ಮೈಸೂರು

ಮೈಸೂರಿನ ಪ್ರಥಮ ವಿದ್ಯುತ್ ವಾಹನ ಚಾರ್ಜಿಂಗ್ ಕೇಂದ್ರ ಆರಂಭ
ಮೈಸೂರು

ಮೈಸೂರಿನ ಪ್ರಥಮ ವಿದ್ಯುತ್ ವಾಹನ ಚಾರ್ಜಿಂಗ್ ಕೇಂದ್ರ ಆರಂಭ

January 28, 2021

ಮೈಸೂರು, ಜ.27(ಎಂಟಿವೈ)- ಪರಿ ಸರ ಮಾಲಿನ್ಯ ತಡೆಗಟ್ಟುವುದರೊಂದಿಗೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಪೆಟ್ರೋಲ್ ದರದಿಂದ ಕಂಗೆಟ್ಟಿರುವ ಜನರು ಈಗ `ಬ್ಯಾಟರಿ ಚಾಲಿತ ವಾಹನ’ಗಳತ್ತ ಮುಖ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮೈಸೂ ರಿನಲ್ಲಿ ವಿದ್ಯುತ್ ಚಾಲಿತ ವಾಹನಗಳ ಮೊದಲ ಚಾರ್ಜಿಂಗ್ ಕೇಂದ್ರವನ್ನು `ಚಾಮುಂಡೇ ಶ್ವರಿ ವಿದ್ಯುತ್ ಸರಬರಾಜು ನಿಗಮ’ (ಸೆಸ್ಕ್) ಆರಂಭಿಸಿದೆ. ನಗರದಲ್ಲಿ ಶೀಘ್ರದಲ್ಲೇ ಇನ್ನೂ 2 ಚಾರ್ಜಿಂಗ್ ಕೇಂದ್ರ ಆರಂಭಿಸಲಿದೆ. ಮೈಸೂರು-ಹುಣಸೂರು ಮುಖ್ಯರಸ್ತೆ ಯಲ್ಲಿ ಹಿನಕಲ್ ಬಳಿ ವಿಜಯನಗರ ಬಡಾ ವಣೆಗೆ ಸೇರಿದಂತಿರುವ `ಸೆಸ್ಕ್’ ಕಚೇರಿ ಆವರಣದಲ್ಲಿ…

ಮೈಸೂರು ಅರಮನೆಯ ಮೊಂಬತ್ತಿ ದೀಪಗುಚ್ಛ ಆನ್‍ಲೈನ್ ಹರಾಜು?
ಮೈಸೂರು

ಮೈಸೂರು ಅರಮನೆಯ ಮೊಂಬತ್ತಿ ದೀಪಗುಚ್ಛ ಆನ್‍ಲೈನ್ ಹರಾಜು?

January 28, 2021

ಮೈಸೂರು,ಜ.27- ಮೈಸೂರು ಅರ ಮನೆಯ ಮುದ್ರೆ ಹೊಂದಿರುವ `ಮೊಂಬತ್ತಿ ದೀಪಗುಚ್ಛ’ ಇದೀಗ ಆನ್‍ಲೈನ್ ಹರಾ ಜಿಗೆ ಒಳಗಾಗಲಿದೆ. ಬುಧವಾರ (ಜ.27) ತೆರೆದುಕೊಂಡಿರುವ ಈ ಅಂತರ್ಜಾಲ ಮಾರಾಟ ಗುರುವಾರವೂ (ಜ.28) ಮುಂದು ವರಿಯಲಿದೆ. ಹೆಸರಾಂತ ಹರಾಜು ಸಂಸ್ಥೆ ಯಾದ `ಂsಣಚಿ ಉuಡಿu’ ಈ ಹರಾಜು ಪ್ರಕ್ರಿಯೆ ನಡೆಸಿದೆ. `ಭವ್ಯವಾದ ಸಂಗ್ರಹ’ ಗಳ ಗುಂಪಿಗೆ ಸೇರಿದ ಈ `ಮೊಂಬತ್ತಿ ದೀಪಗುಚ್ಛ’ವು ಹರಳಿನಿಂದ ರೂಪಿಸಿದ ಮಿನರೆಟ್ ಡೋಮ್ ಪಿನಾಕಲ್ ವಿನ್ಯಾಸ ಹೊಂದಿದೆ. ಗೋಡೆಗಳ ಬಣ್ಣಗಳಿಗೆ ತಕ್ಕ ದಾಗಿ ಹೊಂದಿಕೆಯಾಗಬಲ್ಲ ರೀತಿಯಲ್ಲಿ ರುವ…

ಕನ್ನಡದಲ್ಲಿ ವ್ಯವಹರಿಸಲು ಅಂಗಡಿ ಮಾಲೀಕರಿಗೆ ಗಡುವು
ಮೈಸೂರು

ಕನ್ನಡದಲ್ಲಿ ವ್ಯವಹರಿಸಲು ಅಂಗಡಿ ಮಾಲೀಕರಿಗೆ ಗಡುವು

January 28, 2021

ಮೈಸೂರು, ಜ.27(ಎಸ್‍ಪಿಎನ್)- ಕನ್ನಡದಲ್ಲಿ ವ್ಯವಹರಿಸದ 30 ಅಂಗಡಿ ಮಾಲೀಕರಿಗೆ ಇನ್ನೊಂದು ತಿಂಗಳಲ್ಲಿ ಕಡ್ಡಾಯವಾಗಿ ಕನ್ನಡ ಭಾಷೆ ಬಳಸುವಂತೆ ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯರು ತಿಳುವಳಿಕೆ ನೋಟೀಸ್ ಜಾರಿ ಮಾಡಿದ್ದಾರೆ. ಕರ್ನಾಟಕ ರಾಜ್ಯ ಸರ್ಕಾರ `ಕನ್ನಡ ಕಾಯಕ ವರ್ಷ’ ಎಂದು ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ಮೈಸೂರು ಪಾಲಿಕೆ ವಲಯ ಕಚೇರಿ-6ರ ವ್ಯಾಪ್ತಿಯ ದೇವರಾಜ ಅರಸು ರಸ್ತೆ, ಶಿವರಾಂಪೇಟೆ, ಕೊತ್ವಾಲ್ ರಾಮಯ್ಯ ರಸ್ತೆ ಹಾಗೂ ಸುತ್ತಮುತ್ತಲಿನ ರಸ್ತೆಗಳ ಅಂಗಡಿಗಳಿಗೆ ಗಣರಾಜ್ಯೋತ್ಸವ ಪ್ರಯುಕ್ತ ಕನ್ನಡ ಜಾಗೃತಿ ಸದಸ್ಯರು 30ಕ್ಕೂ ಹೆಚ್ಚು…

ಇಂದು ಫೀ.ಮಾ. ಕಾರ್ಯಪ್ಪ ಜನ್ಮದಿನಾಚರಣೆ
ಮೈಸೂರು

ಇಂದು ಫೀ.ಮಾ. ಕಾರ್ಯಪ್ಪ ಜನ್ಮದಿನಾಚರಣೆ

January 28, 2021

ಮೈಸೂರು,ಜ.27-ಮೈಸೂರಿನ ಕೊಡವ ಸಮಾಜ ಹಾಗೂ ಕೊಡವ ಸಮಾಜ ಸಂಸ್ಕøತಿ ಮತ್ತು ಕೀಡಾ ಕ್ಲಬ್ ವತಿಯಿಂದ ನಾಳೆ (ಜ.28) ಸಂಜೆ 4 ಗಂಟೆಗೆ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಅವರ 122ನೇ ಜನ್ಮದಿನ ಆಚರಿಸಲಾಗು ತ್ತಿದೆ. ಮೈಸೂರಿನ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ವೃತ್ತ (ಮೆಟ್ರೋಪೋಲ್ ಸರ್ಕಲ್)ದಲ್ಲಿ ನಡೆಯ ಲಿರುವ ಈ ಕಾರ್ಯಕ್ರಮದಲ್ಲಿ ಸಂಸದ ಪ್ರತಾಪ್ ಸಿಂಹ, ಶಾಸಕರಾದ ಜಿ.ಟಿ.ದೇವೇಗೌಡ, ಎಲ್.ನಾಗೇಂದ್ರ, ಮಾಜಿ ಶಾಸಕ ವಾಸು, ಎಂಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಜಿ.ಡಿ.ಹರೀಶ್‍ಗೌಡ, ಮಾಜಿ ಮೇಯರ್‍ಗಳಾದ ಎಂ.ಜೆ. ರವಿಕುಮಾರ್, ಶ್ರೀಕಂಠಯ್ಯ, ಕಾರ್ಪೋರೇಟರ್…

ಈಗ ರೈತರ ಅಳಿವು-ಉಳಿವಿನ ಹೋರಾಟ ನಡೆಯುತ್ತಿದೆ
ಮೈಸೂರು

ಈಗ ರೈತರ ಅಳಿವು-ಉಳಿವಿನ ಹೋರಾಟ ನಡೆಯುತ್ತಿದೆ

January 28, 2021

ಮೈಸೂರು,ಜ.27(ಎಂಕೆ)-ಬಲಿಷ್ಠ ಕಂಪನಿಗಳು ಮತ್ತು ಯಾರ ಬೆಂಬಲವೂ ಇಲ್ಲದ ರೈತರ ನಡುವೆ ಅಳಿವು-ಉಳಿವಿನ ಪೈಪೋಟಿ ನಡೆಯುತ್ತಿದ್ದು, ಕೃಷಿಕರೇ ಇರಬಾರದು ಎಂಬ ಕಾನೂನುಗಳನ್ನು ರೂಪಿಸಲಾಗುತ್ತಿದೆ ಎಂದು ಅಮೃತಭೂಮಿ ಅಂತರರಾಷ್ಟ್ರೀಯ ಸುಸ್ಥಿರ ಕೃಷಿ ಹಾಗೂ ಅಭಿವೃದ್ಧಿ ಕೆಂದ್ರದ ಮ್ಯಾನೆಜಿಂಗ್ ಟ್ರಸ್ಟಿ ಚುಕ್ಕಿ ನಂಜುಂಡಸ್ವಾಮಿ ಹೇಳಿದರು. ನಗರದ ಜೆಎಲ್‍ಬಿ ರಸ್ತೆಯಲ್ಲಿರುವ ರೋಟರಿ ಸಭಾಂ ಗಣದಲ್ಲಿ ರೋಟರಿ ಮೈಸೂರು ಮಿಡ್‍ಟೌನ್ ವತಿಯಿಂದ ಆಯೋಜಿಸಿದ್ದ ‘ಪ್ರಗತಿಪರ ರೈತ ಪ್ರಶಸ್ತಿ’ ಪ್ರದಾನ ಕಾರ್ಯ ಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ರೈತರ ಅಳಿವು-ಉಳಿವಿನ ಪ್ರಶ್ನೆ ಎದುರಾಗಿದೆ. ಮಾರುಕಟ್ಟೆಯಲ್ಲಿ ಕೇಳಿದ್ದನ್ನು…

ಲಾಲ್ ಝಂಡಾದವರು ಹೆಜ್ಜೆ ಇಟ್ಟ ಕಡೆ ಗರಿಕೆ ಹುಲ್ಲೂ ಬೆಳೆಯುವುದಿಲ್ಲ
ಮೈಸೂರು

ಲಾಲ್ ಝಂಡಾದವರು ಹೆಜ್ಜೆ ಇಟ್ಟ ಕಡೆ ಗರಿಕೆ ಹುಲ್ಲೂ ಬೆಳೆಯುವುದಿಲ್ಲ

January 28, 2021

ಮೈಸೂರು, ಜ.27- ಲಾಲ್ ಝಂಡಾದವರು ಹೋದ ಕಡೆಯಲ್ಲಿ ಒಂದು ಗರಿಕೆ ಹುಲ್ಲೂ ಕೂಡ ಬೆಳೆಯುವುದಿಲ್ಲ. ಅವರು ಎಲ್ಲಿಯಾದರೂ ಇದ್ದು, ಉದ್ಧಾರ ಮಾಡಿರುವ ಯಾವುದಾದರೂ ಉದಾ ಹರಣೆ ಇದ್ದರೆ ಬಹಿರಂಗಪಡಿಸಲಿ ಎಂದು ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಆರ್.ರಘು ಸವಾಲು ಹಾಕಿದರು. ಜೆ.ಕೆ.ಟೈರ್ಸ್ ಬದಲಿ ಮತ್ತು ದಿನಗೂಲಿ ಕಾರ್ಮಿ ಕರ ಕ್ಷೇಮಾಭಿವೃದ್ಧಿ ಸಂಘದ ಆಶ್ರಯದಲ್ಲಿ ಗಾನ ಭಾರತಿ ಸಭಾಂಗಣದಲ್ಲಿ ಕಾರ್ಮಿಕ ನಾಯಕ ದತ್ತೋಪಂತ್ ಠೇಂಗಡಿಯವರ ಜನ್ಮ ಶತಾಬ್ಧಿ ಅಂಗ ವಾಗಿ ಆಯೋಜಿಸಲಾಗಿದ್ದ ಕಾರ್ಮಿಕ…

ದೆಹಲಿಯಲ್ಲಿ ಹಿಂಸಾಚಾರಕ್ಕೆ ಮಾಜಿ ಸಿಎಂ ಕುಮಾರಸ್ವಾಮಿ ವಿಷಾದ ರೈತರ ಸೋಗಿನಲ್ಲಿ ಅನ್ಯ ಶಕ್ತಿಗಳ ಕೈವಾಡ ಶಂಕೆ
ಮೈಸೂರು

ದೆಹಲಿಯಲ್ಲಿ ಹಿಂಸಾಚಾರಕ್ಕೆ ಮಾಜಿ ಸಿಎಂ ಕುಮಾರಸ್ವಾಮಿ ವಿಷಾದ ರೈತರ ಸೋಗಿನಲ್ಲಿ ಅನ್ಯ ಶಕ್ತಿಗಳ ಕೈವಾಡ ಶಂಕೆ

January 28, 2021

ಬೆಂಗಳೂರು, ಜ.27(ಕೆಎಂಶಿ)- ರೈತರ ಐತಿಹಾಸಿಕ ಹೋರಾ ಟದ ವೇಳೆ ದೆಹಲಿಯಲ್ಲಿ ನಡೆದ ಹಿಂಸಾಚಾರ ದುರ ದೃಷ್ಟಕರ. ರೈತರ ಸೋಗಿನಲ್ಲಿ ಅನ್ಯ ಶಕ್ತಿಗಳು ಇದರಲ್ಲಿ ಸೇರಿರಬಹುದು. ಈಗಾಗಲೇ ರೈತರೂ ಇದನ್ನು ಸ್ಪಷ್ಟ ಪಡಿಸಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಇಂದಿಲ್ಲಿ ತಿಳಿಸಿದ್ದಾರೆ. ಸರಣಿ ಟ್ವೀಟ್ ಮಾಡಿದ ಅವರು, ನ್ಯಾಯವಾದ ತಮ್ಮ ಉದ್ದೇಶವನ್ನು ಈಡೇರಿಸಿಕೊಳ್ಳಲು ಚಳಿ, ಗಾಳಿಯನ್ನೂ ಲೆಕ್ಕಿಸದೇ ಹೋರಾಡುತ್ತಿರುವ ರೈತರು ಇಂಥ ಕೃತ್ಯಕ್ಕೆ ಕೈಹಾಕಲಾರರು ಎಂಬುದೂ ಸತ್ಯ ಎಂದಿದ್ದಾರೆ. ನಿನ್ನೆಯ ಘಟನೆಗೆ ರೈತರನ್ನು ದೂಷಿಸುವಂಥ ಹೇಳಿಕೆಗಳು, ಅಭಿಪ್ರಾಯಗಳನ್ನು…

ನಾಳೆಯಿಂದ ಅರ್ಬನ್ ಹಾತ್‍ನಲ್ಲಿ ಹಸ್ತಶಿಲ್ಪ ಪ್ರದರ್ಶನ
ಮೈಸೂರು

ನಾಳೆಯಿಂದ ಅರ್ಬನ್ ಹಾತ್‍ನಲ್ಲಿ ಹಸ್ತಶಿಲ್ಪ ಪ್ರದರ್ಶನ

January 28, 2021

ಮೈಸೂರು, ಜ.27(ಎಂಟಿವೈ)- ಮೈಸೂರಿನ ರಿಂಗ್ ರಸ್ತೆಯ ಹೆಬ್ಬಾಳು ಕೈಗಾರಿಕಾ ಪ್ರದೇಶದಲ್ಲಿರುವ ಜೆಎಸ್‍ಎಸ್ ಅರ್ಬನ್ ಹಾತ್‍ನಲ್ಲಿ ಜ. 29 ರಿಂದ ಫೆ. 7ರವರೆಗೆ ಗಾಂಧಿ ಶಿಲ್ಪ ಬಜಾರ್ ಅಖಿಲ ಭಾರತ ಹಸ್ತಶಿಲ್ಪ ಪ್ರದರ್ಶನ ಹಾಗೂ ಮಾರಾಟ ಮೇಳ ಆಯೋಜಿಸಲಾಗಿದೆ ಎಂದು ಜೆಎಸ್‍ಎಸ್ ತಾಂತ್ರಿಕ ಶಿಕ್ಷಣ ವಿಭಾಗದ ಜಂಟಿ ನಿರ್ದೇಶಕ ಡಾ.ಎಚ್.ಆರ್. ಮಹದೇವಸ್ವಾಮಿ ತಿಳಿಸಿದ್ದಾರೆ. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜ.29ರಂದು ಸಂಜೆ 4ಕ್ಕೆ ಗಾಂಧಿ ಶಿಲ್ಪ ಬಜಾರ್ ಅಖಿಲ ಭಾರತ ಹಸ್ತಶಿಲ್ಪ ಪ್ರದರ್ಶನ ಹಾಗೂ…

ಮೈಸೂರಲ್ಲಿ ಪ್ರತ್ಯೇಕ ಆಕಸ್ಮಿಕ ಬೆಂಕಿ   ಪ್ರಕರಣ: ಮರ, ಗಿಡ ಆಹುತಿ
ಮೈಸೂರು

ಮೈಸೂರಲ್ಲಿ ಪ್ರತ್ಯೇಕ ಆಕಸ್ಮಿಕ ಬೆಂಕಿ  ಪ್ರಕರಣ: ಮರ, ಗಿಡ ಆಹುತಿ

January 28, 2021

ಮೈಸೂರು,ಜ.27(ವೈಡಿಎಸ್)- ಬಿಸಿಲಿನ ಝಳ ಹೆಚ್ಚಾಯ್ತು. ಇನ್ನು ಒಣಹುಲ್ಲಿಗೆ ಸಣ್ಣ ಕಿಡಿ ತಾಕಿದ್ರೆ ಸಾಕು ಬೆಂಕಿ ಅನಾಹುತ ಕಟ್ಟಿಟ್ಟ ಬುತ್ತಿ. ಅಂಥದ್ದೆ ಘಟನೆ ಬುಧವಾರ ಮೈಸೂರಿನಲ್ಲಿ ಎರಡು ಕಡೆ ನಡೆದಿದೆ. ಆಕಸ್ಮಿಕ ಬೆಂಕಿಗೆ ಗಿಡ-ಮರಗಳು ಆಹುತಿಯಾಗಿವೆ. ಅಖಿಲ ಭಾರತ ವಾಕ್ ಮತ್ತು ಶ್ರವಣಸಂಸ್ಥೆ ಎದುರಿನ ಪ್ರಾದೇಶಿಕ ಶಿಕ್ಷಣ ಸಂಸ್ಥೆ ಆವರಣದಲ್ಲಿ ಬುಧವಾರ ಮಧ್ಯಾಹ್ನ 12.30ರ ವೇಳೆ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿಯತೊಡಗಿದೆ. ಇದನ್ನು ಕಂಡ ಸಾರ್ವ ಜನಿಕರೊಬ್ಬರು ಅಗ್ನಿಶಾಮಕ ಠಾಣೆಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಸರಸ್ವತಿಪುರಂನ ಅಗ್ನಿಶಾಮಕ…

ನಾಳೆ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷ ಕೋಟೆ ಎಂ.ಶಿವಣ್ಣ ಮೈಸೂರು ಪ್ರವಾಸ
ಮೈಸೂರು

ನಾಳೆ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷ ಕೋಟೆ ಎಂ.ಶಿವಣ್ಣ ಮೈಸೂರು ಪ್ರವಾಸ

January 28, 2021

ಮೈಸೂರು,ಜ.27(ಪಿಎಂ)-ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷ ಎಂ.ಶಿವಣ್ಣ (ಕೋಟೆ) ಜ.29ರಂದು ಮೈಸೂರು ನಗರದ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಜ.28ರಂದು ಸಂಜೆ 4ಕ್ಕೆ ಬೆಂಗಳೂರು ನಿರ್ಗಮಿಸುವ ಎಂ.ಶಿವಣ್ಣ, ಸಂಜೆ 6.30ಕ್ಕೆ ಮೈಸೂ ರಿಗೆ ಆಗಮಿಸಿ, ಜಲದರ್ಶಿನಿ ಅತಿಥಿಗೃಹದಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಜ.29ರಂದು ಬೆಳಗ್ಗೆ 9ಕ್ಕೆ ಮಂಡಿ ಮೊಹಲ್ಲಾದ ಬಿಬಿ ಕಾಲೋನಿ ಹಾಗೂ ಸಿವಿ ರಸ್ತೆಯ ಪೌರಕಾರ್ಮಿಕರ ಕಾಲೋನಿಗೆ ಭೇಟಿ ನೀಡ ಲಿದ್ದಾರೆ. ಬಳಿಕ ಬೆಳಗ್ಗೆ 11ಕ್ಕೆ ಸಫಾಯಿ ಕರ್ಮಚಾರಿ ಶ್ರೇಯೋಭಿವೃದ್ಧಿಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ಸುದ್ದಿಗೋಷ್ಠಿ ನಡೆಸಲಿದ್ದಾರೆ….

1 308 309 310 311 312 1,611
Translate »