ಮೈಸೂರು

ಮಳೆಗೆ ಬಾಯ್ತೆರೆದ ಗುಂಡಿಗಳು: ವಾಹನ ಸವಾರರ ಪೇಚಾಟ
ಮೈಸೂರು

ಮಳೆಗೆ ಬಾಯ್ತೆರೆದ ಗುಂಡಿಗಳು: ವಾಹನ ಸವಾರರ ಪೇಚಾಟ

May 29, 2018

ಮೈಸೂರು: ಮೈಸೂರಿನಲ್ಲಿ ನಿರಂತರವಾಗಿ ಸುರಿ ಯುತ್ತಿರುವ ಮಳೆಯ ನಡುವೆ, ಈ ಹಿಂದೆ ತೇಪೆ ಹಾಕಿ ಮುಚ್ಚಿದ್ದ ಗುಂಡಿಗಳು ಬಾಯ್ತೆರೆದು, ವಾಹನ ಸಂಚಾರಕ್ಕೆ ಅಪಾಯ ಕಾರಿಯಾಗಿ ಪರಿಣಮಿಸುತ್ತಿವೆ. ಚುನಾವಣೆ ಹತ್ತಿರವಾಗುತ್ತಿದ್ದಂತೆ ಮೈಸೂರಿನಲ್ಲಿ ರಸ್ತೆ ಅಭಿವೃದ್ಧಿ ಕಾರ್ಯ ಗರಿಗೆದರಿತ್ತು. ಕೆಲ ಪ್ರಮುಖ ರಸ್ತೆಗಳಿಗೆ ಡಾಂಬರೀಕರಣ ಮಾಡಿದರೆ ಮತ್ತಷ್ಟು ರಸ್ತೆಗಳಲ್ಲಿ ಗುಂಡಿಗಳನ್ನು ಮಾತ್ರ ಮುಚ್ಚಿ ತೇಪೆ ಹಾಕಲಾಗಿತ್ತು. ಈ ರೀತಿಯ ತರಾ ತುರಿ ಕಾಮಗಾರಿಯೂ ಸಂಪೂರ್ಣ ವಾಗದ ಕಾರಣ ಹಲವಾರು ಗುಂಡಿಗಳಿಗೆ ಡಾಂಬರು ಬದಲಾಗಿ ಮಣ್ಣು ಮುಚ್ಚ ಲಾಗಿದೆ. ವಾರದಿಂದ ನಿರಂತರವಾಗಿ…

100 ವರ್ಷವಾದರೂ ಜೆಡಿಎಸ್‍ಗೆ ಬಹುಮತ ಬರಲ್ಲ: ಶ್ರೀರಾಮುಲು
ಮೈಸೂರು

100 ವರ್ಷವಾದರೂ ಜೆಡಿಎಸ್‍ಗೆ ಬಹುಮತ ಬರಲ್ಲ: ಶ್ರೀರಾಮುಲು

May 29, 2018

ಕೊಪ್ಪಳ: ಜಾತ್ಯಾತೀತ ಜನತಾ ದಳಕ್ಕೆ 100 ವರ್ಷ ಆದರೂ ಬಹು ಮತ ಬರಲ್ಲ. ಬೇಕಾದರೆ ಇದನ್ನು ಬರೆದಿಟ್ಟುಕೊಳ್ಳಿ ಎಂದು ಬಿಜೆಪಿ ಮುಖಂಡ ಹಾಗೂ ಮೊಳಕಾಲ್ಮೂರು ಶಾಸಕ ಬಿ.ಶ್ರೀರಾಮುಲು ಮಾಧ್ಯಮದವರಿಗೆ ತಿಳಿಸಿದ್ದಾರೆ. ಅಧಿಕಾರ ಇದೆ ಎಂದು ಪೊಲೀಸರನ್ನು ಬಳಸಿ ಕೊಂಡು ಬಿಜೆಪಿ ಕಾರ್ಯಕರ್ತರ ಮೇಲೆ ದೌರ್ಜನ್ಯ ನಡೆಸಲಾಗುತ್ತಿದೆ. ಈ ಸರ್ಕಾರ ಬಹಳ ದಿನ ಇರಲ್ಲ. ಸದ್ಯದಲ್ಲೇ ಬಿದ್ದುಹೋಗುತ್ತದೆ. ಬಿ.ಎಸ್.ಯಡಿಯೂರಪ್ಪ ಅವರು ಸದ್ಯದಲ್ಲೇ ಮುಖ್ಯಮಂತ್ರಿ ಯಾಗುವುದು ಶತಸಿದ್ಧ ಎಂದು ಶ್ರೀರಾಮುಲು ಅಭಿಪ್ರಾಯಪಟ್ಟರು.

ವ್ಯಾಪಾರಿಯ 1.80 ಲಕ್ಷ ಹಣವಿದ್ದ ಬ್ಯಾಗ್ ಕಳವು
ಮೈಸೂರು

ವ್ಯಾಪಾರಿಯ 1.80 ಲಕ್ಷ ಹಣವಿದ್ದ ಬ್ಯಾಗ್ ಕಳವು

May 29, 2018

ಮೈಸೂರು: ವ್ಯಾಪಾರಿಯೊಬ್ಬರು ತಮ್ಮ ಮನೆಯ ಮುಂಭಾಗದ ಕಾಂಪೌಂಡ್ ಮೇಲೆ 1.80 ಲಕ್ಷ ರೂ. ಇಟ್ಟಿದ್ದ ಬ್ಯಾಗನ್ನು ಅಪರಿಚಿತ ವ್ಯಕ್ತಿಗಳು ಕದ್ದು, ಪರಾರಿಯಾಗಿರುವ ಘಟನೆ ಲಕ್ಷ್ಮೀಪುರಂ 2ನೇ ಮುಖ್ಯ ರಸ್ತೆಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಲಕ್ಷ್ಮೀಪುರಂ ನಿವಾಸಿ ಸದಾಶಿವ 1.80 ಲಕ್ಷ ರೂ. ಇದ್ದ ಬ್ಯಾಗ್ ಕಳೆದು ಕೊಂಡವರು. ಮೇ 26 ರಂದು ಸದಾಶಿವ ಅವರು ಎಂದಿನಂತೆ ವ್ಯಾಪಾರ ಮುಗಿಸಿ ಲಕ್ಷಾಂತರ ರೂ.ಗಳನ್ನು ಬ್ಯಾಗ್‍ನಲ್ಲಿಟ್ಟು ಕೊಂಡು ಲಕ್ಷ್ಮೀಪುರಂನ ತಮ್ಮ ನಿವಾಸಕ್ಕೆ ರಾತ್ರಿ 9.20ಕ್ಕೆ ಕಾರಿನಲ್ಲಿ ಬಂದಿದ್ದಾರೆ. ಸದಾಶಿವ, ತಮ್ಮ…

ಟೆಲಿವಿಷನ್ ಜರ್ನಲಿಸಂ/ಕ್ಯಾಮರಾಮ್ಯಾನ್ ತರಬೇತಿ: ಅರ್ಜಿ ಆಹ್ವಾನ
ಮೈಸೂರು

ಟೆಲಿವಿಷನ್ ಜರ್ನಲಿಸಂ/ಕ್ಯಾಮರಾಮ್ಯಾನ್ ತರಬೇತಿ: ಅರ್ಜಿ ಆಹ್ವಾನ

May 29, 2018

ಮೈಸೂರು:  ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ವತಿಯಿಂದ ಅನುಷ್ಠಾನಗೊಳಿಸುವ ಟೆಲಿವಿಷನ್ ಜರ್ನಲಿಸಂ/ಕ್ಯಾಮರಾಮ್ಯಾನ್ ತರಬೇತಿಗೆ 2018-19ನೇ ಸಾಲಿನಲ್ಲಿ ಅರ್ಹ ಪರಿಶಿಷ್ಟ ಜಾತಿಯ ಫಲಾಪೇಕ್ಷಿಗಳಿಂದ ಅರ್ಜಿ ಆಹ್ವಾನಿಸಿದೆ. ಈ ಹಿಂದೆ ತರಬೇತಿ ಪಡೆದವರು ಮತ್ತೊಮ್ಮೆ ತರಬೇತಿ ಪಡೆಯಲು ಅರ್ಹರಿರುವುದಿಲ್ಲ. ಟೆಲಿವಿಷನ್ ಜರ್ನಲಿಸಂ ತರಬೇತಿಗೆ ಕನಿಷ್ಠ ಪದವಿ ಮತ್ತು ಕ್ಯಾಮರಾಮ್ಯಾನ್ ತರಬೇತಿಗೆ ಕನಿಷ್ಠ ಎಸ್‍ಎಸ್‍ಎಲ್‍ಸಿ ಉತ್ತೀರ್ಣವಾಗಿರಬೇಕು. ವಿದ್ಯಾರ್ಹತೆಗೆ ಸಂಬಂಧಿಸಿದಂತೆ ಅಂಕಪಟ್ಟಿಯನ್ನು ದೃಢೀಕರಿಸಿ ಪ್ರತಿ ಲಗತ್ತಿಸಬೇಕು. ಅರ್ಜಿ ಸಲ್ಲಿಸುವವರು ದಿನಾಂಕ 1.4.2018ಕ್ಕೆ 18 ವರ್ಷ ಆಗಿರಬೇಕು. ಗರಿಷ್ಠ 28 ವರ್ಷ ಮೀರಿರಬಾರದು. ನಿಗದಿತ ಅರ್ಜಿಯನ್ನು…

ಅತಿಥಿ ಶಿಕ್ಷಕರ ಅರ್ಜಿ ಆಹ್ವಾನ ಪ್ರಕ್ರಿಯೆ ಸ್ಥಗಿತ
ಮೈಸೂರು

ಅತಿಥಿ ಶಿಕ್ಷಕರ ಅರ್ಜಿ ಆಹ್ವಾನ ಪ್ರಕ್ರಿಯೆ ಸ್ಥಗಿತ

May 29, 2018

ಮೈಸೂರು: ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಗೆ ಒಳಪಡುವ ಮೊರಾರ್ಜಿ ದೇಸಾಯಿ/ಕಿತ್ತೂರು ರಾಣ ಚೆನ್ನಮ್ಮ/ಅಂಬೇಡ್ಕರ್ ವಸತಿ ಶಾಲೆ/ಇಂದಿರಾ ಗಾಂಧಿ ವಸತಿ ಶಾಲೆ/ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆಗಳಿಗೆ ಕನ್ನಡ, ಇಂಗ್ಲೀಷ್, ಹಿಂದಿ ಗಣ ತ, ವಿಜ್ಞಾನ(ಸಿ.ಬಿ.ಝಡ್), ದೈಹಿಕ ಶಿಕ್ಷಣ ಶಿಕ್ಷಕ ಹುದ್ದೆಗಳಿಗಾಗಿ ಅತಿಥಿ ಶಿಕ್ಷಕರನ್ನು ಪಡೆಯಲು ಅರ್ಜಿ ಆಹ್ವಾನಿಸಲಾಗಿತ್ತು. ಮಾನ್ಯ ಉಚ್ಛ ನ್ಯಾಯಾಲಯದ ತಡೆಯಾಜ್ಞೆ ಇರುವುದರಿಂದ ಅತಿಥಿ ಶಿಕ್ಷಕರ ಅರ್ಜಿ ಆಹ್ವಾನ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲಾಗಿದೆ.

ತಂಬಾಕು ರಹಿತ ದಿನಾಚರಣೆ
ಮೈಸೂರು

ತಂಬಾಕು ರಹಿತ ದಿನಾಚರಣೆ

May 29, 2018

ಮೈಸೂರು:  ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಮೇ 31ರಂದು ಬೆಳಿಗ್ಗೆ 9.30ಕ್ಕೆ ಅರಮನೆ ಆವರಣ ದಲ್ಲಿರುವ ಶ್ರೀ ಕೋಟೆಆಂಜನೇಯಸ್ವಾಮಿ ದೇವಸ್ಥಾನದ ಮುಂಭಾಗದಿಂದ ವಿಶ್ವ ತಂಬಾಕು ರಹಿತ ದಿನಾಚರಣೆ ಅಂಗವಾಗಿ ಜಾಥಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳ ಲಾಗಿದೆ. ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಂ. ಪಶುಪತಿ ಅಧ್ಯಕ್ಷತೆ ವಹಿಸುವರು.

ಮಹಿಳೆಗೆ ರೇಗಿಸುತ್ತಿದ್ದ ಆರೋಪ: ಪಾಲಿಕೆ ಕಚೇರಿಯಲ್ಲಿ ಯುವಕನಿಗೆ ಸಾರ್ವಜನಿಕರ ಗೂಸ
ಮೈಸೂರು

ಮಹಿಳೆಗೆ ರೇಗಿಸುತ್ತಿದ್ದ ಆರೋಪ: ಪಾಲಿಕೆ ಕಚೇರಿಯಲ್ಲಿ ಯುವಕನಿಗೆ ಸಾರ್ವಜನಿಕರ ಗೂಸ

May 29, 2018

ಮೈಸೂರು: ಮಹಿಳೆಯೊಬ್ಬರಿಗೆ ರೇಗಿಸುತ್ತಿದ್ದನೆಂಬ ಆರೋಪದ ಹಿನ್ನೆಲೆಯಲ್ಲಿ ಯುವಕನೊಬ್ಬನಿಗೆ ಸಾರ್ವಜನಿಕರು ಹಿಗ್ಗಾ-ಮುಗ್ಗಾ ಥಳಿಸಿದ ಘಟನೆ ಮೈಸೂರಿನ ಮಹಾನಗರ ಪಾಲಿಕೆ ಕಚೇರಿ ಆವರಣದಲ್ಲಿ ಇಂದು ಮಧ್ಯಾಹ್ನ ಸಂಭವಿಸಿದೆ. ಚಾಮುಂಡಿಬೆಟ್ಟದ ತಪ್ಪಲಿನಲ್ಲಿ ಅಂಗಡಿ ನಡೆಸುತ್ತಿದ್ದ ಮಹಿಳೆಯನ್ನು ರೇಗಿಸುತ್ತಿದ್ದ ಈತ, ಆಕೆ ಪತಿಯ ಕಣ ್ಣಗೆ ಇಂದು ಮಧ್ಯಾಹ್ನ ಪಾಲಿಕೆ ಕಚೇರಿ ಆವರಣದಲ್ಲಿ ಬಿದ್ದ. ತಕ್ಷಣ ಅವನನ್ನು ಹಿಡಿದು ಥಳಿಸಲಾರಂಭಿಸುತ್ತಿದ್ದಂತೆಯೇ ವಿಷಯ ತಿಳಿದು, ಸಾರ್ವಜನಿಕರೂ ಸುತ್ತುವರಿದು ಗೂಸಾ ಕೊಡಲಾರಂಭಿಸಿದರು. ಕಡೆಗೆ ಆತನನ್ನು ರಕ್ಷಿಸಿದ ಕೆಲವರು, ತಾನು ಮಾಡಿದ ತಪ್ಪಿಗೆ ಕ್ಷಮೆ ಯಾಚಿಸಿದ ಕಾರಣ…

ಕೇರಳದಲ್ಲಿ ನಿಫಾ ರುದ್ರ ನರ್ತನ: ಮೈಸೂರಿನಲ್ಲಿ ಗರಿಗೆದರಿದ ಪ್ರವಾಸೋದ್ಯಮ
ಮೈಸೂರು

ಕೇರಳದಲ್ಲಿ ನಿಫಾ ರುದ್ರ ನರ್ತನ: ಮೈಸೂರಿನಲ್ಲಿ ಗರಿಗೆದರಿದ ಪ್ರವಾಸೋದ್ಯಮ

May 28, 2018

ಮೈಸೂರು:  ಕೇರಳದಲ್ಲಿ ನಿಫಾ ವೈರಾಣುವಿನ ರುದ್ರ ನರ್ತನದಿಂದಾಗಿ 15ಕ್ಕೂ ಹೆಚ್ಚು ಮಂದಿ ಮೃತಪಟ್ಟಿರುವ ಹಿನ್ನೆಲೆಯಲ್ಲಿ ಮೈಸೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳು ಹಾಗೂ ವಿವಿಧ ರಾಜ್ಯಗಳ ಪ್ರವಾಸಿಗರು ಕೇರಳಕ್ಕೆ ಹೋಗುವುದನ್ನು ಮೊಟಕುಗೊಳಿಸಿ, ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ವಾಸ್ತವ್ಯ ಹೂಡುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಪ್ರವಾಸಿ ತಾಣಗಳು ಗಿಜಿಗುಡುತ್ತಿವೆ. ಪ್ರವಾಸಿಗರಿಗೆ ಅಚ್ಚುಮೆಚ್ಚಿನ ತಾಣವಾಗಿರುವ ಕೇರಳಕ್ಕೆ ಹೋಗುವ ಪ್ರವಾಸಿಗರಿಗೆ ನಿಫಾ ವೈರಸ್ ಕಂಟಕವಾಗಿ ಕಾಡಲಾರಂಭಿಸಿದ್ದು, ಕೇರಳಕ್ಕೆ ಬರದಂತೆ ತಡೆಯೊಡ್ಡಿದೆ. ಕಳೆದ ಮೂರ್ನಾಲ್ಕು ತಿಂಗಳ ಹಿಂದೆಯೇ ಆನ್‍ಲೈನ್ ಮೂಲಕ ಬುಕ್ ಮಾಡಿದ್ದ ವಿವಿಧ…

ಚಾಮುಂಡಿಬೆಟ್ಟದಲ್ಲಿ ಪಾಳುಬಿದ್ದಿದ್ದ ಪುರಾತನ ಕಲ್ಯಾಣ ಗೆ ಯುವ ಬ್ರಿಗೇಡ್‍ನಿಂದ ಕಾಯಕಲ್ಪ
ಮೈಸೂರು

ಚಾಮುಂಡಿಬೆಟ್ಟದಲ್ಲಿ ಪಾಳುಬಿದ್ದಿದ್ದ ಪುರಾತನ ಕಲ್ಯಾಣ ಗೆ ಯುವ ಬ್ರಿಗೇಡ್‍ನಿಂದ ಕಾಯಕಲ್ಪ

May 28, 2018

ಕೊಳಚೆ ನೀರು, ಹೂಳು, ಕೊಳೆತು ನಾರುತ್ತಿದ್ದ ಕೋತಿಗಳ ಮೃತದೇಹದ ಅವಶೇಷ ತೆಗೆದರು… ಮೈಸೂರು: ಗಿಡಿಗಂಟಿಗಳು ಬೆಳೆದು ಬಳಕೆಯಾಗದೆ ಪಾಳು ಬಿದ್ದಿದ್ದ ಪುರಾತನ ಕಲ್ಯಾಣ ಯಲ್ಲಿ ಸ್ವಚ್ಛತಾ ಕಾರ್ಯ ಕೈಗೊಳ್ಳುವ ಮೂಲಕ ಯುವ ಬ್ರಿಗೇಡ್‍ನ ನೂರಾರು ಯುವಕರು ಸ್ವಯಂಪ್ರೇರಿತರಾಗಿ ಕಲ್ಯಾಣ ಗೆ ಕಾಯಕಲ್ಪ ನೀಡಿ ಸುಂದರಗೊಳಿಸಿದ್ದಾರೆ. ಅದು ಸಾರ್ವಜನಿಕರ ಬಳಕೆಗೆ ಸಿಗುವಂತೆ ಮಾಡುವಲ್ಲಿ ಸಫಲರಾಗಿದ್ದಾರೆ. ಮೈಸೂರಿನ ಚಾಮುಂಡಿಬೆಟ್ಟದಲ್ಲಿ ದೇವಿಕೆರೆ ಬಳಿಯ ಶ್ರೀ ಚಿತ್ತಲಾಂಬ ಸಮೇತ ಶ್ರೀ ಚಿದಂಬರೇಶ್ವರಸ್ವಾಮಿ ದೇವಾಲಯದ ಆವರಣದಲ್ಲಿರುವ ಕಲ್ಯಾಣ ಕೊಳ ಜೀವಜಲದಿಂದ ತುಂಬಿ ಒಂದು ಕಾಲದಲ್ಲಿ…

ರೈತರ ಸಾಲ ಮನ್ನಾ ಮಾಡಲು ಒತ್ತಾಯಿಸಿ ಇಂದು ಸ್ವಯಂ ಪ್ರೇರಿತ ರಾಜ್ಯ ಬಂದ್‍ಗೆ ಕರೆ ನೀಡಿದ ಬಿಜೆಪಿ: ಮೈಸೂರಲ್ಲಿ ಬಂದ್‍ಗೆ ಬೆಂಬಲ ಡೌಟು
ಮೈಸೂರು

ರೈತರ ಸಾಲ ಮನ್ನಾ ಮಾಡಲು ಒತ್ತಾಯಿಸಿ ಇಂದು ಸ್ವಯಂ ಪ್ರೇರಿತ ರಾಜ್ಯ ಬಂದ್‍ಗೆ ಕರೆ ನೀಡಿದ ಬಿಜೆಪಿ: ಮೈಸೂರಲ್ಲಿ ಬಂದ್‍ಗೆ ಬೆಂಬಲ ಡೌಟು

May 28, 2018

ಮೈಸೂರು: ರೈತರ ಸಾಲ ಮನ್ನಾ ಮಾಡಬೇಕೆಂದು ಆಗ್ರಹಿಸಿ ಮೇ 28ರಂದು ಬಿಜೆಪಿ ಕರೆ ನೀಡಿರುವ ರಾಜ್ಯಾದ್ಯಂತ ಸ್ವಯಂ ಪ್ರೇರಿತ ಬಂದ್‍ಗೆ ಮೈಸೂರು ನಗರದಲ್ಲಿ ಬೆಂಬಲ ದೊರೆಯುವುದು ಬಹುತೇಕ ಅನುಮಾನವಾಗಿದ್ದು, ಹೀಗಾಗಿ ದೈನಂದಿನ ಚಟುವಟಿಕೆಗಳು ಎಂದಿನಂತೆ ನಡೆಯುವ ಸಾಧ್ಯತೆ ಇದೆ. ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ರಾಜ್ಯ ಕಬ್ಬು ಬೆಳೆಗಾರರ ಸಂಘ ಬಂದ್‍ಗೆ ಬೆಂಬಲ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದು, ಒಂದೆಡೆ ರೈತ ಸಂಘಟನೆಗಳೇ ಬಂದ್‍ನಿಂದ ಹಿಂದೆ ಸರಿದಿದ್ದು, ಮೈಸೂರು ಹೋಟೆಲ್ ಮಾಲೀಕರ ಸಂಘ ಸೇರಿದಂತೆ…

1 1,584 1,585 1,586 1,587 1,588 1,611
Translate »