ಮಕ್ಕಳ ಹಕ್ಕು ರಕ್ಷಣೆ ಪೋಷಕರ ಆದ್ಯ ಕರ್ತವ್ಯ
ಹಾಸನ

ಮಕ್ಕಳ ಹಕ್ಕು ರಕ್ಷಣೆ ಪೋಷಕರ ಆದ್ಯ ಕರ್ತವ್ಯ

November 1, 2018

ಅರಸೀಕೆರೆ: ಮಕ್ಕಳ ಹಕ್ಕುಗಳನ್ನು ಮತ್ತು ರಕ್ಷಣೆ ನೀಡುವುದು ಪೋಷಕರ ಆದ್ಯ ಕರ್ತವ್ಯವಾಗಿದೆ. ಸಾಕಲು ಅಗುವು ದಿಲ್ಲವೆಂದು ನೆಪವೊಡ್ಡಿ ಮಕ್ಕಳನ್ನು ಮಾರಾಟ ಮಾಡುವುದು, ಜೀವ ಹಾನಿ ಮಾಡಿ ದಲ್ಲಿ ಕಾನೂನಿನ ಪ್ರಕಾರ ಉಗ್ರ ಶಿಕ್ಷೆಗೆ ಒಳ ಗಾಗುತ್ತಾರೆ ಎಂದು ಜಿಲ್ಲಾ ಮಕ್ಕಳ ಸಹಾಯವಾಣಿ ಕೇಂದ್ರದ ಅಧಿಕಾರಿ ಕಾಂತರಾಜ್ ಹೇಳಿದರು.

ನಗರದ ವನಿತಾ ಜ್ಯೋತಿ ಮಹಿಳಾ ಸಂಘ, ಪ್ರಚೋದನಾ ಸಂಸ್ಥೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಸಂಸ್ಥೆ ಸಂಯುಕ್ತಾಶ್ರಯ ದಲ್ಲಿ ಚರ್ಚ್ ಕಾಲೋನಿಯಲ್ಲಿ ಏರ್ಪಡಿಸಿದ್ದ ‘ತೆರೆದ ಮನೆ’ ಕಾರ್ಯಕ್ರಮದಲ್ಲಿ ಮಕ್ಕಳ ರಕ್ಷಣೆ ಹಾಗೂ ಕಾನೂನು ಅರಿವು ಕಾರ್ಯ ಕ್ರಮದಲ್ಲಿ ಮಾತನಾಡಿದ ಅವರು, ಮಕ್ಕಳ ಹಕ್ಕುಗಳಿಗೆ ಧಕ್ಕೆಯಾದಾಗ ಹಾಗೂ ಅವರ ರಕ್ಷಣೆಗೆ ತೊಂದರೆಯಾದಾಗ ನಮ್ಮ ಮಕ್ಕಳ ಸಹಾಯವಾಣಿ ಅತೀ ಜಾಗೃತ ರಾಗಿ ಕೆಲಸ ಮಾಡುತ್ತದೆ. ಮಕ್ಕಳು ಶಾಲೆಗೆ ಹೋಗುವಾಗ ಬರುವಾಗ ಅವರಿಗೆ ಆತ್ಮ ರಕ್ಷಣೆ ಬಗ್ಗೆ ಪೋಷಕರು ತಿಳುವಳಿಕೆ ಹೇಳಿ ಕೊಟ್ಟಿರಬೇಕು. ಲೈಂಗಿಕ ಕಿರುಕುಳಕ್ಕೇ ನಾದರೂ ಮಕ್ಕಳು ಒಳಗಾದಾಗ ಮಕ್ಕಳ ಚಿಕಿತ್ಸೆ ಮತ್ತು ರಕ್ಷಣೆಗೆಂದು ಇರುವ ಪ್ರತೀ ಸರಕಾರಿ ಆಸ್ಪತ್ರೆಯ ಒಂದನೆಯ ವಾರ್ಡ್ “ಗೆಳತಿ” ಹೆಸರಿನಲ್ಲಿದ್ದು ನೇರವಾಗಿ ಇಲ್ಲಿ ಬಂದು ದಾಖಲು ಮಾಡಬಹುದು. ಇಲ್ಲಿ ನಿಮಗೆ ಬೇಕಾದ ಎಲ್ಲಾ ರೀತಿಯ ರಕ್ಷಣೆ ಮತ್ತು ಚಿಕಿತ್ಸೆ ಲಭಿಸುತ್ತದೆ. ಪೊಲೀಸರು ಸೇರಿದಂತೆ ಸಂಬಂಧಿಸಿದ ಎಲ್ಲಾ ಅಧಿಕಾರಿ ಗಳು ಅಲ್ಲೆ ತಮ್ಮ ರಕ್ಷಣೆಗೆ ಬರುವರು ಎಂದ ಅವರು ಮಕ್ಕಳಿಲ್ಲದವರು ಅನಾಥ ಮಗುವನ್ನು ಅನಧಿಕೃತವಾಗಿ ಸಾಕುವುದು ಕಾನೂನಿನ ರೀತಿ ಅಪರಾಧ. ಹಾಗೇ ನಾದರು ಮಕ್ಕಳನ್ನು ಸಾಕಬೇಕೆನ್ನುವರು ಸರಕಾರು ಶುಲ್ಕ 46 ಸಾವಿರ ಪಾವತಿಸಿ ಕಾನೂನಿನ ಅಡಿ ನಮ್ಮಲ್ಲಿ ಮಕ್ಕಳನ್ನು ದತ್ತು ಪಡೆಯಬಹುದು ಎಂದರು.

ಇತ್ತೀಚೆಗೆ ಸರಕಾರ ರೂಪಿಸುವ ಕೆಲ ಯೋಜನೆಗಳು ಕೆಲವೊಮ್ಮೆ ಪೂರಕಕ್ಕಿಂತ ಮಾರಕವಾಗಿ ಪರಿಣಮಿಸುತ್ತವೆ ಆದರೆ ಅದನ್ನು ಸರಿಯಾಗಿ ಅರ್ಥಮಾಡಿಕೊಂಡು ನಾವು ಅದನ್ನು ಜಾರಿಗೆ ತಂದುಕೊಂಡು ಸದುಪಯೋಗ ಮಾಡಿಕೊಳ್ಳಬೇಕು. ಶಾಲೆ ಯಲ್ಲಿ ಮಕ್ಕಳಿಗೆ ಪೆಟ್ಟು ಕೊಡಬಾರದು ಎಂಬ ಕಾನೂನು ನಾವು ಯಾವ ಸಂದರ್ಭದಲ್ಲಿ ಎಷ್ಟರಮಟ್ಟಿಗೆ ಬಳಸುತ್ತೇವೆ ಎಂಬುದು ಮುಖ್ಯ ಎಂದರು.

ಕಾರ್ಯಕ್ರಮದಲ್ಲಿ ನಗರಸಭಾ ಸದಸ್ಯೆ ಅನ್ನಪೂರ್ಣ ಸತೀಶ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಮನೆಯಲ್ಲಿ ಗೃಹಣಿಯರು ಬಿಡುವಿನ ಸಮಯದಲ್ಲಿ ಒಟ್ಟಾಗಿ ಸೇರಿ ದಾಗ ಹಾಗೂ ಸಂಘಗಳನ್ನು ನಡೆಸು ವಾಗ ಅನಾವಶ್ಯಕ ಚರ್ಚೆಗಳನ್ನು ಮಾಡು ವುದನ್ನು ಬಿಟ್ಟು ಮಕ್ಕಳ ವಿದ್ಯಾಭ್ಯಾಸ, ಸರಕಾರದ ಯೋಜನೆಗಳು, ಅವರ ರಕ್ಷಣೆ ಈ ಬಗ್ಗೆ ಪರಸ್ಪರ ವಿಷಯ ವಿನಿಮಯ ಮಾಡಿಕೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿ ನೆರೆದಿದ್ದವರಿಂದ ತಮ್ಮ ಬಡಾವಣೆ, ಕಾಲೋನಿಗಳಲ್ಲಿ ನಡೆದಿ ರಬಹುದಾದ ಘಟನೆಗಳ ಬಗ್ಗೆ ಹಾಗೂ ಶಾಲಾ ಪರಿಸರದಲ್ಲಿ ಎದುರಿಸಬಹುದಾದ ಸಮಸ್ಯೆಗಳ ಕುರಿತು ಮಾಹಿತಿ ಪಡೆಯ ಲಾಯಿತು. ಸಭೆಯಲ್ಲಿ ವನಿತಾ ಜ್ಯೋತಿ ಮಹಿಳಾ ಸಂಘದ ಕಾರ್ಯಕರ್ತ ಲಕ್ಷ್ಮೀ, ಜಿಲ್ಲಾ ಮಕ್ಕಳ ಸಹಾಯವಾಣಿ ಕೇಂದ್ರದ ಸಂ ಯೋಜಕ ಪರಶುರಾಮ್, ಪ್ರಚೋದನಾ ಸಂಸ್ಥೆ ನಿರ್ದೇಶಕ ಸಿಸಿ. ಪೌಲಸ್ ಕಾರ್ಯ ಕರ್ತ ಸುನೀಲ್ ಉಪಸ್ಥಿತರಿದ್ದರು.

Translate »