ತೆರಕಣಾಂಬಿ ತಾಪಂ ಉಪಚುನಾವಣೆ: ಬಿಜೆಪಿ ಜಯಭೇರಿ
ಚಾಮರಾಜನಗರ

ತೆರಕಣಾಂಬಿ ತಾಪಂ ಉಪಚುನಾವಣೆ: ಬಿಜೆಪಿ ಜಯಭೇರಿ

November 1, 2018

ಗುಂಡ್ಲುಪೇಟೆ: ತಾಲೂಕಿನ ತೆರಕಣಾಂಬಿ ತಾಪಂ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಆರ್.ಮಹೇಶ್ 306 ಮತಗಳ ಅಂತರ ದಲ್ಲಿ ಜಯಭೇರಿ ಭಾರಿಸಿದ್ದಾರೆ.ಕಳೆದ ವಿಧಾನಸಭಾ ಚುನಾವಣೆಯಲ್ಲಿ ಶಾಸಕ ಸಿ.ಎಸ್.ನಿರಂಜನಕುಮಾರ್ ಅವ ರನ್ನು ಬೆಂಬಲಿಸಿ ಆರ್.ಮಹೇಶ್ ಕಾಂಗ್ರೆಸ್ ನಿಂದ ಬಿಜೆಪಿ ಸೇರ್ಪಡೆಗೊಂಡ ಹಿನ್ನೆಲೆಯಲ್ಲಿ ತಮ್ಮ ತಾಪಂ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು. ಇವರಿಂದ ತೆರ ವಾದ ಸ್ಥಾನಕ್ಕೆ ಈ ಹಿನ್ನೆಲೆಯಲ್ಲಿ ಅ.28 ರಂದು ಉಪಚುನಾವಣೆ ನಡೆದಿತ್ತು.

ಇಂದು ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ನಡೆದ ಮತ ಎಣಿಕೆ ಪ್ರಕ್ರಿಯೆಯಲ್ಲಿ ಬಿಜೆಪಿ ಪ್ರತಿಸ್ಪರ್ಧಿ ಕಾಂಗ್ರೆಸ್‍ನ ನಾರಾಯಣನಾಯ್ಕ ಅವ ರನ್ನು 306 ಮತಗಳ ಅಂತರದಲ್ಲಿ ಪರಾಭವ ಗೊಳಿಸಿದ್ದಾರೆ. ಒಟ್ಟು 7,981 ಮತದಾರರ ಪೈಕಿ 5,855 ಮತದಾರರು ಹಕ್ಕು ಚಲಾ ಯಿಸಿದ್ದು, ಕಾಂಗ್ರೆಸ್ ನಾರಾಯಣನಾಯ್ಕ 2,714 ಮತಗಳಿಸಿದ್ದು, ಬಿಜೆಪಿಯ ಆರ್.ಮಹೇಶ್ 3,020 ಮತ ಪಡೆದು ಜಯಶಾಲಿಯಾಗಿದ್ದಾರೆ. 121 ಮತಗಳು ನೋಟಾಗೆ ಚಲಾವಣೆಯಾಗಿವೆ.

ಸಂಭ್ರಮಾಚರಣೆ: ತೆರಕಣಾಂಬಿ ತಾಪಂ ಉಪಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಪಟ್ಟಣದ ಬಿಜೆಪಿ ಕಚೇರಿ ಹಾಗೂ ತೆರಕಣಾಂಬಿ ಗ್ರಾಮದಲ್ಲಿ ಪಟಾಕಿ ಸಿಡಿಸಿ ಸಿಹಿ ವಿತರಿಸಿ ಕಾರ್ಯ ಕರ್ತರು ಸಂಭ್ರಮ ಆಚರಿಸಿದರು.
ಈ ಸಂದರ್ಭದಲ್ಲಿ ಮಂಡಲಾಧ್ಯಕ್ಷ ಎನ್. ಮಲ್ಲೇಶ್, ಪುರಸಭೆ ಅಧ್ಯಕ್ಷ ಪಿ.ಗಿರೀಶ್, ಹಿರಿಯ ಮುಖಂಡ ಸಿ.ಹುಚ್ಚೇಗೌಡ, ಮಹಾ ದೇವಪ್ರಸಾದ್, ಮಂಜುನಾಥ್, ಪುರಸಭೆ ಸದಸ್ಯ ಗೋವಿಂದರಾಜನ್, ರಾಜೇಶ್, ಸಿದ್ದರಾಮಪ್ಪ ಇತರರಿದ್ದರು.

Translate »