ಮಹದೇಶ್ವರ ಬೆಟ್ಟ ದೇಗುಲದ ಹುಂಡಿಯಲ್ಲಿ 1.48 ಕೋಟಿ ರೂ.ಗೂ ಹೆಚ್ಚು ಸಂಗ್ರಹ
ಚಾಮರಾಜನಗರ

ಮಹದೇಶ್ವರ ಬೆಟ್ಟ ದೇಗುಲದ ಹುಂಡಿಯಲ್ಲಿ 1.48 ಕೋಟಿ ರೂ.ಗೂ ಹೆಚ್ಚು ಸಂಗ್ರಹ

May 30, 2018

ಕೊಳ್ಳೇಗಾಲ:  ತಾಲೂಕಿನ ಪ್ರಸಿದ್ಧ ಯಾತ್ರಾ ಸ್ಥಳ ಮಲೈ ಮಹದೇಶ್ವರ ಬೆಟ್ಟದ ಮಹದೇಶ್ವರ ದೇವಸ್ಥಾನದ ಗೋಲಕದ ಹಣವನ್ನು ಎಣ ಕೆ ಮಾಡ ಲಾಗಿದ್ದು, 1.48 ಕೋಟಿ ರೂ. ಹೆಚ್ಚು ಹಣ ಸಂಗ್ರಹವಾಗಿದೆ.

ಇಂದು ಬೆಳಿಗ್ಗೆ 7 ಗಂಟೆ ವೇಳೆಗೆ ಶ್ರೀಮಲೈಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಶ್ರೀಮತಿ ಎಂ.ಜೆ.ರೂಪಾ ಅವರ ಅಧ್ಯಕ್ಷತೆಯಲ್ಲಿ ಹಾಗೂ ಶ್ರೀಸಾಲೂರು ಮಠದ ಶ್ರೀ ಗುರು ಸ್ವಾಮಿ ಗಳವರ ಸಾನಿಧ್ಯದಲ್ಲಿ ಹುಂಡಿಗಳನ್ನು ತೆರೆಯಲಾಯಿತು. ಇಲ್ಲಿನ ಬಸ್ ನಿಲ್ದಾಣದ ಬೆಳೆಯಿರುವ ವಾಣ ಜ್ಯ ಸಂಕೀರ್ಣದ ಮಹಡಿಯಲ್ಲಿ ಗೋಲಕಗಳ ಹಣ ಎಣ ಕೆ ಕಾರ್ಯ ನಡೆಯಿತು. ಎಣ ಕೆ ಸಂಪೂರ್ಣಗೊಂಡು ಗೋಲಕ ದಲ್ಲಿ 1,48,90,538 ರೂ. ಹಣ ಸಂಗ್ರಹವಾಗಿತ್ತು. ಅಲ್ಲದೆ 90 ಗ್ರಾಂ ಚಿನ್ನ ಮತ್ತು 1 ಕೆಜಿ 460 ಗ್ರಾಂ ಬೆಳ್ಳಿ ಪದಾರ್ಥಗಳು ಸಂಗ್ರಹವಾಗಿತ್ತು.

ಎಣ ಕೆ ಕಾರ್ಯದಲ್ಲಿ ಪ್ರಾಧಿಕಾರದ ಉಪ ಕಾರ್ಯದರ್ಶಿ ರಾಜಶೇಖರ್, ಅಧೀಕ್ಷಕ ಎಂ.ಬಸವರಾಜು, ಲೆಕ್ಕಾಧೀಕ್ಷಕ ಮಹದೇವಸ್ವಾಮಿ, ಬಿ.ಮಾದರಾಜು ಹಾಗೂ ದೇವಸ್ಥಾನಕ ನೌಕರರು, ಜಿಲ್ಲಾಧಿಕಾರಿ ಕಚೇರಿ ಪ್ರಥಮ ದರ್ಜೆ ಸಹಾಯಕ ಮೋಹನ್ ಕುಮಾರ್, ಎಸ್‍ಬಿಐ ವ್ಯವಸ್ಥಾಪಕ ಸೆಂದಿಲ್ ನಾಥನ್ ಮತ್ತು ಸಿಬ್ಬಂದಿ ಹಾಜರಿದ್ದರು. ಮಹದೇಶ್ವರ ಬೆಟ್ಟದ ಆರಕ್ಷಕ ಸಿಬ್ಬಂದಿ ಬಂದೋಬಸ್ತ್ ನಿರ್ವಹಿಸಿದರು.

Translate »