ಗಾಂಧಿ 27 ಕಲಾಕೃತಿಗಳು ನ.6ಕ್ಕೆ ಲೋಕಾರ್ಪಣೆ
ಮೈಸೂರು

ಗಾಂಧಿ 27 ಕಲಾಕೃತಿಗಳು ನ.6ಕ್ಕೆ ಲೋಕಾರ್ಪಣೆ

November 4, 2018

ಮೈಸೂರು:  ಮಹಾತ್ಮ ಗಾಂಧೀಜಿ ವಿಚಾರ ಧಾರೆಗಳನ್ನು ವಿದ್ಯಾರ್ಥಿಗಳು ಹಾಗೂ ಯುವ ಸಮುದಾಯಕ್ಕೆ ತುಂಬುವ ನಿಟ್ಟಿನಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಗಾಂಧಿ ಭವನ ಆವರಣದಲ್ಲಿ ನಿರ್ಮಿಸಿರುವ ಮಹಾತ್ಮ ಗಾಂಧೀಜಿ ಅವರ 27 ಕಲಾಕೃತಿಗಳನ್ನು ನವೆಂಬರ್ 6ರಂದು ಬೆಳಿಗ್ಗೆ 11ಕ್ಕೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಲೋಕಾರ್ಪಣೆ ಮಾಡಲಿದ್ದಾರೆ ಎಂದು ಕುಲಸಚಿವ ಪ್ರೊ. ಆರ್.ರಾಜಣ್ಣ ತಿಳಿಸಿದ್ದಾರೆ.

ಗಾಂಧಿ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾತ್ಮ ಗಾಂಧೀಜಿ ಅವರ ವಿವಿಧ ಭಂಗಿಗಳಲ್ಲಿರುವ 27 ಕಲಾಕೃತಿಗಳನ್ನು ಸಿಮೆಂಟ್ ನಿಂದ ನಿರ್ಮಿಸಲಾಗಿದೆ. ಅ.22ರಂದು ಆರಂಭವಾದ ಶಿಲ್ಪಗಳ ತಯಾರಿಕೆ ಶಿಬಿರ ದಲ್ಲಿ ರಾಜ್ಯದ ವಿವಿಧೆಡೆಯ 42 ಶಿಲ್ಪಿಗಳು ಪಾಲ್ಗೊಂಡು ಕಲಾಕೃತಿಗಳನ್ನು ನಿರ್ಮಿಸುತ್ತಿ ದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಶಿಲ್ಪಕಲಾ ಅಕಾಡೆಮಿ, ರಂಗಾ ಯಣ, ಗಾಂಧಿ ಅಧ್ಯಯನ ಕೇಂದ್ರದ ಸಹಯೋಗದಲ್ಲಿ ಈ ಶಿಬಿರ ನಡೆದಿತ್ತು.

ಇದೀಗ ಎಲ್ಲಾ ಕಲಾಕೃತಿಗಳು ಅಂತಿಮ ಹಂತಕ್ಕೆ ತಲುಪಿದ್ದು, ನ.6ರಂದು ಲೋಕಾರ್ಪಣೆಗೊಳ್ಳಲಿವೆ ಎಂದರು.

ಹೆಸರಾಂತ ಶಿಲ್ಪಿಗಳಿಂದ ಕೆತ್ತನೆ: ಕಲಾ ಕೃತಿಗಳ ನಿರ್ಮಾಣದ ಶಿಬಿರವು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶಿಲ್ಪಿ ಕೆ.ನಾರಾಯಣ ರಾವ್ ನಿರ್ದೇಶನದಲ್ಲಿ ನಡೆಯುತ್ತಿದೆ. ಹಿರಿಯ ಶಿಲ್ಪಿಗಳಾದ ಮಹೇಶ್ ನಾಯ್ಕ, ಆರ್. ಶ್ರೀನಾಥ್, ಪರಶುರಾಮಪ್ಪ, ಆರ್.ದಿನೇಶ್, ಗಣೇಶ ಎಂ.ತೋರಗಲ್, ಹನುಮಂತ ಬಿ.ಗಡ್ಡಿ, ಕುಮಾರಬಾಬು ಫಸ್ತೆ, ಎನ್. ಎಸ್.ರಮೇಶ್, ಬಿ.ಎಂ.ರಾಜೇಂದ್ರ, ಡಿ.ಭಾಸ್ಕರ್, ಎಂ.ಮಾರುತಿ, ನಿಂಗಜ ಮಡಿ ವಾಳಪ್ಪ ವನ್ನೂರ, ಬಿ.ಜಿ.ಗೌರಿಶಂಕರ, ಮರಿಯಪ್ಪ ಡಿ.ಹೊನ್ನಮ್ಮನವರ, ರಮೇಶ ಎ.ಕಾಂಬ್ಳೆ, ನಾಗನಗೌಡ ಬಿ.ಪಾಟೀಲ್, ಕಿರಣ್ ವಿ.ದೇವಋಷಿ, ಸತೀಶ್, ಮಹ ಮ್ಮದ್ ರಫೀಕ್ ವೈ.ಕಡಿವಾಲ್ ಭಾಗವಹಿಸಿ ಶಿಲ್ಪ ನಿರ್ಮಿಸುತ್ತಿದ್ದಾರೆ. ಇವರಿಗೆ ಸಹಾಯಕ ರಾಗಿ ಮಲ್ಲಪ್ಪ ಬಸಪ್ಪ ಹಡಪದ, ಗದ್ಧಿ ಲಿಂಗಪ್ಪ, ಎಚ್.ಎಸ್.ಅಜಯ್, ಎಚ್. ನಯನಕುಮಾರ್, ಆರ್.ಗಂಗಾಧರ್, ಮನೋಜ್ ಕಲ್ಕರ್, ಎಸ್.ನವೀನ ಕುಮಾರ್, ಎಸ್.ವಿಠಲ್, ಜಿ.ಎನ್.ಮಂಜು ನಾಥ, ಶಿವಾನಂದ ಎಸ್.ಗಡ್ಡಿ, ಮುಕುಂದ ಎಂ.ಗೌಡ, ಕೆ.ಎಸ್.ಸ್ವಾತೀಶ್, ದೇವೇಂ ದ್ರಪ್ಪ ಬಿ.ಹಂದ್ರಾಳ, ಎನ್.ಬಸವರಾಜು ಸಾಥ್ ನೀಡಿದ್ದಾರೆ. ಅಲ್ಲದೆ ಕಾವಾದ ಹತ್ತು ವಿದ್ಯಾರ್ಥಿಗಳು ಶಿಬಿರದಲ್ಲಿ ಕಲಾಕೃತಿಗಳ ನಿರ್ಮಾಣಕ್ಕೆ ಕೈಜೋಡಿಸಿದ್ದಾರೆ ಎಂದರು.

ಪ್ರಮುಖ ವಿಚಾರ ಬಿಂಬಿಸುವ ಶಿಲ್ಪಗಳು: ಗಾಂಧಿ ಭವನ ಆವರಣದಲ್ಲಿ ಪ್ರಮುಖ ವಿಚಾರಗಳನ್ನು ಬಿಂಬಿಸುವ ಶಿಲ್ಪಗಳ ಕೆತ್ತನೆ ಯಾಗಿದ್ದು, ಗಾಂಧೀಜಿ ದೇಶಾದ್ಯಂತ 248 ಕಿ.ಮೀ ನಡೆಸಿದ್ದ ದಂಡೀಯಾತ್ರೆ ನೆನಪಿ ಸುವ ಚಿತ್ರ, ದೇಸಿಯತನ ಬಿಂಬಿಸಲು ಖಾದಿ ಚರಕ ತಿರುಗಿಸಿದ ನೋಟ, ಮಕ್ಕಳ ಜತೆಗಿನ ಒಡನಾಟದ ಕ್ಷಣ, ರಾಷ್ಟ್ರಕವಿ ರವೀಂದ್ರನಾಥ್ ಟಾಗೂರ್ ಅವರ ಶಿಲ್ಪ ಸೇರಿದಂತೆ 27 ಶಿಲ್ಪಕಲೆಗಳು ನಿರ್ಮಾಣ ವಾಗಿವೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಶಿಲ್ಪ ಕಲಾ ಅಕಾಡೆಮಿಯಿಂದ 20 ಲಕ್ಷ ಅನುದಾನ ನೀಡಲಾಗಿದೆ. ಮೈಸೂರು ವಿವಿಯಿಂದ ವಾಸ್ತವ್ಯ ಸೇರಿದಂತೆ ಇನ್ನಿ ತರ ಖರ್ಚಿಗೆ 2 ಲಕ್ಷ ರೂ. ಅನುದಾನ ನೀಡಲಾಗಿದೆ ಎಂದರು.

ಲೋಕಾರ್ಪಣೆ: ನ.6ರಂದು ಬೆಳಿಗ್ಗೆ 11ಕ್ಕೆ ಕಲಾಕೃತಿಗಳ ಲೋಕಾರ್ಪಣೆ ನಡೆಯ ಲಿದ್ದು, ಮುಖ್ಯ ಅತಿಥಿಗಳಾಗಿ ಶಾಸಕ ಎಲ್. ನಾಗೇಂದ್ರ ಶಿಲ್ಪ ಕಲಾವಿದರಿಗೆ ಗೌರವ ಸನ್ಮಾನ ಮಾಡಿದರೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಎನ್.ಆರ್. ವಿಶುಕುಮಾರ್ ಸಮಾರೋಪ ನುಡಿಗಳ ನ್ನಾಡಲಿದ್ದಾರೆ. ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಅಧ್ಯಕ್ಷ ಶಿಲ್ಪಿ ರು.ಕಾಳಾಚಾರ್ ಆಶಯ ನುಡಿಗಳನ್ನಾಡಲಿದ್ದು, ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ವೂಡೇ ಪಿ.ಕೃಷ್ಣ, ವಿಶ್ರಾಂತ ಕುಲಪತಿ ಪ್ರೊ. ಕೆ.ಎಸ್.ರಂಗಪ್ಪ ಆಗಮಿಸಲಿದ್ದಾರೆ. ಅಧ್ಯ ಕ್ಷತೆಯನ್ನು ಕುಲಪತಿ ಪ್ರೊ. ಆಯಿಷಾ ಎಂ.ಶರೀಫ್ ವಹಿಸಲಿದ್ದಾರೆ ಎಂದು ಅವರು ವಿವರಿಸಿದರು.

ಸುದ್ದಿಗೋಷ್ಠಿಯಲ್ಲಿ ಗಾಂಧಿ ಭವನದ ನಿರ್ದೇಶಕ ಪ್ರೊ.ಎಂ.ಎಸ್.ಶೇಖರ್, ಕರ್ನಾ ಟಕ ಗಾಂಧಿ ಸ್ಮಾರಕ ನಿಧಿಯ ಉಪಾಧ್ಯಕ್ಷ ಪ್ರೊ.ಜಿ.ಬಿ.ಶಿವರಾಜು, ಗಾಂಧಿವಾದಿ ಗಳಾದ ಕೆ.ಟಿ.ವೀರಪ್ಪ, ಶಿಬಿರದ ನಿರ್ದೇ ಶಕ ಕೆ.ನಾರಾಯಣರಾವ್ ಶಿಲ್ಪಿ ಇದ್ದರು.

Translate »