ಡೆಂಗ್ಯೂ, ಚಿಕುನ್‍ಗುನ್ಯಾ ತಡೆ ಕುರಿತು ಜಾಗೃತಿ
ಮೈಸೂರು

ಡೆಂಗ್ಯೂ, ಚಿಕುನ್‍ಗುನ್ಯಾ ತಡೆ ಕುರಿತು ಜಾಗೃತಿ

May 30, 2018

ಮೈಸೂರು:  ಮಳೆ ನೀರು ಸಂಗ್ರಹವಾಗಿ ಈಡಿಸ್ ಸೊಳ್ಳೆ ಉತ್ಪತ್ತಿಯಾಗುವ ಸಂಭವವಿದ್ದು, ಸಾರ್ವ ಜನಿಕರು ಡೆಂಗ್ಯೂ ಮತ್ತು ಚಿಕುನ್ ಗುನ್ಯಾ ಹರಡದಂತೆ ಅಗತ್ಯ ಮುನ್ನೆಚ್ಚರಿಕಾ ಕ್ರಮ ಗಳನ್ನು ಕೈಗೊಳ್ಳುವುದಕ್ಕೆ ಮುಂದಾಗಬೇಕೆಂದು ಮೈಸೂರು ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಎಸ್. ಚಿದಂಬರ ಮನವಿ ಮಾಡಿದ್ದಾರೆ.

ಮೈಸೂರು ಜಿಲ್ಲಾ ಪತ್ರಕರ್ತರ ಭವನ ದಲ್ಲಿ ಮಂಗಳವಾರ ನಡೆದ ಡೆಂಗ್ಯೂ ಮತ್ತು ಚಿಕುನ್ ಗುನ್ಯಾ ರೋಗಗಳ ತಡೆಗಟ್ಟು ವಿಕೆ ಕುರಿತು ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಳೆದ ಕೆಲವು ದಿನಗಳಿಂದ ಮಳೆ ನಿರಂತರವಾಗಿ ಸುರಿಯುತ್ತಿದೆ. ರಸ್ತೆ, ಚರಂಡಿ ಸೇರಿದಂತೆ ವಿವಿಧೆಡೆ ನೀರು ನಿಂತುಕೊಂಡು ಈಡಿಸ್ ಸೊಳ್ಳೆಗಳ ಲಾರ್ವ ಉತ್ಪತ್ತಿಯಾಗುವ ಸಂಭವವಿದೆ. ನಿರಂತರವಾಗಿ ಮಳೆ ಬಂದರೆ ಲಾರ್ವಗಳು ಕೊಚ್ಚಿ ಹೋಗಲಿದೆ. ಆದರೆ ಮಳೆ ನಿಂತರೆ ಡೆಂಗ್ಯೂ ಮತ್ತು ಚಿಕುನ್ ಗುನ್ಯಾ ರೋಗ ಹರಡುವ ಸೊಳ್ಳೆಗಳ ಉತ್ಪತ್ತಿ ಹೆಚ್ಚಾಗುತ್ತದೆ. ಇದರಿಂದ ಅಗತ್ಯ ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದು ಹೇಳಿದ ಅವರು, ಮನೆಯ ಒಳಗೆ ಮತ್ತು ಹೊರಗೆ ಘನತ್ಯಾಜ್ಯ ವಸ್ತುಗಳಲ್ಲಿ ಮಳೆ ನೀರು ಸಂಗ್ರಹವಾಗದಂತೆ ಎಚ್ಚರ ವಹಿಸಬೇಕು. ಇಲ್ಲದಿದ್ದರೆ ಈಡಿಸ್ ಈಜಿಪ್ಟೈ ಎಂಬ ಹೆಣ್ಣು ಸೊಳ್ಳೆಗಳು ಉತ್ಪತ್ತಿಯಾಗಿ ರೋಗ ಹರಡುತ್ತವೆ ಎಂದು ಎಚ್ಚರಿಸಿದರು.

ಮೇ 16ರಂದು ರಾಷ್ಟ್ರೀಯ ಡೆಂಗ್ಯೂ ದಿನವನ್ನಾಗಿ ಆಚರಿಸಿ ಎಲ್ಲೆಡೆ ಜಾಗೃತಿ ಮೂಡಿಸುವ ಕಾರ್ಯಕ್ರಮ ನಡೆಸಲಾ ಗಿದೆ. ಈಗಾಗಲೇ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಡೆಂಗ್ಯೂ, ಚಿಕುನ್ ಗುನ್ಯಾ ತಡೆಗಟ್ಟಲು ಹಲವು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ನಗರ ಮತ್ತು ಗ್ರಾಮೀಣ ಭಾಗದಲ್ಲಿ ಇಲಾಖೆಯ ಸಿಬ್ಬಂದಿಗಳು ಮನೆ ಮನೆಗೆ ಭೇಟಿ ನೀಡಿ ಈಡಿಸ್ ಲಾರ್ವ ಸಮೀಕ್ಷೆ ನಡೆಸುವುದು. ಸಂಶಯಾಸ್ಪದ ಜ್ವರ ಪ್ರಕರಣಗಳಿದ್ದರೆ ಅಂತಹ ರೋಗಿಗಳ ರಕ್ತ ಮಾದರಿ ಪರೀಕ್ಷೆಗೆ ಒಳಪಡಿಸಲಾಗು ತ್ತದೆ. ಸರ್ಕಾರಿ ಆಸ್ಪತ್ರೆಗಳ ಒಳರೋಗಿಗಳಿಗೆ ಸೊಳ್ಳೆಗಳಿಂದ ರಕ್ಷಣೆ ನೀಡಲು ಸೊಳ್ಳೆ ಪರದೆಗಳ ವಿತರಣೆ ಮಾಡಲಾಗುತ್ತಿದೆ ಎಂದರು.

ಮೈಸೂರು ನಗರದಲ್ಲಿ ಕಳೆದ 15 ವರ್ಷ ಗಳಿಂದ ಶೇ.20 ಡೆಂಗ್ಯೂ ಪ್ರಕರಣಗಳು ದಾಖಲಾಗುತ್ತಿದ್ದವು. ಅರಿವು ಕಾರ್ಯ ಕ್ರಮ ಹೆಚ್ಚಿದಂತೆ ಪ್ರಕರಣ 0.03ನಷ್ಟು ಇಳಿಕೆಯಾಗಿದೆ. ಈ ಕಾಯಿಲೆಗೆ ನಿರ್ದಿಷ್ಟ ಚಿಕಿತ್ಸೆಯಿಲ್ಲ. ಇದಕ್ಕೆ ಸಂಬಂಧಿತ ಪರೀಕ್ಷೆ ನಡೆಸಲು ಮೈಸೂರಲ್ಲೇ 3 ಕೇಂದ್ರಗಳಿವೆ. ಆದರೂ ಸಾರ್ವಜನಿಕರು ಸ್ವಯಂ ಪ್ರೇರಣೆಯಿಂದ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ಸೊಳ್ಳೆಗಳು ಉತ್ಪತ್ತಿಯಾಗು ವುದನ್ನು ತಡೆಗಟ್ಟಬೇಕು. ಮನೆಗಳಲ್ಲಿರುವ ವಾಸ್ತು ಗಿಡ, ಟೇಬಲ್ ವಾಸ್, ತೆಂಗಿನ ಚಿಪ್ಪು, ವಾಹನಗಳ ಟೈರ್, ಪ್ಲಾಸ್ಟಿಕ್ ಬಕೆಟ್, ಗ್ಯಾಸ್ ಸಿಲಿಂಡರ್ ಕೆಳಗೆ, ಒರಳುಕಲ್ಲು ಸೇರಿದಂತೆ ವಿವಿಧೆಡೆ ಒಂದಕ್ಕಿಂತ ಹೆಚ್ಚು ದಿನ ನೀರು ಸಂಗ್ರಹವಾದರೆ ಈಡಿಸ್ ಸೊಳ್ಳೆಗಳ ಉತ್ಪತ್ತಿಯಾಗುತ್ತವೆ. ಇದನ್ನು ತಡೆಗಟ್ಟುವುದರೊಂದಿಗೆ ಸೊಳ್ಳೆ ಕಚ್ಚುವು ದನ್ನು ತಪ್ಪಿಸಿಕೊಳ್ಳಲು ಸೊಳ್ಳೆ ಪರದೆ, ಗುಡ್ ಕಾಯಿಲ್, ಸೊಳ್ಳೆಬತ್ತಿ ಬಳಕೆ, ಬಾಡಿ ಲೋಷನ್ ಬಳಸುವುದಕ್ಕೆ ಮುಂದಾಗು ವಂತೆ ಅವರು ಕೋರಿದರು.

ನಿಫಾ ಭಯ ಬೇಡ: ನಿಫಾ ವೈರಾಣು ಬಗ್ಗೆ ಸಾರ್ವಜನಿಕರು ಆತಂಕಗೊಳ್ಳುವ ಅಗತ್ಯವಿಲ್ಲ. ಈಗಾಗಲೇ ಆರೋಗ್ಯ ಇಲಾಖೆ ಅಗತ್ಯ ಕ್ರಮ ಕೈಗೊಂಡಿದೆ. ಇದುವರೆಗೂ ಮೈಸೂರು ಸೇರಿದಂತೆ ರಾಜ್ಯದಲ್ಲಿ ನಿಫಾ ಸೋಂಕು ಇರುವುದು ಪತ್ತೆಯಾಗಿಲ್ಲ. ಒಂದು ವೇಳೆ ಸೋಂಕು ತಗುಲಿರುವ ಅನುಮಾನವಿದ್ದರೆ ಭಯ ಪಡದೆ ತಪಾಸಣೆ ಮಾಡಿಸಿಕೊಳ್ಳಬೇಕು. ಜ್ವರ, ಜ್ಞಾನ ತಪ್ಪುವುದು, ಫಿಟ್ಸ್, ತಲೆ ನೋವು ಕಾಣ ಸಿಕೊಂಡರೆ ಸೂಕ್ತ ಚಿಕಿತ್ಸೆ ಪಡೆಯಬೇಕು. ಮಾಧ್ಯಮಗಳೂ ಜನತೆ ಯಲ್ಲಿ ಗಾಬರಿ ಹುಟ್ಟಿಸುವ ರೀತಿಯಲ್ಲಿ ಸುದ್ದಿ ಪ್ರಕಟಿಸಬಾರದು. ಬದಲಾಗಿ ನಿಫಾ ಬಗ್ಗೆ ಎಚ್ಚರ ವಹಿಸುವಂತೆ ಸೂಕ್ತ ಮಾಹಿತಿ ನೀಡಬೇಕು ಎಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಜೆ. ಲೋಕೇಶ್ ಬಾಬು, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಕಚೇರಿಯ ಆರೋಗ್ಯ ಸಹಾಯಕ ರಾಜೇಂದ್ರಪ್ಪ, ಕೀಟಶಾಸ್ತ್ರಜ್ಞೆ ರತ್ನಾಕುಮಾರಿ, ಆರೋಗ್ಯ ಮೇಲ್ವಿಚಾರಕ ಭೀಮಣ್ಣ ಇದ್ದರು.

Translate »