ಮಕ್ಕಳಿಗೆ ಶಾಲೆಯಲ್ಲಿ ಅಕ್ಷರ, ಮನೆಯಲ್ಲಿ ಸಂಸ್ಕøತಿ ಕಲಿಸಿದರೆ ಅವರು ಸಂಸ್ಕಾರವಂತರಾಗುತ್ತಾರೆ
ಮೈಸೂರು

ಮಕ್ಕಳಿಗೆ ಶಾಲೆಯಲ್ಲಿ ಅಕ್ಷರ, ಮನೆಯಲ್ಲಿ ಸಂಸ್ಕøತಿ ಕಲಿಸಿದರೆ ಅವರು ಸಂಸ್ಕಾರವಂತರಾಗುತ್ತಾರೆ

March 10, 2019

ಮೈಸೂರು: ಶಾಲೆಯಲ್ಲಿ ಶಿಕ್ಷಕರು ಮಕ್ಕಳಿಗೆ ಅಕ್ಷರ ಕಲಿಸಿದರೆ, ಗುರು ಹಿರಿಯರಿಗೆ ಗೌರವ ಕೊಡುವ ಸಂಸ್ಕøತಿ ಯನ್ನು ಪೋಷಕರು ಮನೆಯಲ್ಲಿ ಕಲಿ ಸುವ ಮೂಲಕ ಮಕ್ಕಳನ್ನು ಸಂಸ್ಕಾರವಂತ ರನ್ನಾಗಿ ಬೆಳೆಸಬೇಕು ಎಂದು ಭಾರತ್ ಕ್ಯಾನ್ಸರ್ ಆಸ್ಪತ್ರೆಯ ಮುಖ್ಯ ವಿಕಿರಣ ಆಂಕಾಲಜಿ ತಜ್ಞರಾದ ಡಾ.ಎಂ.ಎಸ್. ವಿಶ್ವೇಶ್ವರ ಅವರು ಕರೆ ನೀಡಿದರು.

ಕೌಟಿಲ್ಯ ವಿದ್ಯಾಲಯದಲ್ಲಿ ಶನಿವಾರ ಏರ್ಪಡಿಸಿದ್ದ ಯುಕೆಜಿ ಮಕ್ಕಳ ಪದವಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿ ಯಾಗಿ ಪಾಲ್ಗೊಂಡು ಮಾತನಾಡಿದ ಅವರು, ಮಕ್ಕಳಿಗೆ ಪ್ರಾಥಮಿಕ ಹಂತದಲ್ಲಿ ಶಿಕ್ಷಣ ನೀಡುವುದು ಸವಾಲಿನ ಕೆಲಸ. ಅವರಿಗೆ ಉತ್ತಮ ಮೌಲ್ಯಗಳನ್ನು ಪರಿಚಯಿಸಿ ಅವರನ್ನು ಉತ್ತಮ ಪ್ರಜೆಗಳಾಗುವಂತೆ ಮಾಡುವ ಗುರುತರ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದ ಅವರು, ನಮ್ಮ ದೇಶದ ಪ್ರತಿಭೆಗಳು ವಿದೇಶಗಳ ಪಾಲಾಗದಂತೆ ಅವರ ಸೇವೆ ನಮ್ಮ ದೇಶಕ್ಕೆ ಲಭ್ಯವಾಗು ವಂತೆ ಮಾಡುವ ದಿಸೆಯಲ್ಲಿ ಇತ್ತೀಚೆಗೆ ಯುವಜನರು ಕಾರ್ಯಪ್ರವೃತ್ತರಾಗಿ ರುವುದು ಸಂತಸದ ಸಂಗತಿ ಎಂದರು.

ಶಾಲೆಯ ಅಧ್ಯಕ್ಷ ಆರ್.ರಘು ಮಾತ ನಾಡಿ, ನಮ್ಮ ಮಕ್ಕಳು ನಮಗಿಂತಲೂ ಹೆಚ್ಚು ಓದಿ ಹೆಚ್ಚು ಸಂಪಾದನೆ ಮಾಡು ವುದೇ ಶಿಕ್ಷಣ ಎಂದು ಪೋಷಕರು ಭಾವಿಸಬಾರದು. ಜ್ಞಾನದ ಅಮೃತವನ್ನು ಪಡೆಯಲು ಶಿಕ್ಷಣ ಒಂದು ಸಾಧನವಷ್ಟೇ. ಒಂದು ಮಗುವಿಗೆ ಪರಿಪೂರ್ಣ ಅರಿವು ಪಡೆಯಲು ಉತ್ತಮ ವಾತಾವರಣ ನಿರ್ಮಿಸುವುದು ಶಾಲೆಯ ಜವಾಬ್ದಾರಿ ಯಾಗಿದ್ದು ಅದಕ್ಕೆ ಪೂರಕವಾಗಿ ಸ್ಪಂದಿಸುವ ವಾತಾವರಣ ಮನೆಯಲ್ಲಿದ್ದರೆ ಶಿಕ್ಷಣದ ನೈಜ ಪರಿಕಲ್ಪನೆ ಸಾಕಾರಗೊಳ್ಳುತ್ತದೆ ಎಂದರು.

ಒತ್ತಡಗಳಿಲ್ಲದ ಶಿಕ್ಷಣ ಪದ್ಧತಿಯನ್ನು ಬಿಟ್ಟು ಮಕ್ಕಳಲ್ಲಿ ಕನಸು ಬಿತ್ತುವ ಶಿಕ್ಷಣ ವ್ಯವಸ್ಥೆಯನ್ನು ನಾವು ಅಳವಡಿಸಲು ಶ್ರಮಿಸು ತ್ತಿದ್ದೇವೆ. ಮಕ್ಕಳ ಪ್ರತಿಭೆ ಮತ್ತು ಸಾಮಥ್ರ್ಯ ವನ್ನು ಆಧರಿಸಿ ಅವರಿಗೆ ಆಯಾ ದಿಸೆ ಯಲ್ಲಿ ಪೂರಕ ಪ್ರೋತ್ಸಾಹ ನೀಡುವುದು ನಮ್ಮ ಉದ್ದೇಶವಾಗಿದ್ದು ಮುಖ್ಯವಾಗಿ ಮಕ್ಕ ಳಲ್ಲಿ ಧೈರ್ಯ ತುಂಬಿ ಬೆಳೆಸಬೇಕಾಗಿದೆ ಎಂದು ರಘು ಹೇಳಿದರು.

ಶಾಲೆಯ ಹಿರಿಯ ಪ್ರಾಂಶುಪಾಲರಾದ ಡಾ.ಎಲ್.ಸವಿತ ಮಾತನಾಡಿ, ಇತ್ತೀಚೆಗೆ ಒಮ್ಮೆ ಶಾಲೆಯಲ್ಲಿ ಮಕ್ಕಳೊಂದಿಗೆ ಸಂವಾದ ನಡೆಸುತ್ತಿದ್ದಾಗ ಯುಕೆಜಿ ಮಗುವೊಂದು ನಾನು ಭಾರತೀಯ ಸೇನೆಗೆ ಸೇರಿ ನಮ್ಮ ದೇಶದ ಪರವಾಗಿ ಹೋರಾಡುತ್ತೇನೆ. ನಮ್ಮ ದೇಶವನ್ನು ಕಾಡುತ್ತಿರುವ ಭಯೋ ತ್ಪಾದಕರನ್ನು ಮಟ್ಟ ಹಾಕುತ್ತೇನೆ ಎಂದು ಸ್ವಯಂಪ್ರೇರಿತವಾಗಿ ಹೇಳಿತು. ಅಷ್ಟರ ಮಟ್ಟಿಗೆ ಇಂದಿನ ಪುಟ್ಟ ಮಕ್ಕಳಲ್ಲೂ ಸಹ ದೇಶಪ್ರೇಮ ಚಿಗುರೊಡೆದಿದೆಯಲ್ಲದೆ ನಮ್ಮ ದೇಶಕ್ಕೆ ಯಾವುದು ಒಳ್ಳೆಯದು, ಯಾವುದು ಕೆಟ್ಟದು ಎಂಬ ಪರಿಜ್ಞಾನ ಮೂಡಿರುವುದು ನಾವೆಲ್ಲರೂ ಗಮನಿಸ ಬೇಕಾದ ಮತ್ತು ಹೆಮ್ಮೆಪಡಬೇಕಾದ ಅಂಶವಾಗಿದೆ ಎಂದರು.

Translate »