ಬೆಂಗಳೂರು-ಮೈಸೂರು ಹೆದ್ದಾರಿ ಗುಣಮಟ್ಟದ ಬಗ್ಗೆ ಆಕ್ಷೇಪ ಜ.5ರಂದು ಗಡ್ಕರಿ ಪರಿಶೀಲನೆ
News

ಬೆಂಗಳೂರು-ಮೈಸೂರು ಹೆದ್ದಾರಿ ಗುಣಮಟ್ಟದ ಬಗ್ಗೆ ಆಕ್ಷೇಪ ಜ.5ರಂದು ಗಡ್ಕರಿ ಪರಿಶೀಲನೆ

December 29, 2022

ಬೆಂಗಳೂರು, ಡಿ.28(ಕೆಎಂಶಿ)- ವಿಶ್ವದರ್ಜೆ ಗುಣಮಟ್ಟದ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿ ಪರಿಶೀಲನೆ ಗಾಗಿ ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ರಾಜ್ಯ ಪ್ರವಾಸ ಕೈಗೊಳ್ಳುತ್ತಿದ್ದಾರೆ.

ರಸ್ತೆ ಗುಣಮಟ್ಟದ ಬಗ್ಗೆ ದೂರು ಗಳು ಬಂದ ಹಿನ್ನೆಲೆಯಲ್ಲಿ ಕೇಂದ್ರ ಭೂಸಾರಿಗೆ ಸಚಿವರು ಜನವರಿ 5ಕ್ಕೆ ಖುದ್ದು ಈ ರಸ್ತೆಯಲ್ಲಿ ಪ್ರಯಾಣಿಸಿ, ಅದರ ಗುಣಮಟ್ಟದ ಬಗ್ಗೆ ಪರಿ ಶೀಲನೆ ನಡೆಸಲಿದ್ದಾರೆ ಎಂದು ವಿಧಾನಪರಿ ಷತ್ತಿನಲ್ಲಿ ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ್ ಪ್ರಕಟಿಸಿದರು. ಪ್ರಶ್ನೋತ್ತರ ವೇಳೆಯಲ್ಲಿ ಮರಿತಿಬ್ಬೇಗೌಡ ಅವರ ಪ್ರಸ್ತಾವಕ್ಕೆ ಉತ್ತರಿಸಿದ ಸಚಿವರು, ರಸ್ತೆ ಗುಣಮಟ್ಟದ ಬಗ್ಗೆ ನಾನು ಈಗಾ ಗಲೇ ಎರಡು ಬಾರಿ ಭೇಟಿ ನೀಡಿ ರಸ್ತೆ ಪರಿ ಶೀಲಿಸಿದ್ದೇನೆ. ಮಳೆಯಿಂದ ಸಮಸ್ಯೆಯಾದಾಗ ಮುಖ್ಯಮಂತ್ರಿಯವರೂ ಭೇಟಿ ನೀಡಿ ಪರಿಶೀಲಿ ಸಿದ್ದಾರೆ. ಇತ್ತೀಚೆಗೆ ಎರಡು ಮೂರು ಪಟ್ಟು ಮಳೆ ಹೆಚ್ಚಾದಾಗ ಸಮಸ್ಯೆಯಾಗಿತ್ತು. ಕೆಲವು ಭಾಗಗ ಳಲ್ಲಿ ರಾಜಕಾಲುವೆಗಳ ಒತ್ತುವರಿಯಾಗಿತ್ತು ಮತ್ತು ಕಲ್ಲು, ಕಸ-ಕಡ್ಡಿಯಿಂದ ಚರಂಡಿ ಮುಚ್ಚಿದರ ಪರಿಣಾಮ ನೀರು ರಸ್ತೆಯಿಂದ ಸರಾಗವಾಗಿ ಹರಿದುಹೋಗಲು ಸಾಧ್ಯವಾಗಲಿಲ್ಲ. ಇದರಿಂದ ತಾತ್ಕಾಲಿಕ ಕೆರೆ ನಿರ್ಮಾಣವಾಗಿದ್ದು, ನಮ್ಮ ಗಮನಕ್ಕೆ ಬಂದಿದೆ. ಸಮಸ್ಯೆಯ ನಂತರ ಗುತ್ತಿಗೆ ದಾರರು ಮೂಲ ನಕ್ಷೆಯಲ್ಲಿ ಕೆಲ ಬದಲಾವಣೆ ಮಾಡಿ, ನೀರು ಸರಾಗವಾಗಿ ಹರಿದುಹೋಗು ವಂತೆ ಕಾಮಗಾರಿ ಕೈಗೆತ್ತಿಕೊಂಡಿದ್ದಾರೆ. ರಸ್ತೆ ಯಲ್ಲಿ ಉಬ್ಬು ತಗ್ಗುಗಳ ಸಮಸ್ಯೆ ಇದೆ. ಅದನ್ನು ಸರಿಪಡಿಸುವಂತೆ ಹೆದ್ದಾರಿ ಪ್ರಾಧಿಕಾರಕ್ಕೆ ಸೂಚಿ ಸಲಾಗುವುದು ಎಂದರು. ಇಂತಹ ರಸ್ತೆಗಳಲ್ಲಿ ಒಂದೆರಡು ಕಡೆ ಮಾತ್ರ ಸ್ಥಳೀಯ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸಲು ಸಾಧ್ಯವಾಗಲಿದೆ. ರಸ್ತೆಯ ಮೂಲ ಉದ್ದೇಶ, ಬೆಂಗಳೂರು-ಮೈಸೂರಿಗೆ ನೇರ ಸಂಪರ್ಕಿಸುವುದಾಗಿದೆ. ಆದರೂ ಕೇಂದ್ರ ಸಚಿವರು ಭೇಟಿ ನೀಡಿದಾಗ ಮಂಡ್ಯ, ರಾಮನಗರ, ಚನ್ನಪಟ್ಟಣ, ಮದ್ದೂರು ಭಾಗದ ಜನಪ್ರತಿನಿಧಿ ಗಳ ಹಾಗೂ ಜನರ ಬೇಡಿಕೆಯನ್ನು ಪ್ರಸ್ತಾವನೆ ರೂಪದಲ್ಲಿ ಸಲ್ಲಿಸಲಾಗುವುದು ಎಂದರು. ಇದಕ್ಕೂ ಮುನ್ನ ಮಾತನಾಡಿದ ಮರಿತಿಬ್ಬೇಗೌಡ, ಸಾವಿರಾರು ಕೋಟಿ ಖರ್ಚು ಮಾಡಿ ರಸ್ತೆ ನಿರ್ಮಿ ಸಲಾಗುತ್ತಿದೆ. ರಸ್ತೆಯಲ್ಲಿ ಉಬ್ಬು ತಗ್ಗುಗಳಿವೆ. ಕಾರುಗಳು ಮೇಲೆಗರಿ ಬೀಳುತ್ತಿವೆ. ಮೇಲು ಸೇತುವೆ ಯಲ್ಲಿ ನೀರು ಸರಾಗವಾಗಿ ಹರಿದು ಹೋಗುವಂತೆ ಮಾಡಿಲ್ಲ. ಮಳೆಗಾಲದಲ್ಲಿ ಅಪಘಾತಗಳು ಹೆಚ್ಚಾಗುತ್ತವೆ. ಸರ್ವಿಸ್ ರಸ್ತೆ ಏಳೂವರೆ ಮೀಟರ್ ಮಾಡುತ್ತಿ ದ್ದಾರೆ. ಅದರ ಗುಣಮಟ್ಟ ಸರಿಯಿಲ್ಲ. ಮುಖ್ಯರಸ್ತೆ ಯುದ್ಧಕ್ಕೂ ತಂತಿಬೇಲಿಯ ಬ್ಯಾರಿಕೇಡ್ ಹಾಕಿದ್ದಾರೆ. ಅವು ಈಗಾಗಲೇ ತುಕ್ಕು ಹಿಡಿದಿವೆ. ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಗಳ ಹೊರ ವಲಯದ ಬೈಪಾಸ್‍ನಲ್ಲಿ ವಾಹನಗಳು ಹಾದು ಹೋಗುತ್ತವೆ. ರಾಮನಗರ, ಚನ್ನಪಟ್ಟಣ, ಮದ್ದೂರು, ಮಂಡ್ಯಗಳ ಜನ ರಸ್ತೆ ಬಳಸಲು ಸಾಧ್ಯವಾಗುತ್ತಿಲ್ಲ. ಎಲ್ಲಿಯೂ ಎಂಟ್ರಿ-ಎಕ್ಸಿಟ್ ನಂತಹ ಸಂಪರ್ಕ ಕಲ್ಪಿಸಲಾಗಿಲ್ಲ. ಯೋಜನೆಯ ಉಸ್ತುವಾರಿ ಅಧಿಕಾರಿ ಯಾರಿಗೂ ಸಿಗುತ್ತಿಲ್ಲ. ಅವರೇನಾದರೂ ಮಂಡ್ಯದವರಿಗೆ ಸಿಕ್ಕರೆ ಕಟ್ಟಿ ಹಾಕಿ ಚಾಟಿಯಲ್ಲಿ ಹೊಡೆಯುತ್ತಾರೆ. ಮಂಡ್ಯ ಭಾಗದಲ್ಲಿ ಸಾವಿರಾರು ಎಕರೆ ಭೂಮಿ ಸ್ವಾಧೀನವಾಗಿದೆ. ಆ ಭಾಗದ ರೈತರು ರಸ್ತೆ ಬಳಸುವ ಹಾಗಿಲ್ಲ ಎಂದರೆ ಹೇಗೆ ಆ ಭಾಗ ಅಭಿವೃದ್ಧಿಯಾಗುವುದು ಹೇಗೆ ಎಂದು ಪ್ರಶ್ನಿಸಿದರು.

Translate »