ತೆರಕಣಾಂಬಿಯಲ್ಲಿ ಮನೆಗೆ ಬೆಂಕಿ
ಚಾಮರಾಜನಗರ

ತೆರಕಣಾಂಬಿಯಲ್ಲಿ ಮನೆಗೆ ಬೆಂಕಿ

July 12, 2018

ಗುಂಡ್ಲುಪೇಟೆ: ತಾಲೂಕಿನ ತೆರಕಣಾಂಬಿ ಗ್ರಾಮದಲ್ಲಿ ವಿದ್ಯುತ್ ಶಾರ್ಟ್ ಸಕ್ರ್ಯೂಟಿನಿಂದ ಮನೆಯೊಂದರಲ್ಲಿದ್ದ ಬಹುತೇಕ ಪದಾರ್ಥಗಳು ಸಂಪೂರ್ಣ ಸುಟ್ಟು ಹೋಗಿರುವ ಘಟನೆ ಬುಧವಾರ ಮಧ್ಯಾಹ್ನ ನಡೆದಿದೆ.

ಗ್ರಾಮದ ನಾಗೇಶ್ ಎಂಬುವರ ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ವಿದ್ಯುತ್ ಶಾರ್ಟ್ ಸಕ್ರ್ಯೂಟಿನಿಂದ ಬೆಂಕಿಹೊತ್ತಿಕೊಂಡಿದೆ. ಅಕ್ಕಪಕ್ಕದ ಮನೆಯವರು ನೀರು ಎರಚಿ ನಂದಿಸಲೆತ್ನಿಸಿದರೂ ಸಾಧ್ಯವಾಗಲಿಲ್ಲ.

ಸ್ಥಳಕ್ಕೆ ಅಗ್ನಿಶಾಮಕ ದಳದವರು ಬರುವ ವೇಳೆಗೆ ಮನೆಯಲ್ಲಿದ್ದ ಟಿ.ವಿ., ಫ್ರಿಜ್ಡ್, ವಾಷಿಂಗ್ ಮಿಷನ್, ಎರಡು ಅಲ್ಮೇರಾಗಳು, ಬಟ್ಟೆ-ಬರೆಗಳು ಹಾಗೂ ಆಹಾರ ಪದಾರ್ಥಗಳು ಸಂಪೂರ್ಣ ಭಸ್ಮವಾಗಿದೆ. ಇದರಿಂದಾಗಿ ಲಕ್ಷಾಂತರ ರೂಪಾಯಿಗಳ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.

Translate »