ಯೋಗಾನರಸಿಂಹಸ್ವಾಮಿಗೆ ಸೌರಮಾನ ಜಯಂತ್ಯುತ್ಸವ
ಮಂಡ್ಯ

ಯೋಗಾನರಸಿಂಹಸ್ವಾಮಿಗೆ ಸೌರಮಾನ ಜಯಂತ್ಯುತ್ಸವ

May 29, 2018

ಮೇಲುಕೋಟೆ: ಪ್ರಖ್ಯಾತ ನಾರಸಿಂಹನ ಕ್ಷೇತ್ರವಾದ ಮೇಲುಕೋಟೆಯ ಬೆಟ್ಟದ ಯೋಗಾನರಸಿಂಹಸ್ವಾಮಿ ದೇವಾ ಲಯದಲ್ಲಿ ಸೋಮವಾರ ಸೌರಮಾನ ನರಸಿಂಹ ಜಯಂತ್ಯುತ್ಸವ ಸಡಗರ ಸಂಭ್ರಮದಿಂದ ನಡೆಯಿತು.

ಬೆಳಿಗ್ಗೆ 10 ಗಂಟೆಗೆ ಮಹಾಭಿಷೇಕ ದೊಂದಿಗೆ ಆರಂಭವಾದ ನರಸಿಂಹಸ್ವಾಮಿ ಜಯಂತಿ ಕಾರ್ಯಕ್ರಮ ಸಂಜೆ 6 ಗಂಟೆಗೆ ಮುಕ್ತಾಯವಾಯಿತು. 12 ಮಂದಿ ಶ್ರೀವೈಷ್ಣವ ಆಳ್ವಾರ್‍ಗಳಲ್ಲಿ ಪ್ರಮುಖರಾದ ನಮ್ಮಾಳ್ವಾರ್ ತಿರುನಕ್ಷತ್ರ ಮಹೋತ್ಸವ ಸಹ ಇದೇ ದಿನ ಇದ್ದ ಕಾರಣ ಆಳ್ವಾರರಿಗೆ ಬೆಳಿಗ್ಗೆ ವಾಹನೋ ತ್ಸವ, ಅಭಿಷೇಕ, ನಡೆದು ದಿವ್ಯ ಪ್ರಬಂಧ ಪಾರಾಯಣ ನಂತರ ನರಸಿಂಹಸ್ವಾಮಿ ಬೆಟ್ಟದಲ್ಲಿ ವಿಶೇಷ ಮಹಾಮಂಗಳಾರತಿ ಶಾತ್ತುಮೊರೈ ಕಾರ್ಯಕ್ರಮಗಳು ನಡೆದವು. ನರಸಿಂಹನ ಆಲಯದ ಒಳಭಾಗವನ್ನು ತಳಿರು ತೋರಣ ಹಾಗೂ ವೈವಿಧ್ಯಮಯ ಪುಷ್ಪಗಳಿಂದ ಅಲಂಕರಿಸಲಾಗಿತ್ತು. ಯೋಗಾನರಸಿಂಹಸ್ವಾಮಿ ಕೈಂಕರ್ಯಾ ಭಿವರ್ದಿನಿ ಸಭಾ ಸ್ಥಾನೀಕಂ ತಿರುಮಲೈ ನೇತೃತ್ವದಲ್ಲಿ ಹಲವು ಸೇವೆ ನಡೆದರೇ ಗ್ರಾಪಂ ಸದಸ್ಯ ಅವ್ವಗಂಗಾಧರ್, ಬಾಲ ಕೃಷ್ಣ ಪಾರ್ಥ, ಬಸವ, ರವಿ ಮತ್ತಿತರರು ಪುಳಿಯೋಗರೆ, ಪಾನಕ, ಕೋಸಂಬರಿ ಯನ್ನು ಭಕ್ತರಿಗೆ ವಿತರಿಸಿದರು. ನರಸಿಂಹ ಜಯಂತಿ ಅಂಗವಾಗಿ ಸಂಜೆ ಕಲ್ಯಾಣ ತಟದಲ್ಲಿ ಚೆಲುವನಾರಾಯಣಸ್ವಾಮಿಗೆ ನೃಸಿಂಹಾವತಾರ ಉತ್ಸವ ವೈಭವದಿಂದ ನೆರವೇರಿತು.

Translate »