ಜಾಹಿರಾತು ಮೂಲಕ ಗ್ರಾಹಕರಿಗೆ ವಂಚಿಸಿದರೆ ಕಾನೂನು ಕ್ರಮ
ಮೈಸೂರು

ಜಾಹಿರಾತು ಮೂಲಕ ಗ್ರಾಹಕರಿಗೆ ವಂಚಿಸಿದರೆ ಕಾನೂನು ಕ್ರಮ

December 30, 2022

ಮೈಸೂರು, ಡಿ.29(ಆರ್‍ಕೆ)- ತಪ್ಪು ಮಾಹಿತಿಯೊಂದಿಗೆ ಜಾಹಿರಾತು ಮೂಲಕ ಗ್ರಾಹಕರಿಗೆ ಮೋಸ ಮಾಡಿದರೆ ಉದ್ದಿಮೆ ದಾರರು, ವ್ಯಾಪಾರಸ್ಥರ ವಿರುದ್ಧ ಪ್ರಕರಣ ದಾಖಲಿಸಿ, ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿ ಹಾರ ಆಯೋಗದ ಅಧ್ಯಕ್ಷ ಬಿ. ನಾರಾ ಯಣಪ್ಪ ಇಂದಿಲ್ಲಿ ಎಚ್ಚರಿಕೆ ನೀಡಿದ್ದಾರೆ.

ಜಿಲ್ಲಾಡಳಿತ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ಗ್ರಾಹಕರ ವ್ಯಾಜ್ಯ ಗಳ ಪರಿಹಾರ ಆಯೋಗ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ವಿದ್ಯಾವರ್ಧಕ ಇಂಜಿನಿಯರಿಂಗ್ ಕಾಲೇಜು ಸಂಯುಕ್ತಾಶ್ರಯದಲ್ಲಿ ಕಾಲೇಜಿನ ಎಂಬಿಎ ವಿಭಾಗದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಗ್ರಾಹಕರ ದಿನಾಚರಣೆ ಉದ್ಘಾಟಿಸಿ ಮಾತ ನಾಡುತ್ತಿದ್ದ ಅವರು, ಗ್ರಾಹಕರಿಗೆ ವಂಚನೆ ಆಗುವುದನ್ನು ತಡೆಗಟ್ಟುವ ಸಲುವಾಗಿ ಜಾರಿಗೆ ತಂದಿರುವ ಗ್ರಾಹಕರ ಕಾಯ್ದೆ ಯನ್ನು ಬಳಸಿ ವ್ಯಾಪಾರಸ್ಥರು, ಉದ್ದಿಮೆ ಗಳಿಂದ ತೊಂದರೆಯಾಗದಂತೆ ತಡೆಯ ಲಾಗುವುದು ಎಂದರು.

ಆನ್‍ಲೈನ್‍ನಲ್ಲಿ ಜಾಹಿರಾತು ಮೂಲಕ ತಪ್ಪು ಮಾಹಿತಿ ನೀಡಿ ಗ್ರಾಹಕರನ್ನು ಆಕ ರ್ಷಿಸಿ ವಂಚಿಸಿದವರ ವಿರುದ್ಧ ಪ್ರಕರಣ ದಾಖಲಿಸಿ ಕಾಯ್ದೆಯಡಿ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು. ಯಾವುದೇ ಖಾಸಗಿ ಸಂಸ್ಥೆ, ಉದ್ಯಮ, ನೀರು, ವಿದ್ಯುತ್ ಸರಬರಾಜು ಇನ್ನಿತರ ಎಲ್ಲಾ ಸೇವೆಗಳಲ್ಲಿ ಲೋಪ ಕಂಡು ಬಂದರೂ ಗ್ರಾಹಕರ ಕಾಯ್ದೆಯಡಿ ಕ್ರಮವಹಿಸಿ ಸಾರ್ವಜನಿಕ ರಿಗೆ ಪರಿಹಾರೋಪಾಯ ಕಲ್ಪಿಸಲಾಗು ತ್ತದೆ ಎಂದು ಅವರು ನುಡಿದರು.

2019 ಗ್ರಾಹಕರ ರಕ್ಷಣಾ ಕಾಯ್ದೆ (ತಿದ್ದು ಪಡಿ) ಅನ್ವಯ ವಸ್ತುಗಳ ಗುಣಮಟ್ಟ ಉತ್ಪನ್ನದ ಸಂಪೂರ್ಣ ಮಾಹಿತಿ ಯನ್ನು ಪದಾರ್ಥದ ಮೇಲೆ ಮುದ್ರಿಸಬೇಕು. ಯಾವುದೇ ಸೇವೆಯಲ್ಲಿ ಲೋಪವಾದಲ್ಲಿ ಉತ್ಪಾದಕರು, ಪೂರೈಕೆ ದಾರರು ಅದರ ಜವಾಬ್ದಾರಿ ಹೊರ ಬೇಕಾಗುತ್ತದೆ ಎಂದ ಅವರು, ಗ್ರಾಹಕರು ತಮಗೆ ಅನ್ಯಾಯವಾದಾಗ ಹಿಂಜರಿ ಯದೇ ಆಯೋಗಕ್ಕೆ ದೂರು ನೀಡಿ ನ್ಯಾಯ ಪಡೆದುಕೊಳ್ಳಬೇಕು ಎಂದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ದೇವರಾಜ ಭೂತೆ, ವಿದ್ಯಾವರ್ಧಕ ಸಂಘದ ಅಧ್ಯಕ್ಷ ಗುಂಡಪ್ಪ ಗೌಡ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿ ಹಾರ ಆಯೋಗದ ಸದಸ್ಯರಾದ ಎಂ.ಕೆ. ಲಲಿತ, ಮಾರುತಿ ಹೆಚ್.ವಡ್ಡರ್, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಜಂಟಿ ನಿರ್ದೇಶಕಿ ಕುಮುದ, ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಪಿ. ವಿಶ್ವನಾಥ್ ಇತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Translate »