ಕರ್ನಾಟಕ ನವನಿರ್ಮಾಣ ಸೇನೆ ಪ್ರತಿಭಟನೆ
ಮಂಡ್ಯ

ಕರ್ನಾಟಕ ನವನಿರ್ಮಾಣ ಸೇನೆ ಪ್ರತಿಭಟನೆ

May 29, 2018

ಮಂಡ್ಯ: ಕೇರಳ ಸರ್ಕಾರ ಕಾಸರಗೋಡಿನಲ್ಲಿ ವಿನಾಕಾರಣ ಮಲೆ ಯಾಳಂ ಭಾಷಾ ಮಸೂದೆ ಜಾರಿಗೆ ತಂದು ಕನ್ನಡ ಶಾಲೆಯ ಮಕ್ಕಳು ಬಲವಂತವಾಗಿ ಮಲೆಯಾಳಂ ಕಲಿಯಲು ಒತ್ತಾಯಿಸು ತ್ತಿರುವ ಕ್ರಮ ಖಂಡಿಸಿ ಕರ್ನಾಟಕ ನವ ನಿರ್ಮಾಣ ಸೇನೆ ಕಾರ್ಯಕರ್ತರು ನಗರದ ಲ್ಲಿಂದು ಪ್ರತಿಭಟನೆ ನಡೆಸಿದರು.

ಇಂದು ಬೆಳಿಗ್ಗೆ ನಗರದ ಸರ್.ಎಂ.ವಿಶ್ವೇ ಶ್ವರಯ್ಯ ಪ್ರತಿಮೆ ಬಳಿ ಸಮಾವೇಶಗೊಂಡ ಪ್ರತಿಭಟನಾಕಾರರು, ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.

ಜಿಲ್ಲಾಧ್ಯಕ್ಷ ನವೀನ್‍ಗೌಡ ಮಾತನಾಡಿ, ಕಾಸರಗೋಡು ಕನ್ನಡಿಗರು ನಿತ್ಯ ನರಕ ಅನುಭವಿಸುತ್ತಿದ್ದಾರೆ. ಕಳೆದ 75 ವರ್ಷ ಗಳಿಂದ ಕಾಸರಗೋಡಿನಲ್ಲಿರುವ ಕನ್ನಡಿ ಗರು ಕನ್ನಡವನ್ನೇ ಉಸಿರನ್ನಾಗಿಸಿಕೊಂಡು ಬದುಕು ನಡೆಸುತ್ತಿದ್ದಾರೆ. ಅವರ ಬದುಕು, ಭಾವನೆ ಎಲ್ಲವೂ ಸಹ ಕನ್ನಡವೇ ಆಗಿದೆ. ಇಂತಹ ಭಾವನಾತ್ಮಕವಾಗಿರುವ ಜನರ ಶಿಕ್ಷಣ ಮಾಧ್ಯವನ್ನೇ ಕೇರಳ ಸರ್ಕಾರ ಮಲೆಯಾಳಂ ಭಾಷಾ ಹೆಸರಿನಲ್ಲಿ ಕಿತ್ತು ಕೊಳ್ಳಲು ಹವಣ ಸುತ್ತಿರುವುದು ನಿಜಕ್ಕೂ ನೋವಿನ ಸಂಗತಿ ಎಂದು ದೂರಿದರು.

ಮಹಾಜನ್ ವರದಿಯನ್ವಯ ಈಗ ಕೇರಳ ರಾಜ್ಯದ ಸುಪರ್ದಿಯಲ್ಲಿನ ಕಾಸರಗೋಡು ಕರ್ನಾಟಕ್ಕೆ ಸೇರಬೇಕು. ಕಾಸರಗೋಡು ಮೂಲ ನಿವಾಸಿಗಳು ಕನ್ನಡಿಗರು. ಅವರು ವಲಸೆ ಬಂದವರಲ್ಲ, ಅಲ್ಲಿನ ಒಟ್ಟು ಜನ ಸಂಖ್ಯೆಯ ಶೇ. 95ರಷ್ಟು ಜನರ ಮಾತೃ ಭಾಷೆ ಕನ್ನಡವೇ ಆಗಿದೆ. ಅವರು ತಮ್ಮ ನಿತ್ಯದ ವ್ಯವಹಾರ ಕನ್ನಡದಲ್ಲೇ ಮಾಡುತ್ತಿ ದ್ದಾರೆ. ಅವರ ಮಕ್ಕಳು ಕನ್ನಡ ಶಾಲೆ ಗಳಲ್ಲೇ ಶಿಕ್ಷಣ ಪಡೆಯುತ್ತಿದ್ದಾರೆ, ಆದರೆ ಕೇರಳ ಸರ್ಕಾರ ಕೇರಳ ರಾಜ್ಯಾಧ್ಯಂತ ಮಲೆಯಾಳಂ ಭಾಷಾ ಮಸೂದೆ ಜಾರಿಗೆ ತರುವ ನಿರ್ಣಯ ತೆಗೆದುಕೊಂಡಿದೆ. ಇದು ಕಾಸರಗೋಡಿನ ನೂರಾರು ಕನ್ನಡ ಶಾಲೆಗಳ ಮೇಲೆ ತುಂಬಾ ಗಾಢವಾದ ಪರಿಣಾಮ ಬೀರಲಿದೆ. ಅಲ್ಲಿಯ ಮಕ್ಕಳು ಮಾತೃಭಾಷಾ ಶಿಕ್ಷಣದಿಂದ ವಂಚಿತರಾ ಗುತ್ತಾರೆ. ಈ ಕೂಡಲೇ ಮಹಾಜನ್ ವರದಿಯ ಅಂತಿಮ ತೀರ್ಪು ಬರುವವ ರೆವಿಗೂ ಮಲೆಯಾಳಂ ಭಾಷಾ ಮಸೂ ದೆಯಿಂದ ಸಂರ್ಪೂಣ ಕಾಸರಗೋಡು ಜಿಲ್ಲೆಯನ್ನು ಹೊರಗಿಡಬೇಕು ಎಂದು ಆಗ್ರಹಿಸಿದರು.

ಒಂದು ವೇಳೆ ಮಲೆಯಾಲಂ ಭಾಷಾ ಮಸೂದೆಯನ್ನು ಕಾಸರಗೋಡು ಜಿಲ್ಲೆ ಯಲ್ಲಿ ಮುಂದುವರಿಸಿz್ದÉೀ ಆದಲ್ಲಿ ತಿರು ವಂತಪುರಂನಲ್ಲಿರುವ ಕೇರಳ ಸರ್ಕಾರದ ಸೆಕ್ರೆಟರಿಯೇಟ್‍ಗೆ ಮುತ್ತಿಗೆ ಹಾಕಿ ಕೇರಳ ಸರ್ಕಾರದ ಕನ್ನಡ ವಿರೋಧಿ ನೀತಿಯನ್ನು ಖಂಡಿಸುವ ನಿರ್ಣಯ ತೆಗೆದುಕೊಳ್ಳ ಲಾಗುವುದು ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಮಹದೇವಸ್ವಾಮಿ, ದೇವರಾಜು, ಶೇಖರ್ ಮತ್ತಿತರರು ಇದ್ದರು.

Translate »