ಮೈಸೂರು ಜಿಲ್ಲೆಯಲ್ಲಿ ಡೆಂಗ್ಯೂ ಆತಂಕ
ಮೈಸೂರು

ಮೈಸೂರು ಜಿಲ್ಲೆಯಲ್ಲಿ ಡೆಂಗ್ಯೂ ಆತಂಕ

October 19, 2022

ಮೈಸೂರು, ಅ. 18(ಎಂಟಿವೈ)- ಸಾಂಸ್ಕøತಿಕ ನಗರಿ ಮೈಸೂರಲ್ಲಿ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಡೆಂಗ್ಯು ಆತಂಕ ಹೆಚ್ಚಾಗುತ್ತಿದೆ. ಈ ಮಾರಕ ಸೋಂಕು ಹರಡದಂತೆ ಕಟ್ಟೆಚ್ಚರ ವಹಿಸುವ ನಿಟ್ಟಿನಲ್ಲಿ ಆರೋಗ್ಯ ಸಿಬ್ಬಂದಿ ಮನೆ ಮನೆ ಸಮೀಕ್ಷೆ ಕೈಗೊಂಡು, ಜಾಗೃತಿ ಮೂಡಿಸಲಾರಂಭಿಸಿದ್ದಾರೆ.
ರಸ್ತೆ, ಮನೆ ಸುತ್ತಮುತ್ತ ಮಳೆ ನೀರು ನಿಲ್ಲುವುದರಿಂದ ಅಪಾರ ಸೊಳ್ಳೆಗಳ ಉತ್ಪತ್ತಿಯಾಗುತ್ತಿದ್ದು, ಈಡಿಸ್ ಈಜಿಪ್ಟೈ ಸೊಳ್ಳೆ ಹಗಲಿನ ವೇಳೆ ಜನರನ್ನು ಕಚ್ಚುವುದರಿಂದ ಡೆಂಗ್ಯು ಸೋಂಕು ಹರಡಲಿದ್ದು, ಕೆಲ ಸಂದರ್ಭದಲ್ಲಿ ಜೀವಕ್ಕೆ ಕುತ್ತು ತಂದೊಡ್ಡುತ್ತಿದೆ. ಈ ಸಾಲಿನ ಜನವರಿಯಿಂದ ಅ.18ರವರೆಗೆ ಮೈಸೂರು ಜಿಲ್ಲೆಯಲ್ಲಿ 638 ಡೆಂಗ್ಯೂ ಪ್ರಕರಣ ದಾಖಲಾಗಿದೆ. ಕಳೆದ ಒಂದು ವಾರದಿಂದ ಎಡಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಈ ತಿಂಗ ಳಾಂತ್ಯಕ್ಕೆ ಡೆಂಗ್ಯೂ ಸೋಂಕಿತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದ್ದು, ಹಾಗಾಗಿ ಈಡಿಸ್ ಸೊಳ್ಳೆಗಳ ಮೂಲೋ ತ್ಪಾಟನೆಗೆ ಆರೋಗ್ಯ ಸಿಬ್ಬಂದಿ ಸಮರ ಸಾರಿದ್ದಾರೆ. ಅಲ್ಲದೆ, ಪ್ರತಿ ಮನೆಗೂ ತೆರಳಿ ಸ್ವಚ್ಛತೆ ಕಾಪಾಡಿಕೊಳ್ಳು ವಂತೆ ಸಲಹೆ ನೀಡುತ್ತಿದ್ದಾರೆ.

ಕಾಡುತ್ತಿದ್ದ ಜ್ವರದ ಬಾಧೆ: ಈ ಸಾಲಿನ ಜೂನ್‍ನಿಂದ ಸೆಪ್ಟೆಂಬರ್‍ವರೆಗೆ ಮೈಸೂರು ನಗರ ಸೇರಿದಂತೆ ಜಿಲ್ಲೆ ಯಲ್ಲಿ ಸಾಕಷ್ಟು ಮಂದಿಗೆ ಜ್ವರದ ಬಾಧೆ ಕಾಡಿತ್ತು. ಈಗ ನಿಯಂತ್ರಣಕ್ಕೆ ಬಂದಿದೆಯಾದರೂ, ಮಾಸಾಂತ್ಯದ ವೇಳೆಗೆ ಮಳೆಯಿಂದಾಗಿ ಇನ್ನಷ್ಟು ಕಾಡಬಹುದು ಎಂಬ ಆತಂಕ ವಿದೆ. ಜನವರಿಯಿಂದ ಇದುವರೆಗೆ ಜಿಲ್ಲೆಯಲ್ಲಿ ಡೆಂಗ್ಯು ಶಂಕೆ ಮೇರೆಗೆ 3829 ಮಂದಿಯ ರಕ್ತದ ಮಾದರಿಯನ್ನು ಪರೀಕ್ಷಿಸಲಾಗಿದೆ. ಅದರಲ್ಲಿ 638 ಪಾಸಿಟಿವ್ ಪ್ರಕರಣ ಗಳು ಪತ್ತೆಯಾಗಿವೆ. ಜನವರಿಯಲ್ಲಿ 39, ಫೆÉಬ್ರವರಿಯಲ್ಲಿ 28, ಮಾರ್ಚ್‍ನಲ್ಲಿ 29, ಏಪ್ರಿಲ್‍ನಲ್ಲಿ 30, ಮೇ ನಲ್ಲಿ 55, ಜೂನ್‍ನಲ್ಲಿ 115, ಜುಲೈನಲ್ಲಿ 149, ಆಗಸ್ಟ್‍ನಲ್ಲಿ 91, ಸೆಪ್ಟೆಂಬರ್‍ನಲ್ಲಿ 78, ಅಕ್ಟೋಬರ್(ಅ.1ರಿಂದ ಈವರೆಗೆ)-24 ಡೆಂಗ್ಯೂ ಪ್ರಕರಣಗಳು ದಾಖಲಾಗಿವೆ.

ಆತಂಕಪಡುವ ಅಗತ್ಯವಿಲ್ಲ: ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಎಸ್. ಚಿದಂ ಬರ ಮಾತನಾಡಿ, ಮೈಸೂರು ಜಿಲ್ಲೆಯಲ್ಲಿ ಕಳೆದ ಮೂರು ತಿಂಗಳಿಗೆ ಹೋಲಿಸಿದರೆ, ಈಗ ಡೆಂಗ್ಯೂ ಪ್ರಕರಣ ಇಳಿ ಮುಖವಾಗಿದೆ. ಮುಂದಿನ ದಿನಗಳಲ್ಲಿ ಮಳೆ ಹೆಚ್ಚಾದರೆ, ಡೆಂಗ್ಯೂ ಪ್ರಕರಣ ಹೆಚ್ಚಾಗಬಹುದು ಎಂದು ಭಾವಿಸು ವುದು ಸರಿಯಲ್ಲ. ಈ ಖಾಯಿಲೆ ಒಮ್ಮೆ ನಿಯಂತ್ರಣಕ್ಕೆ ಬಂದರೆ, ಅದು ಮುಂದಿನ ದಿನಗಳಲ್ಲಿ ಇಳಿಮುಖ ವಾಗುತ್ತಲೇ ಹೋಗುತ್ತದೆ. ಜಿಲ್ಲೆಯ ಜನತೆ ಡೆಂಗ್ಯೂಗೆ ಆತಂಕಪಡುವ ಅಗತ್ಯವಿಲ್ಲ ಎಂದರು.

ಮಳೆ ನೀರು ನಿಂತಾಗ: ಮಳೆ ನೀರು ಒಂದೆಡೆ ಬಹಳ ದಿನ ನಿಂತಿದ್ದಾಗ ಈಡಿಸ್ ಸೊಳ್ಳೆ ಉತ್ಪಾದನೆಯಾಗುತ್ತದೆ. ಈ ಸೊಳ್ಳೆಗಳು ಹಗಲಿನ ವೇಳೆ ಮನುಷ್ಯನನ್ನು ಕಚ್ಚುತ್ತವೆ. ರೋಗ ನಿರೋಧಕ ಶಕ್ತಿ ಕಡಿಮೆ ಇರುವ ಸಣ್ಣ ಮಕ್ಕಳು, ಹಿರಿಯ ನಾಗರಿಕರು, ವಿವಿಧ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿರುವವರು ಹಾಗೂ ಹಗಲಿನ ವೇಳೆ ಹೆಚ್ಚಾಗಿ ಮಲಗುವಂತಹ ವ್ಯಕ್ತಿಗಳಿಗೆ ಡೆಂಗ್ಯೂ ಹರಡುತ್ತದೆ. ಜನರು ತಮ್ಮ ಮನೆಯಲ್ಲಿ ನೀರಿನ ತೊಟ್ಟಿಗಳನ್ನು ಶುದ್ಧೀ ಕರಿಸಲು ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.

ಇಳಿಮುಖ: 2017ರಲ್ಲಿ ಜಿಲ್ಲೆಯಲ್ಲಿ 843 ಪ್ರಕರಣ ಪತ್ತೆಯಾಗಿತ್ತು. ಇದನ್ನು ಹೊರತುಪಡಿಸಿದರೆ ಕಳೆದ 9 ವರ್ಷದಲ್ಲಿ ಗಣನೀಯ ಪ್ರಮಾಣದಲ್ಲಿ ಇಳಿಮುಖ ಕಂಡಿದೆ. ಈ ವರ್ಷ 638 ಮಂದಿಯಲ್ಲಿ ಡೆಂಗ್ಯೂ ಪತ್ತೆಯಾಗಿದೆ. ಆರೋಗ್ಯ ಇಲಾಖೆ ಕಟ್ಟುನಿಟ್ಟಿನ ಮುಂಜಾಗೃತಾ ಕ್ರಮಗಳನ್ನು ಕೈಗೊಂಡಿದೆ.

Translate »