ಕೆರಳಿದ ವಿದ್ಯಾರ್ಥಿಗಳಿಂದ ಪ್ರತಿಭಟನೆ: ವ್ಯವಸ್ಥೆವಿರುದ್ಧ ಭಾರೀ ಆಕ್ರೋಶ
ಮೈಸೂರು

ಕೆರಳಿದ ವಿದ್ಯಾರ್ಥಿಗಳಿಂದ ಪ್ರತಿಭಟನೆ: ವ್ಯವಸ್ಥೆವಿರುದ್ಧ ಭಾರೀ ಆಕ್ರೋಶ

December 29, 2022

ಮೈಸೂರು,ಡಿ.28(ಎಂಟಿವೈ)- ಮೈಸೂರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ನಿಲಯವೊಂದರಲ್ಲಿ ವಿದ್ಯಾರ್ಥಿಗಳಿಗೆ ಬಡಿಸಿದ ಉಪಾಹಾರದಲ್ಲಿ ಸತ್ತ ಇಲಿ ಪತ್ತೆ ಯಾದ ಹಿನ್ನೆಲೆಯಲ್ಲಿ ಹಾಸ್ಟೆಲ್ ವಿದ್ಯಾರ್ಥಿ ಗಳು ಮೈಸೂರು ಮಾನಸ ಗಂಗೋತ್ರಿಯ ಮುಖ್ಯದ್ವಾರ, ಕುವೆಂಪು ಪ್ರತಿಮೆ ಮುಂದೆ ಪ್ರತಿಭಟಿಸಿ ಆಕ್ರೋಶ ವ್ಯಕ್ತಪಡಿಸಿದರು.

ಮಾನಸ ಗಂಗೋತ್ರಿಯ ಕ್ಯಾಂಪಸ್ ನಲ್ಲಿರುವ ಎ ಬ್ಲಾಕ್ ವಿದ್ಯಾರ್ಥಿನಿಲಯ ದಲ್ಲಿ ಬೆಳಗಿನ ಉಪಾಹಾರ ಬಡಿಸುವ ವೇಳೆ ವಿದ್ಯಾರ್ಥಿಯೊಬ್ಬರ ತಟ್ಟೆಯ ಉಪಾ ಹಾರದಲ್ಲಿ ಸತ್ತ ಇಲಿ ಪತ್ತೆಯಾಗಿದೆ. ಅಷ್ಟರ ಲ್ಲಾಗಲೇ ಕೆಲವು ವಿದ್ಯಾರ್ಥಿಗಳು ಉಪಾ ಹಾರ ಸೇವಿಸಿದ್ದರು. ಆಹಾರದಲ್ಲಿ ಇಲಿ ಪತ್ತೆಯಾದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ವಿದ್ಯಾರ್ಥಿಗಳು ಹಾಸ್ಟೆಲ್ ಸಿಬ್ಬಂದಿಗಳ ನಿರ್ಲಕ್ಷ್ಯ ಖಂಡಿಸಿ, ಪ್ರತಿಭಟನೆಗೆ ಮುಂದಾದರು.

ಹಾಸ್ಟೆಲ್‍ನಿಂದ ಅಡುಗೆ ಪಾತ್ರೆ ಹಾಗೂ ಉಪಾಹಾರದಲ್ಲಿ ಪತ್ತೆಯಾದ ಇಲಿಯಿದ್ದ ತಟ್ಟೆಯೊಂದಿಗೆ ಮಾನಸ ಗಂಗೋತ್ರಿಯ ಮುಖ್ಯದ್ವಾರ, ಕುವೆಂಪು ಪ್ರತಿಮೆ ಬಳಿ ಜಮಾಯಿಸಿದ ವಿದ್ಯಾರ್ಥಿಗಳು, ಹಾಸ್ಟೆಲ್ ಸಿಬ್ಬಂದಿಗಳ ನಿರ್ಲಕ್ಷ್ಯದ ವಿರುದ್ಧ ಕಿಡಿ ಕಾರಿದರು. ವಿದ್ಯಾರ್ಥಿಗಳ ಪ್ರತಿಭಟನೆ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಗೇಟ್ ಹಾಕಲಾಯಿತು. ಈ ವೇಳೆ ಮಧ್ಯಾಹ್ನ ದವರೆಗೂ ಪ್ರತಿಭಟನೆ ಮುಂದುವರೆ ಸಿದ ವಿದ್ಯಾರ್ಥಿಗಳು, ವ್ಯವಸ್ಥೆ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿ ಸಿದರು. ಹಾಸ್ಟೆಲ್‍ನಲ್ಲಿ ಸ್ವಚ್ಛತೆ ಇಲ್ಲದಂತಾ ಗಿದೆ. ಅವಧಿ ಮೀರಿದ ಆಹಾರ ಪದಾರ್ಥ ಗಳಿಂದ ಅಡುಗೆ ತಯಾರಿಸಲಾಗುತ್ತಿದೆ. ಕಳಪೆ ಗುಣಮಟ್ಟದ ಆಹಾರ ಪೂರೈಕೆ ಮಾಡಲಾಗುತ್ತಿದೆ. ಕುಡಿಯುವ ನೀರು ಇಲ್ಲದೆ ವಿದ್ಯಾರ್ಥಿಗಳು ಪರದಾಡುತ್ತಿz್ದÁರೆ. ಅವ್ಯವಸ್ಥೆ ಸರಿಪಡಿಸುವಂತೆ ಎಷ್ಟೇ ಮನವಿ ಮಾಡಿದರೂ, ಆಡಳಿತ ಮಂಡಳಿ ಸ್ಪಂದಿಸುತ್ತಿಲ್ಲ ಎಂದು ವಿದ್ಯಾರ್ಥಿಗಳು ದೂರಿದರು. ಮಾನಸ ಗಂಗೋತ್ರಿ ಸಂಶೋಧಕರ ವಿದ್ಯಾರ್ಥಿ ಸಂಘದ ಅಧ್ಯP್ಷÀ ನಟರಾಜ್ ಶಿವಣ್ಣ ಮಾತನಾಡಿ, ಮೈಸೂರು ವಿವಿಯ ನ್ಯೂಬ್ಲಾಕ್‍ನಲ್ಲಿರುವ ವಿದ್ಯಾರ್ಥಿನಿಲಯದಲ್ಲಿ ವಿದ್ಯಾರ್ಥಿಗಳು ಉಪಾಹಾರ ಸೇವಿಸುತ್ತಿz್ದÁಗ, ಸತ್ತ ಇಲಿ ಪತ್ತೆಯಾಗಿದೆ. ಇದನ್ನು ನೋಡಿದ ಕೆಲ ವಿದ್ಯಾರ್ಥಿಗಳು ಅಸ್ವಸ್ಥರಾಗಿz್ದÁರೆ. ಸದ್ಯ ಯಾವುದೇ ಅಪಾಯವಾಗಿಲ್ಲ. ವಿದ್ಯಾರ್ಥಿ ನಿಲಯದಲ್ಲಿ ಶುದ್ಧ ಆಹಾರ ನೀಡಲು ವಿವಿ ಮುಂದಾಗಬೇಕು. ವಿದ್ಯಾರ್ಥಿನಿಲಯ ದಲ್ಲಿರುವವರೆಲ್ಲರೂ ಬಡ ಕುಟುಂಬದ ವಿದ್ಯಾರ್ಥಿಗಳಾಗಿದ್ದು, ಅಧಿಕಾರಿಗಳು ಹಾಸ್ಟೆಲ್‍ನಲ್ಲಿನ ಅವ್ಯವಸ್ಥೆ ಸರಿಪಡಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಸ್ಥಳಕ್ಕೆ ಆಗಮಿಸಿದ ಪ್ರಭಾರ ಕುಲಪತಿ ಪೆÇ್ರ.ರಾಜಶೇಖರ್ ವಿದ್ಯಾರ್ಥಿಗಳ ಸಮಸ್ಯೆ ಆಲಿಸಿದರು. ಅಲ್ಲದೆ, ಶೀಘ್ರದಲ್ಲಿ ಹಾಸ್ಟೆಲ್‍ನಲ್ಲಿನ ಪರಿಸ್ಥಿತಿ ಸುಧಾರಿಸಲು ಕ್ರಮ ಕೈಗೊಂಡು, ಸಮಸ್ಯೆಗಳ ಪರಿಹರಿಸುವುದಾಗಿ ಭರವಸೆ ನೀಡಿದ ಬಳಿಕ ವಿದ್ಯಾರ್ಥಿಗಳು ಪ್ರತಿಭಟನೆ ಕೈಬಿಟ್ಟರು. ಪ್ರತಿಭಟನೆಯಲ್ಲಿ ಮಾನಸ ಗಂಗೋತ್ರಿ ಸಂಶೋಧಕರ ವಿದ್ಯಾರ್ಥಿ ಸಂಘದ ಅಧ್ಯP್ಷÀ ನಟರಾಜ್ ಶಿವಣ್ಣ, ಪರಮಜ್ಯೋತಿ, ಗೌತಮï, ಚೇತನ್, ಕಿರಣ್, ಮೋಹÀನ್, ರೋಹನ್ ಸೇರಿದಂತೆ ಹಲವು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

Translate »