ಮೈಸೂರು: ಕೇಂದ್ರ ಕನ್ನಡ ಸಾಹಿತ್ಯ ಸಲಹಾ ಸಮಿತಿ ಸದಸ್ಯ, ಹಿರಿಯ ರಂಗಕರ್ಮಿ ಅಡ್ಡಂಡ ಸಿ. ಕಾರ್ಯಪ್ಪ ಹಾಗೂ ರಂಗಭೂಮಿ ಕಲಾವಿದೆ ಅನಿತಾ ಕಾರ್ಯಪ್ಪ ದಂಪತಿಗೆ `ದಕ್ಷಿಣ ಕೇಸರಿ’ ಪ್ರಶಸ್ತಿಯನ್ನು ಮೈಸೂರು- ಕೊಡಗು ಸಂಸದ ಪ್ರತಾಪ ಸಿಂಹ ಪ್ರದಾನ ಮಾಡಿದರು.
ಮೈಸೂರು ಗಾಲ್ಫಕ್ಲಬ್‍ನಲ್ಲಿ ಲಯನ್ಸ್ ಸೇವಾ ಸಂಸ್ಥೆ ಮೈಸೂರು ದಕ್ಷಿಣ ಕೇಂದ್ರದ ವತಿಯಿಂದಂದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಹಿರಿಯ ರಂಗಕರ್ಮಿ ಅಡ್ಡಂಡ ಸಿ.ಕಾರ್ಯಪ್ಪ ದಂಪತಿಗೆ `ದಕ್ಷಿಣ ಕೇಸರಿ’ ಪ್ರಶಸ್ತಿಯನ್ನು ಪ್ರದಾನ ಮಾಡಿ, ಮಾತನಾಡಿದ ಸಂಸದ ಪ್ರತಾಪ ಸಿಂಹ ಅವರು, 2014ರ ಲೋಕಸಭಾ ಚುನಾವಣೆ ಯಲ್ಲಿ ನನ್ನ ಗೆಲುವಿಗೆ ಹಿರಿಯ ರಂಗ ಕರ್ಮಿ ಅಡ್ಡಂಡ ಕಾರ್ಯಪ್ಪ ಹಾಗೂ ಇತರೆ ಸ್ನೇಹಿತರ ಕೊಡುಗೆ ಅಪಾರವಾಗಿದೆ. 2014ರ ಚುನಾವಣಾ ಸಂದರ್ಭದಲ್ಲಿ ಕೊಡವರ ಬಗ್ಗೆ ಹಿರಿಯ ಸಾಹಿತಿ ಕೋ.ಚನ್ನಬಸಪ್ಪ ಅವರು, ಅವಹೇಳನ ಮಾಡುವಂಥ ಲೇಖನ ಪ್ರಕಟಿಸಿದ್ದರು. ಇದನ್ನು ವಿರೋಧಿಸಿ, ನಾನು ರಾಜ್ಯಮಟ್ಟದಲ್ಲಿ ಪತ್ರಿಕೆಯಲ್ಲಿ ಕೆಲಸ ಮಾಡುವಾಗ ಲೇಖನ ಬರೆದಿದ್ದೆ. ಚುನಾ ವಣೆ ಸಂದರ್ಭದಲ್ಲಿ ಲೇಖನ ಮೆಚ್ಚಿ ಸಾವಿರಾರು ಕೊಡವರು ನನ್ನ ಹತ್ತಿರ ದಿಂದ ನೋಡಿ, ಸಂತೋಷ ಪಟ್ಟು ಆ ಚುನಾ ವಣೆಯಲ್ಲಿ ಮತ ಹಾಕುವ ಮೂಲಕ ಗೆಲುವಿಗೆ ಕಾರಣರಾದರು. ಇದಕ್ಕೆಲ್ಲಾ ಅಡ್ಡಂಡ ಕಾರ್ಯಪ್ಪನವರು ನನ್ನ ಪರವಾಗಿ ಕೈಗೊಂಡ ಪ್ರಚಾರ ಶೈಲಿಯೇ ಕಾರಣ ಎಂದರು.
ಹಿರಿಯ ಸಾಹಿತಿ ಅಡ್ಡಂಡ ಕಾರ್ಯಪ್ಪ ಹಾಗೂ ಶ್ರೀಮತಿ ಅನಿತಾ ಕಾರ್ಯಪ್ಪ ನವರು, ಅಪ್ಪಚ್ಚು ಕವಿಯ ತತ್ವಾ ದರ್ಶಗಳಿಂದ ಪ್ರಭಾವಿತರಾಗಿ ರಂಗ ಭೂಮಿಯಲ್ಲಿ ಕಷ್ಟದ ಪರಿಸ್ಥಿತಿಯಲ್ಲೂ ಸಾಕಷ್ಟು ಕೆಲಸ ಮಾಡಿದ್ದಾರೆ. ಬರಹ ಗಾರರಾಗಿ, ನಾಟಕಕಾರರಾಗಿ, ಕಲಾವಿದ ರಾಗಿ, ಕೊಡಗಿನ ಸಂಸ್ಕøತಿಯನ್ನು ದೇಶ ಎಲ್ಲೆಡೆ ಪ್ರಚಾರ ಮಾಡುತ್ತಿದ್ದಾರೆ. ಇವರ ಕಲಾಸೇವೆಯನ್ನು ಎಷ್ಟು ಹೇಳಿದರೂ ಸಾಲದು ಎಂದು ಬಣ್ಣಿಸಿದರು.
ಕೊಡವರು ದೇಶಾಭಿಮಾನವನ್ನು ಎಷ್ಟು ಹೊಗಳಿದರೂ ಸಾಲದು. ಕೊಡಗಿನಿಂದ ಇಲ್ಲಿಯವರೆಗೆ 26 ಸೇನೆಯ ವಿವಿಧ ಉನ್ನತ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಇನ್ನೂ ಅನೇಕರು ಸೇನೆ ವಿವಿಧ ಕೆಳ ಹಂತದ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ, ದೇಶ ರಕ್ಷಣೆಗೆ ಮುಂದಾಗಿದ್ದಾರೆ. ಕ್ರೀಡೆ, ಕೃಷಿ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲೂ ಕೊಡಗಿ ನವರು ತಮ್ಮ ಸಾಧನೆ ಮೂಲಕ ಇತಿಹಾಸ ಪುಟದಲ್ಲಿ ದಾಖಲಿಸಿದ್ದಾರೆ ಎಂದರಲ್ಲದೆ, ಟಿಪ್ಪು ಸುಲ್ತಾನನ ಆಳ್ವಿಕೆ ಕಾಲದಲ್ಲಿ ಕೊಡಗಿನ ಮೇಲೆ 32 ಬಾರಿ ಯುದ್ಧ ಸಾರಿದ್ದರೂ, ಆತನ ಸೈನ್ಯವನ್ನು ಹಿಮ್ಮೆಟ್ಟಿಸಿ, ಸಾಹಸ ಮೇರಿದ್ದಾರೆ. ಕೊಡವರು ಎಂದಿಗೂ ಸ್ವಾಭಿಮಾನಕ್ಕೆ ಧಕ್ಕೆಯಾದಾಗ ಸಹಿಸಿಕೊಂಡವರಲ್ಲ. ಇದರ ಪ್ರತಿಕಾರವೇ ಟಿಪ್ಪುವಿನ ಸೇನ್ಯವನ್ನು ಹಿಮ್ಮೆಟ್ಟಿಸಿರುವುದು ತಾಜಾ ಉದಾಹರಣೆ ಎಂದರು.
ಅಲ್ಲದೆ, ಮೈಸೂರಿನ ಅಭಿವೃದ್ಧಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕೊಡುಗೆ ಅಪಾರ. ಅವರು ಕನ್ನಡಕ್ಕೆ ನೀಡಿ ರುವ ಕೊಡುಗೆ ಇಂದಿಗೂ ಯಾರು ಮರೆ ಯಲಾರರು. ಕನ್ನಡ ಸಾಹಿತ್ಯ ಪರಿಷತ್ ಸ್ಥಾಪನೆ, ಕೈಗಾರಿಕೆ, ಕ್ರೀಡೆ, ಶಿಕ್ಷಣ, ಆರೋಗ್ಯ ಹಾಗೂ ಸಾಂಸ್ಕøತಿಕ ಚಟು ವಟಿಕೆಗಳಿಗೂ ಅವರ ಕೊಡುಗೆ ಅಪಾರ ಎಂದು ಬಣ್ಣಿಸಿದರಲ್ಲದೆ, ಮೈಸೂರು ಒಡೆಯರ್ ಅವರ ಆಳ್ವಿಕೆಯಿಂದಲೇ ಕನ್ನಡ ಇನ್ನು ಜೀವಂತವಾಗಿ ಉಳಿದಿದೆ ಎಂದರೆ ತಪ್ಪಾಗಲಾರದು ಎಂದರು.
ಮೈಸೂರು ಪ್ರವಾಸೋದ್ಯಮ ವಿಶ್ವ ಮಟ್ಟದಲ್ಲಿ ಖ್ಯಾತಿಗಳಿಸಿದ್ದರೂ, ಕೆಲ ಜನ ಪ್ರತಿನಿಧಿಗಳ ಚಿತಾವಣೆಯಿಂದ ಅಭಿವೃದ್ಧಿ ಯಿಂದ ವಂಚಿತವಾಗಿತ್ತು. ಇದರಿಂದಾಗಿ ಮೈಸೂರಿನ ಹೆಬ್ಬಾಳು ಮತ್ತು ನಂಜನ ಗೂಡು ಕೈಗಾರಿಕಾ ಪ್ರದೇಶದಲ್ಲಿ ಬಂಡವಾಳ ಹೂಡಲು ಉದ್ಯಮಿಗಳು ಮುಂದಾಗುತ್ತಿರ ಲಿಲ್ಲ. ಇದಕ್ಕೆ ಕಾರಣ ಹುಡುಕುತ್ತ ಹೋದ ನನಗೆ, ಕೆಲವು ಅಚ್ಚರಿ ವಿಷಯಗಳ ಬೆಳಕಿಗೆ ಬಂದವು. ಮೈಸೂರಿಗೆ ಸಾರಿಗೆ ಸಂಪರ್ಕದ ಕೊರತೆಯಿಂದ ಉದ್ಯಮಿಗಳು ಇಲ್ಲಿ ಬಂಡ ವಾಳ ಹೂಡಲು ಹಿಂದೇಟು ಹಾಕುತ್ತಿದ್ದ ಅಂಶವೂ ಒಂದು ಎಂದು ತಿಳಿಸಿದರು.
ರೈಲು ಜೋಡಿ ಮಾರ್ಗದ ಅಭಿವೃದ್ಧಿ ಗಿದ್ದ ಅಡೆತಡೆಗಳಿಗೆ ಮುಕ್ತಿ ನೀಡಿ, ಅದರ ಅಭಿವೃದ್ಧಿಗೆ ಕಟಿಬದ್ಧವಾಗಿ ಕೇಂದ್ರ ಸರ್ಕಾರ ಕೆಲಸ ಮಾಡುತ್ತಿದೆ. ಅಲ್ಲದೆ ನಾಗನಹಳ್ಳಿ ಬಳಿ ರೈಲ್ವೆ ನಿಲ್ದಾಣ ವಿಸ್ತರಣೆ, ಮೈಸೂರು ವಿಮಾನ ನಿಲ್ದಾಣದಲ್ಲಿ ಅಭಿ ವೃದ್ಧಿಗೆ ಮೈಸೂರು ಜಿಲ್ಲಾ ಉಸ್ತುವಾರಿ ಸಚವರ ನೆರವಿನೊಂದಿಗೆ ಈ ಕಾಮಗಾರಿ ವೇಗ ಪಡೆದುಕೊಂಡಿದೆ. ಈಗಿನ ವಿಮಾನ ನಿಲ್ದಾಣದ ರನ್ ವೇ 1.7 ಕಿ.ಮೀ ಇದೆ. ಬೃಹತ್ ವಿಮಾನಗಳು ಹಾರಾಟ ಆರಂಭಿಸ ಬೇಕಾದರೆ, 3 ಕಿ.ಮೀ ನವರೆಗೆ ರನ್ ವೇ ವಿಸ್ತರಣೆಯಾಗಬೇಕು. ಇದಕ್ಕೆ ಬೇಕಾದ ಭೂಮಿಯನ್ನು ಒದಗಿಸಲು ಸಚಿವ ಜಿ.ಟಿ. ದೇವೇಗೌಡ ಅವರ ಒತ್ತಾಸೆ ಮೇರೆಗೆ ಜಿಲ್ಲಾಡಳಿತ ಮುಂದಾಗಿದೆ ಎಂದರು.
ವೇದಿಕೆಯಲ್ಲಿ ಲಯನ್ಸ್ ಸೇವಾ ಸಂಸ್ಥೆ ಮೈಸೂರು ದಕ್ಷಿಣ ಕೇಂದ್ರ ಅಧ್ಯಕ್ಷ ಲಯನ್ ಕೆ.ಕೆ.ಮೋಹನ್, ಅರ್ಪಿತಾ ಪ್ರತಾಪ್‍ಸಿಂಹ, ಪ್ರಥಮ ಜಿಲ್ಲಾ ಉಪ ರಾಜ ಪಾಲ ಲಯನ್ ನಾಗರಾಜ್ ವಿ.ಬೈರಿ, ಕಾರ್ಯದರ್ಶಿ ಲಯನ್ ಜಿ.ಎಸ್. ಸಂತೋಷ್, ಖಜಾಂಚಿ ಲಯನ್ ಎಂ. ತಾತಾಜೀ ಸೇರಿದಂತೆ ಇತರರಿದ್ದರು.