ಅಪಘಾತ ನೆಪದಲ್ಲಿ ಕಾರು ಚಾಲಕನಿಂದ ಸುಲಿಗೆ ಪ್ರಕರಣ ಮೈಸೂರಿನ ಇಬ್ಬರು ಪೊಲೀಸ್ ವಶಕ್ಕೆ
ಮೈಸೂರು

ಅಪಘಾತ ನೆಪದಲ್ಲಿ ಕಾರು ಚಾಲಕನಿಂದ ಸುಲಿಗೆ ಪ್ರಕರಣ ಮೈಸೂರಿನ ಇಬ್ಬರು ಪೊಲೀಸ್ ವಶಕ್ಕೆ

May 30, 2018

ಮೈಸೂರು: ಅಪಘಾತ ಮಾಡಿದರೆಂಬ ನೆಪದಲ್ಲಿ ಬೆಂಗಳೂರಿಗೆ ತೆರಳುತ್ತಿದ್ದ ಕಾರು ಚಾಲಕನನ್ನು ತಡೆದು ಹಣ, ಮೊಬೈಲ್ ಸುಲಿಗೆ ಮಾಡಿದ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಮೈಸೂರಿನ ಎನ್‍ಆರ್ ಮೊಹಲ್ಲಾ ನಿವಾಸಿ ಗಳೆನ್ನಲಾದ ಮೊಹಮದ್ ಜಮೀಲ್ ಹಾಗೂ ಮೊಹಮದ್ ಜಬ್ಬೀರ್ ಎಂಬು ವರೇ ಸುಲಿಗೆ ಮಾಡಿ ತಲೆಮರೆಸಿಕೊಂಡಿ ದ್ದವರು. ಇಲವಾಲ ಠಾಣೆ ಪೊಲೀಸರು ಆರೋಪಿಗಳನ್ನು ತೀವ್ರ ವಿಚಾರಣೆಗೊಳ ಪಡಿಸಿದ್ದಾರೆ. ಈ ಹಿಂದೆ ಮೈಸೂರಿನಲ್ಲಿ ಮಹಿಳೆಯರ ಚಿನ್ನದ ಸರ ಅಪಹರಿಸುತ್ತಿದ್ದ ಆರೋಪಿಗಳು, ಇದೀಗ ತಮ್ಮ ಕೃತ್ಯದ ಶೈಲಿಯನ್ನು ಬದಲಿಸಿಕೊಂಡು ಹೆದ್ದಾರಿ ದರೋಡೆ ಮಾಡುತ್ತಿದ್ದರು. ಬೈಕ್‍ನಲ್ಲಿ ಬಂದು ಕಾರುಗಳನ್ನು ತಡೆಯುವುದು, ಕಲ್ಲು ಹೊಡೆದು ನಿಲ್ಲಿಸಿ, ನಂತರ ಅಪ ಘಾತ ಮಾಡಿ ನಿಲ್ಲಿಸದೆ ಬಂದಿದ್ದೀಯಾ ಎಂದು ಬೆದರಿಸಿ ಕಾರು ಚಾಲಕರಿಂದ ಹಣ, ಆಭರಣ ಬೆಲೆ ಬಾಳುವ ಮೊಬೈಲ್ ಸುಲಿಗೆ ಮಾಡುವುದು ಅವರ ಚಾಳಿಯಾಗಿದೆ ಎಂದು ತಿಳಿದು ಬಂದಿದೆ.

ದಕ್ಷಿಣ ಕೊಡಗಿನ ವಿರಾಜಪೇಟೆ ಬಳಿಯ ಐಮಂಗಲ ನಿವಾಸಿ ಕೆ.ಎ.ಪ್ರವೀಣ್ ಎಂಬು ವರು ಕಾರಿನಲ್ಲಿ (ಕೆಎ12, ಎಸ್.3714) ಬೆಂಗಳೂರಿಗೆ ತೆರಳುತ್ತಿದ್ದಾಗ ಇಲವಾಲ-ಕೆಆರ್‍ಎಸ್ ನಡುವೆ ಮೇ 21ರಂದು ಸಂಜೆ 4.30 ಗಂಟೆ ವೇಳೆ ಬೈಕ್‍ನಲ್ಲಿ ಬಂದ ಇಬ್ಬರು ಕಾರು ತಡೆದು ಅಪಘಾತ ಮಾಡಿ ಓಡಿ ಬಂದಿದ್ದೀಯೆಂದು ಧಮಕಿ ಹಾಕಿ 8,100 ರೂ. ಹಣ ಹಾಗೂ ಮೊಬೈಲ್ ಕಸಿದು ಪರಾರಿಯಾಗಿದ್ದರು.

ಅಂದು ಸಮಯದ ಅಭಾವದ ಕಾರಣ ತುರ್ತು ಕೆಲಸವಿದ್ದ ಕಾರಣ ಪ್ರವೀಣ್ ಬೆಂಗಳೂರಿಗೆ ತೆರಳಿದ್ದರು. ಮೂರು ದಿನಗಳ ನಂತರ ಇಲವಾಲ ಠಾಣೆಗೆ ತೆರಳಿ ಘಟನೆಯ ವಿವರದೊಂದಿಗೆ ಲಿಖಿತ ದೂರು ನೀಡಿ ದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ಕೈಗೊಂಡು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದರು.
ಇದೀಗ ಸುಳಿವಿನ ಬೆನ್ನತ್ತಿದ ಮೈಸೂರು ದಕ್ಷಿಣ ಗ್ರಾಮಾಂತರ ಠಾಣೆ ಸರ್ಕಲ್ ಇನ್‍ಸ್ಪೆಕ್ಟರ್ ಕರೀಂ ರಾವುತ್ತರ್ ನೇತೃತ್ವದ ಪೊಲೀಸರು ಸುಲಿಗೆ ಕೋರರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

 

Translate »