ಮೈಸೂರು,ಜ.27(ಆರ್‍ಕೆಬಿ)-ಮೈಸೂರು ನಗರಪಾಲಿಕೆ ಮೇಯರ್, ಉಪಮೇಯರ್ ಚುನಾವಣೆ ಮೈತ್ರಿ ವಿಚಾರವನ್ನು ಮೀಸಲಾತಿ ಪ್ರಕಟವಾದ ಬಳಿಕ ನಮ್ಮ ಸದಸ್ಯರ ತೀರ್ಮಾನದಂತೆ ನಡೆದುಕೊಳ್ಳುತ್ತೇವೆ. ಎರಡೂ ಪಕ್ಷಗಳು ನಮ್ಮ ವಿರೋಧಿಗಳೇ. ಹಾಗಾಗಿ ಸದ್ಯ ತಟಸ್ಥವಾಗಿರುತ್ತೇವೆ ಎಂದು ಕೆ.ಆರ್.ನಗರ ಶಾಸಕ ಸಾ.ರಾ.ಮಹೇಶ್ ತಿಳಿಸಿದರು. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಮ್ಮ ಪಾಲಿಕೆ ಸದಸ್ಯರು, ಮಾಜಿ ಮೇಯರ್‍ಗಳು, ಕೆಲವು ಕಾಂಗ್ರೆಸ್‍ನವರು ನಡೆದುಕೊಂಡ ರೀತಿಗಳ ಬಗ್ಗೆ ನಮ್ಮ ಗಮನಕ್ಕೆ ತಂದಿದ್ದಾರೆ. ನಗರದ ಇತರೆ ಕಾಂಗ್ರೆಸ್ ನಾಯಕರ ಜೊತೆ ನಮ್ಮ ಸಂಬಂಧ ಚೆನ್ನಾಗಿದ್ದು, ಯಾರೋ ಇಬ್ಬರು, ಮೂವರ ನಡವಳಿಕೆಯಿಂದ ಪಕ್ಷವನ್ನು…
ಇಟ್ಟಿಗೆಗೂಡಿನಿಂದ ಹಾರ್ಡಿಂಜ್ ವೃತ್ತದವರೆಗೆ 3.65 ಕೋಟಿ ವೆಚ್ಚದಲ್ಲಿ ರಸ್ತೆ, ಫುಟ್‍ಪಾತ್, ಮಳೆ ನೀರು ಚರಂಡಿ ಸೇರಿ ವಿವಿಧ ಕಾಮಗಾರಿಗೆ ಶಾಸಕ ಎಸ್.ಎ.ರಾಮದಾಸ್ ಚಾಲನೆ
January 28, 2021ಮೈಸೂರು, ಜ.27(ಆರ್‍ಕೆಬಿ)- ಕೃಷ್ಣರಾಜ ಕ್ಷೇತ್ರ ವ್ಯಾಪ್ತಿಯ ವಿವಿಧ ವಾರ್ಡ್ ವ್ಯಾಪ್ತಿಯಲ್ಲಿ ಒಟ್ಟಾರೆ 3.65 ಕೋಟಿ ರೂ. ಅಂದಾಜಿನ ವಿವಿಧ ಅಭಿವೃದ್ಧಿ ಕಾಮ ಗಾರಿಗಳಿಗೆ ಶಾಸಕ ಎಸ್.ರಾಮದಾಸ್ ಬುಧವಾರ ಚಾಲನೆ ನೀಡಿದರು. 3 ಕೋಟಿ ರೂ. ವೆಚ್ಚದಲ್ಲಿ 52ನೇ ವಾರ್ಡ್‍ನ ಇಟ್ಟಿಗೆಗೂಡು ಮಾಲ್ ಆಫ್ ಮೈಸೂರು ಬಳಿ ರಸ್ತೆಯಿಂದ ಹಾರ್ಡಿಂಜ್ ವೃತ್ತದವರೆಗೆ ಲೋಕೋ ಪಯೋಗಿ ಇಲಾಖೆಯಿಂದ ರಸ್ತೆ, ಫುಟ್‍ಪಾತ್, ಮಳೆ ನೀರು ಚರಂಡಿ ಕಾಮಗಾರಿಗೆ ಕರಗ ದೇವ ಸ್ಥಾನದ ಬಳಿ ಶಾಸಕರು ಚಾಲನೆ ನೀಡಿದರು. 65ನೇ ವಾರ್ಡ್ ಶ್ರೀರಾಂಪುರ…
ಮೈಸೂರಲ್ಲಿ ಕುಷ್ಠ ಅನಿಷ್ಟ ಇನ್ನೂ ಜೀವಂತ
January 28, 2021ಮೈಸೂರು, ಜ.27(ಪಿಎಂ)- ಮೈಸೂರು ಜಿಲ್ಲೆ ಕುಷ್ಠರೋಗ ಮುಕ್ತ ಎಂದು ಈಗಾ ಗಲೇ ಘೋಷಣೆ ಆಗಿದೆ. ಆದರೆ ಇತ್ತೀ ಚೆಗೆ ಮೈಸೂರು, ನಂಜನಗೂಡು ಹಾಗೂ ಟಿ.ನರಸೀಪುರ ತಾಲೂಕುಗಳ ಗಡಿ ಭಾಗ ಗಳಲ್ಲಿ ಮತ್ತೆ ಕುಷ್ಠರೋಗ ಕಾಣಿಸಿ ಕೊಂಡಿದೆ ಎಂದು ಆರೋಗ್ಯ ಇಲಾಖೆಯ ತಾಲೂಕು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಮಹದೇವ ಆತಂಕ ವ್ಯಕ್ತಪಡಿಸಿದರು. ಮೈಸೂರಿನ ಮಹಾರಾಣಿ ಮಹಿಳಾ ಕಲಾ ಕಾಲೇಜಿನ ಜಯಲಕ್ಷ್ಮಮ್ಮಣ್ಣಿ ಸಭಾಂಗಣ ದಲ್ಲಿ ಕಾಲೇಜಿನ ಎನ್‍ಎಸ್‍ಎಸ್ ಘಟಕ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮೈಸೂರು ತಾಲೂಕು…
ಭಾರತೀಯ ಸಂಗೀತಕ್ಕೆ ಪ್ರಪಂಚವನ್ನೇ ಮರೆಸುವ ಶಕ್ತಿಯಿದೆ: ಡಾ.ಮೈಸೂರು ಮಂಜುನಾಥ್
January 28, 2021ಮೈಸೂರು, ಜ. 27- ಭಾರತೀಯ ಸಂಗೀತಕ್ಕೆ ಪ್ರಪಂಚವನ್ನೇ ಮರೆಸುವ ಶಕ್ತಿಯಿದೆ ಎಂದು ಖ್ಯಾತ ಅಂತಾ ರಾಷ್ಟ್ರೀಯ ವಯೊಲಿನ್ ವಾದಕ ರಾದ ಡಾ. ಮೈಸೂರು ಎಂ. ಮಂಜುನಾಥ್ ಹೇಳಿದರು. ಮೈಸೂರು ಜೆಎಸ್‍ಎಸ್ ಮಹಾವಿದ್ಯಾಪೀಠದ ಶ್ರೀ ಶಿವ ರಾತ್ರೀಶ್ವರ ಧಾರ್ಮಿಕ ದತ್ತಿಯ ವತಿಯಿಂದ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳವರ ದಿವ್ಯಸಾನ್ನಿಧ್ಯದಲ್ಲಿ ಏರ್ಪಡಿಸಿದ್ದ ‘ಜ್ಞಾನವಾರಿಧಿ-8’ ಡಿಜಿಟಲ್ ಸಾಪ್ತಾಹಿಕ ಉಪನ್ಯಾಸ ಕಾರ್ಯಕ್ರಮದಲ್ಲಿ ‘ಭಾರತೀಯ ಸಂಗೀತದಲ್ಲಿ ವಯೊಲಿನ್’ ಕುರಿತು ಪ್ರಾತ್ಯಕ್ಷಿಕೆಯೊಂದಿಗೆ ಉಪನ್ಯಾಸ ನೀಡುತ್ತಾ ಭಾರತೀಯ ಸಂಗೀತ ಉಳಿದ ಎಲ್ಲ ಸಂಗೀತದ ಬಗೆಗಳಿಗೆ ಅಡಿಪಾಯವಿದ್ದಂತೆ. ಸಂಗೀತಕ್ಕೆ…
ಹೆಣ್ಣಿನ ಕೌಟುಂಬಿಕ, ಸಾಮಾಜಿಕ ಹೊಣೆಯೇ `ದೊಡ್ಡ ತಾಯಿ’ ಕೃತಿ
January 28, 2021ಎರಡು ಕಾಲಘಟ್ಟಗಳ ನಡುವಿನ ಸಾಂಸ್ಕøತಿಕ ವಸಾಹತುಶಾಹಿಯ ಸಾಮಾಜಿಕ ಬದುಕಿನ ವಿವಿಧ ಸ್ತರಗಳ ದನಿಯೇ `ದೊಡ್ಡ ತಾಯಿ’ ಕಾದಂ ಬರಿಯ ಹೂರಣವಾಗಿದೆ. ಇದರ ಲೇಖಕರು ಖ್ಯಾತ ಕಾದಂಬರಿಕಾರರಾದ ಎಂ.ಎಸ್.ವೇದಾ ಅವರು. ದೊಡ್ಡ ತಾಯಿ ಇಲ್ಲಿ ಒಂದು ಹೆಣ್ಣನ್ನು ಪ್ರತಿನಿಧಿಸುತ್ತಿದ್ದು, ಭಾರ ತೀಯ ಕೆಳ, ಮಧ್ಯಮ ವರ್ಗದ ಸ್ವಾಭಿಮಾನಿಯಾದ ದೊಡ್ಡ ತಾಯಿಯ ಜೀವನವನ್ನು ಹೆಣೆಯುತ್ತಲೇ ಆಕೆಯ ಕೌಟುಂಬಿಕ ಜವಾಬ್ದಾರಿಯೊಂದಿಗೆ ಸಾಮಾಜಿಕ ಜೀವನದ ವೃತ್ತಾಂತವನ್ನು ಸಮರ್ಥವಾಗಿ ಲೇಖಕರು ಕಟ್ಟಿಕೊಟ್ಟಿ ದ್ದಾರೆ. ನಂಜನಗೂಡು ಸುತ್ತಮುತ್ತಲ ಹಳೆಯ ಮೈಸೂರಿನ ಪ್ರಾದೇಶಿಕತೆಯ ಸೊಗಡು ಈ ಕಾದಂಬರಿಯಲ್ಲಿ…
ಎಐಬಿಕೆಎಂಎಸ್ ವತಿಯಿಂದ ಮೈಸೂರಿನ ಪತ್ರಕರ್ತ ರಾಜಕುಮಾರ್ ಭಾವಸಾರ್‍ಗೆ ರಾಜ್ಯಮಟ್ಟದ ಕೊರೊನಾ ವಾರಿಯರ್ಸ್ ಪ್ರಶಸ್ತಿ
January 28, 2021ಮೈಸೂರು, ಜ.27- ಅಖಿಲ ಭಾರತ ಭಾವಸಾರ ಕ್ಷತ್ರಿಯ ಮಹಾಸಭಾ (ಎಐಬಿಕೆ ಎಂಎಸ್) ರಾಜ್ಯ ಘಟಕ ನೀಡಿದ ಕೊರೊನಾ ವಾರಿಯರ್ಸ್ ರಾಜ್ಯ ಮಟ್ಟದ ಪ್ರಶಸ್ತಿಗೆ ಮೈಸೂರಿನ ಪತ್ರಕರ್ತ ರಾಜಕುಮಾರ್ ಭಾವಸಾರ್ ಭಾಜನರಾಗಿದ್ದಾರೆ. ಎಐಬಿಕೆಎಂಎಸ್ ಪರವಾಗಿ ರಾಜ್ಯ ಹಿರಿಯ ಉಪಾಧ್ಯಕ್ಷ ಜಯರಾಮರಾವ್ ಲಾಳಿಗೆ, ಪ್ರಧಾನ ಕಾರ್ಯದರ್ಶಿ ಪ್ರಕಾಶ್‍ರಾವ್ ಅವರು ಮೈಸೂರಿನ ಕಬೀರ್ ರಸ್ತೆಯಲ್ಲಿ ರುವ ಶ್ರೀ ಪಾಂಡುರಂಗ ದೇವಸ್ಥಾನದ ಆವರಣದಲ್ಲಿ ರಾಜಕುಮಾರ್ ಭಾವಸಾರ್ ಅವರಿಗೆ ಶಾಲು ಹೊದಿಸಿ, ಪ್ರಶಸ್ತಿ ನೀಡಿ ಗೌರವಿಸಿದರು. ಜೊತೆಗೆ ಮೈಸೂರಿನ ವೈದ್ಯ ದಂಪತಿ ಡಾ.ರಾಕೇಶ್ ಬಾಂಬೋರೆ…
ನಾಳೆ ಹಲವೆಡೆ ವಿದ್ಯುತ್ ವ್ಯತ್ಯಯ
January 28, 2021ಮೈಸೂರು,ಜ.27-ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆಯಡಿ ಹೊಸ 66ಕೆವಿ ಮಾರ್ಗದ ತುರ್ತು ಕಾಮಗಾರಿಗಳನ್ನು ಹಮ್ಮಿಕೊಂಡಿರುವುದರಿಂದ ಜ.29ರಂದು ಬೆಳಗ್ಗೆ 9ರಿಂದ ಸಂಜೆ 6 ಗಂಟೆವರೆಗೆ ಹೊರಳವಾಡಿ ಫೀಡರ್‍ಗೆ ಒಳಪಡುವ ಗ್ರಾಮಗಳಾದ ಕಿರುಗುಂದ, ಸೋನಳ್ಳಿ, ಕುಪ್ಪರವಳ್ಳಿ, ಬೆಳಗುಂದ, ನಗರ್ಲೆ, ಹೊರಳವಾಡಿ, ಸರಗೂರು, ಬಸವನಪುರ, ಮುಳ್ಳೂರು, ಗೀಕಳ್ಳಿ, ಗೀಕಳ್ಳಿಹುಂಡಿ, ಆಲಂಬೂರು, ಆಲಂಬೂರು ಮಂಟಿ, ಕಲ್ಮಳ್ಳಿ ಗ್ರಾಮಗಳಲ್ಲಿರುವ ಗೃಹಬಳಕೆ ಸ್ಥಾವರಗಳಿಗೆ ಮಾತ್ರ. ಆಲಂಬೂರು ಮತ್ತು ಸೋನಳ್ಳಿ ಫೀಡರ್‍ಗೆ ಒಳಪಡುವ ಗ್ರಾಮಗಳಾದ ಸೋನಳ್ಳಿ, ಕಲ್ಮಳ್ಳಿ ವ್ಯಾಪ್ತಿಯ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ನಂಜನಗೂಡು ಸೆಸ್ಕ್…
ದೇಶದ ಸಮಗ್ರತೆ, ಮೌಲ್ಯ ಎತ್ತಿಹಿಡಿಯುವ ಶಿಕ್ಷಣ ಅವಶ್ಯ
January 28, 2021ಮೈಸೂರು,ಜ.27(ವೈಡಿಎಸ್)- ಸಮ ಗ್ರತೆ, ದೇಶದ ಅಖಂಡತೆ ಮತ್ತು ಭಾರತೀಯ ಮೌಲ್ಯಗಳನ್ನು ಎತ್ತಿ ಹಿಡಿಯುವ ಶಿಕ್ಷಣ ವ್ಯವಸ್ಥೆ ಜಾರಿಗೆ ಬರಬೇಕು ಎಂದು ಶ್ರೀ ಕ್ಷೇತ್ರ ಧರ್ಮ ಸ್ಥಳದ ಧರ್ಮಾಧಿಕಾರಿಗಳೂ ಆದ ಎಸ್‍ಡಿ ಎಂಐಎಂಡಿ ಅಧ್ಯಕ್ಷರಾದ ಡಾ.ಡಿ. ವೀರೇಂದ್ರ ಹೆಗ್ಗಡೆ ಅಭಿಪ್ರಾಯಪಟ್ಟರು. ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಇನ್ಸಿಟ್ಯೂಟ್ ಫಾರ್ ಮ್ಯಾನೇಜ್‍ಮೆಂಟ್ (ಎಸ್‍ಡಿಎಂಐಎಂಡಿ) ಕಾಲೇಜಿನಲ್ಲಿ ವರ್ಚುವಲ್ ಮೂಲಕ ಬುಧವಾರ ಆಯೋ ಜಿಸಿದ್ದ ಸ್ನಾತಕೊತ್ತರ ಸರ್ಟಿಫಿಕೇಟ್ ಇನ್ ಮ್ಯಾನೇಜ್‍ಮೆಂಟ್ (ಪಿಜಿಸಿಎಂ)ನ ಮೊದಲ ವಾರ್ಷಿಕ ಘಟಿಕೋತ್ಸವದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಹೊಸ ಶಿಕ್ಷಣ…
ಅಕ್ರಮ ಗಣಿಗಾರಿಕೆ ಸಕ್ರಮಕ್ಕ ಸರ್ಕಾರ ಚಿಂತನೆ
January 28, 2021ಬೆಂಗಳೂರು, ಜ.27(ಕೆಎಂಶಿ)- ಹೊಸ ನಿಯಮಗಳ ಅಡಿಯಲ್ಲೇ ಅಕ್ರಮ ಗಣಿಗಾರಿಕೆಯನ್ನು ಸಕ್ರಮ ಗೊಳಿಸಲು ಸರ್ಕಾರ ಗಂಭೀರ ಚಿಂತನೆ ನಡೆಸಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ್ ಆರ್.ನಿರಾಣಿ ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದೇ 27 ಮತ್ತು 28ರಂದು ಅಧಿಕಾರಿಗಳ ಸಭೆಯನ್ನು ಕರೆಯಲಾಗಿದೆ. ಅಕ್ರಮ ಗಣಿಗಾರಿಕೆಯನ್ನು ಕಾನೂ ನಿನ ವ್ಯಾಪ್ತಿಯಲ್ಲಿ ಸಕ್ರಮಗೊಳಿಸಲು ಹೊಸ ನಿಯಮಗಳನ್ನು ಜಾರಿ ಮಾಡುವ ಚಿಂತನೆ ಇದೆ ಎಂದು ತಿಳಿಸಿದರು. ಹಾಲಿ ಇರುವ ಕಾಯ್ದೆಗೂ ತಿದ್ದುಪಡಿ ಮಾಡಿ ರಾಜ್ಯದಲ್ಲಿ ಹೊಸದಾಗಿ ಗಣಿ ಕಾಯ್ದೆ…
ಮೂಲಭೂತ ಹಕ್ಕುಗಳನ್ನೇ ಹತ್ತಿಕ್ಕುವ ಕೆಲಸ: ನಾ.ದಿವಾಕರ
January 28, 2021ಮೈಸೂರು, ಜ. 27- ಕಾನೂನುಗಳು ಮೂಲಭೂತ ಹಕ್ಕುಗಳಿಗೆ ಚ್ಯುತಿಬಾರದಂತೆ ನೋಡಿಕೊಳ್ಳಬೇಕು. ಆದರೆ ಇಂದಿನ ಆಡಳಿತ ಹಕ್ಕುಗಳನ್ನೇ ಹತ್ತಿಕ್ಕುವ ಕೆಲಸ ಮಾಡುತ್ತಿವೆ ಎಂದು ಪ್ರಗತಿಪರ ಚಿಂತಕ ನಾ.ದಿವಾಕರ ಹೇಳಿದರು. ವಿಜಯನಗರ 1ನೇ ಹಂತದ ಡಿ.ಸಂಜೀವಯ್ಯ ಸ್ಮಾರಕ ಶಿಕ್ಷಣ ಸಂಸ್ಥೆ ಆವರಣದಲ್ಲಿ ರುವ ಕರ್ನಾಟಕ ಬುದ್ಧಧಮ್ಮ ಸಮಿತಿ ವತಿಯಿಂದ ಆಯೋಜಿಸಿದ್ದ ಭಾರತ ಗಣತಂತ್ರ ದಿನಾಚರಣೆ ಮತ್ತು ಸನ್ಮಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತ ನಾಡಿದರು. ಮಾತನಾಡುವ ಹಕ್ಕು ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳುತ್ತಿವೆ. ಕ್ರೌರ್ಯ ಹಾಗೂ ದಬ್ಬಾಳಿಕೆ…










