ನಾಳೆಯಿಂದ ಮೈಸೂರು ಫ್ಯಾಷನ್ ವೀಕ್ ಸೀಸನ್-5
ಮೈಸೂರು

ನಾಳೆಯಿಂದ ಮೈಸೂರು ಫ್ಯಾಷನ್ ವೀಕ್ ಸೀಸನ್-5

November 1, 2018

ಮೈಸೂರು: ಮೈಸೂ ರಿನ ನಜರ್‍ಬಾದ್‍ನ ಮಹಾ ರಾಣ ಪ್ರತಾಪ್ ರಸ್ತೆಯಲ್ಲಿ ರುವ `ದಿ ವಿಂಡ್ ಫ್ಲವರ್ ರೆಸಾಟ್ರ್ಸ್’ ಮತ್ತು ಸ್ಪಾದಲ್ಲಿ ದಕ್ಷಿಣ ಭಾರತದಲ್ಲಿಯೇ ಖ್ಯಾತಿ ಗಳಿಸಿರುವ ಅತೀ ಆಕ ರ್ಷಕವಾದ `ಮೈಸೂರು ಫ್ಯಾಷನ್ ವೀಕ್ ಸೀಸನ್-5’ ಅನ್ನು ನ.2ರಿಂದ ಮೂರು ದಿನಗಳ ಕಾಲ ಏರ್ಪಡಿಸಲಾಗಿದೆ.

ಮೈಸೂರಿನ ಖ್ಯಾತ ಡಿಸೈನರ್ ಜಯಂತಿ ಬಲ್ಲಾಳ್ ಅವರು ಈ ಕಾರ್ಯಕ್ರಮವನ್ನು ಆಯೋ ಜಿಸಿದ್ದು, ಫ್ಯಾಷನ್ ಉದ್ಯಮದ ಅಪಾರ ಬೆಂಬಲ ಗಳಿಸಿದೆ. ಅಲ್ಲದೆ, ಮೈಸೂರನ್ನು ಜಾಗತಿಕ ಫ್ಯಾಷನ್ ನಕ್ಷೆಯಲ್ಲಿ ಗುರುತಿಸುವಂತೆ ಮಾಡುವಲ್ಲಿ ಅಪಾರ ಕೊಡುಗೆ ನೀಡಿದೆ. ಈ ವಾರ್ಷಿಕ ಈವೆಂಟ್‍ಗೆ ಪ್ರತೀ ವರ್ಷವೂ ದೇಶದ ಶ್ರೇಷ್ಠ ವಿನ್ಯಾಸಕಾರರು ಮತ್ತು ರೂಪದರ್ಶಿಗಳು ಸಾಕ್ಷಿಯಾಗುತ್ತಿದ್ದಾರೆ.

ಮೂರು ದಿನಗಳ ಕಾಲ ನಡೆಯುವ ಕಾರ್ಯಕ್ರಮವು ಪ್ರತಿದಿನ ಸಂಜೆ 5.30 ಗಂಟೆಗೆ ಆರಂಭಗೊಳ್ಳಲಿದೆ. ಈ ಬಾರಿ ಶ್ರೇಷ್ಠ ವಿನ್ಯಾಸಕಾರರಾದ ಸಪ್ನಿಲ್ ಶಿಂದೆ, ಕೆನ್ ಫೆನ್ರ್ಸ್, ಶರವಣ್ ಕುಮಾರ್, ಸೌರಬ್ ಕಾಂತ್, ಶ್ರೀವಾಸ್ತವ, ಜಯಂತಿ ಬಲ್ಲಾಳ್, ಅರ್ಪಿತಾ ರಂದೀಪ್, ಜಯ ಮಿಶ್ರಾ, ಜಯೇಶ್ ಮೈನಿ, ಪ್ರಿನ್ಸ್ ಪಿನ್‍ಹ್ಯಾಸ್, ಅಷ್ಫಾಕ್ ಅಹಮದ್, ರಿಂಕು ಸೋಬ್ತಿ, ಕೀರ್ತಿ ರಾಥೋಡ್, ಡಾಜಲ್ಸ್, ಹ್ಯಾಮ್‍ಸ್ಟೆಕ್ ಇನ್ಸ್‍ಟಿಟ್ಯೂಟ್ ಮತ್ತು ಡ್ರೀಮ್ ಜೋನ್ ಪ್ರಮುಖ ಆಕರ್ಷಣೆಯಾಗಿದ್ದಾರೆ.

ರಂಗಿತರಂಗ ಖ್ಯಾತಿಯ ರಾಧಿಕಾ ಚೇತನ್ ಮತ್ತು ಬಿಗ್‍ಬಾಸ್‍ನ ನಿವೇದಿತಾ ಗೌಡ ಅವರು ಜಯಂತಿ ಬಲ್ಲಾಳ್ ಶೋ-ಸ್ಟಾಪರ್ಸ್‍ಗಳಾಗಿದ್ದಾರೆ. ಅರ್ಪಿತ ರಂದೀಪ್ ಅವರಿಗಾಗಿ ಬಾಲಿವುಡ್‍ನ ಸ್ವರ ಭಾಸ್ಕರ್ ರ್ಯಾಂಪ್ ವಾಕ್ ಮಾಡಲಿದ್ದಾರೆ. ಸ್ವಪ್ನಿಲ್ ಶಿಂದೆಯವರಿ ಗಾಗಿ ನುಶ್ರತ್ ಭರೂಚ, ರಿಂಕು ಶೋಬ್ತಿ ಅವರಿಗಾಗಿ ಚಿತ್ರನಟಿ ಪಾರುಲ್ ಯಾದವ್, ಜಯ ಮಿಶ್ರಾ ಅವರಿಗೆ ಇಹಾನಾ ದಿಲ್ಲೋನ್ ಮತ್ತು ರಿತುಪರ್ಣ ಸೆನ್‍ಗುಪ್ತಾ, ಕೆನ್ ಫನ್ರ್ಸ್‍ಗಾಗಿ ಕಿಶೆನ್ ಬಿಳಗಲಿ (ಸೆಲೆಬ್ರಿಟಿ ಕೋರಿ ಯೋಗ್ರಾಫರ್ ಮತ್ತು ಡ್ಯಾನ್ಸ್ ದೀವಾನೆ ವಿಜೇತರು) ಮತ್ತು ಶರವಣ್ ಕುಮಾರ್ ಅವರ ಶೋ-ಸ್ಟಾಪರ್ ಆಗಿ ಖ್ಯಾತ ನಟಿ ರಾಗಿಣಿ ದ್ವಿವೇದಿ ರ್ಯಾಂಪ್ ವಾಕ್ ಮಾಡಲಿದ್ದಾರೆ.

Translate »