ವಾಕಥಾನ್‍ನಲ್ಲಿ ಜುಂಬಾ ವರ್ಕ್‍ಔಟ್ ಮಾಡಿದ ಸಚಿವ ಡಾ. ಸಿ.ಎನ್.ಅಶ್ವತ್ಥನಾರಾಯಣ್
ಮೈಸೂರು

ವಾಕಥಾನ್‍ನಲ್ಲಿ ಜುಂಬಾ ವರ್ಕ್‍ಔಟ್ ಮಾಡಿದ ಸಚಿವ ಡಾ. ಸಿ.ಎನ್.ಅಶ್ವತ್ಥನಾರಾಯಣ್

October 21, 2022

ಮೈಸೂರು, ಅ.20(ಆರ್‍ಕೆ)-ಬಿಗ್ ಟೆಕ್ ಶೋ-2022ರ ಅಂಗವಾಗಿ ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ (ಏಆಇಒ) ವತಿಯಿಂದ ಮೈಸೂರಿನ ಅರಮನೆ ಉತ್ತರ ದ್ವಾರದ ಶ್ರೀ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಇಂದು ಆಯೋಜಿಸಿದ್ದ ವಾಕಥಾನ್‍ನಲ್ಲಿ ಐಟಿ-ಬಿಟಿ, ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್.ಅಶ್ವತ್ಥನಾರಾಯಣ ಅವರು ಪಾಲ್ಗೊಂಡು ಜುಂಬಾ ವರ್ಕ್‍ಔಟ್ ಮಾಡುವ ಮೂಲಕ ಯುವ ಉದ್ಯಮಿಗಳನ್ನು ಪ್ರೋತ್ಸಾಹಿಸಿದರು.
`ಪ್ರಗತಿಯ ಪರಂಪರೆ ನಾಡಿಗೆ-ಸಮರ್ಥ ಆರ್ಥಿಕ ಬೆಳವಣಿಗೆ ಕಡೆಗೆ’ ಘೋಷಣೆ ಯೊಂದಿಗೆ ಏರ್ಪಡಿಸಿದ್ದ 5 ಕಿ.ಮೀ. ವಾಕಥಾನ್‍ಗೆ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದ ಸಚಿವರು, ಜುಂಬಾ ವರ್ಕ್‍ಔಟ್ ಮಾಡಿ ಗಮನ ಸೆಳೆದರು.

ದೊಡ್ಡ ಗಡಿಯಾರ, ಗಾಂಧಿ ಸ್ಕ್ವೇರ್, ಚಿಕ್ಕ ಗಡಿಯಾರ, ಡಿ.ದೇವರಾಜ ಅರಸು ರಸ್ತೆ, ಡಿಸಿ ಕಚೇರಿ, ಕ್ರಾಫರ್ಡ್ ಹಾಲ್, ಮಹಾರಾಜ ಕಾಲೇಜು ಮೈದಾನ, ರಾಮ ಸ್ವಾಮಿ ಸರ್ಕಲ್, ಚಾಮರಾಜ ಜೋಡಿ ರಸ್ತೆ, ಸರ್ಕಾರಿ ಸಂಸ್ಕøತ ಪಾಠಶಾಲೆ ಸರ್ಕಲ್, ಗನ್‍ಹೌಸ್ ಸರ್ಕಲ್, ಹಾರ್ಡಿಂಜ್ ಸರ್ಕಲ್ ಮೂಲಕ ಸಾಗಿದ ವಾಕಥಾನ್, ಮರಳಿ ಕೋಟೆ ಆಂಜನೇಯಸ್ವಾಮಿ ದೇವಸ್ಥಾನ ತಲುಪಿ ಅಂತ್ಯಗೊಂಡಿತು.

`ಕರ್ನಾಟಕ-ದಿ ಗ್ಲೋಬಲ್ ಇನ್ನೋವೇಷನ್ ಅಂಡ್ ಸ್ಟಾರ್ಟ್ ಅಪ್ ಹಬ್’, `ಕರ್ನಾಟಕ ಹೋಂ ಟು ಮೋರ್ ದೆನ್ 400+ಗ್ಲೋಬಲ್ ಆರ್ ಅಂಡ್ ಡಿ ಸೆಂಟರ್ಸ್’, `ವಾಕ್ ಫಾರ್ ಆತ್ಮ ನಿರ್ಭರ್ ಭಾರತ್’ ಮತ್ತು `ವಾಕ್ ಫಾರ್ ವಿಮೆನ್ ಎಂಪವರ್‍ಮೆಂಟ್’ ಎಂಬಿತ್ಯಾದಿ ಘೋಷಣಾ ಫಲಕಗಳನ್ನು ಹಿಡಿದು ಯುವ ಉದ್ಯಮಿಗಳು ವಾಕಥಾನ್‍ನಲ್ಲಿ ಜನ ಜಾಗೃತಿ ಮೂಡಿಸಿದರು.

ಕೆಡಿಇಎಂ ಸಿಇಓ ಸಂಜೀವ್ ಗುಪ್ತ, ಅಧ್ಯಕ್ಷ ಬಿ.ವಿ.ನಾಯ್ಡು, ಮೈಸೂರಿನ ವಿವಿಧ ಐಟಿ- ಬಿಟಿ ಕಂಪನಿಗಳ ನೌಕರರು, ಕೆ-ಟೆಕ್, ಕೈಗಾರಿಕಾ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಮಾಹಿತಿ ತಂತ್ರಜ್ಞಾನ ವಲಯದ ಹಲವರು ವಾಕಥಾನ್‍ನಲ್ಲಿ ಪಾಲ್ಗೊಂಡಿದ್ದರು.

Translate »