ಕುಕ್ಕರಹಳ್ಳಿ ಕೆರೆ ಏರಿ ಮೇಲೆ ವಿಹಾರ ನಿಷಿದ್ಧ
ಮೈಸೂರು

ಕುಕ್ಕರಹಳ್ಳಿ ಕೆರೆ ಏರಿ ಮೇಲೆ ವಿಹಾರ ನಿಷಿದ್ಧ

October 19, 2022

ಮೈಸೂರು, ಅ. 18 (ಆರ್‍ಕೆ)- ಇದೇ ಮೊದಲು ತುಂಬಿ ತುಳುಕುತ್ತಿರುವ ಮೈಸೂ ರಿನ ಕುಕ್ಕರಹಳ್ಳಿ ಕೆರೆಯ ಏರಿ ಶಿಥಿಲಾ ವಸ್ಥೆಯಲ್ಲಿರುವುದರಿಂದ ವಾಯುವಿಹಾರ ವನ್ನು ಇಂದಿನಿಂದ ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ. ಇತ್ತೀಚೆಗೆ ಸುರಿದ ಭಾರೀ ಮಳೆಯಿಂದಾಗಿ ಕೆರೆಗೆ ಅತೀ ಹೆಚ್ಚಿನ ಪ್ರಮಾಣದ ನೀರು ಹರಿದು ಬಂದಿರುವುದರಿಂದ ಮುನ್ನೆಚ್ಚರಿಕೆಯಾಗಿ ಮೈಸೂರು ವಿಶ್ವ ವಿದ್ಯಾನಿಲಯವು ವಾಯು ವಿಹಾರವನ್ನು ನಿಷೇಧಿಸಿ ಮುಂಜಾಗ್ರತಾ ಸುರಕ್ಷಾ ಕ್ರಮಗಳನ್ನು ಕೈಗೊಂಡಿದೆ.

ಇದೇ ಮೊದಲ ಬಾರಿ ಕೆರೆಯಲ್ಲಿ ಅಧಿಕ ನೀರು ಸಂಗ್ರಹವಾಗಿದೆ. ನೀರು ಹೊರ ಹರಿದು ಹೋಗಲು ಅಳವಡಿಸಿರುವ ತೂಬಿನ ಕಬ್ಬಿಣದ ಗೇಟ್ ತುಕ್ಕು ಹಿಡಿದು, ಕಾರ್ಯ ಸ್ಥಗಿತಗೊಂಡಿರುವ ಕಾರಣ ಹೆಚ್ಚುವರಿ ನೀರಿನ ಹೊರ ಹರಿವು ಸಾಧ್ಯವಾಗಿಲ್ಲ.

ಕೆರೆ ಏರಿಯ ಇಕ್ಕೆಲಗಳಲ್ಲಿರುವ ಮರ ಗಳು ಅಲ್ಲಲ್ಲಿ ಬುಡ ಸಹಿತ ಬಾಗಿರುವು ದರಿಂದ ಯಾವುದೇ ಸಂದರ್ಭದಲ್ಲಾದ ರೂ ಉರುಳಿ ಬೀಳುವ ಸಾಧ್ಯತೆ ಇದೆ.
ಜೊತೆಗೆ ಪಡುವಾರಹಳ್ಳಿ ಕಡೆಯಿಂದ ಹರಿದು ಬರುವ ನೀರಿನ ನಿಯಂತ್ರಣಕ್ಕೆ ಅಳವಡಿಸಿರುವ ಕಟ್ಟೆಯು ಒಡೆದಿದೆ. ಏರಿಯೂ ಕೆಲವೆಡೆ ಕುಸಿದಿರುವುದರಿಂದ ವಾಯುವಿಹಾರ ಮಾಡುವಾಗ ಅಪಾಯ ಸಂಭವಿಸಬಹುದೆಂಬ ಕಾರಣಕ್ಕೆ ಮುಂಜಾ ಗ್ರತಾ ಕ್ರಮವಾಗಿ ವಾಯುವಿಹಾರವನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ ಎಂದು ಮೈಸೂರು ವಿಶ್ವವಿದ್ಯಾನಿಲಯದ ಕುಲ ಸಚಿವ ಪ್ರೊ. ಆರ್. ಶಿವಪ್ಪ `ಮೈಸೂರು ಮಿತ್ರ’ನಿಗೆ ತಿಳಿಸಿದ್ದಾರೆ.

ಒಳಹರಿವು ಹೆಚ್ಚಾಗಿರುವ ಕಾರಣ, ಕೆರೆ ಆವರಣದಲ್ಲಿರುವ ಯುಜಿಸಿ-ಮಾನವ ಸಂಪನ್ಮೂಲ ಅಭಿವೃದ್ಧಿ ಕೇಂದ್ರದ ಕಟ್ಟಡ ದಲ್ಲೂ ನೀರು ತುಂಬಿದ್ದು, ಅಲ್ಲಿನ ಚಟುವಟಿಕೆಗಳೆಲ್ಲವೂ ಸ್ಥಗಿತಗೊಂಡಿವೆ. ಸೋಮವಾರ ಇಂಜಿನಿಯರ್‍ಗಳೊಂದಿಗೆ ಕೆರೆಗೆ ತೆರಳಿ ಪರಿಶೀಲಿಸಿದಾಗ ಅಪಾಯ ಸಂಭವಿಸುವ ಸಾಧ್ಯತೆ ಇದೆ ಎಂಬುದು ಮನವರಿಕೆಯಾದ ಹಿನ್ನೆಲೆಯಲ್ಲಿ ಇಂದಿ ನಿಂದ ಬೆಳಗ್ಗೆ ಮತ್ತು ಸಂಜೆ ವಾಕಿಂಗ್ ಅನ್ನು ನಿಷೇಧಿಸುವ ನಿರ್ಧಾರ ಕೈಗೊಳ್ಳ ಲಾಯಿತು. ಅಧಿಕ ನೀರು ಹೊರಕ್ಕೆ ಹರಿಯಬಿಡಲು ಇರುವ ಗೇಟ್ ಸ್ಥಗಿತ ಗೊಂಡಿರುವುದರಿಂದ ಮೋಟಾರ್‍ನಿಂದ ಮಳೆ ನೀರು ಚರಂಡಿಗೆ ನೀರನ್ನು ಇಂದಿ ನಿಂದ ಪಂಪ್ ಮಾಡುವ ಕೆಲಸ ಆರಂಭಿಸ ಲಾಗಿದ್ದು, ನೀರಿನ ಪ್ರಮಾಣ ಕಡಿಮೆಯಾದ ನಂತರ ಗೇಟ್ ದುರಸ್ತಿ ಕಾರ್ಯದ ಜೊತೆಗೆ ಬಾಗಿರುವ ಮರಗಳನ್ನು ತೆರವುಗೊಳಿಸಿ ಬಿರುಕು ಸರಿಪಡಿಸಲಾಗುವುದು ಎಂದು ಪ್ರೊ. ಶಿವಪ್ಪ ನುಡಿದರು. ವಾಯುವಿಹಾರಿಗಳು ಹಾಗೂ ಕೆರೆಯ ಸುರಕ್ಷತೆಗಾಗಿ ವಿಶ್ವವಿದ್ಯಾ ನಿಲಯವು ಅಗತ್ಯ ಕ್ರಮ ಕೈಗೊಂಡಿದ್ದು, ಸಾರ್ವ ಜನಿಕರು ಸಹಕರಿಸಬೇಕು. ಎಲ್ಲಾ ರಿಪೇರಿ ಕೆಲಸ ಮುಗಿದ ನಂತರ ಪರಿ ಶೀಲಿಸಿ ಕುಕ್ಕರಹಳ್ಳಿ ಕೆರೆಯಲ್ಲಿ ಅತೀ ಶೀಘ್ರ ವಾಯುವಿಹಾರಕ್ಕೆ ಮತ್ತೆ ಅವಕಾಶ ಕಲ್ಪಿಸಲಾಗುವುದು ಎಂದು ತಿಳಿಸಿದರು.

Translate »