ಜಿಟಿ ಜಿಟಿ ಮಳೆ: ತಂಬಾಕು ಬೆಳೆಗಾರರಲ್ಲಿ ಹೆಚ್ಚಿದ ಆತಂಕ
ಹಾಸನ

ಜಿಟಿ ಜಿಟಿ ಮಳೆ: ತಂಬಾಕು ಬೆಳೆಗಾರರಲ್ಲಿ ಹೆಚ್ಚಿದ ಆತಂಕ

May 30, 2018

ರಾಮನಾಥಪುರ: ಕಳೆದ ವಾರದಿಂದ ಸುರಿಯುತ್ತಿರುವ ಜಿಟಿಜಿಟಿ ಮಳೆಯಿಂದಾಗಿ ತಂಬಾಕು ಹೊಲಗಳು ಗದ್ದೆ ಯಂತಾಗಿದ್ದು, ಹೊಗೆ ಸಸಿ ನಾಟಿ ಮಾಡಿದ ರೈತರು ಆತಂಕಕ್ಕೊಳಗಾಗಿದ್ದಾರೆ.

ಪೂರ್ವ ಮುಂಗಾರಿನಿಂದ ಉತ್ತಮ ಮಳೆ ಯಾದ ಹಿನ್ನೆಲೆಯಲ್ಲಿ ಎರಡು ತಿಂಗಳಿಂದಲೂ ಉಳುಮೆ ಮಾಡಿ ತಂಬಾಕು ನಾಟಿ ಮಾಡಿ ದ್ದರು. ಅಲ್ಲದೆ ತಂಬಾಕು ಮಂಡಳಿ ಮತ್ತು ಅಂಗಡಿಗಳಿಂದ ಸಾವಿರಾರು ರೈತರು ಸಾಕಷ್ಟು ಬೆಲೆ ತೆತ್ತು ರಸಗೊಬ್ಬರವನ್ನು ಹಾಕಿ ಫಸಲಿನ ನಿರೀಕ್ಷೆಯಲ್ಲಿದ್ದರು. ಆದರೆ ಕಳೆದ ಒಂದು ವಾರದಿಂದ ಬಿಳುತ್ತಿರುವ ಮಳೆಗೆ ಬೆಳೆ ಹಾಳಾಗುತ್ತಿದೆ. ಇದರಿಂದ ರೈತರು ಕೈ ಸಾಲ ಹಾಗೂ ಬ್ಯಾಂಕ್‍ಗಳಲ್ಲಿ ಪಡೆದಿರುವ ಸಾಲವನ್ನು ಹೇಗೆ ತೀರಿಸುವುದು ಎಂಬ ಚಿಂತೆಯಲ್ಲಿದ್ದಾರೆ.

3 ವರ್ಷದಿಂದ ಸತತ ಬರ: ಮುಂಗಾರು ಪೂರ್ವ ಮಳೆ ಬೀಳತೊಡಗಿದಾಗ ರೈತರು ಹರ್ಷ ಚಿತ್ತರಾಗಿದ್ದರು. ಉತ್ತಮ ಫಸಲು ಬೆಳೆಯ ಬಹುದು ಎಂಬ ಲೆಕ್ಕಾಚಾರ ಅವರದ್ದಾಗಿತ್ತು. ಅದರೆ ಈ ಸಂತಸ ಬಹುಕಾಲ ಉಳಿಯುವಂತೆ ಕಾಣುತ್ತಿಲ್ಲ. ಒಂದು ವಾರದಿಂದ ಅತಿಯಾದ ಜಡಿ ಮಳೆಯಿಂದ ಅವರ ಲೆಕ್ಕಾಚಾರ ತಲೆ ಕೆಳಗಾ ಗಿದೆ. 3 ವರ್ಷದ ಸತತ ಬರದಿಂದ ಕಂಗಾಲಾಗಿದ್ದ ಅನ್ನದಾತ ಅಲ್ಪ-ಸಲ್ಪ ಹದವಾಗಿ ಬಿದ್ದ ಮಳೆ ಯಿಂದ ಹರ್ಷಗೊಂಡು ಕೃಷಿ ಚಟುವಟಿಕೆಯಲ್ಲಿ ತೊಡಗಿದರು. ಪ್ರಮುಖ ವಾಣ ಜ್ಯ ಬೆಳೆಯಾದ ತಂಬಾಕು ಸೇರಿದಂತೆ ವಿವಿಧ ಬೆಳೆಗಳನ್ನು ಬಿತ್ತನೆ ಮಾಡಿದ್ದರು. ಆದರೆ ವಾರದಿಂದ ಬೀಳುತ್ತಿರುವ ಮಳೆಯಿಂದ ತಂಬಾಕು ಸಸಿಗಳ ತಳದಲ್ಲಿ ನೀರು ನಿಂತು ಕೊಳೆಯುವ ಹಂತ ತಲುಪುತ್ತಿವೆ. ಒಮ್ಮೊಮ್ಮೆ ಮಳೆ ಬಾರದೇ ಬೆಳೆ ಒಣಗಿ ಹೋಗುತ್ತದೆ. ಒಮ್ಮೊಮ್ಮೆ ಮಳೆ ಬಂದು ಹಾನಿಯಾಗುತ್ತದೆ ಎಂಬ ಮಾತು ರಾಮನಾಥಪುರ ತಂಬಾಕು ಮಂಡಳಿ ವ್ಯಾಪ್ತಿಯ ಕೃಷಿಕರ ಪರಿಸ್ಥಿತಿ ಗಮನಿಸಿದರೆ ನಿಜ ಎನಿಸುತ್ತಿದೆ. ತಾಲೂಕಿನಲ್ಲಿ ಮೊದಲನೇ ಹಂತದ ಹೊಗೆ ಸೊಪ್ಪು ಕೆಲವು ಕಡೆಗಳಲ್ಲಿ ಇನ್ನೂ ಸಲ್ಪ ದಿನಗಳಲ್ಲಿ ರಸಗೊಬ್ಬರ ಹಾಕುವ ಹಂತದಲ್ಲಿದ್ದು, ಅತಿವೃಷ್ಠಿ ಯಿಂದಾಗಿ ಜಮೀನಿನಲ್ಲಿ ನೀರು ನಿಂತಿರುವುದ ರಿಂದ ಹೊಗೆಸೊಪ್ಪು, ಶುಂಠಿ, ಆಲೂಗೆಡ್ಡೆ ಮತ್ತು ಜೋಳ ಬೆಳೆಗಳು ಕೊಳೆಯಲಾರಂಭಿಸಿದ್ದು, ಇಳು ವರಿ ಮೇಲೆ ಭಾರೀ ಪರಿಣಾಮ ಬೀರಲಿದೆ. ಮಳೆಯಿಂದ ಈ ಭಾಗದ ಅಪಾರ ಬೆಳೆಯಲ್ಲಿ ನೀರು ಪಾಲಾಗಿದೆ. ಕೆಲವು ಕಡೆ ಜಮೀನಿ ನಲ್ಲಿ ಸಸಿ ತಳದಲ್ಲಿ ನಿಂತಿರುವ ನೀರನ್ನು ಗುದ್ದಲಿ ಯಿಂದ ಹೊರಹಾಕಲು ಹೆಣಗಾಡುತ್ತಿದ್ದಾರೆ.

ಬಾಯಿಗೆ ಬರದ ತುತ್ತು: ರಾಮನಾಥಪುರ ತಂಬಾಕು ಹರಾಜು ಮಾರುಕಟ್ಟೆಗಳ ಪ್ಲಾಟ್ ಫಾರಂ 7 ಹಾಗೂ 63ರ ವ್ಯಾಪ್ತಿಗೆ ಬರುವ ರಾಮನಾಥಪುರ, ಮಲ್ಲಿಪಟ್ಟಣ, ದೊಡ್ಡಮಗ್ಗೆ ಕೊಣನೂರು, ಸೋಮ ವಾರಪೇಟೆ ಸೇರಿ ಸುಮಾರು 50 ಸಾವಿರ ತಂಬಾಕು ಬೆಳೆಗಾರರು ಸಾವಿರಾರು ಎಕರೆ ಪ್ರದೇಶದಲ್ಲಿ ಹೊಗೆ ಸೊಪ್ಪು ಸಸಿ ನಾಟಿ ಮಾಡಿದ್ದರು. ಅಲ್ಲದೆ ಹಲವರು ಶುಂಠಿ, ಆಲೂಗೆಡ್ಡೆ ಬಿತ್ತನೆ ಮಾಡಿದ್ದಾರೆ. ಸದ್ಯ ಬೀಳು ತ್ತಿರುವ ಜಿಟಿ ಮಳೆಯಿಂದ ಬೆಳೆಗಳಿಗೆ ತೀವ್ರ ಹಾನಿ ಯಾಗಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬರದಂತಾ ಗಿದ್ದು, ರೈತರು ತಲೆ ಮೇಲೆ ಕೈಹೊತ್ತು ಕುಳಿತಿದ್ದಾರೆ.

ಒತ್ತಾಯ: ಇಲ್ಲಿನ ಹರಾಜು ಮಾರುಕಟ್ಟೆಯ ಪಾಟ್ಲ್ ಫಾರಂ 7 ಹಾಗೂ 63ರಲ್ಲಿ ಸಕಾಲದಲ್ಲಿ ಗೊಬ್ಬರ ವಿತರಣೆ ಮಾಡದೆ ಮಾಡುತ್ತಿದ್ದು, ಇನ್ನೂ ಹಲವು ರೈತರು ತಂಬಾಕು ಸಸಿ ನಾಟಿ ಮಾಡದೆ ಮಡಿಗಳು ಸಹ ಕೊಳೆಯುತ್ತಿವೆ. ಹಲವು ರೈತರು ಜಮೀನಿಗೆ ತಂಬಾಕು ಸಸಿ ನಾಟಿ ಮಾಡಿ ತಿಂಗಳಾಗಿದ್ದರೂ ಸಹ ರಸಗೊಬ್ಬರವನ್ನು ಬೆಳೆಗಾರರಿಗೆ ವಿತರಿಸಲಾರದೆ ಪರದಾಡು ವಂತಾಗಿದೆ. ರಸಗೊಬ್ಬರಕ್ಕಾಗಿ ವಾರದಿಂದ ತಂಬಾಕು ಹರಾಜು ಮಾರುಕಟ್ಟೆಯಲ್ಲಿ ರೈತರು ನಿತ್ಯ ಸಾಲುಗಟ್ಟಿ ನಿಲ್ಲುವಂತಾಗಿದೆ ಕೂಡಲೇ ತಂಬಾಕು ಮಂಡಳಿ ಅಧಿಕಾರಿಗಳು ರಸ ಗೊಬ್ಬರದ ವ್ಯವಸ್ಥೆ ಮಾಡಿಸುವಂತೆ ಕ್ಷೇತ್ರದ ಶಾಸಕ ಎ.ಟಿ. ರಾಮಸ್ವಾಮಿಯವರಿಗೆ ರೈತ ಮುಖಂಡ ಕೃಷ್ಣಗೌಡ ಮನವಿ ಮಾಡಿದ್ದಾರೆ.

Translate »