ಮೈಸೂರು,ಡಿ.28(ಎಂಟಿವೈ)- ಮೈಸೂರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ನಿಲಯವೊಂದರಲ್ಲಿ ವಿದ್ಯಾರ್ಥಿಗಳಿಗೆ ಬಡಿಸಿದ ಉಪಾಹಾರದಲ್ಲಿ ಸತ್ತ ಇಲಿ ಪತ್ತೆ ಯಾದ ಹಿನ್ನೆಲೆಯಲ್ಲಿ ಹಾಸ್ಟೆಲ್ ವಿದ್ಯಾರ್ಥಿ ಗಳು ಮೈಸೂರು ಮಾನಸ ಗಂಗೋತ್ರಿಯ ಮುಖ್ಯದ್ವಾರ, ಕುವೆಂಪು ಪ್ರತಿಮೆ ಮುಂದೆ ಪ್ರತಿಭಟಿಸಿ ಆಕ್ರೋಶ ವ್ಯಕ್ತಪಡಿಸಿದರು. ಮಾನಸ ಗಂಗೋತ್ರಿಯ ಕ್ಯಾಂಪಸ್ ನಲ್ಲಿರುವ ಎ ಬ್ಲಾಕ್ ವಿದ್ಯಾರ್ಥಿನಿಲಯ ದಲ್ಲಿ ಬೆಳಗಿನ ಉಪಾಹಾರ ಬಡಿಸುವ ವೇಳೆ ವಿದ್ಯಾರ್ಥಿಯೊಬ್ಬರ ತಟ್ಟೆಯ ಉಪಾ ಹಾರದಲ್ಲಿ ಸತ್ತ ಇಲಿ ಪತ್ತೆಯಾಗಿದೆ. ಅಷ್ಟರ ಲ್ಲಾಗಲೇ ಕೆಲವು ವಿದ್ಯಾರ್ಥಿಗಳು ಉಪಾ ಹಾರ ಸೇವಿಸಿದ್ದರು. ಆಹಾರದಲ್ಲಿ ಇಲಿ ಪತ್ತೆಯಾದ…
ಗ್ರೇಡ್ ಸಪರೇಟರ್, ಫ್ಲೈಓವರ್ ಇಲ್ಲವೇ ಅಂಡರ್ ಪಾಸ್
December 29, 2022ಮೈಸೂರು, ಡಿ. 28(ಆರ್‍ಕೆ)- ವಾಹನ ದಟ್ಟಣೆ, ರಸ್ತೆ ಅಪಘಾತಗಳನ್ನು ತಪ್ಪಿಸಲು ಮೈಸೂರಿನ ರಿಂಗ್ ರಸ್ತೆಯ 4 ಬ್ಲಾಕ್‍ಸ್ಪಾಟ್ ಜಂಕ್ಷನ್‍ಗಳಲ್ಲಿ ಫ್ಲೈಓವರ್, ಗ್ರೇಡ್ ಸಪರೇಟರ್ ಅಥವಾ ರೋಡ್ ಅಂಡರ್‍ಪಾಸ್ ನಿರ್ಮಿಸಲಾಗುವುದು ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದ್ದಾರೆ. ಮುಡಾ ಅಧ್ಯಕ್ಷ ಯಶಸ್ವಿ ಎಸ್.ಸೋಮ ಶೇಖರ್, ಆಯುಕ್ತ ಜಿ.ಟಿ.ದಿನೇಶ್ ಕುಮಾರ್ ಹಾಗೂ ಅಧಿಕಾರಿಗಳೊಂದಿಗೆ ಇಂದು ರಿಂಗ್ ರಸ್ತೆಯ ಜಂಕ್ಷನ್‍ಗಳನ್ನು ಪರಿಶೀಲಿಸಿದ ಅವರು, ಅತೀ ಹೆಚ್ಚು ವಾಹನ ಸಂಚರಿಸುವ ಹಾಗೂ ಅಪಘಾತಗಳು ಸಂಭವಿಸುವ ವಿಜಯನಗರ 3 ಮತ್ತು 4ನೇ ಹಂತದ ಬಸವನಹಳ್ಳಿ…
ಜ.15ರೊಳಗೆ ಕಾಂಗ್ರೆಸ್ ಮೊದಲ ಪಟ್ಟಿ ಬಿಡುಗಡೆಗೆ ಹೈಕಮಾಂಡ್ ನಿರ್ಧಾರ
December 29, 2022ಮೈಸೂರು,ಡಿ.28(ಎಂಟಿವೈ)- ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿರುವ ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಜ.15ರೊಳಗೆ ಪ್ರಕಟಿಸಲು ಹೈಕಮಾಂಡ್ ನಿರ್ಧರಿಸಿದೆ ಎಂದು ಕಾಂಗ್ರೆಸ್ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ್ ತಿಳಿಸಿದ್ದಾರೆ. ಮೈಸೂರಲ್ಲಿ ಬುಧವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರು ವುದು ಖಚಿತ. ಕಾಂಗ್ರೆಸ್‍ಗೆ ಅಧಿಕಾರ ಒಲಿಯುವುದÀನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಬಿಜೆಪಿ ಸರ್ಕಾರದ ದುರಾಡಳಿತ, ಮಿತಿ ಮೀರಿದ ಭ್ರಷ್ಟಾಚಾರ, ನಾನಾ ಹಗರಣ, ಕೋಮು ಗಲಭೆ ಸೃಷ್ಟಿಸಲು ನಡೆಸಿದ ಸಂಚು, ದಲಿತರ ಮೇಲಿನ ದೌರ್ಜನ್ಯ ಸೇರಿದಂತೆ…
ಸಹೋದರನಿಗೆ ಪ್ರಧಾನಿ ಮೋದಿ ಕರೆ ಮಾಡಿ ಆರೋಗ್ಯ ವಿಚಾರಣೆ
December 29, 2022ಮೈಸೂರು, ಡಿ. 28(ಆರ್‍ಕೆ)- ಬೆಂಗಳೂರು-ನೀಲಗಿರಿ ರಸ್ತೆಯ ಕಡಕೊಳ ಬಳಿ ಮಂಗಳವಾರ ಮಧ್ಯಾಹ್ನ ಸಂಭವಿಸಿದ ಕಾರು ಅಪಘಾತದಲ್ಲಿ ಗಾಯಗೊಂಡು, ಮೈಸೂರಿನ ಜೆಎಸ್‍ಎಸ್ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪ್ರಹ್ಲಾದ್ ಮೋದಿ ಹಾಗೂ ಕುಟುಂಬದವರು ಚೇತರಿಸಿಕೊಳ್ಳುತ್ತಿದ್ದಾರೆ. ಘಟನೆ ನಡೆದ ತಕ್ಷಣ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನಿನ್ನೆಯೇ ದೂರವಾಣಿ ಕರೆ ಮಾಡಿ ಸಹೋದರ ಹಾಗೂ ಕುಟುಂಬದ ಸದಸ್ಯರ ಆರೋಗ್ಯದ ಬಗ್ಗೆ ವಿಚಾರಿಸಿ ಶೀಘ್ರ ಗುಣಮುಖರಾಗುವಂತೆ ಹಾರೈಸಿದ್ದಾರೆ. ಜೆಎಸ್‍ಎಸ್ ಆಸ್ಪತ್ರೆಯಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ, ಘಟನೆ ಬಗ್ಗೆ ಮಾಹಿತಿ ಹಂಚಿಕೊಂಡ ಪ್ರಹ್ಲಾದ್…
ಕಡಕೊಳ ಬಳಿ ಪ್ರಧಾನಿ ಮೋದಿ ಸಹೋದರ ಪ್ರಹ್ಲಾದ್ ಮೋದಿ, ಕುಟುಂಬ ಸದಸ್ಯರಿದ್ದ ಕಾರು ಅಪಘಾತ
December 28, 2022ಮೈಸೂರು, ಡಿ.27(ಆರ್‍ಕೆ)-ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಸಹೋದರ ಪ್ರಹ್ಲಾದ್ ಬಾಯ್ ದಾಮೋದರ್ ದಾಸ್ ಮೋದಿ ಹಾಗೂ ಅವರ ಪುತ್ರ, ಸೊಸೆ, ಮೊಮ್ಮಗ ಪ್ರಯಾಣಿಸುತ್ತಿದ್ದ ಮರ್ಸಿಡಿಸ್ ಬೆನ್ಜ್ ಕಾರು ಬೆಂಗಳೂರು-ನೀಲಗಿರಿ ರಾಷ್ಟ್ರೀಯ ಹೆದ್ದಾರಿಯಲ್ಲಿ, ಕಡಕೊಳ ಬಳಿ ಇಂದು (ಮಂಗಳವಾರ) ಮಧ್ಯಾಹ್ನ ಅಪಘಾತಕ್ಕೀಡಾಗಿದೆ. ಘಟನೆಯಲ್ಲಿ ಪ್ರಹ್ಲಾದ್ ಬಾಯ್ ದಾಮೋದರ್ ದಾಸ್ ಮೋದಿ(70), ಮಗ ಮೆಹುಲ್ ಪ್ರಹ್ಲಾದ್ ಬಾಯ್ ಮೋದಿ(40), ಸೊಸೆ ಜಿನಲ್ ಮೋದಿ(35), ಮೊಮ್ಮಗ ಮಹಾರ್ಥ್ ಮೆಹುಲ್ ಮೋದಿ(6) ಹಾಗೂ ಕಾರು ಚಾಲಕ ಸತ್ಯನಾರಾಯಣ(46) ಗಾಯಗೊಂಡಿದ್ದು, ಅವರನ್ನು ಮೈಸೂರಿನ ಜೆಎಸ್‍ಎಸ್…
ಕೊರೊನಾ ಉಪತಳಿಗೆ ಕಡಿವಾಣ ಹಾಕಲು ಸರ್ಕಾರದ ಸಲಹೆ ಪಾಲಿಸಿ; ಜಿಲ್ಲಾಡಳಿತದೊಂದಿಗೆ ಸಹಕರಿಸಿ
December 24, 2022ಮೈಸೂರು, ಡಿ.23(ಎಸ್‍ಬಿಡಿ)- ಮೈಸೂರು ಜಿಲ್ಲೆಯಲ್ಲಿ ಸದ್ಯ ನಾಲ್ಕು ಕೊರೊನಾ ಸೋಂಕು ಪ್ರಕರಣಗಳಿದ್ದು, ಎಲ್ಲರೂ ಮನೆಯಲ್ಲೇ ಆರೈಕೆಯಲ್ಲಿ ದ್ದಾರೆ. ಆದರೂ ಮುಂಜಾಗ್ರತಾ ಕ್ರಮ ಗಳನ್ನು ಕೈಗೊಳ್ಳಲಾಗುತ್ತಿದ್ದು ಸರ್ಕಾರದ ಸಲಹೆಗಳನ್ನು ಪರಿಪಾಲಿಸುವ ಮೂಲಕ ಸಾರ್ವಜನಿಕರೂ ಸಹಕರಿಸಬೇಕೆಂದು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಮನವಿ ಮಾಡಿದ್ದಾರೆ. ಹಲವು ದೇಶಗಳಲ್ಲಿ ಕೊರೊನಾ ರೂಪಾಂತರಿ ಬಿ.ಎಫ್-7 ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆ ಯಲ್ಲಿ ಭಾರತ ಸರ್ಕಾರದ ನಿರ್ದೇ ಶನದ ಮೇರೆಗೆ ರಾಜ್ಯ ಸರ್ಕಾರ ಸಲಹೆ ರೂಪದ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿರುವ ಹಿನ್ನೆಲೆಯಲ್ಲಿ ಇಂದು ಜಿಲ್ಲಾ ಕೋವಿಡ್ ನಿರ್ವಹಣಾ…
ಲೋಕಾಯುಕ್ತ ಬಲೆಗೆ ಬಿದ್ದ ಮುಡಾ ವಿಶೇಷ ತಹಶೀಲ್ದಾರ್, ಎಫ್‍ಡಿಎ, ಡಿ-ಗ್ರೂಪ್ ಸಿಬ್ಬಂದಿ
December 24, 2022ಮೈಸೂರು,ಡಿ.23(ಆರ್‍ಕೆ)-ನಿವೇಶನಗಳಿಗೆ ಖಾತೆ ಮಾಡಲು ಎನ್‍ಜಿಓ ವೊಂದರ ಅಧ್ಯಕ್ಷರಿಂದ ಲಂಚ ಪಡೆದ ಮೈಸೂರು ನಗರಾಭಿವೃದ್ಧಿ ಪ್ರಾಧಿ ಕಾರದ (ಮುಡಾ) ವಿಶೇಷ ತಹಶೀಲ್ದಾರ್ ಸೇರಿ ಮೂವರು ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಮುಡಾ ವಲಯ ಕಚೇರಿ-3ರ ವಿಶೇಷ ತಹಶೀಲ್ದಾರರೂ ಆದ ಇ-ಖಾತಾ ಪ್ರಭಾರ ವಿಶೇಷ ತಹಸೀಲ್ದಾರ್ ಬಿ.ಕೆ. ಶ್ರೀನಿವಾಸ್, ಪ್ರಥಮ ದರ್ಜೆ ಸಹಾಯಕ ರಂಗಪ್ಪ ಮತ್ತು ಡಿ-ಗ್ರೂಪ್ ಸಿಬ್ಬಂದಿ ವರಲಕ್ಷ್ಮಿ ಬಂಧನಕ್ಕೊಳಗಾದವರು. ವಿವರ: ಮಾನವ ಹಕ್ಕು ಹಾಗೂ ಭ್ರಷ್ಟಾಚಾರ ವಿರೋಧಿ ಸಂಸ್ಥೆಯ ಮೈಸೂರು ಘಟಕದ ಅಧ್ಯಕ್ಷ ಕಾರ್ತಿಕ್ ಗೌಡ ಅವರು…
ಇಬ್ಬರು ವಿದ್ಯಾರ್ಥಿಗಳ ಬಲಿ ಪಡೆದ ಚಿರತೆ ಸೆರೆ
December 24, 2022ತಿ.ನರಸೀಪುರ, ಡಿ.23-ಇಬ್ಬರು ವಿದ್ಯಾರ್ಥಿ ಗಳ ಬಲಿ ಪಡೆದು, ಅರಣ್ಯ ಇಲಾಖೆ ಹಾಗೂ ತಾಲೂಕಿನ ಜನತೆ ನಿದ್ದೆಗೆಡಿಸಿದ್ದ ಚಿರತೆ ತಾಲೂಕಿನ ಮದ್ಗಾರಲಿಂಗಯ್ಯನ ಹುಂಡಿ ಗ್ರಾಮದ ಶ್ರೀ ಮಲ್ಲಿಕಾರ್ಜುನಸ್ವಾಮಿ ಬೆಟ್ಟದಲ್ಲಿ ಕೊನೆಗೂ ಸೆರೆ ಸಿಕ್ಕಿದೆ. ಗುರುವಾರವಷ್ಟೇ ತಾಲೂಕಿನ ಮುತ್ತತ್ತಿ ಗ್ರಾಮದಲ್ಲಿ ಕೋಳಿ ತಿನ್ನಲು ಬಂದು ಚಿರತೆ ಬೋನಿಗೆ ಬಿದ್ದಿತ್ತು. ಮರುದಿನವೇ ವಿದ್ಯಾರ್ಥಿಗಳನ್ನು ಬಲಿ ಪಡೆದಿದ್ದ 8 ವರ್ಷದ ಗಂಡು ಚಿರತೆ ಅರಣ್ಯ ಇಲಾಖೆ ಇರಿಸಿದ ಬೋನಿಗೆ ಬಿದ್ದಿದೆ. ಕಳೆದ ಅ.31 ರಂದು ಚಿರತೆ ಉಕ್ಕಲಗೆರೆ ಮಲ್ಲಪ್ಪನಬೆಟ್ಟ ದಲ್ಲಿ ಎಂ.ಎಲ್.ಹುಂಡಿ ಗ್ರಾಮದ…
ಮುಡಾ ಅಧ್ಯಕ್ಷರಾಗಿ ಯಶಸ್ವಿ ಎಸ್.ಸೋಮಶೇಖರ್ ಅಧಿಕಾರ ಸ್ವೀಕಾರ
December 22, 2022ಮೈಸೂರು, ಡಿ. 21(ಆರ್‍ಕೆ)-ಮುಡಾ ಅಧ್ಯಕ್ಷರಾಗಿ ಬಿಜೆಪಿ ಹಿರಿಯ ಮುಖಂಡ ಹಾಗೂ ಹೆಸರಾಂತ ಉದ್ಯಮಿ ಯಶಸ್ವಿ ಎಸ್.ಸೋಮಶೇಖರ್ ಇಂದು ಮೈಸೂರಿನ ಜೆಎಲ್‍ಬಿ ರಸ್ತೆಯಲ್ಲಿರುವ ಪ್ರಾಧಿಕಾರದ ಕಚೇರಿಯಲ್ಲಿ ಅಧಿಕಾರ ವಹಿಸಿಕೊಂಡರು. ಹೆಚ್.ವಿ. ರಾಜೀವ್ ಅವರ ಅಧಿಕಾರ ಅಂತ್ಯಗೊಂಡ ನಂತರ ಕಳೆದ 5 ತಿಂಗಳಿಂದ ಖಾಲಿ ಇದ್ದ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಅಧ್ಯಕ್ಷ ಸ್ಥಾನಕ್ಕೆ ಮಂಗಳ ವಾರ ಯಶಸ್ವಿ ಎಸ್.ಸೋಮಶೇಖರ್ ಅವರನ್ನು ನೇಮಿಸಿ ಸರ್ಕಾರ ಆದೇಶ ಹೊರ ಡಿಸಿತ್ತು. ಅಧಿಕಾರ ವಹಿಸಿಕೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಯಶಸ್ವಿ ಸೋಮಶೇಖರ್, ನನ್ನ…
ಮೈಸೂರು-ಬೆಂಗಳೂರುಹೆದ್ದಾರಿಗೆ `ಕಾವೇರಿ ಎಕ್ಸ್‍ಪ್ರೆಸ್ ವೇ’ ನಾಮಕರಣಕ್ಕೆ ಸಂಸದ ಪ್ರತಾಪ್ ಸಿಂಹ ಮನವಿ
December 22, 2022ಮೈಸೂರು,ಡಿ.21(ಪಿಎಂ)-ಪ್ರಸ್ತುತ ನಿರ್ಮಾಣವಾಗುತ್ತಿರುವ ಮೈಸೂರು-ಬೆಂಗಳೂರು ದಶಪಥ ಹೆದ್ದಾರಿಗೆ `ಕಾವೇರಿ ಎಕ್ಸ್‍ಪ್ರೆಸ್ ವೇ’ ಎಂದು ನಾಮಕರಣ ಮಾಡಬೇಕು ಎಂಬುದು ಸೇರಿದಂತೆ ರಾಜ್ಯದ 6 ರಾಜ್ಯ ಹೆದ್ದಾರಿಗಳನ್ನು `ರಾಷ್ಟ್ರೀಯ ಹೆದ್ದಾರಿ’ಯಾಗಿ ಘೋಷಿಸಬೇಕೆಂಬ ಸಂಸದ ಪ್ರತಾಪ್‍ಸಿಂಹ ಅವರ ಮನವಿಗೆ ಕೇಂದ್ರ ಭೂ ಸಾರಿಗೆ, ಹೆದ್ದಾರಿ ಹಾಗೂ ಸಾರಿಗೆ ಸಚಿವ ನಿತಿನ್‍ಗಡ್ಕರಿ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ನವದೆಹಲಿಯಲ್ಲಿ ಬುಧವಾರ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ಸಂಸದರು, ಭೇಟಿ ಮಾಡಿ ಸಲ್ಲಿಸಿದ ಸದರಿ ಮನವಿಗೆ ಅವರು ಸಕರಾತ್ಮಕ ಸ್ಪಂದಿಸಿದ್ದಾರೆ. ಸಂಸದರು ಪ್ರಕಟಣೆಯಲ್ಲಿ ಈ ವಿಷಯ ತಿಳಿಸಿದ್ದಾರೆ….