ಮೈಸೂರು ಫ್ಯಾಷನ್ ವೀಕ್ ಸೀಸನ್-5
ಮೈಸೂರು

ಮೈಸೂರು ಫ್ಯಾಷನ್ ವೀಕ್ ಸೀಸನ್-5

November 4, 2018

ಮೈಸೂರು: ಮೈಸೂ ರಿನ ನಜರ್‍ಬಾದ್‍ನ ದಿ ವಿಂಡ್ ಫ್ಲವರ್ ರೆಸಾಟ್ರ್ಸ್ ಮತ್ತು ಸ್ಪಾದಲ್ಲಿ ನಡೆಯುತ್ತಿರುವ `ಮೈಸೂರು ಫ್ಯಾಷನ್ ವೀಕ್ ಸೀಸನ್-5’ರ 2ನೇ ದಿನವಾದ ಶನಿವಾರ, ಖ್ಯಾತ ವಿನ್ಯಾಸಕರು ವಿನ್ಯಾಸಗೊಳಿಸಿದ ಪಾರಂಪರಿಕ ಉಡುಗೆಗಳ ಪ್ರದರ್ಶನ ಒಂದೆಡೆಯಾದರೆ, ಮತ್ತೊಂದೆಡೆ ಬಾಲಿವುಡ್‍ನ ಹೆಸರಾಂತ ನಟ ಸ್ವರ ಭಾಸ್ಕರ್ ಅವರು ಅರ್ಪಿತಾ ರಂದೀಪ್ ಅವರು ವಿನ್ಯಾಸಗೊಳಿಸಿದ ಉಡುಗೆಗಳೊಂದಿಗೆ ರ್ಯಾಂಪ್‍ವಾಕ್ ಮಾಡಿ ಫ್ಯಾಷನ್ ಪ್ರಿಯರ ಮನಸೂರೆಗೊಳಿಸಿದರು.

ಮೈಸೂರನ್ನು ಜಾಗತಿಕ ಫ್ಯಾಷನ್ ನಕ್ಷೆಯಲ್ಲಿ ಗುರುತಿಸುವಂತೆ ಮಾಡಿರುವ ಮೈಸೂರಿನ ಖ್ಯಾತ ಡಿಸೈನರ್ ಜಯಂತಿ ಬಲ್ಲಾಳ್ ಅವರು ಆಯೋಜಿಸಿರುವ ಫ್ಯಾಷನ್ ವೀಕ್ ಸೀಸನ್-5ರಲ್ಲಿ ವಿವಿಧ ಖ್ಯಾತ ವಿನ್ಯಾಸಕರು ವಿನ್ಯಾಸಗೊಳಿಸಿದ ಪಾರಂ ಪರಿಕ ಉಡುಪು ತೊಟ್ಟು ರೂಪದರ್ಶಿ ಯರು ರ್ಯಾಂಪ್ ವಾಕ್ ಮಾಡಿ ಉಡುಪು ಗಳಿಗೆ ಮತ್ತಷ್ಟು ಮೆರಗು ನೀಡಿದರು.

ಮೊದಲ ಸುತ್ತಿನಲ್ಲಿ ಹ್ಯಾಮ್‍ಸ್ಟೆಕ್ ಇನ್ಸ್ ಟಿಟ್ಯೂಟ್ ವಿನ್ಯಾಸಕರು ವಿನ್ಯಾಸಗೊಳಿ ಸಿದ `ದಿ ಮಾಧುರಿಯನ್ ಟಚ್’ ವಸ್ತ್ರ ಗಳು ಅನಾವರಣಗೊಂಡವು. ನೀಲಿ, ಹಳದಿ, ಕೆಂಪು, ಬಣ್ಣ ಮಿಶ್ರಿತ ವಸ್ತ್ರಗಳ ಜೊತೆಗೆ ಕಪ್ಪು ಮತ್ತು ಐವರಿ ಬಣ್ಣದ ಪಾರಂಪರಿಕ ಉಡುಗೆಗಳನ್ನು ತೊಟ್ಟು ರೂಪದರ್ಶಿಯರು ರ್ಯಾಂಪ್‍ವಾಕ್ ಮಾಡಿ ಉಡುಪು ಗಳಿಗೆ ಮತ್ತಷ್ಟು ಮೆರಗು ತಂದರು.

2ನೇ ಸುತ್ತಿನಲ್ಲಿ ರಾಜಸ್ತಾನದ ಜೈಪುರ್ ಮೂಲದ ಕೀರ್ತಿ ರಾಥೋಡ್ ಅವರು ವಿನ್ಯಾಸಗೊಳಿಸಿದ ವಿವಿಧ ಬಣ್ಣದ ಪುರುಷರ ಕುರ್ತಾಗಳೊಂದಿಗೆ ರೂಪದರ್ಶಕರು ರ್ಯಾಂಪ್‍ವಾಕ್ ಮಾಡಿ ಎಲ್ಲರ ಗಮನ ಸೆಳೆದರೆ, ಹೆಸರಾಂತ ಡಿಸೈನರ್ ಜಯೇಶ್ ಮೈನಿ ಅವರು ವಿನ್ಯಾಸಗೊಳಿಸಿದ ವಿವಿಧ ವಿನ್ಯಾಸದ ಉಡುಪುಗಳು ಫ್ಯಾಷನ್ ಪ್ರಿಯರ ಮೆಚ್ಚುಗೆ ಪಡೆದವು. ಈ ವೇಳೆ ನೆರೆದಿದ್ದ ಫ್ಯಾಷನ್ ಪ್ರಿಯರು ಮೊಬೈಲ್‍ನಲ್ಲಿ ಫೋಟೊ ಕ್ಲಿಕ್ಕಿಸಿ, ವಿಡಿಯೋ ಚಿತ್ರೀಕರಿಸಿದರು.

3ನೇ ಸುತ್ತಿನಲ್ಲಿ ಕಾರ್ಯಕ್ರಮದ ಕೇಂದ್ರ ಬಿಂದುವಾಗಿದ್ದ ಮೈಸೂರಿನ ಉದಯೋ ನ್ಮುಖ ವಸ್ತ್ರ ವಿನ್ಯಾಸಕಿ ಅರ್ಪಿತಾ ರಂದೀಪ್ ಅವರು ವಿನ್ಯಾಸಗೊಳಿಸಿದ್ದ ಉಡುಪುಗಳನ್ನು ತೊಟ್ಟು ರೂಪದರ್ಶಕ ಬಾಲಿವುಡ್‍ನ ಹೆಸರಾಂತ ನಟ ಸ್ವರ ಭಾಸ್ಕರ್ ಮತ್ತಿತ ರರು ರ್ಯಾಂಪ್‍ವಾಕ್ ಮೂಲಕ ಉಡುಪು ಗಳನ್ನು ಪ್ರದರ್ಶಿಸಿದರಲ್ಲದೆ, ಫ್ಯಾಷನ್ ಶೋಗೆ ಮತ್ತಷ್ಟು ಮೆರಗು ನೀಡಿದರು.

ಫ್ಯಾಷನ್ ವೀಕ್ ಸೀಸನ್-5’ರ 2ನೇ ದಿನವಾದ ಶನಿವಾರ, ಪಾರಂಪರಿಕ ಉಡುಪುಗಳು ಅನಾವರಣಗೊಂಡಿದ್ದು ಮಾತ್ರವ , ಸಂಪೂರ್ಣ ಗ್ಲಾಮರ್ ಮಯವಾಗಿತ್ತು.

Translate »