ಮೈಸೂರು ಫ್ಯಾಷನ್ ವೀಕ್ ಸೀಸನ್-5
ಮೈಸೂರು

ಮೈಸೂರು ಫ್ಯಾಷನ್ ವೀಕ್ ಸೀಸನ್-5

November 3, 2018

ಮೈಸೂರು: ಮೈಸೂರಿನ ನಜರ್‍ಬಾದ್‍ನ ದಿ ವಿಂಡ್ ಫ್ಲವರ್ ರೆಸಾಟ್ರ್ಸ್ ಮತ್ತು ಸ್ಪಾದಲ್ಲಿ ಇಂದಿನಿಂದ 3 ದಿನಗಳ ಕಾಲ ಆಯೋಜಿಸಿರುವ `ಮೈಸೂರು ಫ್ಯಾಷನ್ ವೀಕ್ ಸೀಸನ್-5’ಗೆ ವಿವಿಧ ವಿನ್ಯಾಸದ ಉಡುಗೆಗಳನ್ನು ತೊಟ್ಟ ರೂಪದರ್ಶಿಯರ ರ‍್ಯಾಂಪ್ ವಾಕ್ ಮಾಡುವ ಮೂಲಕ ಚಾಲನೆ ದೊರೆಯಿತು.

ಮೈಸೂರನ್ನು ಜಾಗತಿಕ ಫ್ಯಾಷನ್ ನಕ್ಷೆಯಲ್ಲಿ ಗುರುತಿಸುವಂತೆ ಮಾಡಿರುವ ಮೈಸೂರಿನ ಖ್ಯಾತ ಡಿಸೈನರ್ ಜಯಂತಿ ಬಲ್ಲಾಳ್ ಅವರು ಆಯೋಜಿಸಿರುವ ಫ್ಯಾಷನ್ ವೀಕ್ ಸೀಸನ್-5ರಲ್ಲಿ ರೂಪದರ್ಶಿಯರು ತೊಟ್ಟು ರ‍್ಯಾಂಪ್ ವಾಕ್ ಮಾಡಿದ ಮೈಸೂರಿನ ಪಾರಂಪರಿಕ ಶೈಲಿಯ ಉಡುಗೆಗಳು ಫ್ಯಾಷನ್ ಪ್ರಿಯರ ಮೆಚ್ಚುಗೆಗೆ ಪಾತ್ರವಾದವು.

ಮೊದಲ ಸುತ್ತಿನಲ್ಲಿ ಖ್ಯಾತ ವಸ್ತ್ರ ವಿನ್ಯಾ ಸಕ ಶರವಣ್‍ಕುಮಾರ್ ಅವರು ವಿನ್ಯಾಸ ಗೊಳಿಸಿದ ಬನಾರಸ್ ಸೀರೆಯನ್ನು ತೊಟ್ಟು ಎಲ್ಲರ ಪ್ರಮುಖ ಆಕರ್ಷಣೆಯಾಗಿದ್ದ ನಟಿ ಹಾಗೂ ಶರವಣ್ ಕುಮಾರ್ ಅವರ ಶೋ- ಸ್ಟಾಪರ್ ರಾಗಿಣಿ ದ್ವಿವೇದಿ ಮತ್ತು ನೇಪಾ ಳದ ಪ್ರಥಮ ಟ್ರಾನ್ಸ್‍ಜೆಂಡರ್ ರೂಪ ದರ್ಶಿ ಅಂಜಲಿ ಲಾಮಾ ಸೇರಿದಂತೆ 20ಕ್ಕೂ ಹೆಚ್ಚು ಮಂದಿ ರೂಪದರ್ಶಿಯರು ಹಾಗೂ ರೂಪದರ್ಶಕರು ರ‍್ಯಾಂಪ್ ಮೇಲೆ ಹೆಜ್ಜೆ ಹಾಕಿ ವಿಶೇಷ ವಿನ್ಯಾಸ, ನೈಪುಣ್ಯತೆವುಳ್ಳ ಉಡುಪುಗಳನ್ನು ಪ್ರದರ್ಶಿಸಿದರು.

2ನೇ ಸುತ್ತಿನಲ್ಲಿ ಡ್ರೀಮ್ ಜೋನ್ ಕಾಲೇ ಜಿನ ವಿನ್ಯಾಸಕರು ವಿನ್ಯಾಸಗೊಳಿಸಿದ ಉಡುಪು ಗಳನ್ನು ತೊಟ್ಟ ಜಯಮಿಶ್ರಾ, ರಿತುಪರ್ಣ ಸೇನ್‍ಗುಪ್ತಾ, ಇಹಾನಾ ದಿಲ್ಲೋನ್ ಮತ್ತಿ ತರೆ ರೂಪದರ್ಶಿಯರು ಒಬ್ಬೊಬ್ಬರು ರ‍್ಯಾಂಪ್ ಮೇಲೆ ಕ್ಯಾಟ್ ವಾಕ್ ಮಾಡಿ ಫ್ಯಾಷನ್ ಪ್ರಿಯರ ಮನಸೂರೆಗೊಳಿಸಿದರು.

3ನೇ ಸುತ್ತಿನಲ್ಲಿ ಮೈಸೂರು ಫ್ಯಾಷನ್ ವೀಕ್‍ನ ಕೇಂದ್ರ ಬಿಂದುವಾದ ಮೈಸೂರಿನ ಖ್ಯಾತ ಡಿಸೈನರ್ ಜಯಂತಿ ಬಲ್ಲಾಳ್ ಅವರು ವಿನ್ಯಾಸಗೊಳಿಸಿದ ಮೈಸೂರಿನ ಪಾರಂ ಪರಿಕ ಶೈಲಿಯ ಉಡುಪುಗಳನ್ನು ತೊಟ್ಟ ರೂಪದರ್ಶಿಯರಾದ ರಂಗಿತರಂಗ ಖ್ಯಾತಿಯ ರಾಧಿಕಾ ಚೇತನ್, ಬಿಗ್‍ಬಾಸ್ ಖ್ಯಾತಿಯ ನಿವೇದಿತಾಗೌಡ, ಹೇಮ ಮಾಲಿನಿ ಲಕ್ಷ್ಮಣ್ ಸೇರಿದಂತೆ ಇನ್ನಿತರರು ಕ್ಯಾಟ್ ವಾಕ್ ಮೂಲಕ ಎಲ್ಲರ ಮೆಚ್ಚುಗೆಗೂ ಪಾತ್ರರಾದರು.

ಎಲ್ಲರ ಮನಗೆದ್ದ ಚಿಣ್ಣರ ಫ್ಯಾಷನ್ ಶೋ: ಫ್ಯಾಷನ್ ಶೋನಲ್ಲಿ 5ಕ್ಕೂ ಹೆಚ್ಚು ಮಂದಿ ಚಿಣ್ಣರು, ಜಯಂತಿ ಬಲ್ಲಾಳ್ ಅವರು ವಿನ್ಯಾಸಗೊಳಿಸಿದ ಮೈಸೂರಿನ ಪಾರಂಪರಿಕ ಶೈಲಿಯ ಉಡುಪುಗಳೊಂ ದಿಗೆ ರ‍್ಯಾಂಪ್ ಮೇಲೆ ಹೆಜ್ಜೆ ಹಾಕಿ ಫ್ಯಾಷನ್ ಶೋಗೆ ಮೆರಗು ತರುವ ಮೂಲಕ ಫ್ಯಾಷನ್ ಪ್ರಿಯರ ಮನಸೂರೆಗೊಳಿಸಿದರು.

ಮೊಬೈಲ್‍ನಲ್ಲಿ ಸೆರೆಯಾದ ರೂಪದರ್ಶಿ ಯರು: ರಾಗಿಣಿ ದ್ವಿವೇದಿ, ಅಂಜಲಿ ಲಾಮಾ, ರಂಗಿತರಂಗ ಖ್ಯಾತಿಯ ರಾಧಿಕಾ ಚೇತನ್, ಬಿಗ್‍ಬಾಸ್ ಖ್ಯಾತಿಯ ನಿವೇದಿತಾಗೌಡ, ಹೇಮಮಾಲಿನಿ ಲಕ್ಷ್ಮಣ್ ಅವರು ರ‍್ಯಾಂಪ್ವಾಕ್ ಮಾಡುವಾಗ ನೆರೆದಿದ್ದ ಫ್ಯಾಷನ್ ಪ್ರಿಯರು, ಮೊಬೈಲ್‍ಗಳಲ್ಲಿ ಫೋಟೋ ಕ್ಲಿಕ್ಕಿಸಿಕೊಂಡರು.

Translate »