ಮೈಸೂರು: ಮಹಿಳೆಯೊಬ್ಬರಿಗೆ ರೇಗಿಸುತ್ತಿದ್ದನೆಂಬ ಆರೋಪದ ಹಿನ್ನೆಲೆಯಲ್ಲಿ ಯುವಕನೊಬ್ಬನಿಗೆ ಸಾರ್ವಜನಿಕರು ಹಿಗ್ಗಾ-ಮುಗ್ಗಾ ಥಳಿಸಿದ ಘಟನೆ ಮೈಸೂರಿನ ಮಹಾನಗರ ಪಾಲಿಕೆ ಕಚೇರಿ ಆವರಣದಲ್ಲಿ ಇಂದು ಮಧ್ಯಾಹ್ನ ಸಂಭವಿಸಿದೆ.
ಚಾಮುಂಡಿಬೆಟ್ಟದ ತಪ್ಪಲಿನಲ್ಲಿ ಅಂಗಡಿ ನಡೆಸುತ್ತಿದ್ದ ಮಹಿಳೆಯನ್ನು ರೇಗಿಸುತ್ತಿದ್ದ ಈತ, ಆಕೆ ಪತಿಯ ಕಣ ್ಣಗೆ ಇಂದು ಮಧ್ಯಾಹ್ನ ಪಾಲಿಕೆ ಕಚೇರಿ ಆವರಣದಲ್ಲಿ ಬಿದ್ದ.
ತಕ್ಷಣ ಅವನನ್ನು ಹಿಡಿದು ಥಳಿಸಲಾರಂಭಿಸುತ್ತಿದ್ದಂತೆಯೇ ವಿಷಯ ತಿಳಿದು, ಸಾರ್ವಜನಿಕರೂ ಸುತ್ತುವರಿದು ಗೂಸಾ ಕೊಡಲಾರಂಭಿಸಿದರು. ಕಡೆಗೆ ಆತನನ್ನು ರಕ್ಷಿಸಿದ ಕೆಲವರು, ತಾನು ಮಾಡಿದ ತಪ್ಪಿಗೆ ಕ್ಷಮೆ ಯಾಚಿಸಿದ ಕಾರಣ ಅವನನ್ನು ಬಿಟ್ಟು ಕಳುಹಿಸಿದರು.
ಈ ಸಂಬಂಧ ಪೊಲೀಸರಿಗೆ ಮಾಹಿತಿಯನ್ನೂ ನೀಡದ ಕಾರಣ ಪ್ರಕರಣ ದಾಖಲಾಗಿಲ್ಲ. ಸುಮಾರು ಅರ್ಧ ತಾಸು ಪಾಲಿಕೆ ಕಚೇರಿ ಆವರಣದಲ್ಲಿ ಹಲವರಿಗೆ ಪುಕ್ಕಟೆ ಮನರಂಜನೆ ದೊರೆಯಿತು.