ಕೌಟಿಲ್ಯ ವಿದ್ಯಾಲಯದಲ್ಲಿ ಸುಂದರ, ಸುಸಜ್ಜಿತ ಈಜುಕೊಳ ಉದ್ಘಾಟನೆ
ಮೈಸೂರು

ಕೌಟಿಲ್ಯ ವಿದ್ಯಾಲಯದಲ್ಲಿ ಸುಂದರ, ಸುಸಜ್ಜಿತ ಈಜುಕೊಳ ಉದ್ಘಾಟನೆ

September 25, 2018

ಮೈಸೂರು: ಮೈಸೂರಿನ ಕನಕ ದಾಸನಗರ(ದಟ್ಟಗಳ್ಳಿ)ದಲ್ಲಿರುವ ಕೌಟಿಲ್ಯ ವಿದ್ಯಾಲಯದ ಕ್ಯಾಂಪಸ್‍ನಲ್ಲಿ ನೂತನ ವಾಗಿ ನಿರ್ಮಿಸಿರುವ ಸುಸಜ್ಜಿತ ಈಜು ಕೊಳವನ್ನು ಕೆಎಎಸ್ ಅಧಿಕಾರಿ ಕೃಷ್ಣ ವೇಣಿ ವಿದ್ಯುಕ್ತವಾಗಿ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ಪಠ್ಯ ಬೋಧನೆಯ ಜೊತೆಗೆ ಮಕ್ಕಳನ್ನು ಪಠ್ಯೇ ತರ ಚಟುವಟಿಕೆಯಲ್ಲಿ ಸಕ್ರಿಯವಾಗಿ ಭಾಗ ವಹಿಸುವಂತೆ ಪ್ರೋತ್ಸಾಹಿಸಬೇಕು. ಕ್ರೀಡೆ ಸೇರಿದಂತೆ ಪಠ್ಯೇತರ ಚಟುವಟಿಕೆಗಳಿಂದ ಮಕ್ಕಳು ಬೌದ್ಧಿಕ ಹಾಗೂ ಮಾನಸಿಕವಾಗಿ ಸದೃಢರಾಗುತ್ತಾರೆ. ಜೊತೆಗೆ ಶೈಕ್ಷಣಿಕ ವಾಗಿಯೂ ಉತ್ತಮ ಸಾಧನೆ ಮಾಡು ತ್ತಾರೆ ಎಂದು ಅಭಿಪ್ರಾಯಿಸಿದರು.

ವಿದೇಶಗಳಲ್ಲಿ ಶಾಲಾ ಮಟ್ಟದಲ್ಲೇ ಮಕ್ಕ ಳಿಗೆ ಕ್ರೀಡೆಯ ಬಗ್ಗೆ ಆಸಕ್ತಿ ಮೂಡಿಸಿ, ಉತ್ತಮ ಪ್ರೋತ್ಸಾಹ ನೀಡಲಾಗುತ್ತದೆ. ಹಾಗೆಯೇ ನಮ್ಮಲ್ಲೂ ಶಾಲಾ ಹಂತದಲ್ಲಿ ಪ್ರೋತ್ಸಾಹ ದೊರೆತರೆ ಮಾತ್ರ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಲು ಸಾಧ್ಯ. ಈ ನಿಟ್ಟಿನಲ್ಲಿ ಶಿಕ್ಷಣ ಸಂಸ್ಥೆ ಗಳು ಗಮನಹರಿಸಬೇಕು. ಈಜು, ಸ್ಕೇಟಿಂಗ್, ಅಥ್ಲೆಟಿಕ್ ಇನ್ನಿತರ ಕ್ರೀಡೆಗಳಲ್ಲಿ ಮಕ್ಕಳು ಭಾಗವಹಿಸಲು ಸೂಕ್ತ ಅವಕಾಶ ಕಲ್ಪಿಸಿ ಕೊಡಬೇಕು. ಅಂತರಾಷ್ಟ್ರೀಯ ಕ್ರೀಡಾಕೂಟ ದಲ್ಲಿ ಪಾಲ್ಗೊಳ್ಳಬೇಕೆಂಬ ಉತ್ಸಾಹ, ಚೈತನ್ಯ ವನ್ನು ಚಿಕ್ಕವಯಸ್ಸಿನಿಂದಲೇ ಬಿತ್ತಿ ಬೆಳೆಸ ಬೇಕು. ಈ ನಿಟ್ಟಿನಲ್ಲಿ ಕೌಟಿಲ್ಯ ವಿದ್ಯಾ ಲಯ ಸುಸಜ್ಜಿತ ಈಜುಕೊಳವನ್ನು ನಿರ್ಮಿಸಿರು ವುದು ಶ್ಲಾಘನೀಯ. ವಿದ್ಯಾಥಿ ಗಳು ಇದರ ಸದುಪಯೋಗದೊಂದಿಗೆ ಅಂತರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳಾಗಿ ಹೊರಹೊಮ್ಮ ಬೇಕೆಂದು ಆಶಯ ವ್ಯಕ್ತಪಡಿಸಿದರು.

ಕೌಟಿಲ್ಯ ವಿದ್ಯಾಲಯ ಸಂಸ್ಥೆಯ ಅಧ್ಯಕ್ಷ ಆರ್.ರಘು, ಕಾರ್ಯದರ್ಶಿ ಹಾಗೂ ಹಿರಿಯ ಪ್ರಾಂಶುಪಾಲರಾದ ಡಾ.ಎಲ್. ಸವಿತಾ, ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಪೋಷಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Translate »