ಲೋಕಾಯುಕ್ತ ಬಲೆಗೆ ಬಿದ್ದ ಮುಡಾ ವಿಶೇಷ ತಹಶೀಲ್ದಾರ್, ಎಫ್‍ಡಿಎ, ಡಿ-ಗ್ರೂಪ್ ಸಿಬ್ಬಂದಿ
ಮೈಸೂರು

ಲೋಕಾಯುಕ್ತ ಬಲೆಗೆ ಬಿದ್ದ ಮುಡಾ ವಿಶೇಷ ತಹಶೀಲ್ದಾರ್, ಎಫ್‍ಡಿಎ, ಡಿ-ಗ್ರೂಪ್ ಸಿಬ್ಬಂದಿ

December 24, 2022

ಮೈಸೂರು,ಡಿ.23(ಆರ್‍ಕೆ)-ನಿವೇಶನಗಳಿಗೆ ಖಾತೆ ಮಾಡಲು ಎನ್‍ಜಿಓ ವೊಂದರ ಅಧ್ಯಕ್ಷರಿಂದ ಲಂಚ ಪಡೆದ ಮೈಸೂರು ನಗರಾಭಿವೃದ್ಧಿ ಪ್ರಾಧಿ ಕಾರದ (ಮುಡಾ) ವಿಶೇಷ ತಹಶೀಲ್ದಾರ್ ಸೇರಿ ಮೂವರು ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಮುಡಾ ವಲಯ ಕಚೇರಿ-3ರ ವಿಶೇಷ ತಹಶೀಲ್ದಾರರೂ ಆದ ಇ-ಖಾತಾ ಪ್ರಭಾರ ವಿಶೇಷ ತಹಸೀಲ್ದಾರ್ ಬಿ.ಕೆ. ಶ್ರೀನಿವಾಸ್, ಪ್ರಥಮ ದರ್ಜೆ ಸಹಾಯಕ ರಂಗಪ್ಪ ಮತ್ತು ಡಿ-ಗ್ರೂಪ್ ಸಿಬ್ಬಂದಿ ವರಲಕ್ಷ್ಮಿ ಬಂಧನಕ್ಕೊಳಗಾದವರು.

ವಿವರ: ಮಾನವ ಹಕ್ಕು ಹಾಗೂ ಭ್ರಷ್ಟಾಚಾರ ವಿರೋಧಿ ಸಂಸ್ಥೆಯ ಮೈಸೂರು ಘಟಕದ ಅಧ್ಯಕ್ಷ ಕಾರ್ತಿಕ್ ಗೌಡ ಅವರು ಮೈಸೂರಿನ ಶ್ರೀರಾಂ ಪುರದಲ್ಲಿರುವ ಖಾಸಗಿ ಬಡಾವಣೆ ಯೊಂದರ 7 ನಿವೇಶನ ಗಳಿಗೆ ಖಾತೆ ಗಾಗಿ ಮುಡಾಗೆ ಅರ್ಜಿ ಸಲ್ಲಿಸಿದ್ದರು. `ಸಕಾಲ’ದಡಿ 21 ದಿನ ದಲ್ಲಿ ಖಾತೆ ಮಾಡಿಕೊಡಬೇಕಾ ಗಿತ್ತು. ಒಂದು ವೇಳೆ ದಾಖಲೆಗಳಲ್ಲಿ ಏನಾದರೂ ನ್ಯೂನ್ಯತೆಗಳಿದ್ದರೆ ಹಿಂಬ ರಹ ನೀಡ ಬೇಕಾಗಿತ್ತು. ಆದರೆ 4 ತಿಂಗಳು ಕಳೆದರೂ ಕಾರ್ತಿಕ್‍ಗೌಡ ಸಲ್ಲಿಸಿದ್ದ ಅರ್ಜಿ ಆಧರಿಸಿ ನಿವೇಶನ ಗಳಿಗೆ ಖಾತೆ ಮಾಡಿ ಕೊಟ್ಟಿರಲಿಲ್ಲ. ಪದೇ ಪದೆ ಮುಡಾ ಕಚೇರಿಗೆ ಅಲೆಯುತ್ತಿದ್ದ ಕಾರ್ತಿಕ್ ಗೌಡ ಅವರು, ಕಳೆದ ವಾರ ಪ್ರಥಮ ದರ್ಜೆ ಸಹಾಯಕ ರಂಗಪ್ಪ ಅವರನ್ನು ಭೇಟಿ ಮಾಡಿದಾಗ, ಹಣ ಕೊಡದೆ ಯಾವುದೇ ಕೆಲಸವಾಗಲ್ಲ ಎಂದು ಹೇಳಿದ ರಂಗಪ್ಪ, 7 ನಿವೇಶನಗಳ ಖಾತೆಗೆ 14 ಸಾವಿರ ರೂ. ಲಂಚ ನೀಡಬೇಕೆಂದು ಒತ್ತಾಯಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಗುರುವಾರ ಕಾರ್ತಿಕ್ ಗೌಡ ಅವರು ಲೋಕಾ ಯುಕ್ತ ಎಸ್ಪಿ ಸುರೇಶ್ ಬಾಬು ಅವರಿಗೆ ಲಿಖಿತ ದೂರು ಸಲ್ಲಿಸಿದ್ದರು. ಇಂದು ಮುಡಾ ಕಚೇರಿಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಸಾರ್ವಜನಿಕರಂತೆ ಸುತ್ತಾಡುತ್ತಿದ್ದು, ದೂರುದಾರರಾದ ಕಾರ್ತಿಕ್ ಗೌಡ ಅವರನ್ನು ಹಿಂಬಾಲಿಸುತ್ತಿದ್ದರು. ರಂಗಪ್ಪ ಅವರನ್ನು ಭೇಟಿ ಮಾಡಿದ ಕಾರ್ತಿಕ್ ಗೌಡ, ಮೊದಲಿಗೆ ನಿವೇಶನವೊಂದಕ್ಕೆ ಸಾವಿರ ರೂ.ಗಳಂತೆ 7 ಸಾವಿರ ರೂ. ನೀಡಿ, ಖಾತೆ ಮಾಡಿದ ನಂತರ ಉಳಿದ ಹಣ ನೀಡುವುದಾಗಿ ಚೌಕಾಸಿ ಮಾಡಿದ್ದಾರೆ. ಆದರೆ ಅದಕ್ಕೆ ಒಪ್ಪದ ರಂಗಪ್ಪ, ಪೂರ್ತಿ 14 ಸಾವಿರ ರೂ. ಕೊಟ್ಟರೆ ಮಾತ್ರ ತಾನು ಖಾತೆಗೆ ಸಂಬಂಧಿಸಿದ ಫೈಲ್ ಅನ್ನು ಫುಟ್‍ಅಪ್ ಮಾಡುವುದಾಗಿ ತಿಳಿಸಿದ ಮೇರೆಗೆ ಕಾರ್ತಿಕ್ ಗೌಡರು 14 ಸಾವಿರ ರೂ.ಗಳನ್ನು ರಂಗಪ್ಪ ಅವರಿಗೆ ನೀಡಿ, ತಾನು ಲಂಚ ನೀಡಿರುವುದಾಗಿ ತಮ್ಮನ್ನು ಹಿಂಬಾಲಿಸುತ್ತಿದ್ದ ಲೋಕಾಯುಕ್ತ ಅಧಿಕಾರಿಗಳಿಗೆ ಸನ್ನೆ ಮಾಡಿದ್ದಾರೆ. ತಕ್ಷಣವೇ ಲೋಕಾಯುಕ್ತ ಅಧಿಕಾರಿಗಳು ಕಾರ್ಯಪ್ರವೃತ್ತರಾಗುವಷ್ಟರಲ್ಲಿ ಡಿ-ಗ್ರೂಪ್ ಸಿಬ್ಬಂದಿ ವರಲಕ್ಷ್ಮಿ ಮೂಲಕ ಲಂಚದ ಹಣದ ಪೈಕಿ 10 ಸಾವಿರ ರೂ.ಗಳನ್ನು ವಿಶೇಷ ತಹಸೀಲ್ದಾರ್ ಬಿ.ಕೆ.ಶ್ರೀನಿವಾಸ್ ಅವರಿಗೆ ರಂಗಪ್ಪ ಕಳುಹಿಸಿದ್ದರು. ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸಿದ ಲೋಕಾಯುಕ್ತ ಅಧಿಕಾರಿಗಳು, ಮೂವರನ್ನೂ ಬಂಧಿಸಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿ, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಈ ಕಾರ್ಯಾಚರಣೆಯಲ್ಲಿ ಲೋಕಾಯುಕ್ತ ಎಸ್ಪಿ ಸುರೇಶ್ ಬಾಬು, ಡಿವೈಎಸ್‍ಪಿ ಕೃಷ್ಣ, ಇನ್ಸ್‍ಪೆಕ್ಟರ್‍ಗಳಾದ ಲೋಕೇಶ್, ರೇಖಾ ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.

Translate »