ಮೈಸೂರು ನೂತನ ಪೊಲೀಸ್ ಆಯುಕ್ತರಾಗಿ ಕೆ.ಟಿ.ಬಾಲಕೃಷ್ಣ ಅಧಿಕಾರ ಸ್ವೀಕಾರ
ಮೈಸೂರು

ಮೈಸೂರು ನೂತನ ಪೊಲೀಸ್ ಆಯುಕ್ತರಾಗಿ ಕೆ.ಟಿ.ಬಾಲಕೃಷ್ಣ ಅಧಿಕಾರ ಸ್ವೀಕಾರ

January 26, 2019

ಮೈಸೂರು: ನಗರದ ನೂತನ ಪೊಲೀಸ್ ಆಯಕ್ತರಾಗಿ ಕೆ.ಟಿ. ಬಾಲಕೃಷ್ಣ ಶುಕ್ರವಾರ ಸಂಜೆ ಅಧಿಕಾರ ಸ್ವೀಕರಿಸಿದರು. ನಿರ್ಗಮಿತ ಆಯುಕ್ತ ಡಾ. ಸುಬ್ರಹ್ಮಣೇ ಶ್ವರರಾವ್ ಅವರು ಕೆ.ಟಿ.ಬಾಲ ಕೃಷ್ಣ ಅವರಿಗೆ ಅಧಿಕಾರ ಹಸ್ತಾಂತರಿಸಿದರು.

ಬೆಂಗಳೂರು ಗುಪ್ತಚರ(ಆಡಳಿತ) ವಿಭಾ ಗದ ಎಸ್ಪಿ ಆಗಿದ್ದ ಕೆ.ಟಿ.ಬಾಲಕೃಷ್ಣ ಅವರಿಗೆ ಡಿಐಜಿಪಿ ದರ್ಜೆಗೆ ಬಡ್ತಿ ನೀಡಿ ವರ್ಗಾವಣೆ ಮಾಡಲಾಗಿತ್ತು. ಕೆ.ಟಿ.ಬಾಲಕೃಷ್ಣ ಅವರು ಈ ಹಿಂದೆ ಮೈಸೂರು ನಗರ ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿಯಾಗಿ ಕಾರ್ಯ ನಿರ್ವಹಿಸಿದ್ದರು. ಇವರು ಮೂಲತಃ ಮೈಸೂರಿನವರೇ ಆಗಿದ್ದು, ಕಾರವಾರ, ಉಡುಪಿ, ಗದಗ ಜಿಲ್ಲಾ ಎಸ್‍ಪಿಯಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.

ಅಧಿಕಾರ ಸ್ವೀಕರಿಸಿದ ನಂತರ ಮಾತನಾಡಿ, ಮೈಸೂರು ನನಗೆ ಹೊಸ ದಲ್ಲ. ನಾನು ಬಹಳಷ್ಟು ಸಮಯವನ್ನು ಮೈಸೂರಿನಲ್ಲೇ ಕಳೆದಿದ್ದೇನೆ. ಇಲ್ಲಿನ ಜನ ಶಾಂತಿ ಪ್ರಿಯರು. ಇಂದು ಮೈಸೂರು ಬೃಹದಾಕಾರವಾಗಿ ಬೆಳೆದಿದೆ. ಅದರಂತೆ ಹೊಸ ಸವಾಲುಗಳು ಇವೆ ಎಂದರು.

ಜನರ ಆಸ್ತಿ-ಪಾಸ್ತಿ ರಕ್ಷಣೆ, ಕಾನೂನು ಸುವ್ಯವಸ್ಥೆ ಕಾಪಾಡು ವುದು ಪೊಲೀಸ್ ಇಲಾಖೆಯ ಆದ್ಯ ಕರ್ತವ್ಯ. ಯಾವುದೇ ರೀತಿಯ ಅನ್ಯಾಯವಾಗದಂತೆ ನ್ಯಾಯ ಒದಗಿಸಬೇಕಿದೆ. ಕಾನೂನಿಗಿಂತ ದೊಡ್ಡವರು ಯಾರು ಇಲ್ಲ. ಕಾನೂನು ಕೈಗೆತ್ತಿಕೊಳ್ಳುವವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದರು.

ಸಾರ್ವಜನಿಕರು ಯಾವುದೇ ಸಮಸ್ಯೆಗಳಿದ್ದರೂ ಯಾವಾಗಬೇಕಾದರೂ ನನ್ನನ್ನು ಸಂಪರ್ಕಿಸಬಹುದು. ನಾವಿರುವುದು ಜನರ ಸಮಸ್ಯೆ ಬಗೆಹರಿಸಲು. ಹಾಗಾಗಿ ಇಲಾಖೆ ಜನರ ಸಹಕಾರ, ವಿಶ್ವಾಸಗಳಿಸಬೇಕು. ಜನರು ಸಹಕಾರ ನೀಡದಿದ್ದರೆ ಪೊಲೀಸ್ ಕೆಲಸ ಅಸಾಧ್ಯ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಡಿಸಿಪಿಗಳಾದ ವಿಷ್ಣುವರ್ಧನ್, ಡಾ.ವಿಕ್ರಂ ಅಮಟೆ ಉಪಸ್ಥಿತರಿದ್ದರು.

Translate »