ಜಟ್ಟಿಹುಂಡಿಯಲ್ಲಿ ಅಪ್ರಾಪ್ತ ಬಾಲಕಿ ಅಪಹರಣ
ಮೈಸೂರು

ಜಟ್ಟಿಹುಂಡಿಯಲ್ಲಿ ಅಪ್ರಾಪ್ತ ಬಾಲಕಿ ಅಪಹರಣ

May 25, 2018

ಮೈಸೂರು:  ವರ್ಗಾವಣೆ ಪತ್ರ(ಟಿಸಿ) ತರಲೆಂದು ಶಾಲೆಗೆ ಹೋಗಿದ್ದ ಅಪ್ರಾಪ್ತ ಬಾಲಕಿಯನ್ನು ಯುವಕರಿಬ್ಬರು ಅಪಹರಿಸಿದ್ದಾರೆಂದು ಇಲವಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೈಸೂರು ತಾಲೂಕು, ಇಲವಾಲ ಹೋಬಳಿ ಜಟ್ಟಿ ಹುಂಡಿ ಗ್ರಾಮದವರಾದ ಬಾಲಕಿ ತಂದೆ ಮೇ 22ರಂದು ಇಲವಾಲ ಠಾಣೆಗೆ ಈ ಕುರಿತು ಲಿಖಿತ ದೂರು ನೀಡಿದ್ದಾರೆ. 10ನೇ ತರಗತಿ ಓದುತ್ತಿದ್ದ ಪುತ್ರಿ ಟಿಸಿ ತರಲೆಂದು ಶಾಲೆಗೆ ಹೋಗಿದ್ದಾಗ ಜಟ್ಟಿ ಹುಂಡಿಯ ಪ್ರಕಾಶ ತನ್ನ ಸಹಚರ ಸ್ವಾಮಿ ಎಂಬುವನ ನೆರವಿನಿಂದ ಮೇ 20ರಂದು ಅಪಹರಿಸಿದ್ದಾನೆ ಎಂದು ಅವರು ಆರೋಪಿಸಿದ್ದಾರೆ.

ದೂರಿನನ್ವಯ ಐಪಿಸಿ ಕಲಂ 34, 363, 114 ರೀತ್ಯಾ ಪ್ರಕರಣ ದಾಖಲಿಸಿಕೊಂಡಿರುವ ಇಲವಾಲ ಠಾಣೆ ಪೊಲೀಸರು, ತನಿಖೆ ನಡೆಸುತ್ತಿದಾರೆ.

Translate »