ರಾಜ್ಯದ ಪೊಲೀಸರಿಗೆ ಇಲ್ಲ ರಾಷ್ಟ್ರಪತಿ ಪದಕ ಭಾಗ್ಯ
ಮೈಸೂರು

ರಾಜ್ಯದ ಪೊಲೀಸರಿಗೆ ಇಲ್ಲ ರಾಷ್ಟ್ರಪತಿ ಪದಕ ಭಾಗ್ಯ

January 26, 2019

ಬೆಂಗಳೂರು: ರಾಜ್ಯ ಸರ್ಕಾರದ ನಿರ್ಲಕ್ಷ್ಯ ಧೋರಣೆ ಹಾಗೂ ಹಿರಿಯ ಐಪಿಎಸ್ ಅಧಿಕಾರಿಗಳ ಆಂತರಿಕ ಕಲಹದಿಂದಾಗಿ ಈ ಬಾರಿ ಪ್ರತಿಷ್ಠಿತ ರಾಷ್ಟ್ರಪತಿ ಪದಕ ಕರ್ನಾಟಕದ ಪೊಲೀಸ್ ಇಲಾಖೆಯ ಯಾವೊಬ್ಬ ಅಧಿಕಾರಿ, ಸಿಬ್ಬಂದಿಗೂ ಲಭಿಸದಂತಾಗಿದೆ. ಗಣರಾಜ್ಯೋತ್ಸವ ಪ್ರಯುಕ್ತ ಪ್ರತಿ ವರ್ಷವೂ ಪೆÇಲೀಸ್ ಮತ್ತು ದೇಶದ ವಿವಿಧ ಭದ್ರತಾ ಪಡೆಗಳ ಅಧಿಕಾರಿ ಮತ್ತು ಸಿಬ್ಬಂದಿಗೆ ಕೊಡಮಾಡುವ ಪ್ರತಿಷ್ಠಿತ ರಾಷ್ಟ್ರಪತಿ ಪದಕವನ್ನು ರಾಜ್ಯದ ಪೊಲೀಸ್ ಅಧಿಕಾರಿ, ಸಿಬ್ಬಂದಿ ಪಡೆಯುತ್ತಿದ್ದರು. ಹಿರಿಯ ಐಪಿಎಸ್ ಅಧಿಕಾರಿ ಯೊಬ್ಬರು ತಮ್ಮನ್ನು ಪುರಸ್ಕಾರಕ್ಕೆ ಪರಿಗಣಿಸಿಲ್ಲ ಎಂದು ಸಿಎಟಿಯಲ್ಲಿ ತಕರಾರು ಅರ್ಜಿ ಸಲ್ಲಿಸಿದ್ದಾರೆ.

ಹೀಗಾಗಿ, ರಾಜ್ಯದಿಂದ ಅರ್ಹರ ಪಟ್ಟಿಯನ್ನು ಕೇಂದ್ರ ಗೃಹ ಇಲಾಖೆಗೆ ನಿಗದಿತ ಸಮಯದೊಳಗೆ ಕಳುಹಿಸಲಾಗಿಲ್ಲ ಎಂದಿವೆ ಗೃಹ ಇಲಾಖೆ ಮೂಲಗಳು. ಪ್ರತಿ ವರ್ಷದ ಜ.25ರಂದು ವಿಶಿಷ್ಟ ಸೇವೆಗಾಗಿ ರಾಷ್ಟ್ರ ಪತಿಗಳ ಪೆÇಲೀಸ್ ಪದಕ, ವಿಶಿಷ್ಟ ಸೇವಾ ಪದಕ ಮತ್ತು ಶ್ಲಾಘನೀಯ ಸೇವಾ ಪದಕ ಸೇರಿ 4 ವಿಭಾಗಗಳಲ್ಲಿ ಪದಕಗಳಿಗೆ ಹೆಸರು ಘೋಷಣೆ ಮಾಡಲಾಗು ತ್ತದೆ. ರಾಷ್ಟ್ರಪತಿ ಭವನದಿಂದ ರಾಜಭವನಕ್ಕೆ ಪದಕಗಳನ್ನು ರವಾನಿಸಲಾಗು ತ್ತದೆ. ರಾಜಭವನದಲ್ಲಿ ರಾಜ್ಯಪಾಲರು ಪದಕ ಪ್ರದಾನ ಮಾಡಿ ಗೌರವಿಸುವುದು ಸಂಪ್ರದಾಯ. 2018ರಲ್ಲಿ ಐಪಿಎಸ್ ಅಧಿಕಾರಿಗಳು ಸೇರಿ 25 ಸಿಬ್ಬಂದಿಗೆ ಪದಕ ಲಭಿಸಿತ್ತು. ರಾಜ್ಯದಲ್ಲಿ ಉತ್ತಮ ಸಾಧನೆ ಮಾಡಿದ ಐಪಿಎಸ್ ಅಧಿಕಾರಿಗಳಿಂದ ಹಿಡಿದು ಕಾನ್ಸ್‍ಟೇಬಲ್‍ಗಳವರೆಗೆ ಒಟ್ಟು 33 ಮಂದಿಯ ಹೆಸರನ್ನು ನವೆಂಬರ್ ಮೊದಲ ವಾರದಲ್ಲಿ ರಾಜ್ಯ ಪೆÇಲೀಸ್ ಪ್ರಧಾನ ಕಚೇರಿ ಯಿಂದ ಗೃಹ ಇಲಾಖೆಗೆ ರವಾನಿಸಲಾಗಿತ್ತು. ಸಿಎಟಿಯಿಂದ ತಡೆಯಾಜ್ಞೆ ಬಂದ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಇಲಾಖೆಗೆ ರವಾನಿಸಲು ಸಾಧ್ಯವಾಗಲಿಲ್ಲ ಎಂದು ರಾಜ್ಯ ಗೃಹ ಇಲಾಖೆ ಮೂಲಗಳು ತಿಳಿಸಿವೆ. ರಾಜ್ಯ ಸರಕಾರ, ಹಿರಿಯ ಅಧಿಕಾರಿಯೊಬ್ಬರ ಮನವೊಲಿಸಿದ್ದರೆ ಪದಕ ಪಟ್ಟಿ ಕಳುಹಿಸಲು ಯಾವುದೇ ತೊಂದರೆ ಆಗುತ್ತಿರಲಿಲ್ಲ ಎಂದು ತಿಳಿದು ಬಂದಿದೆ.
855 ಪದಕ: ಕರ್ನಾಟಕ ಹೊರತುಪಡಿಸಿ ದೇಶದ ಎಲ್ಲ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು, ಬಿಎಸ್‍ಎಫ್, ಎನ್‍ಎಸ್‍ಜಿ ಸೇರಿದಂತೆ 50 ಪಡೆಗಳ 855 ಅಧಿಕಾರಿ ಮತ್ತು ಸಿಬ್ಬಂದಿಗೆ ಗಣರಾಜ್ಯೋತ್ಸವ ಪದಕ ಲಭಿಸಿವೆ.

Translate »