ಕೊಳ್ಳೇಗಾಲ: ತಾಲೂಕಿನ ಕುಂತೂರು ಬಳಿ ಇರುವ ಪ್ರಭುಲಿಂಗೇಶ್ವರ ಬೆಟ್ಟದಲ್ಲಿ ಯುವ ಪ್ರೇಮಿಗಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಇಂದು ಸಂಜೆ ನಡೆದಿದೆ.
ಮೃತ ಪ್ರೇಮಿಗಳನ್ನು ತಾಲೂಕಿನ ಮುಳ್ಳೂರು ಗ್ರಾಮದ ರೋಹಿತ್ ಹಾಗೂ ಪ್ರಕೃತಿ ಎಂದು ಗುರುತಿಸಲಾಗಿದೆ. ರೋಹಿತ್ ಮತ್ತು ಪ್ರಕೃತಿ ಕಳೆದ ಕೆಲವು ತಿಂಗಳಿಂದ ಪ್ರೀತಿಸುತ್ತಿದ್ದರೆನ್ನಲಾಗಿದೆ.
ಇಂದು ಬೆಳಿಗ್ಗೆ ಮನೆಯಲ್ಲಿ ಕಾಲೇಜಿಗೆ ತೆರಳುವುದಾಗಿ ಹೇಳಿ ಬಂದಿದ್ದು, ಕಾಲೇಜಿಗೂ ಹೋಗಿರಲಿಲ್ಲ ಎನ್ನಲಾಗಿದೆ. ಇಂದು ಸಂಜೆ ಬೆಟ್ಟದ ಬಂಡೆ ಯೊಂದರ ಬಳಿ ರೋಹಿತ್ ಹಾಗೂ ಪ್ರಕೃತಿ ವಿಷ ಸೇವಿಸಿ ಸಾವಿಗೆ ಶರಣಾಗಿದ್ದಾರೆ.
ಸ್ಥಳಕ್ಕೆ ಕೊಳ್ಳೇಗಾಲ ಗ್ರಾಮಾಂತರ ಠಾಣೆ ಪಿಎಸ್‍ಐ ವನರಾಜು ಹಾಗೂ ಸಿಬ್ಬಂದಿ ತೆರಳಿದ್ದು, ಪರಿಶೀಲನೆ ನಡೆಸಿದರು.