನು ಬಳಸಿ, ಅಮಿತ್‍ಸಿಂಗ್ ಅವರು ಅವಮಾನಿಸಿರುವುದರಿಂದ ನನ್ನ ಸ್ವಾಭಿಮಾನಕ್ಕೆ ಧಕ್ಕೆ ಉಂಟಾಗಿರುವುದಲ್ಲದೆ, ನನ್ನ ತಾಯಿಯವರ ಪಾವಿತ್ರ್ಯತೆಗೂ ಅವಮಾನವಾಗಿದೆ ಎಂದು ರವಿ ದೂರಿನಲ್ಲಿ ತಿಳಿಸಿದ್ದಾರೆ.

ಮೈಸೂರು ದಕ್ಷಿಣ ಗ್ರಾಮಾಂತರ ಠಾಣೆ ಸರ್ಕಲ್ ಇನ್‍ಸ್ಪೆಕ್ಟರ್ ಆಗಿ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳಲು ಲಿಖಿತ ನಿರ್ದೇಶನ ನೀಡದೆ ಒಬ್ಬ ಜವಾಬ್ದಾರಿಯುತ ಐಪಿಎಸ್ ಅಧಿಕಾರಿಯಾದ ಅಮಿತ್‍ಸಿಂಗ್ ಅವರು ಸಹೋದ್ಯೋಗಿಯಾದ ನನ್ನನ್ನು ಅವಾಚ್ಯ ಭಾಷೆ ಬಳಸಿ ನಿಂದಿಸಿ ನನ್ನ ತಾಯಿಯವರನ್ನು ತುಚ್ಛ ಶಬ್ಧಗಳಿಂದ ಹಿಯ್ಯಾಳಿಸುವ ಮೂಲಕ ಮಾತೃತ್ವ ಭಾವನೆಗೆ ಧಕ್ಕೆಯುಂಟು ಮಾಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಇದರಿಂದಾಗಿ ನಾನು ಮತ್ತು ನನ್ನ ಕುಟುಂಬ ಜರ್ಝ ರಿತರಾಗಿದ್ದು, ನೊಂದಿದ್ದೇವಲ್ಲದೆ, ತಂದೆ-ತಾಯಿಯರಿಗೆ ಆಘಾತ ಉಂಟಾಗಿದೆ ಯಾದ್ದರಿಂದ ಸದರಿ ಅಧಿಕಾರಿ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಹಾಗೂ ಮಾನವ ಹಕ್ಕು ಆಯೋಗಕ್ಕೆ ದೂರು ಸಲ್ಲಿಸಲು ಅನುಮತಿ ನೀಡಬೇಕೆಂದೂ ರವಿ ಅವರು ಐಜಿಪಿ ಅವರಿಗೆ ನೀಡಿರುವ ದೂರಿನಲ್ಲಿ ಕೋರಿದ್ದಾರಲ್ಲದೆ ಎಸ್ಪಿ ತಮ್ಮೊಂದಿಗೆ ನಡೆಸಿರುವ ಆಡಿಯೋ ಸಂಭಾಷಣೆಯ ಸಿಡಿಯನ್ನು ದೂರಿನೊಂದಿಗೆ ಲಗತ್ತಿಸಿದ್ದಾರೆ.

Translate »