ಮೈಸೂರಲ್ಲಿ ಶುಭಂನ ಮೂರು ಹೊಸ ಮಳಿಗೆ ಉದ್ಘಾಟನೆ
ಮೈಸೂರು

ಮೈಸೂರಲ್ಲಿ ಶುಭಂನ ಮೂರು ಹೊಸ ಮಳಿಗೆ ಉದ್ಘಾಟನೆ

March 10, 2019

ಮೈಸೂರು: ಮೈಸೂರಿನ ಬೋಗಾದಿ, ಚಾಮುಂಡಿಪುರಂ ಮತ್ತು ವಿವಿ ಮೊಹಲ್ಲಾದಲ್ಲಿ ಶುಭಂ ಎಲೆಕ್ಟ್ರಾನಿಕ್ ಶಾಪ್‍ಗಳನ್ನು ಕೊಡಗು-ಮೈಸೂರು ಸಂಸದ ಪ್ರತಾಪ್ ಸಿಂಹ ಇಂದು ಉದ್ಘಾಟಿಸಿದರು.

ಮೈಸೂರು ಸೇರಿದಂತೆ ಕರ್ನಾಟಕ ದಲ್ಲಿ ಈಗಾಗಲೇ 14 ಸ್ಟೋರ್‍ಗಳೂ ಸೇರಿ ಒಟ್ಟು 17 ಸ್ಟೋರ್‍ಗಳನ್ನು ಹೊಂದಿ ದಂತಾಗಿದೆ. ಶುಭಂ ತನ್ನ 17 ಸ್ಟೋರ್ ಗಳಲ್ಲೂ ಎಟಿಎಂ ಸೇವೆಯೊಂದಿಗೆ ಉತ್ಪನ್ನಗಳನ್ನು ಮಾರಾಟ ಮಾಡು ತ್ತಿದ್ದು, ಗ್ರಾಹಕರಿಗೆ 2-3 ವರ್ಷಗಳವರೆಗೆ ಉತ್ಪನ್ನಗಳಿಗೆ ಖಾತರಿ ನೀಡುತ್ತಿದೆ. ಅಲ್ಲದೆ, ಯಾವುದೇ ಉತ್ಪನ್ನಗಳ ಖರೀದಿಗೆ ಖಚಿತವಾದ ಉಡುಗೊರೆಗಳೊಂದಿಗೆ ಚಿನ್ನ ಮತ್ತು ಬೆಳ್ಳಿ ನಾಣ್ಯಗಳನ್ನು ನೀಡಲಾಗುತ್ತಿದೆ.

ಕೊಡಗು, ಮೈಸೂರು, ಮಂಡ್ಯ, ಹಾಸನ ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಇತ್ತೀಚೆಗೆ ಶುಭಂ ಇತರ ಕಂಪೆನಿಗಳ ವಿತರಣಾ ಹಕ್ಕು ಪಡೆದಿದೆ. `ಶುಭಂ ಸಮೃದ್ಧಿ’ ಹೆಸರಿನಲ್ಲಿ ರಿಯಲ್ ಎಸ್ಟೇಟ್ ಉದ್ಯಮ ದಲ್ಲಿ ತೊಡಗಿರುವ ಶುಭಂ, ಮೈಸೂರು ಮತ್ತು ಬೆಂಗಳೂರಿನಲ್ಲಿ 4 ಯೋಜನೆ ಗಳನ್ನು ಯಶಸ್ವಿಯಾಗಿ ಪೂರ್ಣಗೊಳಿ ಸಿದ್ದು, ನಿರ್ಮಾಣ ಕ್ಷೇತ್ರದಲ್ಲಿ ಭಾರೀ ಅನು ಭವ ಹೊಂದಿದ್ದು, ಈವರೆಗೆ ಒಂದು ಲಕ್ಷ ಚದರ ಅಡಿ ನಿರ್ಮಾಣ ಪೂರ್ಣ ಗೊಳಿಸಿದೆ. 2019ರ ಮೇ ತಿಂಗಳಿನಲ್ಲಿ ಮೈಸೂರಿನ ಕೊಲಂಬಿಯಾ ಏಷಿಯಾ ಆಸ್ಪತ್ರೆ ಸಮೀಪ ಹೊಸ ಯೋಜನೆ ಯಲ್ಲಿ ಫ್ಲಾಟ್‍ಗಳನ್ನು ವಿಶೇಷ ಸೌಕ ರ್ಯಗಳೊಂದಿಗೆ ಮಾರಾಟ ಮಾಡಲು ಸಿದ್ಧತೆ ನಡೆಸಿದೆ.

Translate »