ರಸ್ತೆ, ಉದ್ಯಾನವನ ದತ್ತು ನೀಡಿ ನೈರ್ಮಲ್ಯ ಕಾಪಾಡುವ ಯೋಜನೆ
ಮೈಸೂರು

ರಸ್ತೆ, ಉದ್ಯಾನವನ ದತ್ತು ನೀಡಿ ನೈರ್ಮಲ್ಯ ಕಾಪಾಡುವ ಯೋಜನೆ

September 25, 2018

ಮೈಸೂರು: ರಸ್ತೆ ಬದಿ ಯಲ್ಲಿ ಎಲ್ಲೆಂದರಲ್ಲಿ ಕಸ ಬಿಸಾಡುವುದು ನಡೆ ಯುತ್ತಿದೆ. ಯಾರು ರಸ್ತೆಯಲ್ಲಿ ಕಸ ಹಾಕುತ್ತಿ ದ್ದಾರೋ ಅವರನ್ನೇ ಸ್ವಚ್ಛತಾ ಕಾರ್ಯಕ್ರಮದ ಮುಖ್ಯಸ್ಥರನ್ನಾಗಿ ಮಾಡಲು ತೀರ್ಮಾನಿಸಿ ದ್ದೇವೆ. ಆ ಮೂಲಕ ನಿಮ್ಮ ಬೀದಿ, ರಸ್ತೆ, ಬಡಾವಣೆಗಳನ್ನು ದತ್ತು ನೀಡಿ ನೈರ್ಮಲ್ಯ, ಸ್ವಚ್ಛತೆ ಕೈಗೊಳ್ಳುವ ಯೋಜನೆ ರೂಪಿಸುತ್ತಿ ದ್ದೇವೆ ಎಂದು ಮೈಸೂರು ಮಹಾನಗರ ಪಾಲಿಕೆ ಆಯುಕ್ತ ಕೆ.ಹೆಚ್.ಜಗದೀಶ್ ಇಂದಿಲ್ಲಿ ತಿಳಿಸಿದರು.

ಮೈಸೂರು ವಿಶ್ವ ವಿದ್ಯಾನಿಲಯದ ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ ಮೈಸೂರಿನ ಮಾನಸಗಂಗೋತ್ರಿ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಎನ್‍ಎಸ್‍ಎಸ್ ದಿನಾಚರಣೆ ಹಾಗೂ ಸುವರ್ಣ ಮಹೋ ತ್ಸವ ಸಂಭ್ರಮಾಚರಣೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ಸ್ವಚ್ಛತೆಯಲ್ಲಿ ನಂಬರ್ ಒನ್ ಸ್ಥಾನ ಗಳಿ ಸಿದ್ದ ಮೈಸೂರಿಗೆ ಮತ್ತೇ ನಂಬರ್ ಒನ್ ಸ್ಥಾನಕ್ಕೆ ತರಲು ಎಲ್ಲರೂ ಮಾನಸಿಕವಾಗಿ ಸಿದ್ಧರಾಗಬೇಕಿದೆ. ಏರುತ್ತಿರುವ ಜಾಗತಿಕ ತಾಪಮಾನ ನಿಯಂತ್ರಿಸಲು, ಪರಿಸರವನ್ನು ಉಳಿಸಬೇಕಾಗಿದೆ. ಅದು ನಮ್ಮ ಮುಖ್ಯ ಕರ್ತವ್ಯವೂ ಹೌದು. ಹಾಗಾಗಿ ಸ್ವಚ್ಛತೆ ಗಾಗಿ ಮೈಸೂರು ನಗರಪಾಲಿಕೆಯೊಂದಿಗೆ ಸಾರ್ವಜನಿಕರು ಕೈಜೋಡಿಸಬೇಕಿದೆ ಎಂದು ಮನವಿ ಮಾಡಿದರು.

ರಾಷ್ಟ್ರೀಯ ಸೇವಾ ಯೋಜನಾ ಕೋಶದ ರಾಜ್ಯ ಪದನಿಮಿತ್ತ ಜಂಟಿ ಕಾರ್ಯದರ್ಶಿ ಡಾ.ಗಣನಾಥಶೆಟ್ಟಿ ಎಕ್ಕಾರ್ ಮಾತನಾಡಿ, ಇಡೀ ರಾಜ್ಯದಲ್ಲಿ ಎನ್‍ಎಸ್‍ಎಸ್‍ಗೆ ಒಂದು ನೆಲೆಗಟ್ಟನ್ನು ಒದಗಿಸಿದ ಕೀರ್ತಿ ಮೈಸೂರು ವಿವಿಯದ್ದಾಗಿದೆ. ಇಲ್ಲಿನ ಎನ್‍ಎಸ್‍ಎಸ್ ತರಬೇತಿ ಕೇಂದ್ರದ ಮೂಲಕ ಸಾವಿರಾರು ಎನ್‍ಎಸ್‍ಎಸ್ ಅಧಿಕಾರಿಗಳು ತಯಾರಾಗಿ ದ್ದಾರೆ. 50 ವರ್ಷ ಕಳೆದಿರುವ ಎನ್‍ಎಸ್‍ಎಸ್ ಮುಂದಿನ ದಿನಗಳಲ್ಲಿ ಹೇಗೆ ಸಬಲೀ ಕರಣಗೊಳ್ಳಬೇಕಿದೆ ಎಂಬ ಬಗ್ಗೆ ಚಿಂತಿ ಸಲು ಕಾರ್ಯಾಗಾರ ನಡೆಸುವುದು ಅಗತ್ಯ ಎಂದರು. ಇದೇ ಸಂದರ್ಭದಲ್ಲಿ ಸುವರ್ಣ ಮಹೋತ್ಸವ ವರ್ಷದಲ್ಲಿ ಹಲವು ಕಾಲೇಜು ಗಳ ಎನ್‍ಎಸ್‍ಎಸ್ ಘಟಕಗಳು ಮೈಸೂ ರಿನ ಹಲವು ರಸ್ತೆ, ಉದ್ಯಾನಗಳನ್ನು ದತ್ತು ತೆಗೆದುಕೊಂಡು ಸ್ವಚ್ಛತಾ ಕಾರ್ಯ ನಿರ್ವ ಹಿಸುವುದಾಗಿ ಪ್ರಕಟಿಸಲಾಯಿತು.
ಮೈಸೂರು ವಿವಿ ಕುಲಸಚಿವ ಪ್ರೊ.ಆರ್. ರಾಜಣ್ಣ ಅಧ್ಯಕ್ಷತೆ ವಹಿಸಿದ್ದರು. ಮೈಸೂ ರಿನ ರಾಮಕೃಷ್ಣ ನೈತಿಕ ಮತ್ತು ಆಧ್ಯಾತ್ಮಿಕ ಶಿಕ್ಷಣ ಸಂಸ್ಥೆಯ ಕರೆಸ್ಪಾಂಡೆಂಟ್ ಸ್ವಾಮಿ ಮಹೇಶಾತ್ಮಾನಂದಜೀ, ಸಿದ್ದಾರ್ಥನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಎನ್‍ಎಸ್‍ಎಸ್ ಕಾರ್ಯಕ್ರಮಾಧಿಕಾರಿ ಡಾ. ಕೆ.ಎಂ.ಪ್ರಸನ್ನಕುಮಾರ್, ಕುವೆಂಪು ನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಎನ್‍ಎಸ್‍ಎಸ್ ಕಾರ್ಯಕ್ರಮಾಧಿಕಾರಿ ಡಾ. ರಾಮದಾಸ ರೆಡ್ಡಿ ಇತರರು ಉಪಸ್ಥಿತರಿದ್ದರು.

Translate »