ಎಲ್ಲಾ ಜಿಲ್ಲೆಗಳಲ್ಲೂ ಮಿನಿ ಫುಡ್‍ಪಾರ್ಕ್‍ಗೆ ಸರ್ಕಾರ ಚಿಂತನೆ
ಮೈಸೂರು

ಎಲ್ಲಾ ಜಿಲ್ಲೆಗಳಲ್ಲೂ ಮಿನಿ ಫುಡ್‍ಪಾರ್ಕ್‍ಗೆ ಸರ್ಕಾರ ಚಿಂತನೆ

December 30, 2022

ಮೈಸೂರು,ಡಿ.29(ಆರ್‍ಕೆ)-ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಮಿನಿ ಫುಡ್‍ಪಾರ್ಕ್ ಆರಂಭಿಸಲು ಸರ್ಕಾರ ಚಿಂತನೆ ನಡೆಸಿದೆ ಎಂದು ಆಹಾರ ಕರ್ನಾಟಕ ನಿಯಮಿತದ ವ್ಯವಸ್ಥಾಪಕ ನಿರ್ದೇಶಕರಾದ ಕರ್ನಾಟಕ ಕೃಷಿ ವಾಣಿಜ್ಯ ಅಭಿವೃದ್ಧಿ ನಿಗಮದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಮೊಹ ಮದ್ ಇರ್ಫಾನ್ ಇಂದಿಲ್ಲಿ ತಿಳಿಸಿದ್ದಾರೆ.

ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ ಹಾಗೂ ಜಿಲ್ಲಾ ಕೈಗಾರಿಕಾ ಸಂಘದ ಸಹ ಯೋಗದಲ್ಲಿ ಮೈಸೂರಿನ ರುಚಿ ದಿ ಪ್ರಿನ್ಸ್ ಹೋಟೆಲ್ ಸಭಾಂಗಣದಲ್ಲಿ ಇಂದು ಏರ್ಪಡಿಸಿದ್ದ ಆಹಾರ ಸಂಸ್ಕರಣೆ, ಮುನಿಸಿ ಪಾಲಿಟಿ ಕಾಯ್ದೆ ಮತ್ತು ಆನ್ ಬೋರ್ಡಿಂಗ್ ಜೆಡ್ ಪ್ರಮಾಣೀಕರಣ ಕುರಿತು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡು ತ್ತಿದ್ದ ಅವರು, ಆಹಾರ ಧಾನ್ಯ ಉದ್ದಿಮೆ ಗಳನ್ನು ಪ್ರೋತ್ಸಾಹಿಸಿ ರಫ್ತು ವಹಿವಾಟು ಹೆಚ್ಚಿಸುವ ಸಲುವಾಗಿ ಸರ್ಕಾರವು ಎಲ್ಲಾ ಜಿಲ್ಲೆಗಳಲ್ಲೂ ಮಿನಿ ಫುಡ್‍ಪಾರ್ಕ್ ಸ್ಥಾಪಿಸಲು ಚಿಂತನೆ ನಡೆಸಿದೆ ಎಂದರು.

2023ರ ರಾಜ್ಯ ಬಜೆಟ್‍ನಲ್ಲಿ ಈ ಯೋಜನೆ ಘೋಷಣೆಯಾಗಲಿದ್ದು, ಅದ ಕ್ಕಾಗಿ ಮುಖ್ಯಮಂತ್ರಿಗಳು ಮಾಹಿತಿ ಸಂಗ್ರಹಿಸಿ ಸಿದ್ಧತೆ ನಡೆಸುತ್ತಿದ್ದಾರೆ. ರೈತರು, ಟ್ರೇಡರ್ಸ್, ಆಹಾರ ವಲಯವನ್ನು ಉತ್ತೇ ಜಿಸಲು ಈ ವಿನೂತನ ಯೋಜನೆ ಜಾರಿಗೆ ಬರುತ್ತಿದೆ ಎಂದರು.

ಹೂಟಗಳ್ಳಿ ನಗರಸಭೆ ಪೌರಾಯುಕ್ತ ಪಿ.ಎನ್.ನರಸಿಂಹಮೂರ್ತಿ ಮಾತನಾಡಿ, ಉದ್ದಿಮೆಯ ಸಾಮಥ್ರ್ಯ, ಪ್ರಮಾಣಕ್ಕನು ಗುಣವಾಗಿ ಕೈಗಾರಿಕೆಗಳಿಗೆ ತೆರಿಗೆ ವಿಧಿಸ ಲಾಗುತ್ತಿದೆ. ಅದರಂತೆ ಸಣ್ಣ, ಮಧ್ಯಮ ಹಾಗೂ ಬೃಹತ್ ಕೈಗಾರಿಕೆಗಳಿಗೆ ವಿವಿಧ ಪ್ರಮಾಣದ ತೆರಿಗೆ ನಿಗದಿಪಡಿಸಿರುವುದರಿಂದ ಈ ಬಗ್ಗೆ ಗೊಂದಲವಿದ್ದಲ್ಲಿ ಕೈಗಾರಿಕೋದ್ಯಮಿಗಳು ತಮ್ಮನ್ನೇ ನೇರವಾಗಿ ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಬಹುದು ಎಂದರು. ಕಾಸಿಯಾ ಅಧ್ಯಕ್ಷ ಕೆ.ಎನ್.ನರಸಿಂಹಮೂರ್ತಿ, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಟಿ.ದಿನೇಶ್, ಸ್ಮಾಲ್ ಇಂಡಸ್ಟ್ರೀಸ್ ಡೆವ ಲಪ್‍ಮೆಂಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‍ಐಡಿಬಿಐ) ವ್ಯವಸ್ಥಾಪಕ ಲೋಕೇಶ್, ಕಾಸಿಯಾ ಪ್ರಧಾನÀ ಕಾರ್ಯದರ್ಶಿ ಬಿ. ಪ್ರವೀಣ್, ಸದಸ್ಯ ಸುಬ್ರಹ್ಮಣ್ಯಂ ಇತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ನಂತರ ನಡೆದ ತಾಂತ್ರಿಕ ಅಧಿವೇಶನದಲ್ಲಿ ಆಹಾರ ಸಂಸ್ಕರಣೆ ಮತ್ತು ಕೃಷಿ ವ್ಯವಹಾರ ಮುನಿ ಸಿಪಾಲಿಟಿ ಕಾಯ್ದೆ, ಆನ್ ಬೋರ್ಡಿಂಗ್ ಜೆಡ್, ಎಸ್‍ಐಡಿಬಿಐ ಯೋಜನೆ ಕುರಿತಂತೆ ತಜ್ಞರು ವಿಷಯ ಮಂಡಿಸಿದರು.

Translate »