ನ್ಯಾಯ ನೀಡುವಲ್ಲಿ ವಕೀಲರ ಸಹಕಾರ ಅಗತ್ಯ
ಚಾಮರಾಜನಗರ

ನ್ಯಾಯ ನೀಡುವಲ್ಲಿ ವಕೀಲರ ಸಹಕಾರ ಅಗತ್ಯ

May 30, 2018

ಚಾಮರಾಜನಗರ: ಕಕ್ಷಿದಾರರಿಗೆ ನ್ಯಾಯ ಒದಗಿ ಸುವಲ್ಲಿ ವಕೀಲರ ಸಹಕಾರ ಅತ್ಯಗತ್ಯ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಜಿ.ಬಸವರಾಜು ತಿಳಿಸಿದರು.

ನಗರದ ಜಿಲ್ಲಾ ವಕೀಲರ ಸಂಘದಲ್ಲಿ ಏರ್ಪಡಿಸಿದ್ದ ನೂತನ ನ್ಯಾಯಾಧೀಶರಗಳ ಸ್ವಾಗತ ಸಮಾರಂಭದಲ್ಲಿ ಮಾತನಾಡಿದ ಅವರು, ಈ ಹಿಂದಿನ ನ್ಯಾಯಾಧೀಶರುಗಳಿಗೆ ಸಹಕಾರವನ್ನು ನೀಡಿದಂತೆ ನೂತನ ನ್ಯಾಯಾಧೀಶರುಗಳಿಗೂ ಸಹಕಾರ ನೀಡಿದ್ದಲ್ಲಿ ಉತ್ತಮ ಸೇವೆ ಸಲ್ಲಿಸಬಹುದಾಗಿದೆ ಎಂದರು.

ನೂತನವಾಗಿ ಅಧಿಕಾರ ಸ್ವೀಕರಿಸಿದ ಹಿರಿಯ ಸಿವಿಲ್ ನ್ಯಾಯಾ ಧೀಶರುಗಳಾದÀ ರಮೇಶ್ ಹಾಗೂ ಜಿಲ್ಲಾ ಕಾನೂನು ಸೇವೆಗಳ ಸದಸ್ಯ ಕಾರ್ಯದರ್ಶಿ ವಿಶಾಲಾಕ್ಷಿ ಅವರು ಸ್ವಾಗತ ಸನ್ಮಾನ ಸ್ವೀಕರಿಸಿ ಉತ್ತಮ ನ್ಯಾಯದಾನಕ್ಕಾಗಿ ವಕೀಲರ ಸಹಕಾರ ಅವಶ್ಯಕವಾಗಿದೆ. ಆ ಕಾರಣ ವಕೀಲರ ಸಹಕಾರವಿರಲಿ ಎಂದರು.

ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಉಮ್ಮತ್ತೂರು ಇಂದುಶೇಖರ್ ಮಾತನಾಡಿ, ನಮ್ಮ ಸಂಘವು ನ್ಯಾಯಾಧೀಶರುಗಳಿಗೆ ಉತ್ತಮ ಸಹಕಾರವನ್ನು ನೀಡುತ್ತಾ ಬಂದಿದ್ದೇವೆ, ಮುಂದೆಯು ತಮಗೆ ವಕೀಲರ ಸಂಘವು ಸಂಪೂರ್ಣ ಸಹಕಾರ ನೀಡುತ್ತೇವೆ ಎಂದು ಹೇಳಿದರು.

ಗುಂಡ್ಲುಪೇಟೆಯ ಹಿರಿಯ ಸಿವಿಲ್ ನ್ಯಾಯಾಧೀಶ ಚಂದ್ರ ಶೇಖರ್ ದಿಡ್ಡಿ, ಪ್ರಧಾನ ಸಿವಿಲ್ ನ್ಯಾಯಾಧೀಶೆ ವಿ.ದೀಪಾ, ವಕೀಲ ಸಂಘದ ಪ್ರಧಾನ ಕಾರ್ಯದರ್ಶಿ ಆರ್.ಅರುಣ್‍ಕುಮಾರ್, ಖಜಾಂಚಿ ಎಸ್.ಜಿ.ಮಹಾಲಿಂಗಸ್ವಾಮಿ, ಸಂಘದ ಪದಾಧಿಕಾರಿಗಳಾದ ಕೆ.ಎನ್.ಮಂಜುಳ, ಬಿ.ವನಜಾಕ್ಷಿ, ಎಚ್.ಎಸ್.ಮಹೇಂದ್ರ, ಕಾಗಲ ವಾಡಿ ಮಹೇಶ ಕುಮಾರ್, ಆರ್. ಗಿರೀಶ್ ಮತ್ತು ವಕೀಲ ಸಂಘದ ಸದಸ್ಯರು ಸಮಾರಂಭದಲ್ಲಿ ಹಾಜರಿದ್ದರು.

Translate »