ಮೈಸೂರು, ಅ.20(ಆರ್‍ಕೆ)-ಬಿಗ್ ಟೆಕ್ ಶೋ-2022ರ ಅಂಗವಾಗಿ ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ (ಏಆಇಒ) ವತಿಯಿಂದ ಮೈಸೂರಿನ ಅರಮನೆ ಉತ್ತರ ದ್ವಾರದ ಶ್ರೀ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಇಂದು ಆಯೋಜಿಸಿದ್ದ ವಾಕಥಾನ್‍ನಲ್ಲಿ ಐಟಿ-ಬಿಟಿ, ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್.ಅಶ್ವತ್ಥನಾರಾಯಣ ಅವರು ಪಾಲ್ಗೊಂಡು ಜುಂಬಾ ವರ್ಕ್‍ಔಟ್ ಮಾಡುವ ಮೂಲಕ ಯುವ ಉದ್ಯಮಿಗಳನ್ನು ಪ್ರೋತ್ಸಾಹಿಸಿದರು. `ಪ್ರಗತಿಯ ಪರಂಪರೆ ನಾಡಿಗೆ-ಸಮರ್ಥ ಆರ್ಥಿಕ ಬೆಳವಣಿಗೆ ಕಡೆಗೆ’ ಘೋಷಣೆ ಯೊಂದಿಗೆ ಏರ್ಪಡಿಸಿದ್ದ 5 ಕಿ.ಮೀ. ವಾಕಥಾನ್‍ಗೆ ಹಸಿರು ನಿಶಾನೆ ತೋರುವ ಮೂಲಕ ಚಾಲನೆ…
ಕೆಂಪೇಗೌಡರ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಅಧಿಕ ಸಂಖ್ಯೆಯಲ್ಲಿ ಪಾಲ್ಗೊಳ್ಳಿ
October 21, 2022ಮೈಸೂರು, ಅ.20(ಎಸ್‍ಬಿಡಿ)- ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ `ಪ್ರಗತಿಯ ಪ್ರತಿಮೆ’ ಅನಾವರಣ ಸಮಾರಂಭದಲ್ಲಿ ಹೆಚ್ಚಿನ ಜನ ಭಾಗಿಯಾಗಬೇಕೆಂದು ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್.ಅಶ್ವತ್ಥ ನಾರಾಯಣ್ ಮನವಿ ಮಾಡಿದರು. ಮೈಸೂರಿನ ಬೋಗಾದಿಯಲ್ಲಿರುವ ಶ್ರೀ ಆದಿಚುಂಚನ ಗಿರಿ ಶಾಖಾ ಮಠದ ಆವರಣದಲ್ಲಿ ಬುಧವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ನ.11ರಂದು ಪ್ರಧಾನಿ ನರೇಂದ್ರ ಮೋದಿ ಅವರು ಕೆಂಪೇಗೌಡರ ಬೃಹತ್ ಪ್ರತಿಮೆಯನ್ನು ಅನಾವರಣ ಮಾಡಲಿದ್ದು, ಆ ಐತಿಹಾಸಿಕ ಕಾರ್ಯಕ್ರಮದಲ್ಲಿ ಮೈಸೂರು…
ಜನತೆಗೆ ಮನದಟ್ಟು ಮಾಡಿಕೊಡಲು ರಾಜ್ಯಾದ್ಯಂತÀ ನ.1ರಿಂದ `ಪಂಚರತ್ನ ರಥಯಾತ್ರೆ’
October 20, 2022ಮೈಸೂರು, ಅ.19(ಆರ್‍ಕೆಬಿ)- ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ಹಿರಿಯ ನಾಯಕ ಹೆಚ್.ಡಿ.ದೇವೇಗೌಡರ ನೇತೃತ್ವದಲ್ಲಿ ಜೆಡಿಎಸ್‍ನ ಐದು ವಿಶಿಷ್ಟ ಜನಸ್ನೇಹಿ ಕಾರ್ಯ ಕ್ರಮಗಳನ್ನು ಒಳಗೊಂಡ `ಪಂಚರತ್ನ ರಥ ಯಾತ್ರೆ’ಗೆ ನ.1ರ ಕನ್ನಡ ರಾಜ್ಯೋತ್ಸವ ದಿನದಂದು ಕೋಲಾರ ಜಿಲ್ಲೆಯ ಮುಳಬಾಗಿಲುವಿನಲ್ಲಿ ಚಾಲನೆ ದೊರೆ ಯಲಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಇಂದಿಲ್ಲಿ ತಿಳಿಸಿದರು. ಮೈಸೂರಿನ ಹೊರವಲಯದ ಹೂಟಗಳ್ಳಿ ಬಳಿಯ ಖಾಸಗಿ ರೆಸಾರ್ಟ್‍ನಲ್ಲಿ ಆಯೋಜಿಸಿದ್ದ ಎರಡು ದಿನಗಳ ಜೆಡಿಎಸ್‍ನ ಸಂಭವನೀಯ ಅಭ್ಯರ್ಥಿಗಳು ಮತ್ತು ಪ್ರಮುಖರ ಸಮಾ ಲೋಚನಾ ಕಾರ್ಯಾಗಾರಕ್ಕೂ ಮುನ್ನ ಕರೆದಿದ್ದ…
ಮೈಸೂರು ಅರಮನೆಯ ಕೋಟೆ ಗೋಡೆ ಕುಸಿತ
October 19, 2022ಮೈಸೂರು, ಅ.18(ಎಂಟಿವೈ)- ಐತಿಹಾಸಿಕ ಹಾಗೂ ಪ್ರವಾಸಿ ತಾಣವೂ ಆಗಿರುವ ಮೈಸೂರು ಅರಮನೆಯ ಕೋಟೆ ಗೋಡೆ ಕುಸಿದಿದೆ. ಕೋಟೆ ಮಾರಮ್ಮ ದೇವಾಲಯದ ಸಮೀಪ ಸ್ವಲ್ಪ ಭಾಗ ಕುಸಿದಿದ್ದು, ಕೂಡಲೇ ದುರಸ್ತಿ ಕಾರ್ಯ ಆರಂಭಿಸಲಾಗಿದೆ. ಶತಮಾನಕ್ಕೂ ಹೆಚ್ಚು ಕಾಲದ ಇತಿಹಾಸವುಳ್ಳ ಅರಮನೆಯ ಕೋಟೆ ಅಲ್ಲಲ್ಲಿ ಶಿಥಿಲಗೊಂಡಿದ್ದು, ದುರಸ್ತಿಗೆ ಅರಮನೆ ಮಂಡಳಿ ಈಗಾಗಲೇ ಕ್ರಮ ಕೈಗೊಂಡಿದೆ. ಕೆಲ ದಿನಗಳಿಂದ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಕೋಟೆ ಗೋಡೆಯ ಕೆಲ ಭಾಗ ಇನ್ನೂ ಶಿಥಿಲಗೊಂಡಿದೆ. ಈಗ ರಕ್ಷಣಾ ಗೋಡೆ ಕುಸಿ ಯಲು ಮೂರು ಕಾರಣ…
ಕುಕ್ಕರಹಳ್ಳಿ ಕೆರೆ ಏರಿ ಮೇಲೆ ವಿಹಾರ ನಿಷಿದ್ಧ
October 19, 2022ಮೈಸೂರು, ಅ. 18 (ಆರ್‍ಕೆ)- ಇದೇ ಮೊದಲು ತುಂಬಿ ತುಳುಕುತ್ತಿರುವ ಮೈಸೂ ರಿನ ಕುಕ್ಕರಹಳ್ಳಿ ಕೆರೆಯ ಏರಿ ಶಿಥಿಲಾ ವಸ್ಥೆಯಲ್ಲಿರುವುದರಿಂದ ವಾಯುವಿಹಾರ ವನ್ನು ಇಂದಿನಿಂದ ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ. ಇತ್ತೀಚೆಗೆ ಸುರಿದ ಭಾರೀ ಮಳೆಯಿಂದಾಗಿ ಕೆರೆಗೆ ಅತೀ ಹೆಚ್ಚಿನ ಪ್ರಮಾಣದ ನೀರು ಹರಿದು ಬಂದಿರುವುದರಿಂದ ಮುನ್ನೆಚ್ಚರಿಕೆಯಾಗಿ ಮೈಸೂರು ವಿಶ್ವ ವಿದ್ಯಾನಿಲಯವು ವಾಯು ವಿಹಾರವನ್ನು ನಿಷೇಧಿಸಿ ಮುಂಜಾಗ್ರತಾ ಸುರಕ್ಷಾ ಕ್ರಮಗಳನ್ನು ಕೈಗೊಂಡಿದೆ. ಇದೇ ಮೊದಲ ಬಾರಿ ಕೆರೆಯಲ್ಲಿ ಅಧಿಕ ನೀರು ಸಂಗ್ರಹವಾಗಿದೆ. ನೀರು ಹೊರ ಹರಿದು ಹೋಗಲು ಅಳವಡಿಸಿರುವ ತೂಬಿನ…
ಮೈಸೂರು ಜಿಲ್ಲೆಯಲ್ಲಿ ಡೆಂಗ್ಯೂ ಆತಂಕ
October 19, 2022ಮೈಸೂರು, ಅ. 18(ಎಂಟಿವೈ)- ಸಾಂಸ್ಕøತಿಕ ನಗರಿ ಮೈಸೂರಲ್ಲಿ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಡೆಂಗ್ಯು ಆತಂಕ ಹೆಚ್ಚಾಗುತ್ತಿದೆ. ಈ ಮಾರಕ ಸೋಂಕು ಹರಡದಂತೆ ಕಟ್ಟೆಚ್ಚರ ವಹಿಸುವ ನಿಟ್ಟಿನಲ್ಲಿ ಆರೋಗ್ಯ ಸಿಬ್ಬಂದಿ ಮನೆ ಮನೆ ಸಮೀಕ್ಷೆ ಕೈಗೊಂಡು, ಜಾಗೃತಿ ಮೂಡಿಸಲಾರಂಭಿಸಿದ್ದಾರೆ. ರಸ್ತೆ, ಮನೆ ಸುತ್ತಮುತ್ತ ಮಳೆ ನೀರು ನಿಲ್ಲುವುದರಿಂದ ಅಪಾರ ಸೊಳ್ಳೆಗಳ ಉತ್ಪತ್ತಿಯಾಗುತ್ತಿದ್ದು, ಈಡಿಸ್ ಈಜಿಪ್ಟೈ ಸೊಳ್ಳೆ ಹಗಲಿನ ವೇಳೆ ಜನರನ್ನು ಕಚ್ಚುವುದರಿಂದ ಡೆಂಗ್ಯು ಸೋಂಕು ಹರಡಲಿದ್ದು, ಕೆಲ ಸಂದರ್ಭದಲ್ಲಿ ಜೀವಕ್ಕೆ ಕುತ್ತು ತಂದೊಡ್ಡುತ್ತಿದೆ. ಈ ಸಾಲಿನ…
ಕಾರಿಗೆ ಖಾಸಗಿ ಬಸ್ ಡಿಕ್ಕಿ:ಯುವ ಉದ್ಯಮಿ ಸಾವು
October 18, 2022ಮೈಸೂರು, ಅ. 17(ಆರ್‍ಕೆ)- ಮೈಸೂರು-ತಿ.ನರಸೀಪುರ ನಡುವೆ ವರಕೋಡು ಗೇಟ್ ಬಳಿ ಸೋಮವಾರ ಮಧ್ಯಾಹ್ನ ಸಂಭವಿ ಸಿದ ಭೀಕರ ರಸ್ತೆ ಅಪಘಾತದಲ್ಲಿ ಪೌಲ್ಟ್ರಿ ಫಾರಂ ನಿರ್ವಹಿಸುತ್ತಿದ್ದ ಯುವ ಉದ್ಯಮಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೈಸೂರಿನ ಕೆಸಿ ಬಡಾವಣೆ ನಿವಾಸಿ ಎಂ.ಪಿ. ನಾರಾಯಣ ಅವರ ಏಕೈಕ ಪುತ್ರ ಸಾಗರ್(34) ದುರಂತದಲ್ಲಿ ಸಾವ ನ್ನಪ್ಪಿದವರಾಗಿದ್ದು, ಇವರು ಚಾಲನೆ ಮಾಡುತ್ತಿದ್ದ ಸ್ಕೋಡಾ ಕಾರಿಗೆ ಸಚಿನ್ ಟ್ರಾವೆಲ್ಸ್‍ನ ಖಾಸಗಿ ಬಸ್ಸೊಂದು ಡಿಕ್ಕಿ ಹೊಡೆದ ಪರಿಣಾಮ ಸಾಗರ್ ಸ್ಥಳದಲ್ಲೇ ಮೃತಪಟ್ಟಿ ದ್ದಾರೆ. ಪಿಲ್ಲಹಳ್ಳಿ ಬಳಿಯ ತಮ್ಮ ಪೌಲ್ಟ್ರಿ…
ರಾಜಕೀಯ ನಿವೃತ್ತಿ ಪ್ರಕಟಿಸಿದ ಹಿರಿಯ ಮುತ್ಸದ್ದಿ ರಾಜಕಾರಣಿ ಸಂಸದ ವಿ.ಶ್ರೀನಿವಾಸ್‍ಪ್ರಸಾದ್
October 18, 2022ಮೈಸೂರು,ಅ.17(ಆರ್‍ಕೆಬಿ)- ಹಿರಿಯ ಮುತ್ಸದ್ದಿ ರಾಜಕಾರಣಿ, ಸಂಸದ ವಿ.ಶ್ರೀನಿವಾಸ ಪ್ರಸಾದ್ ಅವರು ರಾಜಕೀಯ ನಿವೃತ್ತಿ ಘೋಷಣೆ ಮಾಡಿದ್ದಾರೆ. ಮೈಸೂರಿನ ಕಲಾಮಂದಿರದಲ್ಲಿ ಸಮಾನತೆ-ಸ್ವಾಭಿಮಾನ- ಸ್ವಾವಲಂಬನೆ ಪ್ರತಿಷ್ಠಾನ ಮತ್ತು ಸಮಾನತೆ ಪ್ರಕಾಶನ ಜಂಟಿಯಾಗಿ ಸೋಮವಾರ ಆಯೋ ಜಿಸಿದ್ದ ಕರ್ನಾಟಕ ರಾಜ್ಯ ಕಾನೂನು ವಿವಿ ಕುಲಪತಿಗಳಾಗಿ ಅಧಿಕಾರ ವಹಿಸಿಕೊಂಡಿರುವ ಪ್ರೊ.ಸಿ. ಬಸವರಾಜು ಹಾಗೂ ಕರ್ನಾಟಕ ರಾಜ್ಯ ಮುಕ್ತ ವಿವಿಯಿಂದ ಪಿಹೆಚ್.ಡಿ ಪದವಿ ಪಡೆದಿರುವ ಡಾ.ಕಲ್ಯಾಣಸಿರಿ ಬಂತೇಜಿ ಅವರ ಅಭಿನಂದನಾ ಸಮಾರಂಭದ ಅಧ್ಯಕ್ಷತೆ ವಹಿಸಿ, ಮಾತನಾಡುವ ವೇಳೆ ಅವರು ತಮ್ಮ ರಾಜಕೀಯ ನಿವೃತ್ತಿ ಘೋಷಿಸಿದರು….
ಅಕ್ಟೋಬರ್ ಮಳೆಗೆ ಕೆಆರ್‍ಎಸ್ ಅಣೆಕಟ್ಟೆಭರ್ತಿ
October 18, 2022ಮೈಸೂರು,ಅ.17(ಆರ್‍ಕೆ)-ಮತ್ತೆ ಭಾರೀ ಮಳೆ ಸುರಿಯುತ್ತಿರುವುದರಿಂದ ಈಗ ಮತ್ತೊಮ್ಮೆ ಭರ್ತಿ ಯಾಗಿರುವ ಮಂಡ್ಯ ಜಿಲ್ಲೆಯ ಕೃಷ್ಣರಾಜಸಾಗರ (ಕೆಆರ್‍ಎಸ್) ಅಣೆಕಟ್ಟೆಯಿಂದ ಅಪಾರ ಪ್ರಮಾಣದ ನೀರನ್ನು ಹೊರಗೆ ಬಿಡಲಾಗುತ್ತಿದೆ. ಇಂದು ಬೆಳಗ್ಗೆ ಜಲಾಶಯದಿಂದ 51,665 ರಿಂದ 54,311 ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗಿದೆ. ಮಳೆ ಪ್ರಮಾಣ ಹೆಚ್ಚಾಗಿರುವುದರಿಂದ ವರ್ಷ ದೊಳಗೆ ಎರಡು ಬಾರಿ ಅಣೆಕಟ್ಟೆ ಗರಿಷ್ಠ ಮಟ್ಟ (124.80) ತಲುಪಿದೆ. ಇದರಿಂದಾಗಿ ಮಂಡ್ಯ, ಮೈಸೂರು ಹಾಗೂ ಬೆಂಗಳೂರು ನಗರಗಳಿಗೆ ಕುಡಿಯುವ ನೀರಿನ ಸಮಸ್ಯೆ ಉದ್ಭವವಾಗುವುದಿಲ್ಲ. ಅಷ್ಟೇ ಅಲ್ಲದೆ, ವ್ಯವಸ್ಥಾಯಕ್ಕೂ ವರ್ಷ ಪೂರ್ತಿ…
ಮೈಸೂರು-ಬೆಂಗಳೂರು ದಶಪಥ ಹೆದ್ದಾರಿಯ ಮಂಡ್ಯ, ಮದ್ದೂರು, ಶ್ರೀರಂಗಪಟ್ಟಣ ಬೈಪಾಸ್‍ಗಳು ಡಿಸೆಂಬರ್ ಒಳಗಾಗಿ ಸಂಚಾರಕ್ಕೆ ಮುಕ್ತ
October 18, 2022ಮೈಸೂರು, ಅ. 17(ಆರ್‍ಕೆ)-ಮೈಸೂರು-ಬೆಂಗಳೂರು ನಡು ವಿನ ದಶಪಥ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪ್ರಗತಿಯಲ್ಲಿದ್ದು, ಶ್ರೀರಂಗಪಟ್ಟಣ, ಮಂಡ್ಯ ಹಾಗೂ ಮದ್ದೂರು ನಗರಗಳ ಬೈಪಾಸ್ ರಸ್ತೆಯು ಡಿಸೆಂಬರ್ ಒಳಗೆ ಸಿದ್ಧವಾಗಲಿದೆ. ಬೆಂಗಳೂರಿನಿಂದ ಮದ್ದೂರುವರೆಗೆ ಈಗಾಗಲೇ ಹೆದ್ದಾರಿ ಸಿದ್ಧವಾಗಿದ್ದು, ಸೇತುವೆ, ಅಂಡರ್‍ಪಾಸ್, ಓವರ್ ಬ್ರಿಡ್ಜ್‍ಗಳ ನಿರ್ಮಾಣ ಪೂರ್ಣಗೊಂಡಿದೆ. ಹಾಗಾಗಿ ಮದ್ದೂರು, ಮಂಡ್ಯ ಹಾಗೂ ಶ್ರೀರಂಗಪಟ್ಟಣಗಳ ಹೊರಗೆ ಬೈಪಾಸ್ ನಿರ್ಮಾಣ ಉಳಿದ ಕಾಮ ಗಾರಿ ವೇಗವಾಗಿ ನಡೆಯುತ್ತಿದ್ದು, ಇದೇ ಡಿಸೆಂಬರ್ ಮಾಹೆ ಅಂತ್ಯ ದೊಳಗೆ ಪೂರ್ಣಗೊಳಿಸಲಾಗುವುದು ಎಂದು ಭಾರತ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ…