ತಿಲಕ್‍ನಗರದಲ್ಲಿ ರಸ್ತೆ ಡಾಂಬರೀಕರಣಕ್ಕೆ ಗುದ್ದಲಿ ಪೂಜೆ
ಮೈಸೂರು

ತಿಲಕ್‍ನಗರದಲ್ಲಿ ರಸ್ತೆ ಡಾಂಬರೀಕರಣಕ್ಕೆ ಗುದ್ದಲಿ ಪೂಜೆ

January 26, 2019

ಮೈಸೂರು: ಮೈಸೂರಿನ ತಿಲಕ್ ನಗರದ ಆರ್‍ಎಂಸಿ ಸರ್ಕಲ್‍ನಿಂದ ಉಮರ್ ಖಯಾಂ ರಸ್ತೆವರೆಗೆ ಡಾಂಬರೀಕರಣ ಹಾಗೂ ಚರಂಡಿ ಕಾಮಗಾರಿಗೆ ಶಾಸಕ ಎಲ್.ನಾಗೇಂದ್ರ ಗುದ್ದಲಿ ಪೂಜೆ ನೆರವೇರಿಸಿದರು.

80 ಲಕ್ಷ ರೂ. ವೆಚ್ಚದಲ್ಲಿ ತಿಲಕ್‍ನಗರ 2ನೇ ಮುಖ್ಯ ರಸ್ತೆಯ ಡಾಂಬರೀಕರಣ 20 ಲಕ್ಷ ರೂ. ವೆಚ್ಚದಲ್ಲಿ ಒಳಚರಂಡಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದ್ದು, ಗುಣಮಟ್ಟ ಕಾಪಾಡಿಕೊಂಡು ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕೆಂದು ಶಾಸಕರು ತಿಳಿಸಿದ್ದಾರೆ. ಬಿಎಂಶ್ರೀ ನಗರದಲ್ಲಿ ಸಂಸದರ ಪ್ರದೇಶಾಭಿವೃದ್ಧಿ ನಿಧಿಯಿಂದ 15 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿರುವ ಅಂಬೇಡ್ಕರ್ ಸಮುದಾಯ ಭವನದ ಕಟ್ಟಡ ವನ್ನು ಸಂಸದ ಪ್ರತಾಪ್ ಸಿಂಹ ಉದ್ಘಾಟಿಸಿದರು. ಈ ವೇಳೆ ಶಾಸಕ ಎಲ್.ನಾಗೇಂದ್ರ, ಪಾಲಿಕೆ ಸದಸ್ಯರಾದ ರಂಗಸ್ವಾಮಿ, ರಮೇಶ, ಬಿಜೆಪಿ ಮುಖಂಡರಾದ ಶೇಷಯ್ಯ, ಪುಟ್ಟಬುದ್ಧಿ, ಅಧಿಕಾರಿಗಳಾದ ನಾಗರಾಜ್, ವೀರೇಶ್, ಹೆಚ್.ನಾಗ ರಾಜ್, ಕೆ.ಆರ್.ಚಂದ್ರಶೇಖರ್ ಹಾಗೂ ಇತರರು ಪಾಲ್ಗೊಂಡಿದ್ದರು.

Translate »