ಚಾಮುಂಡೇಶ್ವರಿ ಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ
ಮೈಸೂರು

ಚಾಮುಂಡೇಶ್ವರಿ ಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ

March 10, 2019

ಮೈಸೂರು: ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ. ದೇವೇ ಗೌಡ ಅವರು ಚಾಮುಂಡೇಶ್ವರಿ ಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ಹಲವು ಅಭಿವೃದ್ಧಿ ಕಾಮಗಾರಿ ಗಳಿಗೆ ಇಂದು ಗುದ್ದಲಿ ಪೂಜೆ ನೆರವೇರಿಸಿದರು.

ನಂಜನಗೂಡು ರಸ್ತೆಯಿಂದ ಗೆಜ್ಜಗಳ್ಳಿ-ಮಂಡಕಳ್ಳಿ ಮಾರ್ಗವಾಗಿ ರಿಂಗ್ ರಸ್ತೆಗೆ ಸೇರುವ 2 ಕೋಟಿ ರೂ. ವೆಚ್ಚದ ರಸ್ತೆ, ಮೈಸೂರು ತಾಲೂಕು, ಎಂ.ಎಂ. ರಸ್ತೆಯಿಂದ ದಡದಹಳ್ಳಿ, ಬ್ಯಾತಹಳ್ಳಿ ಮಾರ್ಗ ದೊಡ್ಡ ಕಾನ್ಯ ರಸ್ತೆ ಅಭಿವೃದ್ಧಿಯ 5 ಕೋಟಿ ರೂ. ಕಾಮಗಾರಿಗೆ ಸಚಿವರು ಚಾಲನೆ ನೀಡಿದರು.

ಕಡಕೊಳ-ಜಯಪುರ ರಸ್ತೆ (60 ಲಕ್ಷ ರೂ.), ಉದ್ಬೂರು-ದೂರ-ಹುಲ್ಲಹಳ್ಳಿ ರಸ್ತೆ (1.2 ಕೋಟಿ ರೂ.), ಮಂಡಕಳ್ಳಿ ವಿಮಾನ ನಿಲ್ದಾಣದ ಹಿಂಭಾಗ ಪೌರ ಕಾರ್ಮಿಕರ ಕಾಲೋನಿಗೆ ಸೇರುವ ರಸ್ತೆ (65 ಲಕ್ಷ ರೂ.), ಬ್ಯಾತಹಳ್ಳಿ ಗ್ರಾಮದ ವ್ಯಾಪ್ತಿಯ ರಸ್ತೆಗಳ ಅಭಿವೃದ್ಧಿ (25 ಲಕ್ಷ ರೂ.) ಕಾಮಗಾರಿಗಳಿಗೂ ಜಿ.ಟಿ. ದೇವೇಗೌಡರು ಶಂಕುಸ್ಥಾಪನೆ ನೆರವೇರಿಸಿದರು.

ಚಿಕ್ಕಕಾನ್ಯ ಗ್ರಾಮದ ಎಸ್‍ಸಿ ಕಾಲೋನಿ ರಸ್ತೆ ಹಾಗೂ ಚರಂಡಿ ಕಾಮಗಾರಿ, ಸಮು ದಾಯ ಭವನ ನಿರ್ಮಾಣ, ಡಾ. ಬಿ.ಆರ್. ಅಂಬೇಡ್ಕರ್ ಸಮುದಾಯ ಭವನ ನಿರ್ಮಾಣ ಹಾಗೂ ದೊಡ್ಡಕಾನ್ಯ ಗ್ರಾಮ ದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಸಮು ದಾಯ ಭವನ ನಿರ್ಮಾಣ ಸೇರಿ ಒಟ್ಟು 1 ಕೋಟಿ ರೂ. ಕಾಮಗಾರಿಗಳಿಗೂ ಸಚಿ ವರು ಇದೇ ವೇಳೆ ಚಾಲನೆ ನೀಡಿದರು.

ಮೈಸೂರು ನಗರದ ಚಾಮರಾಜ ಜೋಡಿ ರಸ್ತೆಯಲ್ಲಿ ನಿರ್ಮಿಸಿರುವ ಸರ್ಕಾರಿ ಪದವಿ ಪೂರ್ವ ಕಾಲೇಜು ಕಟ್ಟಡ ಹಾಗೂ ಸಿದ್ಧಾರ್ಥನಗರದಲ್ಲಿ ನಿರ್ಮಿಸಿ ರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕಟ್ಟಡಗಳನ್ನೂ ಜಿ.ಟಿ. ದೇವೇಗೌಡ ಹಾಗೂ ಶಾಸಕ ಎಸ್.ಎ. ರಾಮದಾಸ್ ಇಂದು ಬೆಳಿಗ್ಗೆ ಉದ್ಘಾಟಿಸಿದರು.

ಜಿಲ್ಲಾ ಪಂಚಾಯ್ತಿ ಸದಸ್ಯೆ ರೂಪಾ ಲೋಕೇಶ್, ತಾಲೂಕು ಪಂಚಾಯ್ತಿ ಸದಸ್ಯೆ ಮಹದೇವಮ್ಮ, ಗ್ರಾಮ ಪಂಚಾಯ್ತಿ ಅಧ್ಯಕ್ಷ ಕೃಷ್ಣಯ್ಯ, ಮುಖಂ ಡರುಗಳಾದ ಹೆಚ್.ಸಿ. ರಾಜು, ಮಹೇಶ್, ಮಾವಿನಹಳ್ಳಿ ಸಿದ್ದೇಗೌಡ, ಲೀನಾ ನಾಗ ರಾಜು, ತಳೂರು ಲಿಂಗರಾಜಪ್ಪ, ಸಿದ್ದ ಮರಪ್ಪ, ಮಹದೇವಸ್ವಾಮಿ, ಕೋಟೆ ಹುಂಡಿ ಮಹದೇವು, ದಡದಹಳ್ಳಿ ಮಹೇಶ, ಬ್ಯಾತಹಳ್ಳಿ ನಾಗರಾಜು, ಮಂಜು, ಉಮಾ ಪತಿ, ಅರಸನಕೆರೆ ಬೀರಲಿಂಗು ಸೇರಿದಂತೆ ಹಲವರು ಆ ಸಂದರ್ಭ ಪಾಲ್ಗೊಂಡಿದ್ದರು.

Translate »