ಮೈಸೂರು: `ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ’ ಚಿತ್ರದ ನಟಿಯರಾದ ರೂಪದರ್ಶಿ ಅಶ್ವಿತಿಶೆಟ್ಟಿ ಮತ್ತು ಅದ್ವಿತಿಶೆಟ್ಟಿ ಅವರು ಆಧುನಿಕ ಲೇಪಿತ ಪಾರಂಪರಿಕ ಉಡುಗೆಗಳನ್ನು ತೊಟ್ಟು ರ‍್ಯಾಂಪ್‌ವಾಕ್ ಮಾಡಿ ಫ್ಯಾಷನ್ ಪ್ರಿಯರ ಮನಸೂರೆಗೊಳಿಸಿದರು. ಈ ಮೂಲಕ `ಮೈಸೂರು ಫ್ಯಾಷನ್ ವೀಕ್ ಸೀಸನ್-5’ಗೆ ಯಶಸ್ವಿ ತೆರೆಬಿದ್ದಿತು.
ಮೈಸೂರಿನ ನಜರ್‍ಬಾದ್‍ನ ದಿ ವಿಂಡ್ ಫ್ಲವರ್ ರೆಸಾಟ್ರ್ಸ್ ಮತ್ತು ಸ್ಪಾದಲ್ಲಿ ಮೈಸೂ ರನ್ನು ಜಾಗತಿಕ ಫ್ಯಾಷನ್ ನಕ್ಷೆಯಲ್ಲಿ ಗುರು ತಿಸುವಂತೆ ಮಾಡಿರುವ ಮೈಸೂರಿನ ಖ್ಯಾತ ಡಿಸೈನರ್ ಜಯಂತಿ ಬಲ್ಲಾಳ್ ಅವರು 3 ದಿನಗಳ ಕಾಲ ಆಯೋ ಜಿಸಿದ್ದ `ಮೈಸೂರು ಫ್ಯಾಷನ್ ವೀಕ್ ಸೀಸನ್-5’ರ 3ನೇ ದಿನ ವಾದ ಭಾನುವಾರ ವಿವಿಧ ಖ್ಯಾತ ವಿನ್ಯಾಸ ಕರು ವಿನ್ಯಾಸಗೊಳಿಸಿದ ಆಧುನಿಕ ಲೇಪಿತ ಪಾರಂಪರಿಕ ಉಡುಪು ಹಾಗೂ ಪಾಶ್ಚಾತ್ಯ ಗೌನ್‍ಗಳನ್ನು ತೊಟ್ಟು ರೂಪದರ್ಶಿಯರು ರ್ಯಾಂಪ್ ವಾಕ್ ಮಾಡಿ ಉಡುಪುಗಳಿಗೆ ಮತ್ತಷ್ಟು ಮೆರಗು ನೀಡಿದರು.
ಮೊದಲ ಸುತ್ತಿನಲ್ಲಿ ಅಷ್ಪಾಕ್ ಅಹಮದ್ ಅವರು ವಿನ್ಯಾಸಕರು ವಿನ್ಯಾಸಗೊಳಿಸಿದ ಉಡುಪುಗಳನ್ನು ತೊಟ್ಟು ರೂಪದರ್ಶಿ ಯರು ರ‍್ಯಾಂಪ್‌ವಾಕ್ ಮಾಡಿ ಉಡುಪು ಗಳಿಗೆ ಮತ್ತಷ್ಟು ಮೆರಗು ತಂದರು.
2ನೇ ಸುತ್ತಿನಲ್ಲಿ ಮೈಸೂರಿನ ಹೆಸ ರಾಂತ ಸಂಸ್ಥೆ ಡಜಲ್ಸ್ ಅವರು ವಿನ್ಯಾಸ ಗೊಳಿಸಿದ ಆಧುನಿಕ ಲೇಪಿತ ಪಾರಂಪರಿಕ ಉಡುಗೆಗಳನ್ನು ತೊಟ್ಟು ರೂಪದರ್ಶಿಯರಾದ ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ’ ಚಿತ್ರದ ನಟಿಯರಾದ ರೂಪದರ್ಶಿ ಅಶ್ವಿತಿಶೆಟ್ಟಿ ಮತ್ತು ಅದ್ವಿತಿಶೆಟ್ಟಿ ಸೇರಿದಂತೆ ಇನ್ನಿತರರು ರ‍್ಯಾಂಪ್‌ವಾಕ್ ಮಾಡುವ ಮೂಲಕ ಉಡುಪುಗಳಿಗೆ ಮತ್ತಷ್ಟು ಮೆರಗು ನೀಡುವ ಜತೆಗೆ ಫ್ಯಾಷನ್ ಪ್ರಿಯರನ್ನು ಮನಸೂರೆಗೊಳಿಸಿದರು.
ಖ್ಯಾತ ವಿನ್ಯಾಸಕಿ ಮುಂಬೈನ ಸ್ವಪ್ನಿಲ್ ಶಿಂಧೆ ಅವರು ವಿನ್ಯಾಸಗೊಳಿಸಿದ ಪಾಶ್ಚಾತ್ಯ ಗೌನ್ ಉಡುಪುಗಳನ್ನು ತೊಟ್ಟು ಬಾಲಿವುಡ್‍ನ ಹೆಸರಾಂತ ನಾಯಕಿ ರೂಪದರ್ಶಿ ನುಶ್ರತ್ ಭರೂಚ ಸೇರಿದಂತೆ ಇನ್ನಿತ ರರು ರ‍್ಯಾಂಪ್‌ವಾಕ್ ಮಾಡುವ `ಮೈಸೂರು ಫ್ಯಾಷನ್ ವೀಕ್ ಸೀಸನ್-5’ಗೆ ಮೆರಗು ತಂದುಕೊಟ್ಟರು. ಹಾಗೆಯೇ ವಿನ್ಯಾಸಕ ರಾದ ಸೌರಭ್ ಕಾಂತ್ ಶ್ರೀವತ್ಸವ್, ಪ್ರಿನ್ಸ್ ಪಿನ್‍ಹ್ಯಾಸ್, ರಿಂಕು ಸೋಬ್ತಿ ಅವರು ವಿನ್ಯಾಸಗೊಳಿಸಿದ ಉಡುಪುಗಳನ್ನು ತೊಟ್ಟು ರೂಪದರ್ಶಿಯರು ರ್ಯಾಂಪ್ ಮೇಲೆ ಹೆಜ್ಜೆ ಹಾಕಿದರು. ಒಟ್ಟಾರೆ, `ಮೈಸೂರು ಫ್ಯಾಷನ್ ವೀಕ್ ಸೀಸನ್-5’ರ ಕೊನೆಯ ದಿನವಾದ ಭಾನುವಾರ, ಪಾಶ್ಚಾತ್ಯ ಗೌನ್ ಉಡುಪು ತೊಟ್ಟು ರ‍್ಯಾಂಪ್‌ವಾಕ್ ಮಾಡಿದ ಬಾಲಿವುಡ್‍ನ ಹೆಸರಾಂತ ನಾಯಕಿ ರೂಪದರ್ಶಿ ನುಶ್ರತ್ ಭರೂಚ ಪ್ರಮುಖ ಆಕರ್ಷಣೆಯಾಗಿದ್ದರು.
ವಿನ್ಯಾಸಕಿಯೊಂದಿಗೆ ಸೆಲ್ಫಿ: ರಾಜಸ್ತಾನದ ಜೈಪುರ್ ಮೂಲದ ಖ್ಯಾತ ವಿನ್ಯಾಸಕಿ ಕೀರ್ತಿ ರಾಥೋಡ್ ಅವರೊಂದಿಗೆ ಸೆಲ್ಫಿ ಕ್ಲಿಕ್ಕಿಸಲು ಫ್ಯಾಷನ್ ಪ್ರಿಯರು ನಾ ಮುಂದು-ತಾ ಮುಂದು ಎಂದು ಮುಗಿ ಬಿದ್ದು ಸೆಲ್ಫಿ ಕ್ಲಿಕ್ಕಿಸಿಕೊಂಡರು.