ಮಂಡ್ಯ

ಸಮ್ಮಿಶ್ರ ಸರ್ಕಾರ 5 ವರ್ಷ ಪೂರೈಸಲಿದೆ: ಎಚ್.ವಿಶ್ವನಾಥ್ ಭವಿಷ್ಯ

May 29, 2018

ಕೆ.ಆರ್.ಪೇಟೆ: ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ಯಶಸ್ವಿಯಾಗಿ ಐದು ವರ್ಷ ಪೂರೈಸಲಿದೆ ಎಂದು ಹುಣಸೂರು ಶಾಸಕ ಹೆಚ್. ವಿಶ್ವನಾಥ್ ಭವಿಷ್ಯ ನುಡಿದರು.

ತಾಲೂಕಿನ ಭೂವರಹನಾಥಸ್ವಾಮಿ ದೇವ ಸ್ಥಾನಕ್ಕೆ ದಂಪತಿ ಸಮೇತ ಆಗಮಿಸಿ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಕುಮಾರ ಸ್ವಾಮಿ ಅವರು ಪ್ರಣಾಳಿಕೆಯಲ್ಲಿ ಘೋಷಿಸಿರು ವಂತೆ ರೈತರ ಸಂಪೂರ್ಣ ಸಾಲ ಮನ್ನಾ ಮಾಡಲಿದ್ದಾರೆ. ಸಮ್ಮಿಶ್ರ ಸರ್ಕಾರವಾಗಿ ರುವುದರಿಂದ ಸಾಲ ಮನ್ನಾಕ್ಕೆ ಸಮಯ ತೆಗೆದುಕೊಳ್ಳಲಿದೆ. ವಿರೋಧ ಪಕ್ಷದ ನಾಯಕ ಮಾಜಿ ಸಿಎಂ ಯಡಿಯೂರಪ್ಪ ಹೋರಾಟ ಗಾರರು. ಅವರ ಬಗ್ಗೆ ಅಪಾರ ಗೌರವವಿದೆ. ಸರ್ಕಾರಕ್ಕೆ ಯಡಿಯೂರಪ್ಪ ಅವರ ಸಲಹೆ ಸೂಚನೆ ಮತ್ತು ಮಾರ್ಗದರ್ಶನ ಅಗತ್ಯ ಎಂದರು. ನಾನು ಈ ಸರ್ಕಾರದಲ್ಲಿ ಮಂತ್ರಿಯಾಗೋದು ಮುಖ್ಯವಲ್ಲ. ಜೆಡಿಎಸ್ ವರಿಷ್ಠ ದೇವೇಗೌಡ, ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ನನಗೆ ವಹಿಸುವ ಜವಾಬ್ದಾರಿಯನ್ನು ನಿರ್ವಹಿಸುವುದು ನನ್ನ ಕೆಲಸ. ಭೂವರಹನಾಥಸ್ವಾಮಿ ಸರ್ಕಾರಕ್ಕೆ ಜನಪರ ಆಡಳಿತ ನೀಡುವ ಶಕ್ತಿ ನೀಡಲಿ, ನಾಡಿನ ರೈತಾಪಿ ವರ್ಗದ ಬದುಕು ಹಸನಾಗಲಿ, ಸಮ್ಮಿಶ್ರ ಸರ್ಕಾರ ಸುಗುಮ ವಾಗಿ ನಡೆಯಲಿ ಎಂದು ಪ್ರಾರ್ಥಿಸಿದ್ದೇನೆ ಎಂದು ತಿಳಿಸಿದರು. ಪೂಜೆಯಲ್ಲಿ ವಿಶ್ವನಾಥ್ ಅವರ ಪತ್ನಿ ಶಾಂತಮ್ಮ ಸೇರಿದಂತೆ ಇತರರು ಭಾಗವಹಿಸಿದ್ದರು.

Translate »