ಶಾಸ್ತ್ರೀಯ ಸಂಗೀತ ಕೇಳುಗರ ಸಂಖ್ಯೆ ಇಳಿಮುಖ: ಭೈರಪ್ಪ ವಿಷಾದ
ಮೈಸೂರು

ಶಾಸ್ತ್ರೀಯ ಸಂಗೀತ ಕೇಳುಗರ ಸಂಖ್ಯೆ ಇಳಿಮುಖ: ಭೈರಪ್ಪ ವಿಷಾದ

May 30, 2018

ಮೈಸೂರು: ಇತ್ತೀಚೆಗೆ ಶಾಸ್ತ್ರೀಯ ಸಂಗೀತ ಕೇಳುಗರ ಸಂಖ್ಯೆ ಕಡಿಮೆಯಾಗುತ್ತಿದೆ. ಕೇಳುಗರ ಮನೋಧರ್ಮ ಬದಲಾಗುತ್ತಿರುವುದೇ ಇದಕ್ಕೆ ಕಾರಣ ಎಂದು ಹಿರಿಯ ಸಾಹಿತಿ ಡಾ. ಎಸ್.ಎಲ್.ಭೈರಪ್ಪ ಅಭಿಪ್ರಾಯಪಟ್ಟರು.

ಚಾಮುಂಡಿಬೆಟ್ಟದ ತಪ್ಪಲಿನ ಸುತ್ತೂರು ಶಾಖಾ ಮಠದ ಆವರಣದಲ್ಲಿ 200ನೇ ಬೆಳ ದಿಂಗಳ ಸಂಗೀತ ಕಾರ್ಯಕ್ರಮದ ಅಂಗ ವಾಗಿ ಜುಗಲ್‍ಬಂದಿ ವಿಶೇಷ ಸಂಗೀತ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ತತ್ವಶಾಸ್ತ್ರಜ್ಞ ಪ್ಲೇಟೋ ಸಂಗೀತದ ಬಗ್ಗೆ ಒಂದು ಮಾತು ಹೇಳಿದ್ದಾನೆ. `ಯಾವ ಸಂಗೀತವನ್ನು ಆಸ್ವಾದನೆ ಮಾಡುತ್ತೇವೋ ಆ ಮನೋಧರ್ಮ ನಮ್ಮಲ್ಲಿ ಇರುತ್ತದೆ’ ಎಂದ ಅವರು, ಶಾಸ್ತ್ರೀಯ ಸಂಗೀತದ ಮೂಲ `ಓಂ’ ಕಾರದಿಂದ ಮೂಡುತ್ತದೆ. ಇದು ಸಾಮವೇದದಲ್ಲಿ ಕಾಣಬಹುದು ಎಂದರು.

ಭಾರತದಲ್ಲಿ ಶಾಸ್ತ್ರೀಯ ಸಂಗೀತವೇ ನಿಜವಾದ ಸಂಗೀತ. ಇದು ಒಂದು ಬ್ರಹ್ಮಾಂಡ ಸೃಷ್ಟಿಸಿದಂತೆ. ಹಾಡುಗಾರಿಕೆಯ ಆರಂಭದಲ್ಲಿ ಸಂಗೀತಗಾರರು ಸಪ್ತ ಸ್ವರ, ರಾಗ-ಲಹರಿ ಗಳ ಲಯ ಕಂಡುಕೊಳ್ಳುತ್ತಾರೆ. ಇದರ ಜೊತೆಗೆ ಇತರೆ ಪಕ್ಕವಾದ್ಯಗಳು ಪೂರಕವಾಗಿ ರುತ್ತವೆ ಎಂದ ಅವರು, ಉತ್ತರ ಕರ್ನಾಟಕದ ಹಿಂದೂಸ್ತಾನಿ ಸಂಗೀತ, ಹಳೆ ಮೈಸೂರು ಪ್ರಾಂತ್ಯದ ಕರ್ನಾಟಕ ಸಂಗೀತದ ರಾಗ ಒಂದೇ. ಇದರಲ್ಲಿ ಜುಗಲ್‍ಬಂದಿ ಮಿಳಿತ ಹೇಗೆ ಮಾಡುತ್ತಾರೆಂಬುದನ್ನು ಸಂಗೀತ ಗಾರರೇ ಹೇಳಬೇಕು ಎಂದರು.

ಆದ್ದರಿಂದ ಶಾಸ್ತ್ರೀಯ ಸಂಗೀತ ಕೇಳುಗರ ಸಂಖ್ಯೆ ಕಡಿಮೆಯಾಗಿರುವುದಕ್ಕೆ ಇತ್ತೀಚಿನ ಸಂಗೀತಗಾರರು ಶಾಸ್ತ್ರೀಯ ಸಂಗೀತಕ್ಕೆ ಬೇರೆ ಬೇರೆ ರೂಪ ನೀಡಿ ಹಾಡುತ್ತಿದ್ದಾರೆ. ಇದು ಕೇಳುಗರ ಮನಸ್ಸು ಬದಲಾಗುತ್ತಿರುವ ಲಕ್ಷಣ ಎನ್ನಬಹುದು. ಜುಗಲ್‍ಬಂದಿ ಸಂಗೀತ, ನಾನು ತಿಳಿದಿರುವಂತೆ ಇಬ್ಬರು ಶಿಷ್ಯಂದಿರು ಒಬ್ಬರೇ ಗುರುಗಳಿಂದ ಕಲಿತು ಒಂದೇ ರಾಗಕ್ಕೆ ನಡೆಸಿಕೊಡುವ ಸಂಗೀತ ಕಾರ್ಯ ಕ್ರಮ ಎಂದು ವ್ಯಾಖ್ಯಾನಿಸಿದರು. ಸಭಾ ಕಾರ್ಯಕ್ರಮದ ನಂತರ ಪಂ. ಪ್ರವೀಣ್ ಗೋಡ್ಖಿಂಡಿ(ಬಾನ್ಸುರಿ) ಹಾಗೂ ಡಾ. ಜಯಂತಿ ಕುಮರೇಶ್(ವೀಣೆ), ವಿದ್ವಾನ್ ಕೆ.ಯು. ಜಯಚಂದ್ರರಾವ್, ಪಂ. ಉದಯ್ ರಾಜ್ ಕರ್ಪೂರ್(ತಬಲ) ತಂಡ ಜುಗಲಬಂದಿ ಕಾರ್ಯಕ್ರಮವನ್ನು ಅಮೋಘವಾಗಿ ನಡೆಸಿ ಕೊಟ್ಟರು. ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕನ್ನಡ ಮತ್ತು ಸಂಸ್ಕøತಿ ಇಲಾಖೆ ನಿರ್ದೇಶಕ ಎನ್.ಆರ್. ವಿಶುಕುಮಾರ್ ಉಪಸ್ಥಿತರಿದ್ದರು.

Translate »