ಕುಶಾಲನಗರದಲ್ಲಿ ವ್ಯಕ್ತಿ ಅನುಮಾನಾಸ್ಪದ ಸಾವು
ಕೊಡಗು

ಕುಶಾಲನಗರದಲ್ಲಿ ವ್ಯಕ್ತಿ ಅನುಮಾನಾಸ್ಪದ ಸಾವು

May 29, 2018

ಕುಶಾಲನಗರ: ಇಲ್ಲಿನ ಬಿಎಂ ರಸ್ತೆಯ ಮನೆ ಯೊಂದರ ಶೌಚಗೃಹದಲ್ಲಿ ವ್ಯಕ್ತಿಯೋರ್ವ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ.

ಮೃತನನ್ನು ವಾಲ್ನೂರು ತ್ಯಾಗತ್ತೂರು ನಿವಾಸಿ ಸೈದಲವಿ ಎಂಬುವವರ ಮಗ ಸಮದ್(36) ಎಂದು ಗುರುತಿಸಲಾಗಿದೆ. ಕಳೆದ ನಾಲ್ಕೈದು ತಿಂಗಳಿನಿಂದ ಈತ ಇಲ್ಲಿ ವಾಸವಾಗಿದ್ದ. ಟಿಂಬರ್ ವ್ಯಾಪಾರಿಯಾಗಿದ್ದ ಸಮದ್ ತನ್ನ ವ್ಯಾಪಾರಕ್ಕೋಸ್ಕರ ಕುಶಾಲ ನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದ. ಮೇ 22ಕ್ಕೆ ಈತನ ಮೊಬೈಲ್‍ನಲ್ಲಿ ಕೊನೆಯ ಕರೆ ದಾಖಲಾಗಿರುವುದು ಕಂದುಬಂದಿದ್ದು, ಅಂದೇ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.

ಈತನಿದ್ದ ಮನೆಯ ಬಳಿಯಲ್ಲಿ ಭಾನುವಾರ ದುರ್ವಾಸನೆ ಬರುತ್ತಿದ್ದ ಹಿನ್ನೆಲೆಯಲ್ಲಿ ಪೊಲೀಸರಿಗೆ ಸ್ಥಳೀಯರು ಮಾಹಿತಿ ನೀಡಿದ್ದರು. ಸ್ಥಳಕ್ಕಾಗಮಿಸಿದ ಕುಶಾಲನಗರ ಠಾಣಾಧಿಕಾರಿ ಹೆಚ್.ಕೆ. ಜಗದೀಶ್ ಮತ್ತು ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದ ವೇಳೆ ಮನೆಯ ಬಾಗಿಲು ತೆರೆದೇ ಇತ್ತು. ಶೌಚಗೃಹದಲ್ಲಿ ದೇಹಕೊಳೆತ ಸ್ಥಿತಿಯಲ್ಲಿದ್ದು. ಶವವನ್ನು ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರಕ್ಕೆ ಸಾಗಿಸಿ ಮರಣೋತ್ತರ ಪರೀಕ್ಷೆಯ ನಂತರ ಕುಟುಂಬವರ್ಗಕ್ಕೆ ಮೃತದೇಹ ಹಸ್ತಾಂತರಿಸಲಾಯಿತು.

Translate »